8th Pay Commission salary hike exclusion: ಹೊಸ ವೇತನ ಆಯೋಗಕ್ಕಾಗಿ ಕೇಂದ್ರ ಸರ್ಕಾರ ಉಲ್ಲೇಖ ಅವಧಿ (TOR) ಜಾರಿಗೆ ತಂಡ ಬೆನ್ನಲ್ಲೇ 8ನೇ ವೇತನ ಆಯೋಗ ಸಮಿತಿ ರಚನೆಯ ಬಗ್ಗೆಯೂ ಭಾರೀ ಚರ್ಚೆ ಆರಂಭವಾಗಿದೆ. ಏತನ್ಮಧ್ಯೆ, ವೇತನ, ಪಿಂಚಣಿ ಹೆಚ್ಚಳದ ನಿರೀಕ್ಷೆಯಲ್ಲಿರುವ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಸಂಬಂಧಿಸಿದ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, 8ನೇ ವೇತನ ಆಯೋಗದ ಅನುಷ್ಠಾನದ ಬಳಿಕವೂ ಕೆಲವು ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳವಾಗುವುದಿಲ್ಲ. ಅಷ್ಟೇ ಅಲ್ಲದೆ, ಸುಮಾರು 69 ಲಕ್ಷ ಪಿಂಚಣಿದಾರರನ್ನು ಉಲ್ಲೇಖ ಅವಧಿಯ ಅಡಿಯಲ್ಲಿ ಹೊರಗಿಡಲಾಗಿದೆ ಎಂಬ ಶಾಕಿಂಗ್ ಮಾಹಿತಿ ಹೊರಬಹುತ್ತಿದೆ.
ವರದಿಗಳ ಪ್ರಕಾರ, 8ನೇ ವೇತನ ಆಯೋಗದಲ್ಲಿ ಕೇಂದ್ರ ಸರ್ಕಾರ್ ನೌಕರರ ವೇತನ ಹಾಗೂ ಪಿಂಚಣಿದಾರರ ಪಿಂಚಣಿಯನ್ನು ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ಪರಿಷ್ಕರಿಸಲಾಗುತ್ತದೆ. ಹೊಸ ವೇತನ ಆಯೋಗದಡಿ ಫಿಟ್‌ಮೆಂಟ್ ಅಂಶ 1.92 ರಿಂದ 2.86ರ ನಡುವೆ ಇರುವ ನಿರೀಕ್ಷೆಯಿದೆ. ಆದರೆ, ಹೊಸ ವೇತನ ಆಯೋಗವು ಸರ್ಕಾರಿ ಸ್ವಾಮ್ಯದ ವಾಣಿಜ್ಯ ಉದ್ಯಮಗಳಾದ ಸಾರ್ವಜನಿಕ ವಲಯದ ಉದ್ಯಮಗಳ (ಪಿಎಸ್‌ಯು) ಉದ್ಯೋಗಿಗಳಿಗೆ ಅನ್ವಯಿಸುವುದಿಲ್ಲ ಹಾಗಾಗಿ ಇವರ ವೇತನ ಹೆಚ್ಚಳಕ್ಕೆ ಕೊಕ್ಕೆ ಬೀಳುವ ಸಂಭವವಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ- ಕೇಂದ್ರ ಸರ್ಕಾರಿ ನೌಕರರಿಗೆ ಬಿಗ್ ನ್ಯೂಸ್: VRS ಕುರಿತು ಹೊಸ ಮಾರ್ಗಸೂಚಿ ಬಿಡುಗಡೆ
ವಾಸ್ತವವಾಗಿ, ಸರ್ಕಾರಿ ಸ್ವಾಮ್ಯದ ವಾಣಿಜ್ಯ ಉದ್ಯಮಗಳಾದ ಸಾರ್ವಜನಿಕ ವಲಯದ ಉದ್ಯಮಗಳ (ಪಿಎಸ್‌ಯು) ಉದ್ಯೋಗಿಗಳಿಗೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಜಂಟಿಯಾಗಿ ವೇತನ ಪರಿಶ್ಕರಿಸುವುದರಿಂದ ಹೊಸ ವೇತನ ಆಯೋಗದ ಅನುಷ್ಠಾನದ ನಂತರ ಇದರ ಆಧಾರದಲ್ಲಿ ಇವರ ವೇತನ ಹೆಚ್ಚಾಗುವುದಿಲ್ಲ. ಇವರ ಹೊರತಾಗಿ
ಸ್ವಾಯತ್ತ ಸಂಸ್ಥೆಗಳ ನೌಕರರ ಮೇಲೂ ಇದು ಪರಿಣಾಮ ಬೀರುತ್ತದೆ ಎನ್ನಲಾಗಿದೆ.
ಇದನ್ನೂ ಓದಿ- EPF ಖಾತೆಯಿಂದ ಹಣ ಹಿಂಪಡೆಯಲು 7 ಹೊಸ ನಿಯಮ ಜಾರಿ: ಒಂದೇ ಕ್ಲಿಕ್‌ನಲ್ಲಿ ತಿಳಿಯಿರಿ ಫುಲ್ ಡೀಟೇಲ್ಸ್
ಪಿಂಚಣಿದಾರರಿಗೂ ಕಹಿ ಸುದ್ದಿ:
ಹೊಸ ವೇತನ ಆಯೋಗದ ಅಡಿಯಲ್ಲಿ ದೇಶಾದ್ಯಂತ 9 ಮಿಲಿಯನ್ ಪಿಂಚಣಿದಾರರನ್ನು ಹೊರಗಿಡಲಾಗಿದೆ ಎಂದು ನೌಕರರ ಸಂಘಗಳು ಆರೋಪಿಸುತ್ತಿವೆ. 8ನೇ ವೇತನ ಆಯೋಗದ ಅಧಿಸೂಚನೆ ಬಿಡುಗಡೆಯಾದ ನಂತರ ಅಖಿಲ ಭಾರತ ರಕ್ಷಣಾ ನೌಕರರ ಒಕ್ಕೂಟ ಈ ರೀತಿಯ ಆರೋಪ ಮಾಡಿದ್ದು, ಇದರಿಂದ ಪಿಂಚಣಿದಾರರು ತಮಗೆ ಸಿಗಬೇಕಾದ ವೇತನ, ಭತ್ಯೆಗಳಿಂದ ವಂಚಿತರಾಗಬಹುದು ಎನ್ನಲಾಗುತ್ತಿದೆ.
ಆದಾಗ್ಯೂ, ಇಂತಹ ಆರೋಪಗಳು ಸತ್ಯಕ್ಕೆ ದೂರವಾಗಿವೆ. 8ನೇ ವೇತನ ಆಯೋಗದಲ್ಲಿ ಯಾವುದೇ ಪಿಂಚಣಿದಾರರನ್ನು ಕೈಬಿಡಲಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.









