)
Stock Market Holidays 2026: ಯೆಸ್.. ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ರಜೆಗಳ ಬಗ್ಗೆ ಖಚಿತವಾಗಿ ತಿಳಿದಿರಬೇಕು. ಮಾರುಕಟ್ಟೆ ಯಾವ ದಿನ ತೆರೆಯುತ್ತದೆ ಮತ್ತು ಯಾವ ದಿನ ಮುಚ್ಚಿರುತ್ತದೆ ಎಂಬ ವಿವರ ಬಹಳ ಮುಖ್ಯ. ಈಗ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE) 2026ನೇ ವರ್ಷಕ್ಕೆ ಸಂಬಂಧಿಸಿದ ಟ್ರೇಡಿಂಗ್ ರಜೆಗಳ ಕ್ಯಾಲೆಂಡರ್ ಬಿಡುಗಡೆ ಮಾಡಿದೆ. ಈ ಕುರಿತ ಮಾಹಿತಿ ಇಲ್ಲಿದೆ.
ಸಾಮಾನ್ಯವಾಗಿ ಶನಿವಾರ ಮತ್ತು ಭಾನುವಾರಗಳಂದು ಷೇರು ಮಾರುಕಟ್ಟೆ ಟ್ರೇಡಿಂಗ್ ಇರುವುದಿಲ್ಲ. ಉಳಿದಂತೆ ಹಬ್ಬಗಳು ಮತ್ತು ವಿಶೇಷ ದಿನಗಳ ಆಧಾರದ ಮೇಲೆ ರಜೆಗಳನ್ನು ನಿರ್ಧರಿಸಲಾಗುತ್ತದೆ. ಬ್ಯಾಂಕುಗಳಿಗೆ ಪ್ರದೇಶಕ್ಕೆ ಅನುಗುಣವಾಗಿ ರಜೆಗಳು ಬದಲಾಗಬಹುದು, ಆದರೆ ಷೇರು ಮಾರುಕಟ್ಟೆಗೆ ಮಾತ್ರ ದೇಶಾದ್ಯಂತ ರಜೆಗಳು ಒಂದೇ ಆಗಿರುತ್ತವೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ, ವಿಶೇಷವಾಗಿ ಇಂಟ್ರಾಡೇ ಟ್ರೇಡರ್ಗಳಿಗೆ ಮಾರುಕಟ್ಟೆಯ ರಜೆಗಳ ಬಗ್ಗೆ ತಿಳುವಳಿಕೆ ಇರಲೇಬೇಕಿರುತ್ತದೆ..
ಈ ಬಾರೀ NSE ಬಿಡುಗಡೆ ಮಾಡಿರುವ 2026ರ ಅಧಿಕೃತ ಕ್ಯಾಲೆಂಡರ್ ಪ್ರಕಾರ, ಈ ಬಾರಿ ಹೂಡಿಕೆದಾರರಿಗೆ 7 ಬಾರಿ ಲಾಂಗ್ ವೀಕೆಂಡ್ಗಳು ಸಿಗಲಿವೆ. ಅಂದರೆ ಶನಿವಾರ ಮತ್ತು ಭಾನುವಾರದ ಜೊತೆಗೆ ಶುಕ್ರವಾರ ಅಥವಾ ಸೋಮವಾರ ರಜೆ ಬರಲಿದೆ. 2025ಕ್ಕೆ ಹೋಲಿಸಿದರೆ ಮುಂದಿನ ವರ್ಷ ಒಂದು ಹೆಚ್ಚುವರಿ ರಜೆ ಸಿಕ್ಕಿದೆ.
2026ರ NSE ರಜೆಗಳ ಪಟ್ಟಿ ಇಲ್ಲಿದೆ.̤
ಜನವರಿ 26 (ಸೋಮವಾರ): ಗಣರಾಜ್ಯೋತ್ಸವ (ಲಾಂಗ್ ವೀಕೆಂಡ್)
ಮಾರ್ಚ್ 3 (ಮಂಗಳವಾರ): ಹೋಳಿ
ಮಾರ್ಚ್ 26 (ಗುರುವಾರ): ರಾಮನವಮಿ
ಮಾರ್ಚ್ 31 (ಮಂಗಳವಾರ): ಮಹಾವೀರ ಜಯಂತಿ
ಏಪ್ರಿಲ್ 3 (ಶುಕ್ರವಾರ): ಗುಡ್ ಫ್ರೈಡೇ (ಲಾಂಗ್ ವೀಕೆಂಡ್)
ಏಪ್ರಿಲ್ 14 (ಮಂಗಳವಾರ): ಅಂಬೇಡ್ಕರ್ ಜಯಂತಿ
ಮೇ 1 (ಶುಕ್ರವಾರ): ಮಹಾರಾಷ್ಟ್ರ ದಿನ (ಲಾಂಗ್ ವೀಕೆಂಡ್)
ಮೇ 28 (ಗುರುವಾರ): ಬಕ್ರೀದ್
ಜೂನ್ 26 (ಶುಕ್ರವಾರ): ಮೊಹರಂ (ಲಾಂಗ್ ವೀಕೆಂಡ್)
ಸೆಪ್ಟೆಂಬರ್ 14 (ಸೋಮವಾರ): ಗಣೇಶ ಚತುರ್ಥಿ (ಲಾಂಗ್ ವೀಕೆಂಡ್)
ಅಕ್ಟೋಬರ್ 2 (ಶುಕ್ರವಾರ): ಮಹಾತ್ಮ ಗಾಂಧಿ ಜಯಂತಿ (ಲಾಂಗ್ ವೀಕೆಂಡ್)
ಅಕ್ಟೋಬರ್ 20 (ಮಂಗಳವಾರ): ದಸರಾ
ನವೆಂಬರ್ 10 (ಮಂಗಳವಾರ): ದೀಪಾವಳಿ - ಬಲಿಪಾಡ್ಯಮಿ
ನವೆಂಬರ್ 24 (ಮಂಗಳವಾರ): ಗುರುನಾನಕ್ ಜಯಂತಿ
ಡಿಸೆಂಬರ್ 25 (ಶುಕ್ರವಾರ): ಕ್ರಿಸ್ಮಸ್ (ಲಾಂಗ್ ವೀಕೆಂಡ್)
ಕೆಲವು ಪ್ರಮುಖ ರಜೆಗಳು ಶನಿವಾರ ಅಥವಾ ಭಾನುವಾರ ಬಂದಿರುವುದರಿಂದ ಮಾರುಕಟ್ಟೆಗೆ ಪ್ರತ್ಯೇಕ ರಜೆ ಇರುವುದಿಲ್ಲ. ಅವುಗಳೆಂದರೆ: ಫೆಬ್ರವರಿ 15 (ಭಾನುವಾರ) ಮಹಾಶಿವರಾತ್ರಿ ಬರಲಿದೆ.. ಮಾರ್ಚ್ 21 ಶನಿವಾರ ರಂದು ಈದ್-ಉಲ್-ಫಿತರ್ ,ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ,ಇನ್ನು, ನವೆಂಬರ್ 8ರಂದು ದೀಪಾವಳಿ ಲಕ್ಷ್ಮಿ ಪೂಜೆ ಇರುತ್ತದೆ..ಈ ದಿನ ಸಂಜೆ ಒಂದು ಗಂಟೆಯ ಕಾಲ ವಿಶೇಷ 'ಮುಹೂರತ್ ಟ್ರೇಡಿಂಗ್' ನಡೆಯಲಿದೆ.