ಸರ್ಕಾರಿ ನೌಕರರ ಕನಿಷ್ಟ ವೇತನ 26,000 ರೂ.ಗೆ ಏರಿಕೆ ! ಈ ದಿನದಂದು ಹೊರ ಬೀಳುವುದು ಅಧಿಸೂಚನೆ

8th Pay Commission Latest Update:8ನೇ ವೇತನ ಆಯೋಗ ಶೀಘ್ರದಲ್ಲೇ ಬರಲಿದೆಯೇ? ಹೊಸ ವೇತನ ಆಯೋಗ ರಚನೆಯಾಗಿ ಜಾರಿಗೆ ಬಂದರೆ ನೌಕರರ ವೇತನ ಎಷ್ಟು ಹೆಚ್ಚುತ್ತದೆ?  ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಲೇಖನದಲ್ಲಿ ಕಾಣಬಹದು. 

Written by - Ranjitha R K | Last Updated : Oct 10, 2023, 12:04 PM IST
  • ಉದ್ಯೋಗಿಗಳಿಗೆ ಬಂಪರ್ ಆಫರ್
  • ಕೈ ಸೇರುವುದು 50 ಪ್ರತಿಶತ ತುಟ್ಟಿಭತ್ಯೆ
  • ಸಾರ್ವತ್ರಿಕ ಚುನಾವಣೆ ಎಫೆಕ್ಟ್
ಸರ್ಕಾರಿ ನೌಕರರ ಕನಿಷ್ಟ ವೇತನ 26,000  ರೂ.ಗೆ ಏರಿಕೆ ! ಈ ದಿನದಂದು ಹೊರ ಬೀಳುವುದು ಅಧಿಸೂಚನೆ  title=

8th Pay Commission Latest Update : ಕೇಂದ್ರ ಸರ್ಕಾರಿ ನೌಕರರು ಕೆಲ ದಿನಗಳಿಂದ ಸರ್ಕಾರಕ್ಕೆ ಕೆಲವು ಬೇಡಿಕೆಗಳನ್ನು ಸಲ್ಲಿಸುತ್ತಿದ್ದಾರೆ. ಕರೋನಾ ಅವಧಿಯಲ್ಲಿ ಸ್ಥಗಿತಗೊಳಿಸಲಾದ ತುಟ್ಟಿಭತ್ಯೆ,  ಹಳೆಯ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೆ ತರುವುದು, 8 ನೇ ವೇತನ ಆಯೋಗದ ರಚನೆ ಇವುಗಳಲ್ಲಿ ಪ್ರಮುಖವಾಗಿವೆ. ಇತ್ತೀಚಿನ ದಿನಗಳಲ್ಲಿ 8ನೇ ವೇತನ ಆಯೋಗದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. 8ನೇ ವೇತನ ಆಯೋಗ ಶೀಘ್ರದಲ್ಲೇ ಬರಲಿದೆಯೇ? ಹೊಸ ವೇತನ ಆಯೋಗ ರಚನೆಯಾಗಿ ಜಾರಿಗೆ ಬಂದರೆ ನೌಕರರ ವೇತನ ಎಷ್ಟು ಹೆಚ್ಚುತ್ತದೆ?  ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಲೇಖನದಲ್ಲಿ ಕಾಣಬಹದು. 

ಉದ್ಯೋಗಿಗಳಿಗೆ ಬಂಪರ್ ಆಫರ್  : 
ಹೊಸ ವೇತನ ಆಯೋಗ ಜಾರಿಗೆ ಬಂದಾಗ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನವನ್ನು ಪರಿಷ್ಕರಿಸಲಾಗುತ್ತದೆ. ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಸಂಸತ್ತಿನ ಅಧಿವೇಶನದಲ್ಲಿ ಸ್ಪಷ್ಟನೆ ನೀಡಿದ್ದು, ಮುಂದಿನ ವೇತನ ಆಯೋಗವನ್ನು ರಚಿಸುವ ಬಗ್ಗೆ ಸರ್ಕಾರಕ್ಕೆ ಇನ್ನೂ ಯಾವುದೇ ಆಲೋಚನೆ ಇಲ್ಲ ಎಂದಿದ್ದರು. ಆದರೆ ಸರ್ಕಾರದ ಈ ನಿಲುವು ಬದಲಾಗಬಹುದು ಎನ್ನುವ ನಂಬಿಕೆ ಅರ್ಥಶಾಸ್ತ್ರಜ್ಞರದ್ದು. ಅರ್ಥಶಾಸ್ತ್ರಜ್ಞರ ಈ ವಾದಕ್ಕೆ ಪ್ರಮುಖ ಕಾರಣವೂ ಇದೆ. 

ಇದನ್ನೂ ಓದಿ : ಟೋಲ್ ಪಾವತಿಸುವವರಿಗಾಗಿ ಸರ್ಕಾರದ ಹೊಸ ಕ್ರಮ ! ನಿನ್ನೆಯಿಂದಲೇ ಜಾರಿ

50 ಪ್ರತಿಶತ ತುಟ್ಟಿಭತ್ಯೆ (50% ಡಿಎ)  : 
ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರು ಜುಲೈ 2023ರ ಡಿಎ ಹೆಚ್ಚಳದ ಅಧಿಸೂಚನೆಗಾಗಿ ಕಾಯುತ್ತಿದ್ದಾರೆ. ಕೆಲವರು ಈ ಬಾರಿ ಶೇ .3 ರಷ್ಟು ಡಿಎ ಹೆಚ್ಚಳ ಆಗಲಿದೆ ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ಶೇ. 4 ರಷ್ಟು ಹೆಚ್ಚಳವಾಗಲಿದೆ ಎಂದು ಹೇಳುತ್ತಿದ್ದಾರೆ. ಆದರೆ ಬೆಲೆಗಳ ಹೆಚ್ಚಳದ ಆಧಾರವಾಗಿರುವ AICPI ಸೂಚ್ಯಂಕವನ್ನು ಗಮನಿಸಿದರೆ, ಬೆಲೆಗಳು 4% ರಷ್ಟು ಹೆಚ್ಚಾಗುತ್ತವೆ ಎಂದೇ ಹೇಳಲಾಗುತ್ತಿದೆ. ಒಂದು ವೇಳೆ ತುಟ್ಟಿಭತ್ಯೆ ಶೇ.4 ರಷ್ಟು ಹೆಚ್ಚಳವಾದರೆ  ಉದ್ಯೋಗಿಗಳ ಒಟ್ಟು ಡಿಎ ಶೇ.46ಕ್ಕೆ ಏರಿಕೆಯಾಗಲಿದೆ. ಅದರ ನಂತರ, ಮತ್ತೆ ಜನವರಿ 2024 ಕ್ಕೆ  4 ಪ್ರತಿಶತದಷ್ಟು ಡಿಎ ಹೆಚ್ಚಾದರೆ, ಉದ್ಯೋಗಿಗಳ ತುಟ್ಟಿಭತ್ಯೆ    50% ತಲುಪುತ್ತದೆ. 

ತುಟ್ಟಿಭತ್ಯೆ 50% ತಲುಪಿದರೆ, ಅದರ ಮೊತ್ತವನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ. ಮತ್ತೆ ತುಟ್ಟಿಭತ್ಯೆಯನ್ನು ಶೂನ್ಯದಿಂದ ಮರು ಲೆಕ್ಕಾಚಾರ ಮಾಡಲಾಗುತ್ತದೆ. ಆದರೆ, ಅಂತಹ ವೇತನ ಪರಿಷ್ಕರಣೆಗಾಗಿ ಹೊಸ ವೇತನ ಆಯೋಗವನ್ನುರಚಿಸಬೇಕಾಗುತ್ತದೆ. ಹೀಗಾಗಿ, ಮುಂದಿನ ವರ್ಷದೊಳಗೆ ಸರ್ಕಾರ ಈ ಕುರಿತು ಪ್ರಕಟಣೆ ಹೊರಡಿಸುವ ನಿರೀಕ್ಷೆ ಇದೆ. 

ಇದನ್ನೂ ಓದಿ : ಇನ್ನೂ ನಿಮ್ಮ ಖಾತೆ ಸೇರಿಲ್ಲವೇ ಗೃಹ ಲಕ್ಷ್ಮಿ ಯೋಜನೆಯ ಹಣ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು?

ಇನ್ನು, ನೌಕರರ ಫಿಟ್‌ಮೆಂಟ್ ಫ್ಯಾಕ್ಟರ್‌ನಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ವೇತನ ಪರಿಷ್ಕರಣೆಯನ್ನೂ ಮಾಡಬಹುದು. ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರ ಫಿಟ್‌ಮೆಂಟ್ ಅಂಶ ಶೇ.2.57ರಷ್ಟಿದೆ. ಇದರ ಪ್ರಕಾರ ಕೇಂದ್ರ ನೌಕರರ ಕನಿಷ್ಠ ಮೂಲ ವೇತನ 18,000 ರೂ. ಫಿಟ್‌ಮೆಂಟ್ ಅಂಶವನ್ನು ಶೇ.3.68ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಇದೆ. ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಿದರೆ, ಕನಿಷ್ಠ ಮೂಲ ವೇತನವು ಶೇಕಡಾ 44 ಕ್ಕಿಂತ ಹೆಚ್ಚಾಗುತ್ತದೆ.  ಅಂದರೆ ಕನಿಷ್ಠ ವೇತನ 18,000 ರಿಂದ 26,000 ರೂ.ಗೆ ಏರುತ್ತದೆ.  

ಸಾರ್ವತ್ರಿಕ ಚುನಾವಣೆ ಎಫೆಕ್ಟ್ : 
ಮುಂದಿನ ವರ್ಷ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಈ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರಿ ನೌಕರರ ಬೆಂಬಲ ಪಡೆಯಲು ಬಹುಕಾಲದ ಬೇಡಿಕೆಯಾದ ಮುಂದಿನ ವೇತನ ಆಯೋಗವನ್ನು ಸರ್ಕಾರ ರಚಿಸಬಹುದು ಎಂದು ನಿರೀಕ್ಷಿಸಲಾಗಿದೆ. 

ಇದನ್ನೂ ಓದಿ : ಮ್ಯೂಚವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಬೇಕೆ? ತಜ್ಞರ ಈ ಅಭಿಮತ ಖಂಡಿತ ತಿಳಿದುಕೊಳ್ಳಿ!

ಸರ್ಕಾರದ ಉದ್ದೇಶವೇನು? :
ವೇತನ ಹೆಚ್ಚಳಕ್ಕಾಗಿ ನೌಕರರು 10 ವರ್ಷ ಕಾಯಬೇಕಾಗಿಲ್ಲ ಎಂದು ಸರ್ಕಾರ ಹೇಳುತ್ತದೆ. ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ಪ್ರತಿ ವರ್ಷ ಅವರ ವೇತನವನ್ನು ಪರಿಷ್ಕರಿಸಬೇಕು. 7ನೇ ವೇತನ ಆಯೋಗದಲ್ಲಿಯೇ ಈ ಬಗ್ಗೆ ಶಿಫಾರಸು ಮಾಡಲಾಗಿತ್ತು. ವೇತನ ಹೆಚ್ಚಳಕ್ಕೆ ವೇತನ ಸಮಿತಿ ರಚಿಸುವ ಅಗತ್ಯವಿಲ್ಲ ಎಂದೂ ತಿಳಿಸಲಾಗಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಹೊಸ ರೀತಿಯಲ್ಲಿ ಯೋಜನೆ ರೂಪಿಸುತ್ತಿದೆ ಎಂದು ಕೂಡಾ ಹೇಳಲಾಗುತ್ತಿದೆ. ಆದರೆ, ಯಾವ ಯೋಜನೆ ರೂಪಿಸಲಾಗಿದೆ ಎಂಬ ಬಗ್ಗೆ ಇನ್ನೂ ಮಾಹಿತಿ ಹೊರ ಬಿದ್ದಿಲ್ಲ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News