8th Pay Commission News: 8ನೇ ವೇತನ ಆಯೋಗದ ಅಡಿಯಲ್ಲಿ ಟ್ರೇಡ್ ಸಾಫ್ಟ್ ಲೇವಲ್ 3ರಲ್ಲಿ ಕೆಲಸ ಮಾಡುವ ನೌಕರರಿಗೆ ಹೆಚ್ಚಿನ ಲಾಭ ಆಗುತ್ತದೆ ಎನ್ನುವ ಬಿಗ್ ನ್ಯೂಸ್ ಇತ್ತೀಚಿಗೆ ಕೇಳಿಬರುತ್ತಿದೆ. ಈ ಆಯೋಗದ ಆಕರ್ಷಕ ವಿಷಯವೆಂದರೆ ಅದು ಫಿಟ್‌ಮೆಂಟ್ ಅಂಶ. ಇದರಿಂದ ನೌಕರರ ಮೂಲ ವೇತನ ಗಣನೀಯವಾಗಿ ಸುಧಾರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. 8ನೇ ವೇತನ ಆಯೋಗ ಫಿಟ್‌ಮೆಂಟ್ ಅಂಶವನ್ನು 2.86ಕ್ಕೆ ಹೆಚ್ಚಿಸುವಂತೆ ಶಿಫಾರಸು ಮಾಡುವ ನಿರೀಕ್ಷೆಗಳಿದ್ದು, ಸಹಜವಾಗಿ ಇದರಿಂದ ನೌಕರರಿಗೆ ದೊಡ್ಡ ಮಟ್ಟದ ಲಾಭವಾಗಲಿದೆ.
ಗಮನಾರ್ಹವಾಗಿ, 7ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶ 2.57 ಆಗಿತ್ತು. ಅದರಿಂದ ಮೂಲ ವೇತನವನ್ನು 7,000 ರೂಪಾಯಿಗಳಿಂದ 18,000 ರುಪಾಯಿಗೆ ಹೆಚ್ಚಿಸಲಾಗಿತ್ತು. 8ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶ 2.86 ತಲುಪಬಹುದು ಎಂಬ ನಿರೀಕ್ಷೆ ಇದೆ. ಇದರ ಪರಿಣಾಮ ನೇರವಾಗಿ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನದ ಮೇಲೆ ಬೀರುತ್ತದೆ. ಟ್ರೇಡ್ ಸಿಬ್ಬಂದಿ ಲೆವೆಲ್ 3 ನೌಕರರು ಪ್ರಸ್ತುತ, 21,700 ರೂಪಾಯಿ ಮೂಲ ವೇತನ ಪಡೆಯುತ್ತಿದ್ದರೆ 8ನೇ ವೇತನ ಆಯೋಗದ ಶಿಪಾರಸುಗಳು ಜಾರಿಯಾದ ಮೇಲೆ ಅವರ ಮೂಲ ಸಂಬಳ ಸುಮಾರು 62,062 ರುಪಾಯಿಗೆ ಏರಿಕೆಯಾಗುತ್ತದೆ.
ವೇತನದ ಜೊತೆಗೆ ಈ ಭತ್ಯೆಗಳೂ ಏರಿಕೆ:
ಇನ್ನೊಂದು ಪ್ರಮುಖ ಅಂಶವೆಂದರೆ 8ನೇ ವೇತನ ಆಯೋಗದ ಅಡಿಯಲ್ಲಿ ಸಂಬಳದ ಜೊತೆಗೆ ಇತರೆ ಸರ್ಕಾರಿ ಭತ್ಯೆಗಳು ಅದೇ ಪ್ರಮಾಣದಲ್ಲಿ ಹೆಚ್ಚಳವಾಗುತ್ತವೆ. ಇವುಗಳ ಪೈಕಿ ಮನೆ ಬಾಡಿಗೆ ಭತ್ಯೆ (HRA), ಸಾರಿಗೆ ಭತ್ಯೆ ಹಾಗು ಇತರೆ ಭತ್ಯೆಗಳು ಸೇರಿಕೊಳ್ಳಲಿವೆ. ಸಹಜವಾಗಿ ಮೂಲ ವೇತನ ಜೊತೆಗೆ ಒಟ್ಟಾರೆಯಾಗಿ ಕೈಗೆ ಬರುವ ಸಂಬಳದಲ್ಲಿ ಗಮನಾರ್ಹವಾದ ಹೆಚ್ಚಳವಾಗಲಿದೆ. ಇದರಿಂದಾಗಿ ಉದ್ಯೋಗಿಗಳ ಆರ್ಥಿಕ ಸ್ಥಿತಿ ತನ್ನಿಂದ ತಾನೇ ಉತ್ತಮಗೊಳ್ಳುತ್ತದೆ.
ಇದನ್ನೂ ಓದಿ- ಅನರ್ಹ ಫಲಾನುಭವಿಗಳ ವಿರುದ್ಧ ಸರ್ಕಾರದ ದಿಟ್ಟ ಕ್ರಮ: 4,52,451 ಜನರ ವೃದ್ಯಾಪ್ಯ ವೇತನಕ್ಕೆ ಕತ್ತರಿ
ಸದ್ಯ ತಿಳಿದುಬರುತ್ತಿರುವ ಮಾಹಿತಿಗಳ ಪ್ರಕಾರ 8ನೇ ವೇತನ ಆಯೋಗದ ಶಿಫಾರಸುಗಳು ಜಾರಿಯಾಗುವುದರಿಂದ ಸರ್ಕಾರಿ ನೌಕರರ ಜೀವನ ಗಮನಾರ್ಹವಾಗಿ ಸುಧಾರಣೆಯಾಗಲಿದೆ. ಸಂಬಳ ಹೆಚ್ಚಾಗುವುದರಿಂದ ನೌಕರರ ಖರೀದಿ ಶಕ್ತಿ ವೃದ್ಧಿಯಾಗುತ್ತದೆ. ಅವರ ಕುಟುಂಬದ ಅಗತ್ಯಗಳನ್ನು ಉತ್ತಮ ರೀತಿಯಲ್ಲಿ ಪೂರೈಸಲು ಸಹಕಾರಿಯಾಗುತ್ತದೆ. ಜೊತೆಗೆ ಬಡ್ತಿಗಳು ಮತ್ತು ಭವಿಷ್ಯದ ಪ್ರಯೋಜನಗಳ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ.
8ನೇ ವೇತನ ಆಯೋಗದ ಲಾಭಗಳು ಲೇವಲ್ 3ಕ್ಕೆ ಮಾತ್ರ ಸೀಮಿತವಾಗಿಲ್ಲ. ಲೆವೆಲ್ 1ರ ನೌಕರರು ಈಗ 18,000 ರೂಪಾಯಿ ಮೂಲ ವೇತನ ತೆಗೆದುಕೊಳ್ಳುತ್ತಿದ್ದರೆ ಹೊಸ ಆಯೋಗದ ಶಿಪಾರಸು ಜಾರಿಯಾದ ಬಳಿಕ ಅವರ ಮೂಲ ವೇತನ 51,480ರೂ.ವರೆಗೆ ಹೆಚ್ಚಾಗುವ ಸಾಧ್ಯತೆ ಇದೆ. ಅದೇ ರೀತಿ ಲೆವೆಲ್ 2ರ ನೌಕರರು ಈಗ 19,900 ರೂಪಾಯಿ ಮೂಲ ವೇತನ ತೆಗೆದುಕೊಳ್ಳುತ್ತಿದ್ದರೆ ಅದು 8ನೇ ವೇತನ ಆಯೋಗ ಜಾರಿ ಬಳಿಕ ಸುಮಾರು 56,914 ರೂಪಾಯಿವರೆಗೆ ಹೆಚ್ಚಾಗಬಹುದು. ಈ ಎರಡೂ ಹಂತದ ನೌಕರರ ಮೂಲ ವೇತನ ಸರಾಸರಿ 33,000 ರಿಂದ 37,000 ರೂಪಾಯಿವರೆಗೆ ಹೆಚ್ಚಾಗಬಹುದು.
ಇದನ್ನೂ ಓದಿ- 8th Pay Commission: ನೆಕ್ಸ್ಟ್ ಕೇಂದ್ರ ಸರ್ಕಾರಿ ನೌಕರರಿಗೆ ಸಂಬಳ ಜಾಸ್ತಿಯಾಗುವುದು ಯಾವಾಗ ಗೊತ್ತಾ?
ನೌಕರರ ಸಂಘಗಳು ಈ ಸಂಭಾವ್ಯ ಹೆಚ್ಚಳದ ಪ್ರಮಾಣಕ್ಕೆ ಸ್ವಾಗತ ಕೋರಿವೆ. ಇವು ಸರ್ಕಾರಿ ನೌಕರರ ಪರವಾಗಿ ಆಗುತ್ತಿರುವ ಮಹತ್ವದ ನಿರ್ಧಾರಗಳು ಎಂದು ಹೇಳುತ್ತಿವೆ. ಇವು ಸರ್ಕಾರಿ ನೌಕರರ ಮನೋಸ್ಥೈರ್ಯ ಮತ್ತು ಆರ್ಥಿಕ ಶಕ್ತಿಯನ್ನು ಹೆಚ್ಚಿಸುತ್ತವೆ. ಅದರಿಂದ ಸರ್ಕಾರಿ ಸೇವೆಗಳ ಗುಣಮಟ್ಟ ಸುಧಾರಿಸುವುದಕ್ಕೂ ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟಿವೆ.









