Gold Rate Crash : ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಂಡುಬಂದಿದ್ದು, ಚಿನ್ನದ ಬೆಲೆಯಲ್ಲಿ ಕೂಡಾ ದೊಡ್ಡ ಮಟ್ಟದ ಇಳಿಕೆ ಕಂಡು ಬಂದಿದೆ. ಕಳೆದ ಐದು ದಿನಗಳಿಂದ ಚಿನ್ನದ ಬೆಲೆ ನಿರಂತರ ಇಳಿಕೆಯಾಗುತ್ತಿದೆ. ಇಂದು ಕೂಡಾ ಬಂಗಾರದ ಬೆಲೆಯಲ್ಲಿ 400 ರೂಪಾಯಿ ಕುಸಿತ ಕಂಡಿದೆ. ಮುಂದಿನ ದಿನಗಳಲ್ಲಿ ಈ ಕುಸಿತ ಇನ್ನೂ ದೊಡ್ಡದಾಗಬಹುದು.ಚಿನ್ನದ ಬೆಲೆಯ ಬಗ್ಗೆ ಮಾಡಲಾಗುತ್ತಿರುವ ಭವಿಷ್ಯವಾಣಿಗಳು ನಿಜವಾದರೆ, 10 ಗ್ರಾಂ ಚಿನ್ನವು ಕೇವಲ 55,000-56,000 ರೂ.ಗಳನ್ನು ತಲುಪುತ್ತದೆ.
ಇಂದಿನ ಚಿನ್ನದ ಬೆಲೆ :
ಇಂದು ಚಿನ್ನದ ಬೆಲೆ 400 ರೂ.ಇಳಿಕೆ ಕಂಡಿದೆ.ಕಳೆದ ಎರಡು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ 2,700 ರೂ.ಗಳಿಗೂ ಹೆಚ್ಚು ಇಳಿಕೆಯಾಗಿದೆ. ದೇಶದ ಹೆಚ್ಚಿನ ನಗರಗಳಲ್ಲಿ ಚಿನ್ನ ಅಗ್ಗವಾಗಿದೆ. ಇದಕ್ಕೂ ಮೊದಲು ಏಪ್ರಿಲ್ 7 ರಂದು ಚಿನ್ನದ ಬೆಲೆ 10 ಗ್ರಾಂಗೆ 1,929 ರೂ.ಗಳಷ್ಟು ಇಳಿದು 89,085 ರೂ.ಗಳಿಗೆ ತಲುಪಿತ್ತು. ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್‌ನ ವೆಬ್‌ಸೈಟ್‌ನಲ್ಲಿ ಬಿಡುಗಡೆಯಾದ ಪ್ರಕಾರ ಇಂದು 24 ಕ್ಯಾರೆಟ್‌ನಿಂದ 14 ಕ್ಯಾರೆಟ್‌ವರೆಗಿನ ಚಿನ್ನದ ಬೆಲೆ ಹೀಗಿದೆ...
24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 88,306 ರೂ.
23 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 87,952 ರೂ.
22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 80,88 ರೂ.
18 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 66,230 ರೂ.
14 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 51659 ರೂ.
ಬೆಳ್ಳಿ ಬೆಲೆ ಕೆಜಿಗೆ 89580 ರೂ. ತಲುಪಿದೆ.
ಇದನ್ನೂ ಓದಿ : Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ! ಇಂದಿನ ರೇಟ್ ಇಲ್ಲಿದೆ ನೋಡಿ
ಚಿನ್ನದ ಬೆಲೆ 56,000 ರೂ.ಗಳವರೆಗೆ ತಲುಪಬಹುದು :
ಇಲ್ಲಿಯವರೆಗೆ ಚಿನ್ನವು ಅದರ ಹೆಚ್ಚಿನ ಬೆಲೆ ಮೌಲ್ಯದಿಂದಾಗಿ ಸುದ್ದಿಯಲ್ಲಿತ್ತು.ಆದರೆ ಈಗ ಚಿನ್ನದ ಬೆಲೆ 10 ಗ್ರಾಂಗೆ 56000 ರೂ. ತಲುಪಬಹುದು ಎಂದು ಊಹಿಸಲಾಗಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ದೊಡ್ಡ ಕುಸಿತ ಕಾಣುವ ಸುದ್ದಿಯೂ ಇದೆ. ಚಿನ್ನದ ಬೆಲೆ 56000 ರೂ.ಗಳ ಮಟ್ಟವನ್ನು ತಲುಪಬಹುದು ಎಂದು ಹೇಳಲಾಗುತ್ತಿದೆ.
ವರದಿಯ ಪ್ರಕಾರ, ಈ ಭವಿಷ್ಯವಾಣಿಯನ್ನು ಅಮೇರಿಕನ್ ಮಾರ್ನಿಂಗ್‌ಸ್ಟಾರ್‌ನ ವಿಶ್ಲೇಷಕರು ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆಗಳು ಶೇ. 38 ರಷ್ಟು ಭಾರಿ ಇಳಿಕೆಯಾಗಬಹುದು ಎಂದು ಅವರು ಭವಿಷ್ಯ ನುಡಿದಿದ್ದಾರೆ. ಮುಂಬರುವ ವರ್ಷಗಳಲ್ಲಿ ಚಿನ್ನದ ಬೆಲೆ ಔನ್ಸ್‌ಗೆ 3080 ಡಾಲರ್ ನಿಂದ 1820 ಡಾಲರ್ ಗೆ ಇಳಿಯಬಹುದು ಎನುದ್ ಅಮೇರಿಕನ್ ತಜ್ಞರು ಹೇಳಿದ್ದಾರೆ.ಅಂದರೆ ಭಾರತದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 55000-56000 ರೂ.ಗಳನ್ನು ತಲುಪಬಹುದು.
ಚಿನ್ನದ ದರ ಕುಸಿತದ ಹಿಂದಿನ ಕಾರಣ ? :
ಚಿನ್ನದ ಉತ್ಪಾದನೆಯಲ್ಲಿ ಹೆಚ್ಚಳ : ಚಿನ್ನದ ಬೆಲೆ ಕುಸಿತದ ಹಿಂದಿನ ಬಹು ದೊಡ್ಡ ಕಾರಣವನ್ನು ಕೂಡಾ ಇಲ್ಲಿ ವಿವರಿಸಿ ಹೇಳಲಾಗಿದೆ. ಜಾಗತಿಕವಾಗಿ ಚಿನ್ನದ ಉತ್ಪಾದನೆ ಹೆಚ್ಚಾಗಿದೆ. ಇದರಿಂದಾಗಿ ಚಿನ್ನದ ಸಂಗ್ರಹವು ಶೇಕಡಾ 9 ರಷ್ಟು ಹೆಚ್ಚಾಗಿದೆ. ಚಿನ್ನದ ಪೂರೈಕೆಯಲ್ಲಿನ ಹೆಚ್ಚಳವು ಹೆಚ್ಚುವರಿ ಪೂರೈಕೆಯನ್ನು ಸೃಷ್ಟಿಸಬಹುದು. ಇದರಿಂದಾಗಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣಬಹುದು.
ಇದನ್ನೂ ಓದಿ : EPFO ಬಹು ದೊಡ್ಡ ನಿರ್ಧಾರ! ಇನ್ಮುಂದೆ ಪಿಎಫ್ ವಿತ್ ಡ್ರಾ ಮಾಡಲು ಇದರ ಅವಶ್ಯಕತೆ ಇಲ್ಲ, ಎರಡೇ ದಿನಕ್ಕೆ ಖಾತೆ ಸೇರುತ್ತೆ ಹಣ...!
ಬೇಡಿಕೆ ಕುಸಿತ: ಪೂರೈಕೆ ಹೆಚ್ಚುತ್ತಿರುವಾಗ, ಬೇಡಿಕೆಯಲ್ಲಿ ನಿರಂತರ ಕುಸಿತ ಕಂಡುಬರುತ್ತಿದೆ. ಚಿನ್ನದ ಬೆಲೆ ಏರಿಕೆಯಿಂದಾಗಿ ಚಿಲ್ಲರೆ ಖರೀದಿಯೂ ಕಡಿಮೆಯಾಗುತ್ತಿದೆ. ಅದೇ ಸಮಯದಲ್ಲಿ, ಕೇಂದ್ರ ಬ್ಯಾಂಕುಗಳು ನಿರಂತರವಾಗಿ ಚಿನ್ನವನ್ನು ಖರೀದಿಸುತ್ತಿವೆ. ಇದು ಮುಂಬರುವ ದಿನಗಳಲ್ಲಿ ಕಡಿಮೆಯಾಗಬಹುದು. ಚಿನ್ನದ ಬೇಡಿಕೆ ಕಡಿಮೆಯಾಗುವುದರಿಂದ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ.
ಮಾರುಕಟ್ಟೆಯಲ್ಲಿ ಸ್ಯಾಚುರೇಶನ್ ಪರಿಸ್ಥಿತಿ: ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆಯಿಂದಾಗಿ, ಸ್ಯಾಚುರೇಶನ್ ಪರಿಸ್ಥಿತಿ ಬೆಳೆಯುತ್ತಿದೆ. 2024 ರಲ್ಲಿ ಚಿನ್ನದ ವಲಯದಲ್ಲಿ ವಿಲೀನಗಳು ಮತ್ತು ಸ್ವಾಧೀನಗಳು ಶೇ. 32 ರಷ್ಟು ಹೆಚ್ಚಾಗಿದೆ. ಅದೇ ಸಮಯದಲ್ಲಿ, ಚಿನ್ನದ ಇಟಿಎಫ್‌ನಲ್ಲಿ ಹೂಡಿಕೆ ಹೆಚ್ಚಳದಿಂದಾಗಿ, ಬೆಲೆಗಳು ಕುಸಿಯುವ ಸಾಧ್ಯತೆ ಹೆಚ್ಚಾಗಿದೆ.
ಅನೇಕ ತಜ್ಞರು ಈ ಭವಿಷ್ಯವಾಣಿಯನ್ನು ಒಪ್ಪುವುದಿಲ್ಲ. ಬ್ಯಾಂಕ್ ಆಫ್ ಅಮೆರಿಕಾ ಪ್ರಕಾರ, ಮುಂದಿನ ಎರಡು ವರ್ಷಗಳಲ್ಲಿ ಚಿನ್ನದ ಬೆಲೆ ಔನ್ಸ್‌ಗೆ 3,500 ಡಾಲರ್ ತಲುಪಬಹುದು. ಗೋಲ್ಡ್‌ಮನ್ ಸ್ಯಾಚ್ಸ್ ಪ್ರಕಾರ, ಈ ವರ್ಷದ ಅಂತ್ಯದ ವೇಳೆಗೆ ಚಿನ್ನವು ಔನ್ಸ್‌ಗೆ 3300 ಡಾಲರ್ ತಲುಪುತ್ತದೆ. ಅಂದರೆ ಭಾರತದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 90 ಸಾವಿರದಿಂದ 1 ಲಕ್ಷ ರೂ.ಗಳವರೆಗೆ ತಲುಪಬಹುದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









