)
ಹಸಿರು ಹೊದಿಕೆಯನ್ನೇ ಮೈಗೂಡಿಸಿಕೊಂಡಿರೋ ಕಬ್ಬನ್ ಪಾರ್ಕ್ ಅಂದ್ರೆ ಯಾರಿಗಿಷ್ಟ ಹೇಳಿ.ನೂರಾರು ಎಕರೆ ಜಾಗದಲ್ಲಿ ಇರೋ ಕಬ್ಬನ್ ಪಾರ್ಕ್ ಸಾವಿರಾರು ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತೆ.ಇದೀಗ ಪ್ರವಾಸಿಗರಿಗೆ, ಮಕ್ಕಳಿಗೆ ಮುದ ನೀಡಲು ಫ್ಲವರ್ ಶೋ ಆಯೋಜನೆ ಮಾಡಲಾಗ್ತಿದೆ.ಲಕ್ಷಾಂತರ ಹೂಗಳ ಮೂಲಕ ಕಬ್ಬನ್ ಪಾರ್ಕ್ ಥೇಟ್ ದೇವಲೋಕದಂತೆ ಸೃಷ್ಟಿ ಆಗಲಿದೆ.ಆಗಿದ್ರೆ ಫ್ಲವರ್ ಶೋ ಯಾವಾಗ ಇರಲಿದೆ.ಎಷ್ಟು ದಿನ ಇರಲಿದೆ ಅನ್ನೊದರ ಕಲರ್ ಫುಲ್ ರಿಪೋರ್ಟ್ ಇಲ್ಲಿದೆ ನೋಡಿ.
ಇದನ್ನೂ ಓದಿ: ಸಿಸಿಬಿ ಪೊಲೀಸರ ಬಲೆಗೆ ಬಿದ್ದ ಡ್ರಗ್ಸ್ ಕಿಂಗ್ ಪಿನ್..!
ಹೌದು..ಬರೋಬ್ಬರಿ ಹತ್ತು ವರ್ಷಗಳ ಬಳಿಕ ಕಬ್ಬನ್ ಪಾರ್ಕ್ ನಲ್ಲೆ ಫ್ಲವರ್ ಶೋ ಆಯೋಜನೆ ಆಗ್ತಿದೆ.ಇದಕ್ಕೆ ಕೌಂಟ್ಡೌನ್ ಶುರುವಾಗಿದೆ.ಕರ್ನಾಟಕ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ದಶಕದಲ್ಲೇ ಇದೇ ಮೊದಲ ಬಾರಿಗೆ ಫ್ಲವರ್ ಶೋ ಆಯೋಜನೆ ಮಾಡ್ಲಾಗಿದೆ.ಈಗಾಗ್ಲೇ ಫ್ಲವರ್ ಶೋಗೆ ತೋಟಗಾರಿಕೆ ಇಲಾಖೆ ಸಕಲ ಸಿದ್ಧತೆ ನಡೆಸಿದೆ.
ಲಾಲ್ಬಾಗ್ನಲ್ಲಿ ವರ್ಷಕ್ಕೆರಡು ಬಾರಿ ಫ್ಲವರ್ ಶೋ ನಡೆಸೋದು ಸಂಪ್ರದಾಯ.ಆದರೆ ಈಗ ಕಬ್ಬನ್ ಪಾರ್ಕ್ನಲ್ಲಿ ಕನ್ನಡ ರಾಜ್ಯೋತ್ಸವದ ಜೊತೆಗೆ ಮಕ್ಕಳ ದಿನಾಚರಣೆಯನ್ನೂ ಆಚರಿಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಈ ನಿರ್ಧಾರ ಮಾಡಿದೆ. 2015ರಲ್ಲೂ ಇದೇ ರೀತಿ ಫ್ಲವರ್ ಶೋ ಆಯೋಜಿಸಲಾಗಿತ್ತು. ಲಾಲ್ ಬಾಗ್ ನಲ್ಲಿ ಕಳೆದ ವರ್ಷ ಕೂಡ ಫ್ಲವರ್ ಶೋ ಆಯೋಜನೆ ಮಾಡಿದ್ದೇವು.ಬಾಲಭವನ ಕಡೆಯಿಂದ ಕಳೆದ ಬಾರಿ ಆಯೋಜನೆ ಮಾಡಲಾಗಿತ್ತು. ಈ ಬಾರಿ ನಮ್ಮ ಇಲಾಖೆಯಿಂದ ಆಯೋಜನೆ ಮಾಡಿದ್ದೇವೆ.ಮಕ್ಕಳನ್ನು ಆಕರ್ಷಣೆ ಮಾಡುವ ಉದ್ದೇಶದಿಂದಲೇ ನಾವು ಹಂಪಿ ರಥ ಸೇರಿ ವಿವಿಧ ಕಲಾಕೃತಿಗಳನ್ನು ರಚನೆ ಮಾಡಿದ್ದೇವೆ.ಅಲ್ಲದೇ ಮುಖ್ಯವಾಗಿ ಹೂವಿನ ಕುಂಡಗಳನ್ನು ಹೆಚ್ಚು ಪ್ರದರ್ಶನ ಮಾಡುತ್ತಿದ್ದೇವೆ.ಶಾಲಾ ಮಕ್ಕಳಿಗೆ ಉಚಿತ ಪ್ರವೇಶ, ವಯಸ್ಕರರಿಗೆ 30 ರೂ ಟಿಕೆಟ್ ಇರಲಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಕುಸುಮಾ ಮಾಹಿತಿ ನೀಡಿದ್ರು.
ನವೆಂಬರ್ 27 ರಿಂದ ಡಿ.7ರ ವರೆಗೆ ಪುಷ್ಪ ಪ್ರದರ್ಶನ ಜೊತೆಗೆ ಕಲಾ, ಸಂಸ್ಕೃತಿ ಹಬ್ಬ ಹಮ್ಮಿಕೊಳ್ಳಲಾಗುತ್ತದೆ. ಆಲಂಕಾರಿಕ, ದೇಸಿ-ವಿದೇಶಿ ಹಾಗೂ ಕುಂಡಗಳನ್ನೂ ಸಿದ್ಧ ಮಾಡಿಕೊಳ್ಳಲಾಗುತ್ತದೆ. ಪುಷ್ಪಗಳಲ್ಲಿ ಪ್ರಾಣಿಗಳ ಆಕೃತಿ ರಚಿಸಿ ಮಕ್ಕಳನ್ನು ಆಕರ್ಷಿಸುವ ಯೋಜನೆ ರೂಪಿಸಲಾಗುತ್ತದೆ. 20 ಸಾವಿರದಿಂದ 25 ಸಾವಿರ ಕುಂಡಗಳನ್ನು ಉದ್ಯಾನವನದಲ್ಲಿ ಬ್ಯಾಂಡ್ ಸ್ಟ್ಯಾಂಡ್ ಹತ್ತಿರ ಇಡಲು ಪ್ಲಾನ್ ಮಾಡಲಾಗಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪ್ರದರ್ಶನ ಇರಲಿದೆ.
11 ದಿನಗಳ ಕಾಲ ಸಂಚಾರ ಮಾರ್ಗ ನಿರ್ಬಂಧ
ನಗರದ ಟ್ರಾಫಿಕ್ ಜಾಮ್ನಿಂದ ತಪ್ಪಿಸಿಕೊಳ್ಳುವುದಕ್ಕೆ ಕಬ್ಬನ್ ಪಾರ್ಕ್ ಮಾರ್ಗವಾಗಿ ದಿನನಿತ್ಯ ಅನೇಕ ವಾಹನ ಸವಾರರು ಸಂಚಾರ ಮಾಡುತ್ತಾರೆ. ಈ ಮಾರ್ಗದ ಮೂಲಕ ರಿಚ್ಮಂಡ್ ಸರ್ಕಲ್,ಶಿವಾಜಿನಗರ, ಕೆ ಆರ್ ಸರ್ಕಲ್, ಕಾರ್ಪೊರೇಷನ್ ಕಡೆಗೆ ಸಂಚಾರ ಬೆಳೆಸುತ್ತಾರೆ.ನವೆಂಬರ್ 27 ರಿಂದ ಹನ್ನೊಂದು ದಿನಗಳ ಕಾಲ ಜನರು ಸಂಚರಿಸುವ ಮಾರ್ಗ ಬದಲಿಸಬೇಕಿದೆ.ಫ್ಲವರ್ ಶೋ ಹಿನ್ನಲೆ ಬರುವ 11 ದಿನಗಳ ಕಾಲ ಕೋರ್ಟ್ ವಿಠಲ್ ಮಲ್ಯ ರಸ್ತೆ ಸಂಪರ್ಕಿಸುವ ರಸ್ತೆ, ಬ್ಯಾಂಡ್ ಸ್ಟ್ಯಾಂಡ್ ಬಾಲಭವನದ ಮುಂಭಾಗದ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಿದ್ದು, ಇದರಿಂದ ಕಬ್ಬನ್ ಪಾರ್ಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಎದುರಾಗುವ ಸಾಧ್ಯತೆ ಇದೆ.
ಒಟ್ನಲ್ಲಿ ದಶಕಗಳ ಬಳಿಕ ಕಬ್ಬನ್ ಪಾರ್ಕ್ ನಲ್ಲಿ ಕಲರ್ ಫುಲ್ ಹೂವಗಳ ಲೋಕವೇ ಅನಾವರಣ ಆಗಲಿದ್ದು, ಚುಮು ಚುಮು ಚಳಿಯ ಜೊತೆ ಹಸಿರು ಹೊದಿಕೆಯನ್ನೇ ಮೈಗೂಡಿಸಿಕೊಂಡಿರೋ ಕಬ್ಬನ್ ಪಾರ್ಕ್ ನ ಫ್ಲವರ್ ಶೋ ಕಣ್ತುಂಬಿಕೊಳ್ಳಲು ಇದು ಸದಾವಕಾಶ.