Foreign Education in Bengaluru: ಒಂದು ಸಮಾಜ ಸುಧಾರಣೆಯಾಗಬೇಕಾದರೆ ಮೊದಲು ಅಲ್ಲಿನ ಶಿಕ್ಷಣ ವ್ಯವಸ್ಥೆ ಸುಧಾರಣೆಯಾಗಬೇಕು. ಇದೀಗ ರಾಜ್ಯ ಸರ್ಕಾರ ಅಂಥದೊಂದು ಸುಧಾರಣಾದ ಹೆಜ್ಜೆ ಇಟ್ಟಿದೆ. ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಶೀಘ್ರದಲ್ಲೇ ವಿದೇಶಿ ವಿಶ್ವವಿದ್ಯಾನಿಲಯವನ್ನು ಬೆಂಗಳೂರಿನಲ್ಲಿ (Foreign university In Bengaluru) ಶುರುಮಾಡಲಿದೆ ಎಂದು ತಿಳಿದುಬಂದಿದೆ.
ರಾಜ್ಯದ ವಿದ್ಯಾರ್ಥಿಗಳಿಗೆ ರಾಜ್ಯದಲ್ಲೇ ಹೊರ ದೇಶದಲ್ಲಿ ಸಿಗುವ ಗುಣಮಟ್ಟದ ವಿದ್ಯಾಭ್ಯಾಸ ಕಮ್ಮಿ ಖರ್ಚಿನಲ್ಲಿ ಸಿಗಬೇಕು ಎನ್ನುವ ಕಾರಣಕ್ಕೆ ಉನ್ನತ ಶಿಕ್ಷಣ ಇಲಾಖೆ ಬೆಂಗಳೂರಿನಲ್ಲಿ ವಿದೇಶಿ ವಿಶ್ವವಿದ್ಯಾನಿಲಯವನ್ನು ಶುರುಮಾಡಲು ಮುಂದಾಗಿದೆ. ಈ ಬಗ್ಗೆ ಸರ್ಕಾರದಲ್ಲಿ ಈಗಾಗಲೇ ಉನ್ನತ ಮಟ್ಟದ ಚರ್ಚೆ ನಡೆದಿದ್ದು ಶೀಘ್ರವೇ ಅಂತಿಮ ತೀರ್ಮಾನ ಆಗಲಿದೆ ಎಂದು ತಿಳಿದುಬರುತ್ತಿದೆ.
ಯೂನಿವರ್ಸಿಟಿ ಆಫ್ ಲ್ಯಾನ್ಸೆಸ್ಟರ್ (University of Lancaster) ಬೆಂಗಳೂರಿನಲ್ಲಿ ತನ್ನ ಘಟಕವನ್ನು ಶುರುಮಾಡಲು ತಯಾರಿ ನಡೆಸಿದೆ. ಈ ಕುರಿತಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ರಾಜ್ಯ ಸರ್ಕಾರ ಆ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿದೆ. ರಾಜ್ಯ ಸರ್ಕಾರ ಫಾರಿನ್ ಕಾಮನ್‌ವೆಲ್ತ್ ಆಫೀಸ್ ಮುಖಾಂತರ ಒಡಂಬಡಿಕೆ ಮಾಡಿಕೊಂಡಿದೆ ಎನ್ನುವ ಮಾಹಿತಿಗಳು ಲಭ್ಯವಾಗುತ್ತಿವೆ.
ಮೂಲಸೌಕರ್ಯಗಳು ಮತ್ತು ಕ್ಲಾಸ್ ರೂಮುಗಳನ್ನು ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಇರುವಂತೆ ರೂಪಿಸಲಾಗುತ್ತದೆ. ಬೇರೆ ಬೇರೆ ರಾಜ್ಯದ 5 ವಿದ್ಯಾರ್ಥಿನಿಯರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಅಲ್ಲದೆ ರಾಜ್ಯದ 5 ವಿದ್ಯಾರ್ಥಿನಿಯರಿಗೆ ವಿದೇಶದಲ್ಲಿ ಸ್ನಾತಕೋತ್ತರ ಪದವಿ ಮಾಡಲು ವಿಶ್ವವಿದ್ಯಾಲಯ ಅವಕಾಶ ಮಾಡಿಕೊಡಲಿದೆ ಎಂದು ಗೊತ್ತಾಗಿದೆ.
ಮೆರಿಟ್ ಆಧರಿಸಿ ರಾಜ್ಯದ 5 ವಿದ್ಯಾರ್ಥಿನಿಯರಿಗೆ ವಿದೇಶದಲ್ಲಿ ಸ್ನಾತಕೋತ್ತರ ಪದವಿ ಮಾಡಲು ಅವಕಾಶ ಕೊಡಲಾಗುತ್ತದೆ. ವಿದ್ಯಾರ್ಥಿನಿಯರು ಯಾವುದೇ ಸ್ನಾತಕೋತ್ತರ ಪದವಿಯನ್ನಾದರೂ ಮಾಡಬಹುದಾಗಿದೆ. ಅದಕ್ಕಾಗಿ ತಗಲುವ ವೆಚ್ಚದಲ್ಲಿ 20 ಲಕ್ಷ ರೂಪಾಯಿಗಳನ್ನು ಪ್ರತಿ ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರ ಭರಿಸಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ- ನಿರುದ್ಯೋಗ ಸಮಸ್ಯೆ ನಿವಾರಿಸಲು ರಾಜ್ಯ ಸರ್ಕಾರದ ಕ್ರಮ 'ಬೃಹತ್ ಉದ್ಯೋಗ ಮೇಳ': ಸಚಿವ ಡಾ. ಶರಣಪ್ರಕಾಶ್ ಆರ್ ಪಾಟೀಲ್
ಇದನ್ನೂ ಓದಿ- ಟಿವಿ ಒಳಗೇ ಸೇರಿಕೊಂಡು ಬುಸಗುಟ್ಟಿದ ನಾಗಪ್ಪ! ಮನೆಮಂದಿ ಶಾಕ್ ವಿಡಿಯೋ ವೈರಲ್









