7th Pay Commission: ಕೇಂದ್ರ ಸರ್ಕಾರ ವಾರ್ಷಿಕವಾಗಿ ಜುಲೈ ತಿಂಗಳ ವೇತನದೊಂದಿಗೆ ಉಡುಗೆ ಭತ್ಯೆಯನ್ನು ಒದಗಿಸುತ್ತದೆ. ಈ ಕುರಿತಂತೆ ಮೂಡಿರುವ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ಸೆಪ್ಟೆಂಬರ್ 24, 2025ರಂದು ಹೊಸ ಸುತ್ತೋಲೆ ಹೊರಡಿಸಿದ್ದು, ಉಡುಗೆ ಭತ್ಯೆ ಬಗ್ಗೆ ಸ್ಪಷ್ಟೀಕರಣವನ್ನು ಒದಗಿಸಿದೆ.
ಕೇಂದ್ರ ಸರ್ಕಾರದ ಹೊಸ ಸುತ್ತೋಲೆಯಲ್ಲಿ ಏನಿದೆ?
ಕೇಂದ್ರ ಸರ್ಕಾರ ಸೆಪ್ಟೆಂಬರ್ 24, 2025ರಂದು ಹೊರಡಿಸಿರುವ ಹೊಸ ಸುತ್ತೋಲೆಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುವ ಡ್ರೆಸ್ ಭತ್ಯೆ ಪಾವತಿ ಮತ್ತು ಮರುಪಡೆಯುವಿಕೆ ಕುರಿತು ಸ್ಪಷ್ಟನೆ ನೀಡಿದೆ. ಇದರಲ್ಲಿ, ಜುಲೈ 30, 2025 ರ ನಂತರ ನಿವೃತ್ತರಾಗುವ ಉದ್ಯೋಗಿಗಳು ಮತ್ತು ಹೊಸದಾಗಿ ನೇಮಕಗೊಂಡಿರುವ ನೌಕರರಿಬ್ಬರಿಗೂ ಜುಲೈ 2025ರ ವೇತನದಲ್ಲಿ ಅನುಪಾತದ ಉಡುಗೆ ಭತ್ಯೆಯನ್ನು ನೀಡಲಾಗಿದೆ. ಆದಾಗ್ಯೂ, ಅಕ್ಟೋಬರ್ 2025 ರಿಂದ ನಿವೃತ್ತರಾಗುವವರು ಈಗಾಗಲೇ ಮಾಡಿದ ಯಾವುದೇ ಹೆಚ್ಚುವರಿ ಅನುಪಾತದ ಪಾವತಿಯನ್ನು ಮರುಪಡೆಯಬೇಕಾಗುತ್ತದೆ ಎಂದು ಹೇಳಿದೆ.
ಉಡುಗೆ ಭತ್ಯೆ ದರ ಎಷ್ಟಿರುತ್ತದೆ?
ಗಮನಾರ್ಹವಾಗಿ, ತುಟ್ಟಿ ಭತ್ಯೆ ಎಂದರೆ ಡಿಎ ಶೇ. 50ರಷ್ಟು ಹೆಚ್ಚಾದಾಗಲೆಲ್ಲಾ ವಾರ್ಷಿಕವಾಗಿ ಜುಲೈ ತಿಂಗಳ ಸಂಬಳದೊಂದಿಗೆ ಜಮಾ ಮಾಡಲಾಗುವ ಉಡುಗೆ ಭಟ್ಯೆಯು ಶೇ. 25ರಷ್ಟು ಹೆಚ್ಚಾಗುತ್ತದೆ.
16.09.2025 ರಂದು ಹಣಕಾಸು ಸಚಿವಾಲಯ (MoF) ಹೊರಡಿಸಿದ ನಿರ್ದೇಶನದ ಪ್ರಕಾರ, ವರ್ಷದ ಮಧ್ಯದಲ್ಲಿ ನಿವೃತ್ತರಾಗುವ ಅಧಿಕಾರಿಗಳಿಗೆ ಹೊಸ ಉದ್ಯೋಗಿಗಳಿಗೆ ನಿಗದಿಪಡಿಸಿದ ಅನುಪಾತದ ಪಾವತಿಯಂತೆಯೇ ಅನುಪಾತದ ಡ್ರೆಸ್ ಭತ್ಯೆಯನ್ನು ಸಹ ನೀಡಲಾಗುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಉಡುಗೆ ಭತ್ಯೆ ಪಾವತಿ ಮತ್ತು ಮರುಪಾವತಿ ಬಗೆಗಿನ ಸ್ಪಷ್ಟೀಕರಣ:
ಪ್ರಸಕ್ತ, 2025ರಲ್ಲಿ ಈ ಉಡುಗೆ ಭತ್ಯೆಯನ್ನು ಜುಲೈ ತಿಂಗಳ ವೇತನದ ಜೊತೆಯಲ್ಲಿಯೇ ವಿತರಿಸಲಾಗಿದೆ. ಈ ಭತ್ಯೆಯು ಉದ್ಯೋಗಿಯ ನಿವೃತ್ತಿ ದಿನಾಂಕವನ್ನು ಅವಲಂಬಿಸಿದ್ದು ಪೂರ್ಣ ಅಥವಾ ಅರ್ಧದಷ್ಟು ದರ ಪಾವತಿಯಾಗಿದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಕುರಿತ ಪ್ರಮುಖ ಅಂಶಗಳು ಕೆಳಕಂಡಂತಿವೆ:
>> ವರ್ಷದ ಮಧ್ಯದಲ್ಲಿ ನಿವೃತ್ತರಾಗುವ ಉದ್ಯೋಗಿಗಳಿಗೆ ಜೂನ್ 2025 ರಿಂದ ಅನುಪಾತದ ಉಡುಗೆ ಭತ್ಯೆಯನ್ನು ನೀಡಲಾಗುತ್ತದೆ.
>> ಅಕ್ಟೋಬರ್ 2025 ರ ನಂತರ ನಿವೃತ್ತರಾಗುವ ನೌಕರರಿಂದ ಬರುವ ಯಾವುದೇ ಹೆಚ್ಚುವರಿ ಪಾವತಿಗಳನ್ನು ಅವರ ಅಕ್ಟೋಬರ್ 2025 ರ ಸಂಬಳದಿಂದ ಮರುಪಡೆಯಬಹುದು.
>> ಈಗಾಗಲೇ ನಿವೃತ್ತಿ ಹೊಂದಿದ ಅಥವಾ ಸೆಪ್ಟೆಂಬರ್ 30, 2025 ರೊಳಗೆ ನಿವೃತ್ತರಾಗುವ ನೌಕರರಿಂದ ಯಾವುದೇ ಮರುಪಾವತಿಯನ್ನು ಮಾಡಲಾಗುವುದಿಲ್ಲ ಎಂದು ಸುತ್ತೋಲೆಯಲ್ಲಿ ಸ್ಪಷ್ಟೀಕರಣ ನೀಡಲಾಗಿದೆ.
ಇದನ್ನೂ ಓದಿ- ಸರ್ಕಾರಿ ನೌಕರರಿಗೆ ದೀಪಾವಳಿ ಜಾಕ್‌ಪಾಟ್: ನಗದು ರೂಪದಲ್ಲಿ ಕೈ ಸೇರಲಿದೆ 3% ತುಟ್ಟಿಭತ್ಯೆ!
ಇದನ್ನೂ ಓದಿ- ಗ್ಯಾರಂಟಿ ರಿಟರ್ನ್: ಮಗಳ ಹೆಸರಿನಲ್ಲಿ ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಿ 70 ಲಕ್ಷ ರೂ. ಗಳಿಸಿ









