)
Namma Metro: ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ಬಿಎಂಆರ್ಸಿಎಲ್ ಗುಡ್ ನ್ಯೂಸ್ ನೀಡಿದ್ದು, ನಮ್ಮ ಮೆಟ್ರೋದ ಯೇಲ್ಲೋ ಲೈನ್'ನಲ್ಲಿ ಇಂದಿನಿಂದ (ಸೆ.10) ನಾಲ್ಕನೇ ಮೆಟ್ರೋ ರೈಲು ಸಂಚರಿಸಲಿದೆ. ಇದರಿಂದಾಗಿ ಆರ್.ವಿ ರೋಡ್ ನಿಂದ ಬೊಮ್ಮಸಂದ್ರ ಮಾರ್ಗವಾಗಿ ದಿನ ನಿತ್ಯ ಸಂಚರಿಸುವ ಸಾವಿರಾರು ಮೆಟ್ರೋ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಹೌದು, ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ನಮ್ಮ ಮೆಟ್ರೋದ ಯೆಲ್ಲೋ ಮಾರ್ಗದಲ್ಲಿ ಮೆಟ್ರೋ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರು. ನಂತರ ಆಗಸ್ಟ್ 11 ರಿಂದ ಈ ಮಾರ್ಗದಲ್ಲಿ ಪ್ರಯಾಣಿಕರಿಗೆ ಸಂಚಾರ ಮಾಡಲು ಅವಕಾಶ ಕಲ್ಪಿಸಲಾಗಿದ್ದು. ಆದಾಗ್ಯೂ, ನಮ್ಮ ಮೆಟ್ರೋ ಕೇವಲ ಮೂರು ಮೆಟ್ರೋ ರೈಲುಗಳನ್ನು ಮಾತ್ರ ಹೊಂದಿದ್ದರಿಂದ ಮುಂಜಾನೆ ಅರ್ಧಗಂಟೆ ತಡವಾಗಿ ಹಾಗೂ ರಾತ್ರಿ ಅರ್ಧಗಂಟೆ ಬೇಗ ಮೆಟ್ರೋ ಸಂಚರಿಸುತ್ತಿತ್ತು.
ಇದೀಗ ಇಂದಿನಿಂದ (ಸೆ.10) ಆರ್.ವಿ ರೋಡ್ ಟು ಬೊಮ್ಮಸಂದ್ರ ಮಾರ್ಗದಲ್ಲಿ ನಮ್ಮ ಮೆಟ್ರೋದ ನಾಲ್ಕನೇ ರೈಲು ಸಂಚಾರ ಆರಂಭಿಸಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಬೆಳಿಗ್ಗೆ 06:30ಕ್ಕೆ ಆರಂಭವಾಗುತ್ತಿದ್ದ ಮೆಟ್ರೋ ಸಂಚಾರ ಇಂದು ಬೆಳಿಗ್ಗೆ 06:00ಗಂಟೆಗೆ ಆರಂಭವಾಗಿದೆ. ಭಾನುವಾರದಂದು ಮಾತ್ರ ಬೆಳಿಗ್ಗೆ 7 ಗಂಟೆಯಿಂದ ಮೆಟ್ರೋ ಸಂಚಾರ ಆರಂಭವಾಗಲಿದೆ.
ಆರ್.ವಿ ರೋಡ್ ಟು ಬೊಮ್ಮಸಂದ್ರ ಮಾರ್ಗದಲ್ಲಿ ಈ ಹಿಂದೆ 25 ನಿಮಿಷಕ್ಕೊಂದರಂತೆ ಮೆಟ್ರೋ ರೈಲು ಸಂಚಾರ ಮಾಡುತ್ತಿದ್ದು. ಇಂದು ಬೆಳಿಗ್ಗೆಯಿಂದ 19 ನಿಮಿಷಕ್ಕೊಂದರಂತೆ ಮೆಟ್ರೋ ರೈಲುಗಳು ಸಂಚಾರ ಮಾಡುತ್ತಿದೆ. ಇದೇ ಸಂದರ್ಭದಲ್ಲಿ ಆರ್.ವಿ ರೋಡ್ ನಿಂದ ರಾತ್ರಿ ಕೊನೆಯ ರೈಲು 11-55 ಕ್ಕೆ ಸಂಚಾರ ಮಾಡಿದರೆ, ಬೊಮ್ಮಸಂದ್ರ ಮೆಟ್ರೋ ಸ್ಟೇಷನ್ ನಿಂದ ಕೊನೆಯ ರೈಲು 10:42 ಕ್ಕೆ ಸಂಚಾರ ಮಾಡಲಿದೆ ಎಂದು ಮಾಹಿತಿ ಲಭ್ಯವಾಗಲಿದೆ.
ಯೆಲ್ಲೋ ಲೈನ್ ಮೆಟ್ರೋ ಮಾರ್ಗವು 19.15 ಕಿಲೋಮೀಟರ್ ಉದ್ದವಿದ್ದು, ಈ ಮಾರ್ಗವು ಒಟ್ಟು 16 ಮೆಟ್ರೋ ನಿಲ್ದಾಣಗಳನ್ನು ಒಳಗೊಂಡಿದೆ.
ಆರ್.ವಿ. ರೋಡ್ ಟು ಬೊಮ್ಮಸಂದ್ರ ಮಾರ್ಗದ ಮೆಟ್ರೋ ಸ್ಟೇಷನ್ ಗಳು ಈ ಕೆಳಕಂಡಂತಿವೆ:-
1- ಆರ್.ವಿ ರೋಡ್
2- ರಾಗಿಗುಡ್ಡ
3- ಜಯದೇವ ಆಸ್ಪತ್ರೆ
4- ಬಿಟಿಎಂ ಲೇಔಟ್
5- ಸೆಂಟ್ರಲ್ ಸಿಲ್ಕ್ ಬೋರ್ಡ್
6- ಬೊಮ್ಮನಹಳ್ಳಿ
7- ಹೊಂಗಸಂದ್ರ
8- ಕೂಡ್ಲುಗೇಟ್
9- ಸಿಂಗಸಂದ್ರ
10- ಹೊಸರೋಡ್
11- ಬೇರೆಟೇನಾ ಅಗ್ರಹಾರ
12- ಎಲೆಕ್ಟ್ರಾನಿಕ್ ಸಿಟಿ
13- ಇನ್ಫೋಸಿಸ್ ಫೌಂಡೇಶನ್ ಕೊನಪ್ಪನ ಅಗ್ರಹಾರ
14- ಹೂಸ್ಕೂರು ರೋಡ್
15- ಬಯೋಕಾನ್ ಹೆಬ್ಬಗೋಡಿ
16- ಬೊಮ್ಮಸಂದ್ರ