8th Pay Commission ಬಿಗ್ ಅಪ್ಡೇಟ್: ಆಗಸ ಮುಟ್ಟಲಿದೆ ಸರ್ಕಾರಿ ನೌಕರರ ವೇತನ

8th Pay Commission: ಕೇಂದ್ರ ಸರ್ಕಾರ 8ನೇ ವೇತನ ಆಯೋಗದ ಟಿಒಆರ್'ಗೆ ಅನುಮೋದನೆ ನೀಡಿದೆ. ರಂಜನ್ ದೇಸಾಯಿ ನೇತೃತ್ವದ ಆಯೋಗವು 2027ರಲ್ಲಿ ಹೊಸ ವೇತನ ರಚನೆ, ಪಿಂಚಣಿ ಮತ್ತು ಭತ್ಯೆಗಳ ಪರಿಷ್ಕರಣೆಯ ಕುರಿತು ಅಂತಿಮ ವರದಿಯನ್ನು ಸಲ್ಲಿಸುತ್ತದೆ ಎಂದು ತಿಳಿದುಬಂದಿದೆ.

Written by - Yashaswini V | Last Updated : Nov 13, 2025, 11:14 AM IST
  • ಹೊಸ ವೇತನ ಆಯೋಗದಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಭಾರೀ ಏರಿಕೆ
  • ಕೇಂದ್ರ ಸರ್ಕಾರಿ ನೌಕರರ ವೇತನ 80% ರಿಂದ 157% ರಷ್ಟು ಹೆಚ್ಚಾಗುವ ನಿರೀಕ್ಷೆ
  • 8ನೇ ವೇತನ ಆಯೋಗದಿಂದ ಪಿಂಚಣಿದಾರರಿಗೂ ಪ್ರಯೋಜನ
8th Pay Commission ಬಿಗ್ ಅಪ್ಡೇಟ್: ಆಗಸ ಮುಟ್ಟಲಿದೆ ಸರ್ಕಾರಿ ನೌಕರರ ವೇತನ

8th Pay Commission: ಕೇಂದ್ರ ಸರ್ಕಾರವು 8ನೇ ಕೇಂದ್ರ ವೇತನ ಆಯೋಗದ ಉಲ್ಲೇಖ ನಿಯಮಗಳನ್ನು (ToR) ಅನುಮೋದಿಸಿದ್ದು ಇದು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹೊಸ ವೇತನ ರಚನೆಯನ್ನು ತರುವಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ. ಹೊಸ ವೇತನ ಆಯೋಗವು ಸುಮಾರು 5 ಮಿಲಿಯನ್ ಕೇಂದ್ರ ಸರ್ಕಾರಿ ನೌಕರರು ಮತ್ತು 7 ಮಿಲಿಯನ್ ಪಿಂಚಣಿದಾರರಿಗೆ ನೇರ ಲಾಭವನ್ನು ನೀಡುತ್ತದೆ ಎಂದು ಅಂದಾಜಿಸಲಾಗಿದೆ. 18 ತಿಂಗಳೊಳಗೆ ಹೊಸ ವೇತನ ಆಯೋಗವು ತನ್ನ ಅಂತಿಮ ವರದಿಯನ್ನು ಸಲ್ಲಿಸುತ್ತದೆ ಎಂದು ತಿಳಿದುಬಂದಿದ್ದು, ಹೊಸ ವೇತನ ಪರಿಷ್ಕರಣೆ 2027ರ ವೇಳೆಗೆ ಜಾರಿಗೆ ಬರುವ ನಿರೀಕ್ಷೆಯಿದೆ. 

Add Zee News as a Preferred Source

ನಿವೃತ್ತ ನ್ಯಾಯಮೂರ್ತಿ ರಂಜನ್ ದೇಸಾಯಿ ಅವರ ನೇತೃತ್ವದಲ್ಲಿ ರಚನೆಯಾಗಿರುವ ಹೊಸ ವೇತನ ಆಯೋಗವು, 8ನೇ ವೇತನ ಆಯೋಗದಲ್ಲಿ ಸರ್ಕಾರಿ ನೌಕರರು, ಪಿಂಚಣಿದಾರರ ವೇತನ, ಭತ್ಯೆಗಳು ಮತ್ತು ಪಿಂಚಣಿಗಳನ್ನು ಪರಿಶೀಲಿಸುವ ಅದಕ್ಕೆ ಒಂದು ಸ್ಪಷ್ಟ ರೂಪುರೇಷೆ ನೀಡಲು ಕಾರ್ಯನಿರ್ವಹಿಸಲಿದೆ. ಈ ಸಮಿತಿಯು  ಅರೆಕಾಲಿಕ ಸದಸ್ಯರು ಮತ್ತು ಸದಸ್ಯ-ಕಾರ್ಯದರ್ಶಿಗಳನ್ನು ಹೊಂದಿರುತ್ತದೆ. 8ನೇ ವೇತನ ಆಯೋಗದ ಅಂತಿಮ ಶಿಫಾರಸುಗಳನ್ನು ಸಲ್ಲಿಸುವ ಮೊದಲು, ಅಗತ್ಯವಿದ್ದರೆ ಸಮಿತಿಯು ಮಧ್ಯಂತರ ವರದಿಯನ್ನು ಕೂಡ ಸಲ್ಲಿಸಬಹುದು.

ತನ್ನ ಶಿಫಾರಸುಗಳನ್ನು ರೂಪಿಸುವಾಗ, ಆಯೋಗವು ಹಲವಾರು ಪ್ರಮುಖ ಅಂಶಗಳನ್ನು ಪರಿಗಣಿಸುತ್ತದೆ. ಇವುಗಳಲ್ಲಿ ದೇಶದ ಒಟ್ಟಾರೆ ಆರ್ಥಿಕ ಪರಿಸ್ಥಿತಿ, ಹಣಕಾಸಿನ ಶಿಸ್ತಿನ ಅಗತ್ಯತೆ ಮತ್ತು ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳಿಗೆ ನಿಧಿಯ ಲಭ್ಯತೆಗಳು ಸೇರಿವೆ. ಎಲ್ಲಕ್ಕಿಂತ ಮುಖ್ಯವಾಗಿ 8ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶವನ್ನು ಅಧಾರವಾಗಿಟ್ಟುಕೊಂಡು ವೇತನ, ಭತ್ಯೆಗಳು, ಪಿಂಚಣಿಯನ್ನು ಏರಿಕೆ ಮಾಡಲಾಗುವುದು ಎಂದು ವರದಿಗಳು ತಿಳಿಸಿವೆ. 

ಇದನ್ನೂ ಓದಿ- EPFO ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ ಹಳೆಯ ವಿಧಾನದಿಂದ ಸಕ್ರಿಯವಾಗಲ್ಲ UAN

ಫಿಟ್‌ಮೆಂಟ್ ಅಂಶ ಎಂದರೇನು? 
ಹೊಸ ವೇತನ ರಚನೆಯ ಅಡಿಯಲ್ಲಿ ಸಂಬಳ ಎಷ್ಟು ಹೆಚ್ಚಾಗುತ್ತದೆ ಎಂಬುದನ್ನು ನಿರ್ಧರಿಸುವಲ್ಲಿ ಫಿಟ್‌ಮೆಂಟ್ ಅಂಶವು ಪ್ರಮುಖ ಪಾತ್ರ ವಹಿಸುತ್ತದೆ. ಇದು ಪ್ರಸ್ತುತ ಮೂಲ ವೇತನಕ್ಕೆ ಅನ್ವಯಿಸಲಾದ ಗುಣಕವಾಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ, 8ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶವು 1.8 ಮತ್ತು 2.57 ರ ನಡುವೆ ಇರಬಹುದು ಎನ್ನಲಾಗಿದೆ. 

* ಮೊದಲ ಹಂತದಲ್ಲಿ ಫಿಟ್‌ಮೆಂಟ್ ಅಂಶವನ್ನು 1.8ರಷ್ಟು ಇರಿಸಿದರೆ,  18,000ರೂ. ಮೂಲ ವೇತನ ಹೊಂದಿರುವ ಉದ್ಯೋಗಿಯ ಮೂಲ ವೇತನವು 32,400ರೂ.ಗೆ ಹೆಚ್ಚಾಗಬಹುದು. 
* ಹಂತ 2 ರಲ್ಲಿ, ಮೂಲ ವೇತನ 19,900ರೂ. ಆಗಿದ್ದು, ಇದು 35,820ರೂ. ಕ್ಕೆ ಏರಿಕೆ ಆಗಬಹುದು. 
* ಹಂತ 3 ರಲ್ಲಿ, ಮೂಲ ವೇತನ 21,700ರೂ.  ಆಗಿದ್ದು, ಇದು ಸುಮಾರು 39,060ರೂ.ಗಳಿಗೆ ಹೆಚ್ಚಾಗಲಿದೆ. 

ಫಿಟ್‌ಮೆಂಟ್ ಅಂಶವನ್ನು 2.46 ಕ್ಕೆ ನಿಗದಿಪಡಿಸಿದರೆ, ಸಂಬಳ ಇನ್ನೂ ಹೆಚ್ಚಾಗುತ್ತದೆ. ಇದರ ಪ್ರಕಾರ, ಹಂತ 1 ರಲ್ಲಿ, ಅವರು 44,280 ರೂ., ಹಂತ 2 ರಲ್ಲಿ 48,954 ರೂ. ಮತ್ತು ಹಂತ 3 ರಲ್ಲಿ, 53,382ರೂ. ಸಂಬಳವನ್ನು ಪಡೆಯುತ್ತಾರೆ. 

ಹೊಸ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶವನ್ನು 2.57 ಕ್ಕೆ ನಿಗದಿಪಡಿಸಿದರೆ, ಹಂತ 1ಕ್ಕೆ ಮೂಲ ವೇತನ 46,260ರೂ., ಹಂತ 2 ಕ್ಕೆ 51,143ರೂ. ಮತ್ತು ಹಂತ 3 ಕ್ಕೆ 55,769ರೂ. ತಲುಪಬಹುದಾದ ನಿರೀಕ್ಷೆಯಿದೆ. ಒಟ್ಟಾರೆಯಾಗಿ, ಸರ್ಕಾರ ಆಯ್ಕೆ ಮಾಡಿದ ಅಂತಿಮ ಫಿಟ್‌ಮೆಂಟ್ ಅಂಶವನ್ನು ಅವಲಂಬಿಸಿ ಸಂಬಳವು 80% ರಿಂದ 157% ರಷ್ಟು ಹೆಚ್ಚಾಗುತ್ತದೆ.

ಇದನ್ನೂ ಓದಿ- 8ನೇ ವೇತನ ಆಯೋಗ ಜಾರಿಗೆ ಬಂದ ಮೇಲೆ ಕೇಂದ್ರ ಸರ್ಕಾರಿ ನೌಕರರ ಸಂಬಳ ಎಷ್ಟು ಹೆಚ್ಚಾಗುತ್ತದೆ ಗೊತ್ತಾ?

ಭತ್ಯೆಗಳಲ್ಲಿ ಬದಲಾವಣೆಗಳು ಮೂಲ ವೇತನದ ಪರಿಷ್ಕರಣೆಯ ಜೊತೆಗೆ, ಆಯೋಗವು ವಿವಿಧ ಭತ್ಯೆಗಳನ್ನು ಸಹ ಪರಿಷ್ಕರಿಸುತ್ತದೆ. ತುಟ್ಟಿ ಭತ್ಯೆ (DA) ಅನ್ನು ಮರು ಲೆಕ್ಕಾಚಾರ ಮಾಡಿ ಮೂಲ ವೇತನಕ್ಕೆ ಸೇರಿಸಲಾಗುತ್ತದೆ. ಪರಿಷ್ಕೃತ ವೇತನ ರಚನೆಯ ಆಧಾರದ ಮೇಲೆ ಮನೆ ಬಾಡಿಗೆ ಭತ್ಯೆ (HRA, ಪ್ರಯಾಣ ಭತ್ಯೆ (TA) ಅನ್ನು ಸಹ ಸರಿಹೊಂದಿಸಲಾಗುತ್ತದೆ. ಇದು ಉದ್ಯೋಗಿಗಳಿಗೆ ಹೆಚ್ಚಿನ ಆರ್ಥಿಕ ಪ್ರಯೋಜನಗಳನ್ನು ಒದಗಿಸುತ್ತದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪಿಂಚಣಿ ಸುಧಾರಣೆಗಳು: 
8ನೇ ವೇತನ ಆಯೋಗವು ಪಿಂಚಣಿದಾರರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಪರಿಹರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಹೊಸ ವೇತನ ರಚನೆಗೆ ಅನುಗುಣವಾಗಿ ಅವರ ಪಿಂಚಣಿ ಮೊತ್ತವು ಹೆಚ್ಚಾಗುವ ಸಾಧ್ಯತೆ ಇದೆ. ಪಿಂಚಣಿ ಪಾವತಿಗಳಲ್ಲಿ ಸಮಾನತೆ ಮತ್ತು ವೇಗವನ್ನು ತರಲು ಸರಳೀಕೃತ ವ್ಯವಸ್ಥೆಯನ್ನು ತರಲು ಹೊಸ ಆಯೋಗವು ಕೆಲವು ನಿಯಮಗಳನ್ನು ಬದಲಾಯಿಸಬಹುದಾಗಿದೆ. 

About the Author

Yashaswini V

Yashaswini V

ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

...Read More

Trending News