)
ಬೆಂಗಳೂರು: ನಗರದ ರಾಮಮೂರ್ತಿ ನಗರದಲ್ಲಿ ನಿಗೂಢ ಸಾವನ್ನಪ್ಪಿದ್ದ ಟೆಕ್ಕಿ ಶರ್ಮಿಳಾ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದ್ದು,ಪ್ರಕರಣದಲ್ಲಿ ಆರೋಪಿಯಾಗಿರುವ ಕೇರಳ ಮೂಲದ ಯುವಕ ಕರ್ನಲ್ ಕುರೈಯನ್ನು ಪೊಲೀಸರು ಬಂಧಿಸಿದ್ದು, ಮೂರು ದಿನಗಳ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಂಗಳೂರು ಮೂಲದ 35 ವರ್ಷದ ಶರ್ಮಿಳಾ, ಕಳೆದ ಎರಡು ವರ್ಷಗಳಿಂದ ರಾಮಮೂರ್ತಿ ನಗರದ ಸುಬ್ರಹ್ಮಣ್ಯ ಲೇಔಟ್ನ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ಬಾಡಿಗೆಗೆ ವಾಸವಿದ್ದರು ಎನ್ನಲಾಗಿದೆ. ನಗರದ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಅವರು, ತಮ್ಮ ಸ್ನೇಹಿತೆ ಶಬರೀನ್ ಜೊತೆಗೆ ಡಬಲ್ ಬೆಡ್ರೂಂ ಫ್ಲಾಟ್ನಲ್ಲಿ ವಾಸಿಸುತ್ತಿದ್ದರು. ಆದರೆ, ಕಳೆದ 15 ದಿನಗಳಿಂದ ಶಬರೀನ್ ಕೆಲಸದ ನಿಮಿತ್ತ ದೆಹಲಿಗೆ ತೆರಳಿದ್ದರಿಂದ ಶರ್ಮಿಳಾ ಒಬ್ಬರೇ ಫ್ಲಾಟ್ನಲ್ಲಿ ಇದ್ದರು. ಆದರೆ ಜನವರಿ 3 ರ ರಾತ್ರಿ ಪಕ್ಕದ ಮನೆಯಲ್ಲಿ ವಾಸವಿದ್ದ ಪಿಯುಸಿ ಸೈನ್ಸ್ ಓದುತ್ತಿದ್ದ ವಿದ್ಯಾರ್ಥಿ ಕರ್ನಲ್ ಕುರೈ, ಶರ್ಮಿಳಾ ಮೇಲೆ ಒನ್ಸೈಡ್ ಪ್ರೀತಿ ಹೊಂದಿದ್ದನು ಎನ್ನಲಾಗಿದೆ.
ಇಬ್ಬರಿಗೂ ಮುಖಃ ಪರಿಚಯವಿದ್ದರೂ ಸಹಿತ ಶರ್ಮಿಳಾಗೆ ವಿಷಯ ತಿಳಿದಿರಲಿಲ್ಲ. ಆರೋಪಿ ಆ ಡಿಎನ್ಎ ಬಾಲ್ಕನಿ ಮೂಲಕ ಫ್ಲಾಟ್ಗೆ ನುಗ್ಗಿ, ಶರ್ಮಿಳಾ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಇದೆ ವೇಳೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಶರ್ಮಿಳಾ ಮೇಲೆ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ. ಇದಾದ ನಂತರ ಸಾಕ್ಷಿಗಳನ್ನು ನಾಶಪಡಿಸುವ ಸಲುವಾಗ ಶಬರೀನ್ನ ಬೆಡ್ರೂಂಗೆ ಬೆಂಕಿ ಹಚ್ಚಿದ್ದಾನೆ. ಈ ವೇಳೆ ಮನೆಯ ತುಂಬಾ ದಟ್ಟ ಹೋಗೆ ಆವರಿಸಿಕೊಂಡಿದೆ. ತದನಂತರ ಕೆಳಗಿನ ಮನೆಯವರು ಹೊಗೆ ಬರುತ್ತಿರುವುದನ್ನು ಕಂಡು ಶರ್ಮಿಳಾಗೆ ಕರೆ ಮಾಡಿದ್ದಾರೆ, ಆಗ ಆಕೆ ಕರೆ ಸ್ವೀಕರಿಸದಿರುವ ಹಿನ್ನೆಲೆಯಲ್ಲಿ ಶಬರೀನ್ಗೆ ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿದ್ದ ಶಬರೀನ್ ತನ್ನ ಬೆಂಗಳೂರಿನ ಸ್ನೇಹಿತರಿಗೆ ತಿಳಿಸಿದ ನಂತರ ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದೆ. ಆಗ ಶರ್ಮಿಳಾ ಮೃತಪಟ್ಟಿದ್ದರು.ಇದೆ ವೇಳೆ ಪೊಲೀಸರು ಪರಿಶೀಲಿಸಿದಾಗ ಶಬರೀನ್ ಬೆಡ್ ರೂಂ ಗೆ ಮಾತ್ರ ಬೆಂಕಿ ಹೊತ್ತಿಕೊಂಡಿದೆ, ಆದರೆ ಹಾಲ್ ಮತ್ತು ಕಿಚನ್ ಗೆ ಯಾವುದೇ ರೀತಿಯ ಹಾನಿಯಾಗಿರಲಿಲ್ಲ,. ಶರ್ಮಿಳಾ ದೇಹವು ಕಿಚನ್ನಲ್ಲಿ ಪತ್ತೆಯಾಗಿದ್ದರೂ ಅವರ ಮೈಮೇಲೆ ಅಥವಾ ಬಟ್ಟೆಯಲ್ಲಿ ಯಾವುದೇ ಸುಟ್ಟ ಗಾಯಗಳಿರಲಿಲ್ಲ ಎನ್ನುವುದು ಧೃಡಪಟ್ಟಿದೆ. ಅಷ್ಟೇ ಅಲ್ಲದೆ ಫ್ಲಾಟ್ನಲ್ಲಿ ಮದ್ಯದ ಬಾಟಲಿ ಪತ್ತೆಯಾಗಿದ್ದರೂ ಪಾರ್ಟಿ ಅಥವಾ ಅಂತಹ ಗುರುತು ಕಂಡು ಬಂದಿಲ್ಲ.
ಶಾರ್ಟ್ ಸರ್ಕ್ಯೂಟ್ ಅನುಮಾನದ ಮೇಲೆ ತನಿಖೆ ಆರಂಭಿಸಿದ ರಾಮಮೂರ್ತಿ ನಗರ ಪೊಲೀಸರು, ಈ ಅಂಶಗಳ ಆಧಾರದಲ್ಲಿ ಕೊಲೆಯ ತನಿಖೆಗೆ ಮುಂದಾಗಿದ್ದಾರೆ.ಸದ್ಯ ಆರೋಪಿ ಕರ್ನಲ್ ಕುರೈಯನ್ನು ಬಂಧಿಸಿರುವ ಪೊಲೀಸರು, ಪ್ರಕರಣದ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ ಸಂಗ್ರಹಿಸುತ್ತಿದ್ದಾರೆ. ಈ ಘಟನೆ ಈಗ ನಿಜಕ್ಕೂ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ ಎಂದು ಹೇಳಬಹುದು.