7th Pay Commission: ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಶೇ.4 ರಷ್ಟು ಹೆಚ್ಚಳ ಪಕ್ಕಾ! ಈ ದಿನ ಘೋಷಣೆ ಸಾಧ್ಯತೆ
7th Pay Commission Latest Update: ಒಂದು ವೇಳೆ ತುಟ್ಟಿಭತ್ಯೆ ಹೆಚ್ಚಾದರೆ, ಅದು ಜನವರಿ 1, 2023 ರಿಂದ ಜಾರಿಗೆ ಬರಲಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ಮಾಹಿತಿಯನ್ನು ನೀಡಿದ್ದಾರೆ.
7th Pay Commission Latest News: ದೇಶದ ಲಕ್ಷಾಂತರ ಸರ್ಕಾರಿ ನೌಕರರು ವೇತನ ಹೆಚ್ಚಳದ ಘೋಷಣೆಗಾಗಿ ತುದಿಗಾಲಲ್ಲಿ ಕಾಯುತ್ತಿರುವ ಈ ಸಮಯದಲ್ಲಿ, ಗುರುವಾರ ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳದ ಕುರಿತು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ಮುಂದಿನ 10 ದಿನಗಳಲ್ಲಿ ಈ ಕುರಿತು ಘೋಷಣೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಹೆಸರು ಬಹಿರಂಗಪಡಿಸದಿರುವ ಷರತ್ತಿನ ಮೇಲೆ ನಮ್ಮ ಆಂಗ್ಲ ಭಾಷೆಯ ವೆಬ್ ಸೈಟ್ ಆಗಿರುವ ಇಂಡಿಯಾ ಡಾಟ್ ಕಾಮ್ ಗೆ ಮಾಹಿತಿ ನೀಡಿರುವ ಹಣಕಾಸು ಸಚಿವಾಲಯದ ಅಧಿಕಾರಿ, ಕೇಂದ್ರ ಸರ್ಕಾರಿ ನೌಕರರು ಈ ಬಾರಿ ತುಟ್ಟಿಭತ್ಯೆಯಲ್ಲಿ ಶೇ.4 ರಷ್ಟು ಹೆಚ್ಚಳವನ್ನು ನಿರೀಕ್ಷಿಸಬಹುದು ಮತ್ತು ನಿವೃತ್ತ ಉದ್ಯೋಗಿಗಳು ಕೂಡ ಶೇ.4ರಷ್ಟು ಡಿಯರ್ನೆಸ್ ರಿಲೀಫ್ ಕಾಣಬಹುದು ಎಂದು ಹೇಳಿದ್ದಾರೆ. ಸದ್ಯಕ್ಕೆ ಡಿಎ ಹೆಚ್ಚಳದ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಒಂದು ವೇಳೆ ತುಟ್ಟಿಭತ್ಯೆ ಹೆಚ್ಚಾದರೆ, ಅದು ಜನವರಿ 1, 2023 ರಿಂದ ಜಾರಿಗೆ ಬರಲಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಈ ಹಿಂದೆ ಪ್ರಕಟಗೊಂಡ ಮಾಧ್ಯಮ ವರದಿಗಳು ಮಾರ್ಚ್ 8 ರಂದು ಕೇಂದ್ರ ಸರ್ಕಾರ ಡಿಎ ಹೆಚ್ಚಳದ ಘೋಷಣೆಯನ್ನು ಮಾಡಬಹುದೆಂದು ಸೂಚಿಸಿದ್ದವು. ಆದರೆ, ಇದುವರೆಗೆ ಅಂತಹ ಯಾವುದೇ ಘೋಷಣೆ ಮಾಡಲಾಗಿಲ್ಲ. ಡಿಎ ಮತ್ತು ಡಿಆರ್ ಹೆಚ್ಚಳದಿಂದ ದೇಶದ 50 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ಲಾಭವಾಗಲಿದೆ.
ಫಿಟ್ಮೆಂಟ್ ಫ್ಯಾಕ್ಟರ್ನಲ್ಲಿ ಹೆಚ್ಚಳ!
ಡಿಎ ಮತ್ತು ಡಿಆರ್ ಹೆಚ್ಚಳದ ಹೊರತಾಗಿ, ಕೇಂದ್ರವು ಈ ತಿಂಗಳು ಫಿಟ್‌ಮೆಂಟ್ ಅಂಶವನ್ನು ಪರಿಷ್ಕರಿಸುವ ನಿರೀಕ್ಷೆಯಿದೆ. ಆದರೆ, ಬಹುಶಃ ಒಂದು ವಾರದಲ್ಲಿ ಕೇಂದ್ರ ಸರ್ಕಾರ ಈ ಕುರಿತು ಘೋಷಣೆ ಮಾಡಿದಾಗ ಎಲ್ಲವೂ ಸ್ಪಷ್ಟವಾಗಲಿದೆ.
ಎಷ್ಟು ಸಂಬಳ ಹೆಚ್ಚಾಗಲಿದೆ?
ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಿದರೆ ಕೇಂದ್ರ ಸರ್ಕಾರಿ ನೌಕರರಿಗೆ ಕನಿಷ್ಠ ವೇತನ 18,000 ರೂ.ನಿಂದ 26,000 ರೂ.ಗೆ ಏರುವ ನಿರೀಕ್ಷೆಯಿದೆ. ಸಾಮಾನ್ಯ ಫಿಟ್‌ಮೆಂಟ್ ಅಂಶವು ಪ್ರಸ್ತುತ ಶೇಕಡಾ 2.57 ರಷ್ಟಿದೆ. ಫಿಟ್‌ಮೆಂಟ್ ಅಂಶವನ್ನು ಶೇ.3.68ಕ್ಕೆ ಏರಿಸುವಂತೆ ಸರ್ಕಾರಿ ನೌಕರರು ಕೇಂದ್ರವನ್ನು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ-7th CPC: ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಹಬ್ಬದ ಉಡುಗೊರೆ ಪ್ರಕಟಿಸಿದ ಮೋದಿ ಸರ್ಕಾರ!
18 ತಿಂಗಳ ಡಿಎ ಬಾಕಿಗೆ ಬೇಡಿಕೆ
ಡಿಎ ಮತ್ತು ಫಿಟ್‌ಮೆಂಟ್ ಅಂಶ ಹೆಚ್ಚಳದ ಹೊರತಾಗಿ ಕೇಂದ್ರ ಸರ್ಕಾರಿ ನೌಕರರು 18 ತಿಂಗಳ ಡಿಎ ಬಾಕಿ ನೀಡುವಂತೆ ಕೂಡ ಒತ್ತಾಯಿಸುತ್ತಿದ್ದಾರೆ. ಈ ಬಾಕಿ ಉಳಿದಿರುವ ತುಟ್ಟಿಭತ್ಯೆಯ ಹಣ ಈ ಬಾರಿ ಬಿಡುಗಡೆಯಾಗುತ್ತದೆಯೇ? ಈ ಬಗ್ಗೆ ಕೇಂದ್ರ ಸರ್ಕಾರ ಇನ್ನೂ ಯಾವುದೇ ಸ್ಪಷ್ಟ ನಿಲುವು ತಳೆದಿಲ್ಲ ಮತ್ತು ಅದನ್ನು ಘೋಷಣೆ ಕೂಡ ಮಾಡಿಲ್ಲ. ಜನವರಿ 1 ಮತ್ತು ಜುಲೈ 1 ರಿಂದ ಅನ್ವಯವಾಗುವಂತೆ ತುಟ್ಟಿಭತ್ಯೆ (ಡಿಎ) ಮತ್ತು ತುಟ್ಟಿಭತ್ಯೆ ಪರಿಹಾರ (ಡಿಆರ್) ಹೀಗೆ ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸಲಾಗುತ್ತದೆ.
ಕೇಂದ್ರ ಸರ್ಕಾರ ಈ ಹಿಂದೆ ಸೆಪ್ಟೆಂಬರ್ 2022 ರಲ್ಲಿ ತುಟ್ಟಿ ಭತ್ಯೆಯನ್ನು ಹೆಚ್ಚಿಸಿತ್ತು, ಇದು ದೇಶದ ಸುಮಾರು 48 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡಿತ್ತು. ಕೇಂದ್ರವು ಡಿಎಯನ್ನು ಶೇ.4 ರಿಂದ ಶೇ.38ಕ್ಕೆ ಹೆಚ್ಚಿಸಿತ್ತು. ಇದಕ್ಕೂ ಮುನ್ನ ಕೇಂದ್ರವು 7ನೇ ವೇತನ ಆಯೋಗದ ಅಡಿಯಲ್ಲಿ ಮಾರ್ಚ್‌ನಲ್ಲಿ ಡಿಎಯನ್ನು ಶೇ 3 ರಷ್ಟು ಹೆಚ್ಚಿಸಿ ಶೇ 34 ರಷ್ಟು ಮಾಡಲಾಗಿತ್ತು.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.