)
ಬೆಂಗಳೂರು: ಗಂಡ ಮತ್ತು ಇಬ್ಬರು ಮಕ್ಕಳಿಗೆ ಬಾಯ್ ಬಾಯ್ ,ಲವರ್ ಗೆ ಹಾಯ್ ಹಾಯ್ ಎಂದು ಹೇಳಿ ಪ್ರಿಯಕರನ ಜೊತೆ ಜಾಲಿ ಮಾಡಲು ಹೋಗಿದ್ದ ಲೀಲಾ ಮತ್ತು ಮಂಜು ಪ್ರಕರಣ ಕೊನೆಗು ಸುಖಾಂತ್ಯ ಖಂಡಿದೆ, ಅತ್ತ ಗಂಡ ನೀನೆ ನನ್ನ ಚಿನ್ನು,ನನ್ನ ಪ್ಲೇವರ್ ,ದೇವತೆ, ನಾವಿಬ್ಬರು ಮತ್ತೆ ಹೊಸ ಜೀವನ ಶುರು ಮಾಡೋಣ ಬಾ ಅಂತ ಕಣ್ಣೀರುಡುತ್ತ ಅಂಗಲಾಚಿ ಕೇಳುತ್ತಿದದ್ರು ಕ್ಯಾರೇ ಎನ್ನದ ಲೀಲಾ ಮಕ್ಕಳನ್ನು ನೋಡಿ ಮನಸ್ಸು ಕರಗಿ ಈಗ ಎಲ್ಲವನ್ನು ಮರೆತು ಹೊಸ ಜೀವನ ಮಾಡಲು ತನ್ನ ಗಂಡನ ಮಡಿಲು ಸೇರಿದ್ದಾಳೆ,ಇತ್ತ ಲವರ್ ಜೊತೆ ಹೋಗಿದ್ದ ಪ್ರಣಯದ ಹಕ್ಕಿ ಮತ್ತೆ ತನ್ನ ಬಳಿ ಬಂದಿದ್ದಕ್ಕೆ ಮಂಜು ಸಂತಸದಿಂದ ಹೊಸ ಜೀವನಕ್ಕೆ ಹೊಸ ಹೆಜ್ಜೆ ಇಟ್ಟಿದ್ದಾನೆ ,ಈ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.
ಹೌದು ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಬಾರಿ ಸದ್ದು ಮಾಡಿದ್ದ ಲೀಲಾ ಸಂತು ಪ್ರಕರಣ ಕೊನೆಗು ಸುಖಾಂತ್ಯವಾಗಿದೆ , ಗಂಡ ಮಕ್ಕಳನ್ನ ಬಿಟ್ಟು ಲವರ್ ಜೊತೆ ಓಡಿ ಹೋಗಿದ್ದ ಲೇಡಿ ಲೀಲಾವತಿ ಮರಳಿ ಗಂಡನ ಗೂಡು ಸೇರಿದ್ದಾಳೆ. ಬನ್ನೇರುಘಟ್ಟ ಸಮೀಪದ ಬಸವನಪುರದ ಲೀಲಾವತಿ ತನ್ನ ಪತಿ ಮಂಜುನಾಥ್ ಮತ್ತು ಇಬ್ಬರು ಮಕ್ಕಳನ್ನ ಬಿಟ್ಟು ಪ್ರಿಯಕರ ಸಂತೋಷ್ ಜೊತೆ ಪರಾರಿಯಾಗಿದ್ದಳು. ಹೆಂಡತಿ ಮನೆ ಬಿಟ್ಟು ಹೋಗುತ್ತಿದ್ದಂತೆ ಪತಿ ಮಂಜುನಾಥ ಮತ್ತು ಮಕ್ಕಳು ಕಣ್ಣೀರಿಟ್ಟು ಗೋಳಾಡಿದ್ದರು. ಪೊಲೀಸ್ ಸ್ಟೆಷನ್ ನಲ್ಲಿ ನೀನು ಬೇಡ ಅಂತ ಬರೆದುಕೊಟ್ಟು ಬಂದ್ರು ಕೂಡ ನನ್ನ ಬಿಡುತ್ತಿಲ್ಲ, ನನಗೆ ಬದುಕಲು ಆಸೆ ಇಲ್ಲ ನಿದ್ರೆ ಮಾತ್ರೆಗಳನ್ನ ತೆಗೆದುಕೊಂಡಿದ್ದೇನೆ ಈ ನನ್ನ ಸಾವಿಗೆ ನನ್ನ ಗಂಡ ಮಂಜುನಾಥನೇ ಕಾರಣ ಎಂದು ಮೊಸಳೆ ಕಣ್ಣೀರಿಡುತ್ತಾ ಸೆಲ್ಫಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾಳೆ.ಆದರು ಪಟ್ಟು ಬಿಡದ ಮಂಜು ತನ್ನ ಹೆಂಡತಿಗಾಗಿ ಪರಿಪರಿಯಾಗಿ ಹಲವು ರೀತಿಯಲ್ಲಿ ನನ್ನಜೊತೆ ಬಾ ಎಂದು ಮಾದ್ಯಮಗಳ ಮುಂದೆ ಅಂಗಲಾಚಿ ಬೇಡಿಕೊಂಡರು ಪ್ರಿಯಕರನನ್ನ ಬಿಟ್ಟು ಬರಲೇ ಇಲ್ಲ . ಇದರಿಂದ ಬೇಸತ್ತಿದ್ದ ಮಂಜು ಲೀಲಾ ಮತ್ತು ಪ್ರಿಯಕರ ಸಂತು ಮೇಲೆ ಡೆಡ್ಲಿ ಅಟ್ಯಾಕ್ ಮಾಡಿ ಜೈಲಿಗು ಹೋಗಿ ಬಂದಿದ್ದ.ಜೈಲಿನಿಂದ ಬಂದ ನಂತರ ತನ್ನ ಮಕ್ಕಳನ್ನು ಕರೆದುಕೊಂಡು ಬಂದು ದಿನಕ್ಕೊಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ , ವಿಡಿಯೋಗಳನ್ನ ನೋಡಿದ ಲೀಲಾ ಕೊನೆಗು ಮನಸೋತು ಮಕ್ಕಳಿಗಾಗಿ ಗಂಡನ ಮಡಿಲು ಸೇರಿದ್ದಾಳೆ.
ಇನ್ನೂ ನನ್ನ ಹೆಂಡತಿ ನನ್ನ ಜೊತೆ ಬಂದಿದ್ದಕ್ಕೆ ತುಂಬ ಖುಷಿಯಾಗುತ್ತಿದೆ, ನನ್ನ ಜೊತೆಯಲ್ಲಿ ಕರ್ಕೊಂಡು ಹೋಗುತ್ತಿದ್ದೀನಿ ಇನ್ನು ಮುಂದೆ ಆಗಿದ್ದೆಲ್ಲ ಒಂದು ಕೆಟ್ಟ ಕನಸು ಎಂದು ಎಲ್ಲವನ್ನು ಮರೆತು ಹೊಸ ಜೀವನ ಶುರು ಮಾಡುತ್ತೇವೆ, ನಾನು ಜೈಲಿಂದ ಬಂದ ನಂತರ ನನ್ನ ಮಗ ನನ್ನ ಬಳಿ ಬಂದ ಅದಾದ ನಂತರ ಈಗ ನನ್ನ ಹೆಂಡತಿ ಕೂಡ ನನ್ನ ಜೊತೆ ಬಂದಿದ್ದಾಳೆ, ಇನ್ನು ಸಂತು ಮತ್ತು ಲೀಲಾ ಮೇಲೆ ಅಟ್ಯಾಕ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪೋಲಿಸ್ ಠಾಣೆಯಲ್ಲಿ ಪ್ರಕರಣವನ್ನು ನನ್ನ ಹೆಂಡತಿನೇ ಇಥ್ಯರ್ಥ ಮಾಡಬೇಕು ಎಲ್ಲಾ ಅವಳ ಕೈಯಲ್ಲೆ ಇದೆ,ಆ ಸಮಯದಲ್ಲಿ ಯಾರಾದರೂ ಅದೇ ರೀತಿ ಮಾಡುತ್ತಾರೆ ನಾನು ಅದನ್ನೆ ಮಾಡ್ದೆ ಈಗ ಅದ್ಯಾವುದು ಮನಸ್ಸಿನಲ್ಲಿಲ್ಲ ಎಲ್ಲವನ್ನು ಮರೆತು ಹೊಸ ಜೀವನ ಶುರು ಮಾಡುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಲೀಲಾಳ ಪ್ರಿಯಕರ ಸಂತು ಮಾದ್ಯಮಗಳಿಗೆ ಮಾತನಾಡಿ 'ನಾನು ಮೊದಲಿನಿಂದಲು ಮಕ್ತಳ ಮುಖ ನೋಡಿಕೊಂಡು ಹೋಗು ಜೀವನವನ್ನ ಹಾಳುಮಾಡಿಕೊಳ್ಳಬೇಡ ಎಂದು ಹೇಳುತ್ತಿದ್ದೆ, ಲೀಲಾ ನಾನು ಅವನ ಬಳಿ ಹೋಗಲ್ಲ ಅವನಿಗೆ ನನ್ನ ಮೇಲೆ ಮೊದಲಿನಿಂದಲು ಅನುಮಾನ ಎಂದು ಹೇಳುತ್ತಿದ್ದಳು ,ಮಂಜು ಕೂಡ ಎಷ್ಟೊ ಬಾರಿ ನನಗೆ ಕರೆ ಮಾಡಿ ಕೇಳಿಕೊಳ್ಳುತ್ತಿದ್ದ ಅವನು ಚೆನ್ನಾಗಿನೋಡಿಕೊಳ್ಳುತ್ತಾನೆ ಹೋಗು ಎಂದು ಹೇಳಿದರು ಕೇಳಲಿಲ್ಲ ,ನಾನು ಮಂಜು ಬಳಿ ಹೋದರೆ ಅವನು ಮತ್ತೆ ಜಗಳ ಮಾಡುತ್ತಾನೆ ಎಂದು ಹೇಳಿದಳು,ಮತ್ತೆ ಅವರ ತಂಗಿ ಬಂದು ಕೇಳಿಕೊಂಡಾಗ ಅವರ ಜೊತೆ ಹೋಗಿದ್ದ ಲೀಲಾ ಮತ್ತೆ ಜಗಳ ಮಾಡಿ ಕಳಿಸಿದ್ದರು, ಈಗ ಮಂಜು ಆಗಿದ್ದನ್ನೆಲ್ಲ ಮರೆತು ಮಕ್ಕಳಿಗೊಸ್ಕರ ಲೀಲಾಳನ್ನು ಕರೆದುಕೊಂಡು ಹೋಗುತ್ತಿದ್ದಾರೆ ಅವರು ಚನ್ನಾಗಿರಲಿ ಎಂದು ಆಶಿಸಿದ್ದಾನೆ.
ಒಟ್ನಲ್ಲಿ ಇಬ್ಬರು ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ಓಡಿ ಹೋಗಿದ್ದ ಲೀಲಾ ಎಲ್ಲವನ್ನು ಮರೆತು ಮಂಜುನೆ ನನ್ ಗಂಡ, ನನಗೆ ಗಂಡನೆ ಬೇಕು ಎಂದು ಮರಳಿ ಗಂಡನ ಗೂಡು ಸೇರಿದ್ದ್ದಾಳೆ, ಇತ್ತ ಚಿನ್ನು,ಫ್ಲೇವರ್ ಬಾ ಚಿನ್ನು ವಾಪಸ್ ಅಂತ ಗೋಳಾಡುತ್ತಿದ್ದ ಮಂಜನಿಗೆ ತನ್ನ ಹೆಂಡತಿ ವಾಪಸ್ ಬಂದಿರುವುದು ಹೇಳಲಾಗದಷ್ಟು ಮನಸ್ಸಿಗೆ ಸಂತಸ ತಂದಿದ್ದು ಇತ್ತ ಇಬ್ಬರ ಜಗಳದಲ್ಲಿ ಬಡವಾಗಿದ್ದ ಕೂಸುಗಳು ನಿಟ್ಟುಸಿರು ಬಿಟ್ಟಂತಾಗಿದೆ, ಇನ್ನಾದರು ಇಬ್ಬರು ಎಲ್ಲವನ್ನು ಮರೆತು ಹೊಸ ಜೀವನ ಮಾಡಿಕೊಂಡು ಮಕ್ಕಳಿಗೆ ಒಳ್ಳೆ ಭವಿಷ್ಯ ಕಟ್ಟಿಕೊಡುತ್ತಾರ ಎಂದು ಕಾದು ನೋಡಬೇಕಿದೆ……
ವರದಿ: ಮೂರ್ತಿ ಸಿ ಝೀ ಕನ್ನಡ ನ್ಯೂಸ್ ಆನೇಕಲ್.