)
ಬೆಂಗಳೂರು : ದುನಿಯಾ ವಿಜಿ ನಟನೆಯ ಭೀಮಾ ಸಿನಿಮಾದ ಕಥಾ ಹಂದರವೇ ಡ್ರಗ್. ಅದ್ರಲ್ಲೂ ಟೈಡಾಲ್ ಅನ್ನೋ ಪೇನ್ ಕಿಲ್ಲರ್ ಮಾತ್ರೆಯನ್ನ ಯುವ ಪೀಳಿಗೆ ಡ್ರಗ್ ಆಗಿ ಬಳಕೆ ಮಾಡ್ತಿದೆ. ಮೆಡಿಕಲ್ ಶಾಪ್ ನಲ್ಲಿ ವೈದ್ಯರ ಸಲಹೆ ಮೇರೆಗೆ ಸಿಗೋ ಈ ಟೈಡಾಲ್ ಮಾತ್ರೆ ಬೆಲೆ 40 ರೂಪಾಯಿ. ಆದ್ರೆ ಕೆಲ ವ್ಯಸನಿಗಳಿಗೆ ಕೆಲ ಪೆಡ್ಲರ್ ಗಳು ಇದನ್ನ 300 ರೂನಿಂದ 400 ರೂಪಾಯಿಗೆ ಮಾರಾಟ ಮಾಡ್ತಾರೆ. ಈ ಮಾತ್ರೆಗಳು ಎಗ್ಗಿಲ್ಲದೆ ಯಾವುದೇ ವೈದ್ಯರ ಚೀಟಿ ಇಲ್ಲದೆ ಕೆಲ ಮೆಡಿಕಲ್ ಶಾಪ್ ನಲ್ಲಿ ಮಾರಾಟ ಆಗ್ತಿದೆ.
ದುನಿಯಾ ವಿಜಿ ಭೀಮಾ ಸಿನಿಮಾ ರಿಲೀಸ್ ಸಮಯದಲ್ಲಿ ಟೈಡಾಲ್ ಮಾತ್ರೆ ಹೇಳಿದ್ರು. ಸದ್ಯ ಅದೇ ಮಾತ್ರೆಗಳು ಆರ್ ಆರ್ ನಗರದಂತ ಹೈ ಫೈ ಏರಿಯಾದಲ್ಲಿ ಮಾರಾಟ ಆಗ್ತಿರೋ ಬಗ್ಗೆ ಪೊಲೀಸ್ರಿಗೆ ಮಾಹಿತಿ ಬಂದಿದೆ. ಟೈಡಾಲ್ ಮಾತ್ರೆಗಳನ್ನ ನೀರಿನಲ್ಲಿ ಕರಗಿಸಿ ಇಂಜಕ್ಷನ್ ಸೂಜಿ ಮೂಲಕ ವ್ಯಸನಿಗಳು ಕೈಗೆ ಇಂಜೆಕ್ಟ್ ಮಾಡಿಕೊಳ್ಳುತ್ತಾರೆ.
ಇಂಜೆಕ್ಟ್ ಮಾಡಿಕೊಂಡ ಕೆಲ ಹೊತ್ತಲ್ಲೆ ನಶೆಯಲ್ಲಿ ಯುವ ಪೀಳಿಗೆ ಗಂಟೆಗಟ್ಟಲೆ ತೇಲಾಡ್ತಾರೆ. ಇನ್ನೂ ಈ ಬಗ್ಗೆ ಬ್ಯಾಟರಾಯನಪುರ ಎಸಿಪಿ ಭರತ್ ರೆಡ್ಡಿ ಗಮನಕ್ಕೆ ಬರ್ತಿದ್ದಂತೆ ಆರ್ ಆರ್ ನಗರ ಸಬ್ ಇನ್ಸ್ಪೆಕ್ಟರ್ ನವೀನ್ ಮತ್ತು ಎಎಸ್ಐ ದೇವರಾಜ್ ನೇತೃತ್ವದಲ್ಲಿ ತಂಡ ರಚನೆ ಮಾಡಿ ಈ ಮಾತ್ರೆಗಳ ಹಿಂದಿರೋ ಕಾಣದ ಕೈಗಳ ಪತ್ತೆ ಮಾಡಲು ಬಲೆ ಬೀಸ್ತಾರೆ.
ಪೊಲೀಸ್ರು ಸ್ಥಳೀಯ ಡ್ರಗ್ ಇನ್ಸ್ಪೆಕ್ಟರ್ ಜೊತೆಗೂಡಿ ಪೆಡ್ಲರ್ ಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದಾಗ ಅದು ಚಾಮರಾಜಪೇಟೆಗೆ ಹೋಗುತ್ತೆ. ಚಾಮರಾಜಪೇಟೆ ಠಾಣೆಯಲ್ಲಿ ಟೈಡಾಲ್ ಮಾತ್ರೆ ಮಾರಾಟ ಮಾಡ್ತಿದ್ದ ಜಾಲವನ್ನ ಪೊಲೀಸ್ರು ಪತ್ತೆಮಾಡಿ ನಾಲ್ವರು ಆರೋಪಿಗಳನ್ನ ದಸ್ತಗಿರಿ ಮಾಡಿ ಆರೋಪಿಗಳಿಂದ ಸುಮಾರು ಕಾಳಸಂತೆಯಲ್ಲಿ 4 ಲಕ್ಷ ಬೆಲೆ ಬಾಳುವ ಸುಮಾರು ಒಂದು ಸಾವಿರ ಟೈಡಾಲ್ ಮಾತ್ರೆಗಳು ಹಾಗೂ ನಾಲ್ಕು ಲಕ್ಷ ನಗದು ಸೀಜ್ ಮಾಡಿದ್ದಾರೆ.
ದುರಂತ ಅಂದ್ರೆ ಸಮಾಜಕ್ಕೆ ಮತ್ತು ಯುವ ಪೀಳಿಗೆಗೆ ಮಾರಕವಾಗಿರೋ ಟೈಡಾಲ್ ಮಾತ್ರೆಗಳ ಡ್ರಗ್ ಆಗಿ ಮಾರಾಟ ಮಾಡ್ತಿರೋ ಆರೋಪಿಗಳನ್ನ ಜೈಲಿಗೆ ಅಟ್ಟಲು ಕಾನೂನು ಅಷ್ಟು ಕಠಿಣವಾಗಿಲ್ಲ. ಇಂಥಹ ಸಮಾಜಘಾತುರನ್ನ ಹೆಡೆ ಮುರಿಕಟ್ಟಿ ಇವರ ಬೆನ್ನಿಗೆ ನಿಂತಿರೋ ಕೆಲ ಅಧಿಕಾರಿಗಳಿಗೂ ತಕ್ಕಪಾಠ ಕಲಿಸಬೇಕಾಗಿದೆ. ಒಟ್ಟಾರೆ ಡ್ರಗ್ ವಿರುದ್ಧದ ಹೋರಾಟ ನಿರಂತರವಾಗಿದ್ರು ಸಹ ಈ ರೀತಿಯಲ್ಲಿ ಯುವಪೀಳಿಗೆ ಹಾದಿ ತಪ್ಪುತ್ತಿರೋದು ದುರಂತವೇ ಸರಿ.