)
Bengaluru Traffic Viral Video: ಟ್ರಾಫಿಕ್ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯ. ಆದರೆ, ಬೇಜವಾಬ್ದಾರಿಯುತ ಜನರು ಟ್ರಾಫಿಕ್ ರೂಲ್ಸ್ ಅನ್ನು ಜೀವನ ರಕ್ಷಣೆಯ ಭಾಗವಾಗಿ ನೋಡದೆ ಟ್ರಾಫಿಕ್ ಪೊಲೀಸರ ದಂಡದ ಬಗ್ಗೆ ಮಾತ್ರ ನಿಗಾವಹಿಸುತ್ತಾರೆ. ಇದಕ್ಕೆ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ದೃಶ್ಯ ಕನ್ನಡಿ ಹಿಡಿದಂತಿದೆ.
ವಾಹನ ಚಲಾಯಿಸುವ ಸಂದರ್ಭದಲ್ಲಿ ಹೈಲ್ಮೆಟ್ ಧರಿಸದೆ, ಸೀಟ್ ಬೆಲ್ಟ್ ಧರಿಸದೆ ಪ್ರಯಾಣಿಸಿದರೆ ಹಾಗೂ ಇನ್ನಿತರ ಟ್ರಾಫಿಕ್ ರೂಲ್ಸ್ಗಳನ್ನು ಬ್ರೇಕ್ ಮಾಡಿದರೆ ಟ್ರಾಫಿಕ್ ಪೊಲೀಸರು ದಂಡ ವಿಧಿಸುತ್ತಾರೆ. ಇಲ್ಲೊಬ್ಬ ಸವಾರ ಟ್ರಾಫಿಕ್ ಪೊಲೀಸರ ದಂಡವನ್ನು ತಪ್ಪಿಸುವ ಸಲುವಾಗಿ ಮಾಡಿರುವ ಉಪಾಯ ನೋಡಿದರೆ ನಿಜಕ್ಕೂ ಹೊಟ್ಟೆ ಹುಣ್ಣಾಗುವಷ್ಟು ನಡುತ್ತೀರಿ.
ಟ್ರಾಫಿಕ್ ಎಂದರೆ ಮೊದಲು ನೆನಪಾಗುವುದು ಬೆಂಗಳೂರು ಟ್ರಾಫಿಕ್ ಎನ್ನುವುದರಲ್ಲಿ ಅಚ್ಚರಿಯಿಲ್ಲ. ಟ್ರಾಫಿಕ್ ಜಂಜಾಟದಲ್ಲಿ ತಮ್ಮ ಗಮ್ಯಸ್ಥಾನವನ್ನು ತಲುಪಲು ಹೆಣಗಾಡುವ ಸವಾರರಿಗೆ ಇಲ್ಲೊಂದು ಹಾಸ್ಯಮಯ ದೃಶ್ಯ ಕಂಡುಬಂದಿದೆ. ಬೆಂಗಳೂರಿನ ರೂಪೇನ ಅಗ್ರಹಾರದ ಬಳಿ ದ್ವಿಚಕ್ರ ವಾಹನದಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಸವಾರನೊಬ್ಬ ಹೆಲ್ಮೆಟ್ಗೆ ಬದಲಾಗಿ ಅಡುಗೆ ಮನೆಯಲ್ಲಿ ಬಳಸುವ ಪ್ಯಾನ್ನಿಂದ ತಲೆಯನ್ನು ಮುಚ್ಚಿಕೊಂಡು ಟ್ರಾಫಿಕ್ ಚಲನ್ನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.
ಹೌದು, ಟ್ರಾಫಿಕ್ ಪೊಲೀಸರ ದಂಡವನ್ನು ತಪ್ಪಿಸಲು ದ್ವಿಚಕ್ರ ವಾಹನದಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಸವಾರನೊಬ್ಬ ಬಾಣಲೆಯಿಂದ ತಲೆ ಕವರ್ ಮಾಡಿಕೊಂಡಿರುವ ದೃಶ್ಯವನ್ನು ಯಾರೋ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ದೃಶ್ಯ ಸಂಚಾರ ಪೊಲೀಸರನ್ನು ಹಾಗೂ ನೆಟ್ಟಿಗರನ್ನು ದಿಗ್ಬ್ರಮೆಗೊಳಿಸಿದೆ. ಏಕೆಂದರೆ ಇಲ್ಲಿ, ಆ ವ್ಯಕ್ತಿ ಐಎಸ್ಐ ಪ್ರಮಾಣೀಕೃತ ಹೆಲ್ಮೆಟ್ನಂತೆ ತುಂಬಾ ವಿಶ್ವಾಸದಿಂದ ಬಾಣಲೆಯನ್ನು ತಲೆಯಲ್ಲಿ ಇಟ್ಟುಕೊಂಡು ಕುಳಿತಿದ್ದಾನೆ. ನೋಡಲು ಇದು ತಮಾಷೆಯ ವಿಷಯವಾದರೂ ಖಂಡಿತ ಭಯಾನಕವಾದ ದೃಶ್ಯವೆಂತಲೇ ಹೇಳಬಹುದು.
Karnataka Portfolio@karnatakaportf ಎಂಬ ಟ್ವೀಟ್ ಖಾತೆಯಲ್ಲಿ ಈ ಬಗ್ಗೆ ವೀಡಿಯೋ ಶೇರ್ ಮಾಡಲಾಗಿದ್ದು, ಬಾಣಲೆಯಲ್ಲಿ ಆಮ್ಲೆಟ್ ಅನ್ನು ತಿರುಗಿಸಬಹುದೇ ಹೊರತು ತಲೆಬುರುಡೆಯನ್ನು ಉಳಿಸಲು ಸಾಧ್ಯವಿಲ್ಲ. ಹೆಲ್ಮೆಟ್ಗಳು ಐಚ್ಛಿಕ ಫ್ಯಾಷನ್ ಪರಿಕರಗಳಲ್ಲ ಅಥವಾ ವೈರಲ್ ರೀಲ್ಗಳಿಗೆ ಆಧಾರಗಳಲ್ಲ, ಅವು ಜೀವರಕ್ಷಕವಾಗಿವೆ. ಆದ್ದರಿಂದ, ಅಲ್ಲಿರುವ ಪ್ರತಿಯೊಬ್ಬ ಸೃಜನಶೀಲ ಆತ್ಮಕ್ಕೂ: ಜುಗಾಡ್ ಅನ್ನು ಬಿಟ್ಟುಬಿಡಿ, ಹೆಲ್ಮೆಟ್ ಧರಿಸಿ. ಏಕೆಂದರೆ ಬೆಂಗಳೂರು ಟ್ರಾಫಿಕ್ಗಿಂತ ಕಠಿಣವಾದ ಏಕೈಕ ವಿಷಯವೆಂದರೆ ... ಅದು ರಸ್ತೆಗೆ ಇಳಿದ ನಂತರ ನಿಮ್ಮ ತಲೆ. ಬುದ್ಧಿವಂತರಾಗಿರಿ, ಸುರಕ್ಷಿತವಾಗಿರಿ ಮತ್ತು ಪ್ಯಾನ್ ಅನ್ನು ಅದರ ಸ್ಥಳದಲ್ಲಿ ಇರಿಸಿ: ಅಡುಗೆಮನೆಯಲ್ಲಿ, ನಿಮ್ಮ ತಲೆಯ ಮೇಲೆ ಅಲ್ಲ ಎಂದು ಬರೆಯಲಾಗಿದೆ.
ಹೆಲ್ಮೆಟ್ ಧರಿಸದೆ ಟ್ರಾಫಿಕ್ ದಂಡ ತಪ್ಪಿಸಲು ಬಾಣಲೆ ಉಪಯೋಗಿಸಿರುವ ಸವಾರನಿಗೆ ನೆಟ್ಟಿಗರು ತರಾವರಿ ಕಾಮೆಂಟ್ ಮಾಡುತ್ತಿದ್ದಾರೆ. ಈ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಬೆಂಗಳೂರು ಟ್ರಾಫಿಕ್ ನಡುವೆ ಕಂಡು ಬಂದ ಈ ವೀಡಿಯೋವನ್ನು ನೀವೂ ಒಮ್ಮೆ ವೀಕ್ಷಿಸಿ...
Peak Bengaluru moment! In a scene straight out of a comedy sketch, a pillion rider near Roopena Agrahara was spotted trying to escape a traffic challan by covering his head with wait for it a frying pan instead of a helmet.Yes, a frying pan. Because apparently, when life gives… pic.twitter.com/jhFWCTrvKi
— Karnataka Portfolio (@karnatakaportf) November 1, 2025