ಸರ್ಕಾರ ತಡೆ ಹಿಡಿದಿರುವ 18 ತಿಂಗಳ ಬಾಕಿ ಡಿಎ ಯಾವಾಗ ಬಿಡುಗಡೆ ಎನ್ನುವ ಪ್ರಶ್ನೆಯನ್ನು ಸರ್ಕಾರಿ ನೌಕರರು ಕೇಳುತ್ತಲೇ ಬಂದಿದ್ದಾರೆ. ಇದೀಗ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದೆ.

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 18 ತಿಂಗಳ ಡಿಎ ಬಿಡುಗಡೆ ಬಗ್ಗೆ ಸರ್ಕಾರವನ್ನು ಒತ್ತಾಯಿಸುತ್ತಲೇ ಇದ್ದಾರೆ. ಪ್ರತಿ ಆರು ತಿಂಗಳಿಗೊಮ್ಮೆ ಕೇಂದ್ರ ಸರ್ಕಾರಿ ನೌಕರರ 18 ತಿಂಗಳ ಡಿಎ ಬಾಕಿ ನೀಡಲಾಗುತ್ತದೆಯೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಇದಕ್ಕೆ ಕಾರಣವೆಂದರೆ ಕೇಂದ್ರ ಸರ್ಕಾರಿ ನೌಕರರು ಬಹಳ ದಿನಗಳಿಂದ ಅದನ್ನು ಒತ್ತಾಯಿಸುತ್ತಿದ್ದಾರೆ.
ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ :
ಸರ್ಕಾರ ತಡೆ ಹಿಡಿದಿರುವ 18 ತಿಂಗಳ ಬಾಕಿ ಡಿಎ ಯಾವಾಗ ಬಿಡುಗಡೆ ಎನ್ನುವ ಪ್ರಶ್ನೆಯನ್ನು ಸರ್ಕಾರಿ ನೌಕರರು ಕೇಳುತ್ತಲೇ ಬಂದಿದ್ದಾರೆ. ಈ ನಡುವೆ ಇದೀಗ ಸರ್ಕಾರ ಸ್ಪಷ್ಟನೆ ನೀಡಿದೆ. ಕೇಂದ್ರ ನೌಕರರಿಗೆ 18 ತಿಂಗಳ ಡಿಎ ಬಾಕಿ ಸಿಗುತ್ತದೆಯೇ ಇಲ್ಲವೇ ಎಂಬ ಪ್ರಶ್ನೆ ಬಂದಾಗಲೆಲ್ಲಾ ಕೇಂದ್ರ ಸರ್ಕಾರ ಉತ್ತರ ನೀಡುತ್ತಲೇ ಬಂದಿದ್ದಾರೆ.
ಇದನ್ನೂ ಓದಿ : ಸತತ ಏರಿಕೆ ಮಧ್ಯೆ... ಚಿನ್ನದ ಬೆಲೆಯಲ್ಲಿ ಅನಿರೀಕ್ಷಿತ ಬದಲಾವಣೆ! ಇಂದು 10 ಗ್ರಾಂ ಬಂಗಾರಕ್ಕೆ ಎಷ್ಟಾಗಿದೆ?
18 ತಿಂಗಳ ಡಿಎ ಬಾಕಿ ಮೊತ್ತ :
ಮಳೆಗಾಲದ ಅಧಿವೇಶನದಲ್ಲಿ, ವಿರೋಧ ಪಕ್ಷದ ಸಂಸದರೊಬ್ಬರು ಸರ್ಕಾರಕ್ಕೆ 18 ತಿಂಗಳ ಡಿಎ ಬಾಕಿ ಬಗ್ಗೆ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಹಣಕಾಸು ಸಚಿವ ಪಂಕಜ್ ಚೌಧರಿ, 18 ತಿಂಗಳ ಡಿಎ ಬಾಕಿ ಬಿಡುಗಡೆಯ ಯಾವುದೇ ಪ್ರಸ್ತಾಪ ಇಲ್ಲ ಎಂದು ಹೇಳಿದ್ದಾರೆ.
ಕೊರೊನಾ ಅವಧಿಯಲ್ಲಿ ಉದ್ಭವಿಸಿರುವ ಅಸಾಧಾರಣ ಪರಿಸ್ಥಿತಿಯನ್ನು ನಿಭಾಯಿಸಲು , ಕೇಂದ್ರ ಸರ್ಕಾರವು ಸರ್ಕಾರಿ ನೌಕರರ ತುಟ್ಟಿ ಭತ್ಯೆ (DA) ಯನ್ನು 3 ಕಂತುಗಳಿಗೆ ತಡೆ ಹಿಡಿಯಲಾಗಿತ್ತು. ಜನವರಿ 1, 2020, ಜುಲೈ 1, 2020 ಮತ್ತು ಜನವರಿ 1, 2021 ರಂದು ಬರಬೇಕಾಗಿದ್ದ ಮೂರು ಕಂತುಗಳ ಡಿಎ/ಡಿಆರ್ ಅನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಯಿತು. ಈ ಮೊತ್ತವನ್ನು ದುರ್ಬಲ ವರ್ಗದ ಜನರು ಮತ್ತು ನಿರ್ಗತಿಕರಿಗೆ ಕಲ್ಯಾಣ ಯೋಜನೆಗಳಿಗೆ ಬಳಸಲಾಯಿತು. ಪರಿಸ್ಥಿತಿ ಸುಧಾರಿಸಿದ ತಕ್ಷಣ ಡಿಎ ಫ್ರೀಜ್ ಅನ್ನು ತೆಗೆದುಹಾಕಲಾಯಿತು.
ಸಂಪೂರ್ಣ ತುಟ್ಟಿ ಭತ್ಯೆಯನ್ನು ವಿವಿಧ ಕಲ್ಯಾಣ ಯೋಜನೆಗಳಿಗೆ ಬಳಸಲಾಗಿರುವುದರಿಂದ ಬಾಕಿ ಹಣವನ್ನು ಬಿಡುಗಡೆ ಮಾಡುವ ಉದ್ದೇಶವಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ನಿರಾಕರಿಸಿದೆ. 18 ತಿಂಗಳ ಬಾಕಿ ಬರಲು ಪ್ರಾರಂಭಿಸಿದ ನಂತರ, ಮೊದಲ ವರ್ಗದ ಉದ್ಯೋಗಿಗಳು 2 ಲಕ್ಷಕ್ಕಿಂತ ಹೆಚ್ಚು ಮೊತ್ತವನ್ನು ಪಡೆಯುತ್ತಾರೆ ಎನ್ನುವುದು ಖಚಿತ.
ಕೇಂದ್ರ ಸರ್ಕಾರವು ಡಿಎ ಬಾಕಿ ಮೊತ್ತದ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದರೂ, ಕಾಲಕಾಲಕ್ಕೆ, ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು ಮತ್ತು ನೌಕರರ ಸಂಘಗಳು ಸೇರಿದಂತೆ ಎಲ್ಲಾ ಪಕ್ಷಗಳು ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಬೇಡಿಕೆಗಳನ್ನು ಇಡುತ್ತಿವೆ.
ಡಿಎ ಮತ್ತು ಡಿಆರ್ ಏಕೆ ನೀಡಲಾಗುತ್ತದೆ? :
ಕೇಂದ್ರ ಸರ್ಕಾರಿ ನೌಕರರ ವೇತನ ರಚನೆಯಲ್ಲಿ ತುಟ್ಟಿಭತ್ಯೆ ಒಂದು ಪ್ರಮುಖ ಲಕ್ಷಣವಾಗಿದೆ. ಬೆಲೆ ಏರಿಕೆ ಮತ್ತು ಹಣದುಬ್ಬರವನ್ನು ನಿಭಾಯಿಸಲು, ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರವನ್ನು ನೀಡಲಾಗುತ್ತದೆ. ಇವುಗಳನ್ನು ಆರು ತಿಂಗಳಿಗೊಮ್ಮೆ, ಅಂದರೆ ಜನವರಿ ಮತ್ತು ಜುಲೈ ತಿಂಗಳುಗಳಲ್ಲಿ ಪರಿಷ್ಕರಿಸಲಾಗುತ್ತದೆ.