7th Pay Commission: ತುಟ್ಟಿಭತ್ಯೆಯ ಜೊತೆಗೆ ಮನೆ ಬಾಡಿಗೆ ಭತ್ಯೆಯಲ್ಲಿಯೂ ಕೂಡ ಶೇ.3 ರಷ್ಟು ಏರಿಕೆ, ಇಲ್ಲಿದೆ ಲೇಟೆಸ್ಟ್ ಅಪ್ಡೇಟ್
7th pay commission HRA Hike: ಶೀಘ್ರದಲ್ಲೇ ಸರ್ಕಾರಿ ನೌಕರರ ತುಟ್ಟಿ ಭತ್ಯೆ (ಡಿಎ) 38 ರಿಂದ 39 ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಪ್ರಸ್ತುತ, ತುಟ್ಟಿಭತ್ಯೆ 34% ದರದಲ್ಲಿ ನೀಡಲಾಗುತ್ತಿದೆ. ತುಟ್ಟಿ ಭತ್ಯೆಯ ಹೆಚ್ಚಳದ ಜೊತೆಗೆ, ಇತರ ಭತ್ಯೆಗಳೂ ಕೂಡ ಏರಿಕೆಯಾಗುವುದು ನಿಚ್ಚಳವಾಗಿದೆ.
7th pay commission HRA Hike: ಕೇಂದ್ರ ಸರ್ಕಾರಿ ಯೌಕರರ ಪಾಲಿಗೆ ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಣದುಬ್ಬರ ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುವ ಭತ್ಯೆಗಳಲ್ಲಿ ಭಾರಿ ಏರಿಕೆಗೆ ಕಾರಣವಾಗುತ್ತಿದೆ. ಪ್ರತಿ 6 ತಿಂಗಳಿಗೊಮ್ಮೆ ತುಟ್ಟಿ ಭತ್ಯೆ ಏರಿಕೆಯಾಗುತ್ತಿದೆ, ಇನ್ನೊಂದೆಡೆ ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಮನೆ ಬಾಡಿಗೆ ಭತ್ಯೆ ಕೂಡ ಹೆಚ್ಚಾಗುವುದು ಬಹುತೇಕ ನಿಚ್ಚಳವಾಗಿದೆ. ಏಕೆಂದರೆ ಸರ್ಕಾರ ಈಗಾಗಲೇ ಈ ಕುರಿತು ಅಧಿಸೂಚನೆಯನ್ನು ಹೊರಡಿಸಿದೆ. 2023 ರ ವೇಳೆಗೆ, ಉದ್ಯೋಗಿಗಳ HRA ಹೆಚ್ಚಾಗಲಿದೆ. ಆದರೆ, ಪ್ರಸ್ತುತ ಇರುವ ಶೇ.34ರಷ್ಟು ತುಟ್ಟಿಭತ್ಯೆಯಲ್ಲಿ ಶೇ.16 ರಷ್ಟು ಏರಿಕೆ ಕಂಡುಬಂದರೆ ಮಾತ್ರ ಇದು ಸಂಭವಿಸಲಿದೆ. ಜುಲೈ 2022 ರ ನಂತರ, ತುಟ್ಟಿ ಭತ್ಯೆಯು ಶೇಕಡಾ 4-5 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
HRA: ಮುಂದಿನ ಪರಿಷ್ಕರಣೆ ಯಾವಾಗ
ಶೀಘ್ರದಲ್ಲೇ ಸರ್ಕಾರಿ ನೌಕರರ ತುಟ್ಟಿಭತ್ಯೆ (ಡಿಎ) ಶೇ. 38 ರಿಂದ ಶೇ.39 ರಷ್ಟು ಹೆಚ್ಚಾಗಬಹುದು. ಪ್ರಸ್ತುತ, ತುಟ್ಟಿಭತ್ಯೆಯನ್ನು ಶೇ.34ರ ದರದಲ್ಲಿ ನೀಡಲಾಗುತ್ತಿದೆ. ತುಟ್ಟಿಭತ್ಯೆ (ಡಿಎ ಹೆಚ್ಚಳ) ಜೊತೆಗೆ, ಇತರ ಭತ್ಯೆಗಳೂ ಕೂಡ ಏರಿಕೆಯಾಗಳಿವೆ. ಇವುಗಳಲ್ಲಿ ಪ್ರಮುಖ ಮತ್ತು ಮುಖ್ಯವಾದದ್ದು ಮನೆ ಬಾಡಿಗೆ ಭತ್ಯೆ.
2021 ರಲ್ಲಿ, ಜುಲೈ ನಂತರ, ತುಟ್ಟಿ ಭತ್ಯೆ ಶೇ.25 ದಾಟುವುದರೊಂದಿಗೆ HRA ಅನ್ನು ಪರಿಷ್ಕರಿಸಲಾಗಿದೆ. ಜುಲೈ 2021 ರಲ್ಲಿ, ಸರ್ಕಾರವು ತುಟ್ಟಿಭತ್ಯೆಯನ್ನು ಶೇ.28ಕ್ಕೆ ಹೆಚ್ಚಿಸಿದೆ. ಪ್ರಸ್ತುತ ನಗರಗಳ ವರ್ಗೀಕರಣ ಆಧರಿಸಿ ಶೇ.27, ಶೇ.18 ಮತ್ತು ಶೇ.9ರ ದರದಲ್ಲಿ ಮನೆ ಬಾಡಿಗೆ ಭತ್ಯೆಯನ್ನು ನೀಡಲಾಗುತ್ತಿದೆ. ಈಗ ಪ್ರಶ್ನೆಯೆಂದರೆ, ಡಿಎ ಹೆಚ್ಚಳದ ನಂತರ HRA ಯ ಮುಂದಿನ ಪರಿಷ್ಕರಣೆ ಯಾವಾಗ ಸಂಭವಿಸುತ್ತದೆ? ಎಂಬುದು
HRA: ನೌಕರರಿಗೆ ಸಿಗುವ ಲಾಭ
DoPT ಪ್ರಕಾರ, ಕೇಂದ್ರೀಯ ಉದ್ಯೋಗಿಗಳಿಗೆ ಮನೆ ಬಾಡಿಗೆ ಭತ್ಯೆಯ (HRA) ಪರಿಷ್ಕರಣೆಯು ತುಟ್ಟಿ ಭತ್ಯೆಯ (DA) ಆಧಾರದ ಮೇಲೆ ಮಾಡಲಾಗುತ್ತದೆ. ಮುಂದಿನ ವರ್ಷದವರೆಗೆ ತುಟ್ಟಿಭತ್ಯೆಯಲ್ಲಿ ಮೂರು ಬದಲಾವಣೆಗಳಾಗುವುದು ಖಚಿತ. ಅಂದರೆ ಜುಲೈ 2022 ರಲ್ಲಿ ಹೆಚ್ಚಿಸಿದ ನಂತರ, DA ಮೂರು ಪಟ್ಟು ಹೆಚ್ಚು ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ತುಟ್ಟಿ ಭತ್ಯೆ ಶೇ.50 ಗಡಿ ದಾಟುವ ಎಲ್ಲಾ ಸಾಧ್ಯತೆಗಳೂ ಇವೆ. ಇಂತಹ ಪರಿಸ್ಥಿತಿಯಲ್ಲಿ, 2023 ರಲ್ಲಿ HRA ಹೆಚ್ಚಾಗಲಿದೆ. ಪ್ರಸ್ತುತ ನಗರಗಳ ವರ್ಗಕ್ಕೆ ಅನುಗುಣವಾಗಿ ಶೇ.27, ಶೇ.18 ಮತ್ತು ಶೇ.9 ದರದಲ್ಲಿ ಎಚ್‌ಆರ್‌ಎ ನೀಡಲಾಗುತ್ತಿದೆ. ಡಿಎ ಜೊತೆಗೆ ಈ ಹೆಚ್ಚಳವು ಜುಲೈ 1, 2021 ರಿಂದ ಅನ್ವಯಿಸುತ್ತದೆ. 2015ರಲ್ಲಿ ನೀಡಿದ್ದ ಜ್ಞಾಪನಾ ಪತ್ರದಲ್ಲಿ ಡಿಎ ಜತೆಗೆ ಎಚ್‌ಆರ್‌ಎಯನ್ನು ಕಾಲಕಾಲಕ್ಕೆ ಪರಿಷ್ಕರಿಸಲಾಗುತ್ತದೆ ಎಂದು ಸರ್ಕಾರ ಹೇಳಿತ್ತು.
HRA: ಮನೆ ಬಾಡಿಗೆ ಭತ್ಯೆ ಶೇ.3 ರಷ್ಟು ಹೆಚ್ಚಾಗಲಿದೆ
ಮನೆ ಬಾಡಿಗೆ ಭತ್ಯೆಯಲ್ಲಿ ಮುಂದಿನ ಪರಿಷ್ಕರಣೆ ಶೇ.3ರಷ್ಟು ಆಗುವುದು ಬಹುತೇಕ ಖಚಿತವಾಗಿದೆ. ಎಚ್‌ಆರ್‌ಎಯನ್ನು ಈಗಿರುವ ಗರಿಷ್ಠ ದರವಾದ ಶೇ.27ರಿಂದ ಶೇ.30ಕ್ಕೆ ಹೆಚ್ಚಿಸಲಾಗುವುದು. ಆದರೆ, ತುಟ್ಟಿ ಭತ್ಯೆಯು (ಡಿಎ ಹೆಚ್ಚಳ) ಶೇ. 50ಕ್ಕೆ ತಲುಪಿದಾಗ ಇದು ಸಂಭವಿಸಲಿದೆ. DA ಶೇ. 50 ದಾಟಿದರೆ, HRA 30%, 20% ಮತ್ತು 10% ಆಗಲಿದೆ. X, Y ಮತ್ತು Z ವರ್ಗದ ನಗರಗಳ ಪ್ರಕಾರ ಮನೆ ಬಾಡಿಗೆ ಭತ್ಯೆ (HRA) ಯನ್ನು ವರ್ಗೀಕರಿಸಲಾಗಿದೆ. ಎಕ್ಸ್ ಕೆಟಗರಿಯಲ್ಲಿ ಬರುವ ಕೇಂದ್ರ ನೌಕರರು ಶೇ.27ರಷ್ಟು ಎಚ್ ಆರ್ ಎ ಪಡೆಯುತ್ತಿದ್ದು, ಶೇ.50ಕ್ಕೆ ಡಿಎ ತಲುಪಿದರೆ, ಅವರ ಎಚ್‌ಆರ್‌ಎ ಶೇ.30ರಷ್ಟಾಗುತ್ತದೆ. ಅದೇ ವೇಳೆ, ವೈ ವರ್ಗದ ಜನರಿಗೆ ಇದು ಶೇ. 18 ರಿಂದ ಶೇ.20ಕ್ಕೆ ಹೆಚ್ಚಾಗಲಿದೆ ಝಡ್ ವರ್ಗದವರಿಗೆ ಇದು ಶೇ.9 ರಿಂದ ಶೇ.10ಕ್ಕೆ ಏರಿಕೆಯಾಗಲಿದೆ.
ಇದನ್ನೂ ಓದಿ-ESIC Latest Update: ಈ ವರ್ಷಾಂತ್ಯದೊಳಗೆ ಇಡೀ ದೇಶಾದ್ಯಂತ ಜಾರಿಯಾಗಲಿದೆ ಸರ್ಕಾರದ ಈ ಯೋಜನೆ, ನಾಗರಿಕರಿಗೆ ಎಷ್ಟು ಲಾಭ
HRA ಹೆಚ್ಚಾದರೆ ಎಷ್ಟು ಹಣ ಹೆಚ್ಚಾಗುತ್ತದೆ?
7 ನೇ ವೇತನ ಆಯೋಗದ ಮ್ಯಾಟ್ರಿಕ್ಸ್ ಪ್ರಕಾರ, ಕೇಂದ್ರ ನೌಕರರ ಗರಿಷ್ಠ ಮೂಲ ವೇತನವು ತಿಂಗಳಿಗೆ 56,900 ರೂ ಆಗಿರುತ್ತದೆ, ನಂತರ ಅವರ HRA ಅನ್ನು ಶೇ. 27 ರಷ್ಟು ಎಂದು ಲೆಕ್ಕಹಾಕಲಾಗುತ್ತದೆ. ನೀವು ಸರಳ ಲೆಕ್ಕಾಚಾರದಿಂದ ಅರ್ಥ ಮಾಡಿಕೊಳ್ಳುವುದಾದರೆ,
ಇದನ್ನೂ ಓದಿ-Edible Oil Prices Down: ಖಾದ್ಯ ತೈಲ ದರದಲ್ಲಿ ಮತ್ತೆ ಭಾರಿ ಇಳಿಕೆ, ಇಲ್ಲಿದೆ ಹೊಸ ದರ
ಶೇ.27ರ ದರದಲ್ಲಿ HRA = ರೂ 56900 x 27/100 = ರೂ 15363/ತಿಂಗಳು
ಶೇ. 30ರ ದರದಲ್ಲಿ HRA = ರೂ 56,900 x 30/100 = ರೂ 17,070/ತಿಂಗಳು
HRA ನಲ್ಲಿ ಒಟ್ಟು ವ್ಯತ್ಯಾಸ: ರೂ 1707/ತಿಂಗಳು
ವಾರ್ಷಿಕ HRA ಹೆಚ್ಚಳ - 20,484 ರೂ. ಆಗಲಿದೆ. ಈ ಸರಳ ಸೂತ್ರ ವೈ ಮತ್ತು ಝಡ್ ನಗರಗಳಲ್ಲಿ ವಾಸಿಸುವ ಜನರಿಗೂ ಕೂಡ ಅವರವರ ವೇತನ ಶ್ರೇಣಿಯನ್ನು ಆಧರಿಸಿ ಅನ್ವಯಿಸಲಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.