ಝೀರೋ ಡೆಪ್ತ್ ಇನ್ಶೂರೆನ್ಸ್ ಇದನ್ನು "ಬಂಪರ್-ಟು-ಬಂಪರ್ ಇನ್ಶೂರೆನ್ಸ್" ಎಂದೂ ಕರೆಯಲಾಗುತ್ತದೆ. ಇದು ಅಪಘಾತ ಅಥವಾ ಹಾನಿಯ ಸಮಯದಲ್ಲಿ ಡೆಪ್ರಿಸಿಯೇಶನ್ ಲೆಕ್ಕಿಸದ ಕಾರು ವಿಮೆಯಾಗಿದೆ. ಇದರರ್ಥ ನಿಮ್ಮ ಕಾರು ಅಪಘಾತದಲ್ಲಿ ಯಾವುದೇ ಮಠದ ಹಾನಿಯನ್ನು ಅನುಭವಿಸಿದರೂ ವಿಮಾ ಕಂಪನಿಯು ಬಿಡಿ ಭಾಗಗಳ ಬೆಲೆಯಲ್ಲಿನ ಏರಿಳಿತವನ್ನು ಲೆಕ್ಕಿಸದೆ ಸಂಪೂರ್ಣ ದುರಸ್ತಿ ವೆಚ್ಚವನ್ನು ಪಾವತಿಸುತ್ತದೆ.
ಝೀರೋ ಡೆಪ್ತ್ ಇನ್ಶೂರೆನ್ಸ್ ವೈಶಿಷ್ಟ್ಯಗಳು:
ಕಂಪ್ಲೇಟ್ ಕವರೇಜ್ :
ಸಾಮಾನ್ಯ ವಿಮಾ ಪಾಲಿಸಿಯಲ್ಲಿ, ಹಳೆಯ ಭಾಗಗಳ ಕುಸಿತದ ಮೌಲ್ಯದ ಪ್ರಕಾರ ದುರಸ್ತಿ ವೆಚ್ಚವನ್ನು ಪಾವತಿಸಲಾಗುತ್ತದೆ. ಆದರೆ ಝೀರೋ ಡೆಪ್ತ್ ಇನ್ಶೂರೆನ್ಸ್ ನಲ್ಲಿ ವಿಮಾ ಕಂಪನಿಯು ಹೊಸ ಭಾಗಗಳ ಸಂಪೂರ್ಣ ವೆಚ್ಚವನ್ನು ಪಾವತಿಸುತ್ತದೆ.
ಇದನ್ನೂ ಓದಿ : 5 ವಾರಗಳ ಗರಿಷ್ಠ ಮಟ್ಟದಿಂದ ಇಳಿದ ಚಿನ್ನದ ಬೆಲೆ !ಬಲು ಅಗ್ಗವಾಯಿತು ಬೆಳ್ಳಿ
ಭಾಗಶಃ ವೆಚ್ಚ ತಪ್ಪಿಸುವುದು:
ಸಾಮಾನ್ಯ ಪಾಲಿಸಿಯಲ್ಲಿ ವಿಮೆ ಕ್ಲೈಮ್ ಮಾಡುವಾಗ, ಡೆಪ್ರಿಸಿಯೇಶನ್ ಕಾರಣದಿಂದಾಗಿ ಭಾಗಶಃ ವೆಚ್ಚವನ್ನು ಭರಿಸಬೇಕಾಗುತ್ತದೆ. ಝೀರೋ ಡೆಪ್ತ್ ಇನ್ಶೂರೆನ್ಸ್ ನಲ್ಲಿ ಈ ವೆಚ್ಚವನ್ನು ವಿಮಾ ಕಂಪನಿಯು ಭರಿಸುತ್ತದೆ.
ಹೊಸ ಕಾರುಗಳಿಗೆ ಉತ್ತಮ ಆಯ್ಕೆ:
ಈ ವಿಮೆಯು ಹೊಸ ಕಾರುಗಳಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.ಏಕೆಂದರೆ ಹೊಸ ಕಾರುಗಳ ಮೌಲ್ಯವು ವೇಗವಾಗಿ ಕುಸಿಯುತ್ತದೆ.
ಏನೆಲ್ಲಾ ಕವರ್ ಆಗುವುದು :
ಪ್ಲಾಸ್ಟಿಕ್, ಫೈಬರ್ ಮತ್ತು ರಬ್ಬರ್
ಮೆಟಲ್ ಬಾಡಿ ಪಾರ್ಟ್ಸ್
ಪೇಂಟ್ ವರ್ಕ್
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಏನೆಲ್ಲಾ ಕವರ್ ಆಗುವುದಿಲ್ಲ :
ಟೈರ್ ಮತ್ತು ಬ್ಯಾಟರಿ
ಇಂಜಿನ್ ಹಾನಿ (ಪ್ರತ್ಯೇಕ ಇಂಜಿನ್ ಸಂರಕ್ಷಣಾ ನೀತಿಯ ಹೊರತು)
ನಿಯಮಿತ ಸರ್ವಿಸ್ ಮತ್ತು ರಿಪೇರಿ
ಹಳೆಯ ವಾಹನಗಳಿಗೆ ಲಭ್ಯವಿಲ್ಲ (5-7 ವರ್ಷಗಳಿಗಿಂತ ಹೆಚ್ಚು)
ಇದು ಏಕೆ ಅಗತ್ಯ? :
ಬಜೆಟ್ ಸ್ನೇಹಿ: ಅಪಘಾತದ ನಂತರ ದೊಡ್ಡ ದುರಸ್ತಿ ವೆಚ್ಚಗಳನ್ನು ತಪ್ಪಿಸುತ್ತದೆ.
ಸುರಕ್ಷತೆ ಗ್ಯಾರಂಟಿ: ನಿಮ್ಮ SUV ನಂತಹ ವಾಹನಗಳ ದುಬಾರಿ ಭಾಗಗಳ ಸಂಪೂರ್ಣ ವೆಚ್ಚವನ್ನು ವಿಮಾ ಕಂಪನಿಯು ಭರಿಸುತ್ತದೆ.
ಮನಃಶಾಂತಿ: ಅನವಶ್ಯಕ ಖರ್ಚಿನ ಬಗ್ಗೆ ಚಿಂತಿಸದೆ ವಾಹನ ಬಳಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.