)
Today Crime NEws: ಅಕ್ಟೋಬರ್ 23 ತಾರೀಖು ಬಳ್ಳಾರಿಯಿಂದ ಅಸುಂಡಿಗೆ ಹೊರಟಿದ್ದ ರವಿಕುಮಾರ್ ರಾತ್ರಿಯಾದರು ಮನೆಗೆ ಸೇರಿರಲಿಲ್ಲ.. ಗಾಬರಿಯಾದ ಮನೆ ಮಂದಿ ರಾತ್ರಿ ಇಡೀ ರವಿಕುಮಾರ್ನಿಗಾಗಿ ಹುಡುಕಾಟ ನಡೆಸಿದ್ದರು. ಬೆಳಿಗ್ಗೆ ನೋಡಿದ್ರೆ ರಸ್ತೆ ಬದಿ ರವಿಕುಮಾರ (30) ಹೆ*ಣವಾಗಿ ಬಿದ್ದಿದ್ದ.. ಆರಂಭಿಕವಾಗಿ ಇದೊಂದು ರಸ್ತೆ ಅಪಘಾತ ಅಂತಾ ಕಾಣಿಸಿತ್ತು.. ಆದ್ರೆ ಪೋಲಿಸರ ತನಿಖೆ ಬಳಿಕವೇ ಇದು ಪ್ರೀಪ್ಲಾನ್ ಮಡ್೯*ರ್ ಅಂತಾ ಗೊತ್ತಾಗಿದೆ. ಬಳಿಕ ಅದೇ ಊರಿನ 10 ಆರೋಪಿಗಳು ಇದೀಗ ಅಂದರ್ ಆಗಿದ್ದಾರೆ.
ಬಳ್ಳಾರಿ ತಾಲೂಕಿನ ಅಸುಂಡಿ ಗ್ರಾಮದ ಯುವಕ ರವಿಕುಮಾರ್ ಬಳ್ಳಾರಿ ನಗರದಲ್ಲಿ ಸೀಡ್ಸ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುತ್ತಾನೆ. ಎಂದಿನಂತೆ ತನ್ನ ಡ್ಯೂಟಿ ಮುಗಿಸಿ ಬೈಕ್ ಏರಿ ಮನೆಗೆ ಹೊರಟಿದ್ದವನು ಅವತ್ತು ರಾತ್ರಿಯಾದ್ರು ಮನೆ ಸೇರಿರಲಿಲ್ಲ. ಇಡೀ ರಾತ್ರಿ ಹುಡುಕಾಡಿದ್ದ ಮನೆ ಮಂದಿಗೆ ಬೆಳಿಗ್ಗೆ ರವಿಕುಮಾರ್ನ ಡೆಡ್ ಬಾಡಿ ಸಿಕ್ಕಿತ್ತು.. ನೋಡೋಕೆ ಬೈಕ್ ಸ್ಕಿಡ್ ಆಗಿ ಬಿದ್ದು ಸಾವನ್ನಪ್ಪಿದ್ದಾನೆ ಅನ್ನೊ ರೀತಿ ಕಾಣುತ್ತಿತ್ತು.. ಆದ್ರೆ ಇದು ಪಕ್ಕಾ ಪ್ರೀಪ್ಲಾನ್ ಮಡ್೯*ರ್. ಈ ಕೊ*ಲೆಗೆ ಹಳೆ ದ್ವೇಷ ಹಾಗೂ ವಾರದ ಹಿಂದೆ ನಡೆದಿದ್ದ ಅ*ತ್ಯಾಚಾರ ಪ್ರಕರಣವೇ ಇವನ ಸಾವಿಗೆ ಕಾರಣ ಅನ್ನೊದೆ ಆತಂಕಕಾರಿ ವಿಷಯ.
ರೇ*ಪ್ ಆಗಿದ್ದ ಸಂತ್ರಸ್ತೆ ಪರ ನಿಂತು ಅ*ತ್ಯಾಚಾರಿ ವಿರುದ್ಧ ಕೇಸ್ ದಾಖಲು ಮಾಡಿ ಆರೋಪಿಯನ್ನ ಜೈಲಿಗೆ ಅಟ್ಟುವಲ್ಲಿ ರವಿಕುಮಾರ್ ಯಶಸ್ವಿಯಾಗಿದ್ದ.. ಇದು ಅ*ತ್ಯಾಚಾರಿ ಸಹೋದರರ ಕೆಂಗಣ್ಣಿಗೆ ಗುರಿಯಾಗಿತ್ತು.. ಇವನಿಂದ ನಮ್ಮ ಸಹೋದರ ಜೈಲು ಸೇರಿದ ಅಂತಾ ಕೆಂಡ ಕಾರಿದ ಕಿರಾತಕರು ಹೊಂಚು ಹಾಕಿ ಸಂಚು ರೂಪಿಸಿ ಕೊ*ಲೆ ಮಾಡಿಯೇ ಬಿಟ್ಟಿದ್ದಾರೆ..
ಅಂದ್ಹಾಗೆ ರೇ*ಪ್ ಆಗಿದ್ದ ಸಂತ್ರಸ್ತೆ ಕುಟುಂಬಸ್ಥರು ಹಾಗೂ ಅ*ತ್ಯಾಚಾರಿ ಕುಟುಂಬಸ್ಥರು ಕುಳಿತು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿದ್ದರು. ಈ ಕೇಸ್ನ್ನ ಠಾಣೆ ಮೆಟ್ಟಿಲು ಹತ್ತುವುದಕ್ಕೆ ಬಿಡೋದೆ ಬೇಡ ಅನ್ನೊದು ಇವರ ಪ್ಲಾನ್ ಆಗಿತ್ತು. ಆದ್ರೆ ಇದರಲ್ಲಿ ಎಂಟರ್ ಆಗಿದ್ದ ರವಿಕುಮಾರ್ ಕೇಸ್ ಮಾಡಿಸಿ ಅ*ತ್ಯಾಚಾರಿಯನ್ನ ಜೈಲಿಗೆ ಅಟ್ಟಿಸಿದ್ದ, ಹೀಗಾಗಿ ಅ*ತ್ಯಾಚಾರಿಯ ಸಹೋದರರಾದ ಹೊನ್ನೂರಸ್ವಾಮಿ, ಶೇಕರ್, ಸುರೇಂದ್ರ ಹಾಗೂ ಚಿಕ್ಕದೊಡ್ಡಪ್ಪನ ಮಕ್ಕಳಾದ ಸಣ್ಣ ಹೊನ್ನೂರಪ್ಪ, ದೊಡ್ಡ ಎರೆಪ್ಪ, ನಾಗರಾಜ, ಆಟೋ ಎರೀಸ್ವಾಮಿ, ಪ್ರಕಾಶ, ಹೊನ್ನೂರಸ್ವಾಮಿ, ಪ್ರಸಾದ ಆರೋಪಿಗಳು ಪ್ರೀ ಪ್ಲಾನ್ ಮಾಡಿ ಕೊ*ಲೆ ಮಾಡಿದ್ದಾರೆ ಎನ್ನಲಾಗಿದೆ.
ಅಕ್ಟೋಬರ್ 23ನೇ ತಾರೀಖು ರಾತ್ರಿ 8:30 ರ ಸುಮಾರಿಗೆ ಅಸುಂಡಿ ರಸ್ತೆಯಲ್ಲಿ ಬರುತ್ತಿದ್ದ ರವಿಕುಮಾರ್ಗೆ ಅಡ್ಡ ಹಾಕಿ ಸುತ್ತಿಗೆಯಿಂದ ಮುಖಕ್ಕೆ ತಲೆಗೆ ಹೊಡೆದು ಕೊ*ಲೆ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.. ರವಿಕುಮಾರ್ನ ಊರಲ್ಲಿ ವರ್ಚಸ್ಸು ಹಾಗೂ ಆತನ ಬೆಳವಣಿಗೆ ಇವರಿಗೆ ಸಹಿಸಿಕೊಳ್ಳಲಿಕ್ಕೆ ಆಗಿರಲ್ಲ, ಹೀಗಾಗಿ ಕೊ*ಲೆ ಮಾಡಿದ್ದಾರೆ. ಇನ್ನೂ ಪೋಸ್ಟ್ ಮಾರ್ಟಮ್ ರೀಪೋಟ್೯ ಆದರಿಸಿ ತನಿಖೆ ಕೈಗೊಂಡಿದ್ದ ಪೋಲಿಸರು ಆರೋಪಿಗಳನ್ನ ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ.. ಮೃತನ ಸಾವಿಗೆ ನ್ಯಾಯ ಬೇಕು ಅಂತಾ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ..
ಒಟ್ಟಿನಲ್ಲಿ ಹಳೆ ದ್ವೇಷ ಹಾಗೂ ರೇ*ಪ್ ಆಗಿದ್ದ ಸಂತ್ರಸ್ತೆ ಪರ ನಿಂತಿದ್ದ ರವಿಕುಮಾರ್ ಇದೀಗ ಕೊ*ಲೆಯಾಗಿದ್ದಾನೆ. ಇತ್ತ ಆತ ಕುಟುಂಬ ಆಸರೆಯಾಗಿದ್ದ ಮಗನನ್ನ ಕಳೆದುಕೊಂಡು ಕಣ್ಣೀರು ಇಡುತ್ತಿದೆ. ಮತ್ತೊಮ್ಮೆ ಈ ರೀತಿ ಘಟನೆಗಳು ನಡೆಯದಂತೆ ನಾಗರಿಕ ಸಮಾಜದಲ್ಲಿ ತಿಳುವಳಿ ಮೂಡಿಸಬೇಕು ಜೊತೆಗೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಬೇಕು.