)
ಪ್ರತಿಭಾ ಗುರುತಿಸುವಿಕೆ, ನೇಮಕಾತಿಯ ಯಶಸ್ಸನ್ನು ನಿರ್ಧರಿಸುವ ಮಾನದಂಡಗಳನ್ನು AI ಮರುರೂಪಿಸಿದೆ. ಹಚ್ಚಿನ ಸಂಖ್ಯೆಯ ಅರ್ಜಿಗಳ ನಡುವೆ, ನೇಮಕಾತಿಗೆ ತೆಗೆದುಕೊಳ್ಳುವ ಸಮಯವು ಸಹ ಪ್ರತಿಭೆಯ ಗುಣಮಟ್ಟದಷ್ಟೇ ಮಹತ್ವ ಪಡೆದುಕೊಳ್ಳುತ್ತಿದೆ. ಇದರಿಂದ ವೇಗ, ಕೌಶಲ್ಯಗಳು ಮತ್ತು ROI ನಡುವಿನ ಸಮತೋಲನ ಅತ್ಯಗತ್ಯವಾಗುತ್ತಿದೆ. ಇದರ ಪರಿಣಾಮವಾಗಿ, ನೇಮಕಾತಿದಾರರು ಪ್ರಾಥಮಿಕ ಮೌಲ್ಯಮಾಪನಗಳಿಗಾಗಿ ಡೇಟಾ ತಂತ್ರಜ್ಞಾನ ಮತ್ತು AI ಮೇಲಿನ ಅವಲಂಬನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಅರ್ಜಿಗಳ ಪ್ರಮಾಣವನ್ನು ತಗ್ಗಿಸುವುದಕ್ಕಿಂತ, ಮೌಲ್ಯವನ್ನು ಅಳೆಯುವಿಕೆಗೆ ಹೆಚ್ಚು ಸಮಯ ಮೀಸಲಿಡುತ್ತಿದ್ದಾರೆ. ಭಾರತದಲ್ಲಿ 52% ನೇಮಕಾತಿದಾರರು ಹೆಚ್ಚು ಸ್ಮಾರ್ಟರ್ ನೇಮಕಾತಿ ವಿಧಾನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ, AI ಈಗ ನೇಮಕಾತಿದಾರರನ್ನು ಪ್ರತಿಭೆ ಮತ್ತು ವ್ಯವಹಾರ ಹೊಂದಾಣಿಕೆಯನ್ನು ಗುರುತಿಸುವ ಫಿಲ್ಟರ್ ಆಗಿ ರೂಪಿಸುತ್ತಿದೆ.
Zee Mediaಯ ವಿಶೇಷ ಸರಣಿ ‘Beyond AI, CVs & JDs’ LinkedIn ಜೊತೆಗಿನ ಮೊದಲ ಎಪಿಸೋಡಿನಲ್ಲಿ, ಲಿಂಕ್ಡಿನ್ ಟ್ಯಾಲೆಂಟ್ ಮತ್ತು ಲರ್ನಿಂಗ್ ಸೊಲ್ಯೂಶನ್ಸ್, ಭಾರತದ ಮುಖ್ಯಸ್ಥೆ ರೂಚಿ ಅನಂದ್ ಮತ್ತು ವಿಪ್ರೋ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (COO) ಸಂಜೀವ್ ಜೈನ್, ಹೇಗೆ AI ನೇಮಕಾತಿದಾರರ ಆದ್ಯತೆಗಳು, ಯಶಸ್ಸಿನ ಮಾನದಂಡಗಳು ಮತ್ತು ಅವರನ್ನು ತಂತ್ರಾತ್ಮಕ ಪ್ರತಿಭಾ ಸಲಹೆಗಾರರನ್ನಾಗಿ ರೂಪಿಸುತ್ತಿದೆ ಎಂಬುವುದರ ಕುರಿತು ಚರ್ಚೆ ನಡೆಸಿದರು.
ವೇಗ ನೇಮಕಾತಿ - ಉತ್ತಮ. ಸ್ಮಾರ್ಟರ್ ನೇಮಕಾತಿ - ಅತ್ಯುತ್ತಮ. ವ್ಯವಹಾರ ಉದ್ದೇಶದೊಂದಿಗಿನ ನೇಮಕಾತಿ - ಅತ್ಯಗತ್ಯ
ಇಂದಿನ ನೇಮಕಾತಿದಾರರು ಸಂಪೂರ್ಣ ವಿಭಿನ್ನ ವಿಧಾನಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆ. ಲಿಂಕ್ಡಿನ್ ಡೇಟಾ ಪ್ರಕಾರ, ಭಾರತೀಯ ನೇಮಕಾತಿದಾರರ ಪ್ರಮುಖ ಆದ್ಯತೆಗಳನ್ನು ನೋಡುವುದಾದರೆ - ಕೌಶಲ್ಯ ವ್ಯಾಪ್ತಿ ಹೆಚ್ಚಳ, ಉನ್ನತ ಗುಣಮಟ್ಟದ ಅಭ್ಯರ್ಥಿಗಳ ಆಯ್ಕೆ (52%), ಹೆಚ್ಚು ಉತ್ತಮ ನೇಮಕಾತಿ ತಂತ್ರಜ್ಞಾನ ಅಳವಡಿಕೆ (52%) ಹಾಗೂ ನೇಮಕಾತಿ ಹೂಡಿಕೆಗಳ ROI ಅನ್ನು ಸಿ-ಸೂಟ್ ನಾಯಕತ್ವಕ್ಕೆ ಒಗ್ಗಿ ಕೊಳ್ಳುವಂತೆ ಸಾಬೀತು ಪಡಿಸುವುದು (46%). ಈ ಬದಲಾವಣೆಯು, ವ್ಯವಹಾರಕ್ಕೆ ನೇರವಾಗಿ ಸಂಪರ್ಕ ಹೊಂದಿರುವ ಫಲಿತಾಂಶಗಳತ್ತ ಸಾಗುವ ವಹಿವಾಟು ಆಧಾರಿತ ನೇಮಕಾತಿಯಿಂದ ದೂರ ಸರಿಯುವ ವಿಧಾನವನ್ನು ಸೂಚಿಸುತ್ತದೆ.
ಈ ಎಪಿಸೋಡಿನಲ್ಲಿ, ಅನಂದ್ ಅವರು ಈ ಬೆಳವಣಿಗೆಯನ್ನು ಸ್ಪಷ್ಟವಾಗಿ ವಿವರಿಸಿದ್ದು, ನೇಮಕಾತಿದಾರರು “ಪ್ರತಿ ನೇಮಕಾತಿ ವೆಚ್ಚ”ದಿಂದ “ಪ್ರತಿ ಉದ್ಯೋಗಿಯಿಂದ ಬರುವ ಆದಾಯ”ದತ್ತ ಗಮನ ಹರಿಸುತ್ತಿದ್ದಾರೆ. ಕೇವಲ ಹುದ್ದೆಗಳನ್ನು ವೇಗವಾಗಿ ಭರ್ತಿ ಮಾಡುವುದನ್ನು ಬಿಟ್ಟು, ಒಂದು ಹೆಜ್ಜೆ ಮುಂದೆ ಹೋಗಿ, ನೇಮಕಾತಿ ಅತ್ಯಂತ ಪರಿಣಾಮ ತರುವಂತೆ ನೋಡಿಕೊಳ್ಳಲಾಗುತ್ತಿದೆ. ಸಂಸ್ಥೆಗಳು ಈಗ ನೇಮಕಾತಿಯನ್ನು ಎಷ್ಟು ಕಡಿಮೆ ವೆಚ್ಚದಲ್ಲಿ ಮಾಡಬಹುದು ಎಂಬುದರಿಂದ ಅಲ್ಲ, ನೇಮಕಾತಿ ಹೇಗೆ ಕೆಲಸಗಾರರ ಕಾರ್ಯಕ್ಷಮತೆ, ಉತ್ಪಾದಕತೆ ಮತ್ತು ಒಟ್ಟಾರೆ ವ್ಯವಹಾರ ಫಲಿತಾಂಶವನ್ನು ಬಲಪಡಿಸುತ್ತದೆ ಎಂಬುದರಿಂದ ಮೌಲ್ಯಮಾಪನ ಮಾಡುತ್ತಿವೆ.
ಹೆಚ್ಚು ಕಾರ್ಯ ಶೀಲತೆ, ಸಹಜ ಮತ್ತು ತಂತ್ರಾತ್ಮಕ ನಿರ್ಧಾರಗಳಿಗೆ AI ಶಕ್ತಿ
ವೇಗ, ಗುಣಮಟ್ಟ ಮತ್ತು ನಿಖರತೆಯ ಮೇಲಿನ ಬೇಡಿಕೆ ಹೆಚ್ಚುತ್ತಿರುವಂತೆ, ನೇಮಕಾತಿ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಹೆಚ್ಚಿನ ನೇಮಕಾತಿದಾರರು AI ಆಧಾರಿತ ಸಾಧನಗಳನ್ನು ಬಳಸುತ್ತಿದ್ದಾರೆ. ಶಾರ್ಟ್ಲಿಸ್ಟಿಂಗ್ ಮತ್ತು ಮೌಲ್ಯಮಾಪನದಿಂದ ಹಿಡಿದು ವೈಯಕ್ತಿಕ ಸಂಪರ್ಕದವರೆಗೆ, ನೇಮಕಾತಿಯ ಎಲ್ಲ ಹಂತಗಳಿಗೂ AI ಬೆಂಬಲ ನೀಡುತ್ತಿದೆ. ಆದರೆ ಇದರ ನಿಜವಾದ ಮೌಲ್ಯ ನಿರ್ಧಾರ ವಿವೇಕ, ಆಡಳಿತ ಮತ್ತು ಕಾರ್ಯಭಾರದ ಸ್ಪಷ್ಟತೆಯ ಮೇಲೆ ಅವಲಂಬಿತವಾಗಿದೆ.
ವಿಪ್ರೋದ ಒಂದು ವಾಸ್ತವಿಕ ಅನುಭವದ ಉದಾರಹಣೆ ಹಂಚಿಕೊಂಡ ಜೈನ್.. ಪ್ರಸ್ತುತ AI ಕಾರ್ಯಾಭಾರ ಆಧಾರ ಮೇಲೆ ಅಲ್ಲ, ಕಂಪನಿಗಳಿಗೆ ಕೌಶಲ್ಯ ಆಧಾರಿತ ಉದ್ಯೋಗ ಜವಾಬ್ದಾರಿ ರಚಿಸಲು ಸಹಾಯ ಮಾಡುತ್ತಿದೆ. ಅಲ್ಲದೆ, ಕೌಶಲ್ಯ ಆಧಾರಿತ ಅಗತ್ಯಗಳಿಗೆ ಅನುಗುಣವಾಗಿ ಪ್ರೊಫೈಲ್ಗಳನ್ನು ತಪಾಸಣೆ ಮಾಡುವ ವ್ಯವಸ್ಥೆಯೂ ಜಾರಿಯಲ್ಲಿದ್ದು, ಕೈ ಕೆಲಸವನ್ನು ಕಡಿಮೆ ಮಾಡಿ ಶಾರ್ಟ್ಲಿಸ್ಟ್ಗಳ ಗುಣಮಟ್ಟವನ್ನು ಹೆಚ್ಚಿಸಿದೆ. ವಿಪ್ರೋ AI ಬಳಸಿ ಮೊದಲ ಹಂತದ ಸಂದರ್ಶನಗಳನ್ನೂ ನಡೆಸುತ್ತಿದೆ. ಇದರಿಂದ ನೇಮಕಾತಿದಾರರಿಗೆ ಹೆಚ್ಚಿನ ಮೌಲ್ಯಯುತ ಕೆಲಸಗಳಿಗೆ ಸಮಯ ಸಿಗುತ್ತಿದೆ. ಜೈನ್ ಹೇಳುವಂತೆ, “AI ಕಾಲಹರಣವಾಗದಂತೆ, ನೇಮಕಾತಿದಾರರು ಅವಶ್ಯಕ ವಿಷಯಗಳ ಮೇಲೆ ಗಮನ ಹರಿಸಬಹುದು.”
ಭಾರತದಾದ್ಯಂತ ಈ ಪ್ರವೃತ್ತಿ ವೇಗವಾಗಿ ಬೆಳೆಯುತ್ತಿದೆ. ನೇಮಕಾತಿದಾರರು ಈಗ AI ಬಳಸಿ ವೇಗವಾಗಿ ಶಾರ್ಟ್ಲಿಸ್ಟ್ ಮಾಡುತ್ತಿದ್ದಾರೆ, ಹೆಚ್ಚು ಚುರುಕಾಗಿ ಸಂವಹನ ನಡೆಸುತ್ತಿದ್ದಾರೆ, ವೈಯಕ್ತಿಕ ಅನುಭವವನ್ನು ರೂಪಿಸುವ ಜೊತೆಗೆ ಹೆಚ್ಚು ಪರಿಣಾಮಕಾರಿ ನೇಮಕಾತಿ ವಿಧಾನವನ್ನು ಸೃಷ್ಟಿಸುತ್ತಿದ್ದಾರೆ.
ನೇಮಕಾತಿದಾರರ ಪಾತ್ರ ವ್ಯವಹಾರಕ್ಕೆ ಅತ್ಯಗತ್ಯ
ಇನ್ನು ಮುಂದೆ ನೇಮಕಾತಿದಾರರನ್ನು ಕೇವಲ ಕಾರ್ಯನಿರ್ವಹಣೆಯ ಪಾಲುದಾರರನ್ನಾಗಿ ನೋಡುವಂತಿಲ್ಲ, ಅವರು ಸಂಸ್ಥೆಯ ಸಾಮರ್ಥ್ಯ ಮತ್ತು ದೀರ್ಘಕಾಲೀನ ಬೆಳವಣಿಗೆಯನ್ನು ಹೆಚ್ಚಿ ಪರಿಣಾಮಕಾರಿಯಾಗಿಸುವ ತಂತ್ರಾತ್ಮಕ ಸಲಹೆಗಾರರರಾಗಿ ರೂಪಗೊಳ್ಳುತ್ತಿದ್ದಾರೆ. ಅನಂದ್ ಅವರು ಹೇಳುವಂತೆ.. ಈಗಾಗಲೇ ಈ ಬೆಳವಣಿಗೆ ಆರಂಭವಾಗಿದ್ದರೂ, AI ಇದರ ವೇಗವನ್ನು ಹೆಚ್ಚಿಸಿದೆ. ಕೌಶಲ್ಯಗಳು, ನೇಮಕಾತಿ ಮಾದರಿ ಮತ್ತು ಪ್ರತಿಭೆ ಅನ್ವೇಷಣೆ ಬಗ್ಗೆ ಆಳವಾದ ದೃಷ್ಟಿಯನ್ನು ಹೊಂದಿರುವ ನೇಮಕಾತಿದಾರರು, ಕೆಲಸಗಾರರ ತಂತ್ರಜ್ಞಾನಕ್ಕೆ ವಿಶಿಷ್ಟ ದೃಷ್ಟಿಕೋನವನ್ನು ನೀಡುತ್ತಿದ್ದಾರೆ. AI ಇದನ್ನು ಇನ್ನಷ್ಟು ಬಲಪಡಿಸಿ, ಮುಂಚಿತವಾಗಿ ಊಹಿಸಿ, ವ್ಯವಹಾರ ನಾಯಕರಿಗೆ ಸಲಹೆ ನೀಡಿ, ಸಂಸ್ಥೆಯ ಗುರಿಗೆ ತಕ್ಕ ಯೋಜನೆ ರೂಪಿಸಲು ಅನುವು ಮಾಡಿಕೊಡುತ್ತದೆ.
ಈ ಬದಲಾವಣೆಯನ್ನು ಲಿಂಕ್ಡಿನ್ ಸಂಶೋಧನೆಯು ದೃಢಪಡಿಸಿದ್ದು, 90% ನೇಮಕಾತಿದಾರರು AI ತಮ್ಮನ್ನು ಅತ್ಯುತ್ತಮ ವೃತ್ತಿಪರ ಸಲಹೆಗಾರರನ್ನಾಗಿ ರೂಪಿಸುತ್ತಿದೆ ಎಂದು ಅಭಿಪ್ರಾಯ ತಿಳಿಸಿದ್ದಾರೆ, ಅಲ್ಲದೆ, 89% ಮಂದಿ ಈ ವ್ಯವಸ್ಥೆ ಹೆಚ್ಚಿನ ಮೌಲ್ಯಯುತ ಕೆಲಸಗಳಿಗೆ ಸಮಯ ನೀಡುತ್ತದೆ ಎಂದು ನಂಬಿದ್ದಾರೆ. ಇನ್ನು ಜೈನ್ ಅವರು ಹೇಳುವಂತೆ, ಇದರಿಂದ ಸ್ಪಷ್ಟವಾದ ವ್ಯವಹಾರ ಪರಿಣಾಮಗಳು ಕಾಣಿಸುತ್ತವೆ, ನೇಮಕಾತಿಯ ಗುಣಮಟ್ಟ ಸುಧಾರಣೆ, ಉತ್ಪಾದಕತೆ ಮತ್ತು ಕಾರ್ಯಕ್ಷಮತೆ ಹೆಚ್ಚಳ, ಸೇರಿದಂತೆ ಕೆಲಸಗಾರರ ವೇಗ ಹೆಚ್ಚುತ್ತದೆ, ಇದರಿಂದ ನೇಮಕಾತಿದಾರರು ವ್ಯವಹಾರದ ನಿಜವಾದ ಬೆಳವಣಿಗೆ ಪಾಲುದಾರರಾಗುತ್ತಿದ್ದಾರೆ ಎಂದಿದ್ದಾರೆ.
Beyond AI, CVs & JDs ಮೊದಲ ಎಪಿಸೋಡ್ ಇಲ್ಲಿ ವೀಕ್ಷಿಸಿ
(ಹಕ್ಕುತ್ಯಾಗ: ಈ ಲೇಖನವನ್ನು ಬ್ರ್ಯಾಂಡ್ ವಿಭಾಗದಿಂದ ಪಡೆಯಲಾಗಿದೆ. ಈ ವಿಷಯದ ಮೇಲೆ ಓದುಗರು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.)