Best Mileage Bike: ಮಧ್ಯಮ ವರ್ಗದವರೇ ಅಧಿಕವಾಗಿ ವಾಸಿಸುವ ಭಾರತದಲ್ಲಿ ಹಣದುಬ್ಬರ ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದಾಗಿ ಅಗತ್ಯ ವಸ್ತುಗಳಿಗೂ ಪೈಸೆ ಪೈಸೆ ಲೆಕ್ಕಾ ಹಾಕುವ ಸ್ಥಿತಿ ಎದುರಾಗಿದೆ. ಒಂದೆಡೆ ಪೆಟ್ರೋಲ್-ಡೀಸೆಲ್ ದರ ಹೆಚ್ಚಳದಿಂದಾಗಿ ಸಾರ್ವಜನಿಕ ಸಾರಿಗೆಗಳ ಮೊರೆ ಹೋಗಿದ್ದವರಿಗೆ ಬಸ್ ಟಿಕೆಟ್ ದರ ಏರಿಕೆ, ಮೆಟ್ರೋ ದರ ಏರಿಕೆಗಳು ಗಾಯದ ಮೇಲೆ ಬರೆ ಏಳೆದಂತಾಗಿದೆ. ಆದರೆ, ಇದ್ಯಾವುದಕ್ಕೂ ಚಿಂತಿಸುವ ಅಗತ್ಯವಿಲ್ಲ. ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡಬಲ್ಲ ಬೈಕ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ನಿಮ್ಮ ಈ ಸಮಸ್ಯೆಗೆ ಪರಿಹಾರ ನೀಡಲಿವೆ. ಹಾಗಂತ ಈ ಬೈಕ್‌ಗಳನ್ನು ಕೊಳ್ಳಲು ಲಕ್ಷ ಲಕ್ಷ ಹಣ ಪಾವತಿಸಬೇಕು ಎಂದು ಯೋಚಿಸಬೇಡಿ. ಈ ಬೈಕ್‌ಗಳ ಬೆಲೆಯೂ ಕೂಡ ಕೈಗೆಟುಕುವಂತಿದೆ.
ಹೀರೋ HF 100:
ಅತ್ಯುತ್ತಮ ಮೈಲೇಜ್ ನೀಡಬಲ್ಲ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಬೈಕ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಬೈಕ್ ಹೀರೋ ಎಚ್‌ಎಫ್ 100. ಭಾರತದ ಅತ್ಯಂತ ಅಗ್ಗದ ಬೆಲೆಯ ಬೈಕ್‌ಗಳಲ್ಲಿ ಒಂದಾಗಿರುವ ಈ ಬೈಕ್‌ನಲ್ಲಿ ಏರ್-ಕೂಲ್ಡ್, 4-ಸ್ಟ್ರೋಕ್, ಸಿಂಗಲ್ ಸಿಲಿಂಡರ್, ಓಎಚ್‌ಸಿ ಎಂಜಿನ್ ಬಳಸಲಾಗಿದ್ದು ಇದು 70 ಕಿ.ಮೀ. ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದರ ಎಕ್ಸ್ ಶೋ ರೂಂ ಬೆಲೆ 59,018 ರೂ.ಗಳು.
ಟಿವಿಎಸ್ ಸ್ಪೋಟ್ಸ್:
ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬೈಕ್ ಟಿವಿಎಸ್ ಸ್ಪೋರ್ಟ್. ಈ ಬೈಕ್‌ನಲ್ಲಿ 4 ಸ್ಟ್ರೋಕ್ ಎಂಜಿನ್ ಬಳಸಲಾಗಿದ್ದು ಇದು 6,350 rpmಯಲ್ಲಿ 6.03kW ಪವರ್ ಅನ್ನು ಮತ್ತು 4,500rpmನಲ್ಲಿ 8.7 Nm ಟಾರ್ಕ್ ಉತ್ಪಾದಿಸುತ್ತದೆ. ಲಭ್ಯವಿರುವ ಮಾಹಿತಿಗಳ ಪ್ರಕಾರ ಈ ಬೈಕ್ 80 ಕಿ.ಮೀ. ಮೈಲೇಜ್ ನೀಡುತ್ತದೆ. ಈ ಬೈಕ್‌ನ ಎಕ್ಸ್ ಶೋ ರೂಂ ಬೆಲೆ 59,881 ರೂ. ಗ್ಲೌ ಮಾತ್ರ.
ಇದನ್ನೂ ಓದಿ- ಶೀಘ್ರವೇ ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್ ಬಿಡುಗಡೆ; ಆಕರ್ಷಕ ವಿನ್ಯಾಸ, ಹತ್ತಾರು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ!!
ಹೀರೋ ಎಚ್‌ಎಫ್ ಡಿಲಕ್ಸ್:
ಅಗ್ಗದ ಬೈಕ್‌ಗಳ ಪಟ್ಟಿಯಲ್ಲಿರುವ ಹೀರೋ ಕಂಪನಿಯ ಮತ್ತೊಂದು ಬೈಕ್ ಎಂದರೆ ಹೀರೋ ಎಚ್‌ಎಫ್ ಡಿಲಕ್ಸ್. ಈ ಬೈಕ್‌ನ ಆರಂಭಿಕ ಬೆಲೆ 59,998 ರೂ.ಗಳಿಂದ ಆರಂಭವಾಗುತ್ತದೆ. ಈ ಬೈಕ್‌ನಲ್ಲಿ 97.2 ಸಿಸಿ ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್ ಎಂಜಿನ್ ಬಳಸಲಾಗಿದ್ದು. 5.9 ಕಿಲೋ ವ್ಯಾಟ್ ಪವರ್ ನಲ್ಲಿ 8.05 ಎನ್‌ಎಮ್ ಟಾರ್ಕ್ ಉತ್ಪಾದಿಸುವ ಈ ಬೈಕ್ 75 ಕಿ.ಮೀ. ಮೈಲೇಜ್ ನೀಡಬಲ್ಲದು.
ಹೋಂಡಾ ಶೈನ್:
ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಮೈಲೇಜ್ ನೀಡುವ ಬೈಕ್ ಹುಡುಕುತ್ತಿರುವವರಿಗೆ ಹೋಂಡಾ ಶೈನ್ ಕೂಡ ಬೆಸ್ಟ್ ಆಯ್ಕೆಯಾಗಿದೆ. 4-ಸ್ಟ್ರೋಕ್, ಎಸ್‌ಐ ಎಂಜಿನ್ ಒಳಗೊಂಡಿರುವ ಈ ಬೈಕ್ 7,500 ಆರ್‌ಪಿಎಮ್ ನಲ್ಲಿ 5.43kW ಪವರ್ ಮತ್ತು 5,000 ಆರ್‌ಪಿಎಮ್ನಲ್ಲಿ 8.05ಎನ್‌ಎಮ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ಈ ಬೈಕ್‌ನ ಮೈಲೇಜ್ ಸಾಮರ್ಥ್ಯ ಲೀಟರ್ ಪೆಟ್ರೋಲ್ ಗೆ 65 ಕಿ.ಮೀ. ನಷ್ಟಿದೆ.
ಇದನ್ನೂ ಓದಿ- 6 ಏರ್‌ಬ್ಯಾಗ್‌ಗಳೊಂದಿಗೆ ಮಾರುತಿ ಆಲ್ಟೊ K10 ಕಾರು ಬಿಡುಗಡೆ; ಬೆಲೆ ಎಷ್ಟು ಗೊತ್ತಾ..?
ಟಿವಿಎಸ್ ರೇಡಿಯನ್:
ಕೈಗೆಟುಕುವ ಬೆಲೆಯ ಅತ್ಯುತ್ತಮ ಮೈಲೇಜ್ ನೀಡಬಲ್ಲ ಟಿವಿಎಸ್ ಕಂಪನಿಯ ಮತ್ತೊಂದು ಬೈಕ್ ಎಂದರೆ ಟಿವಿಎಸ್ ರೇಡಿಯನ್. ಬೈಕ್‌ನ ಆರಂಭಿಕ ಬೆಲೆ 70,720ರಿಂದ ಪ್ರಾರಂಭವಾಗುತ್ತದೆ. 109.7 ಸಿಸಿ, 4 ಸ್ಟ್ರೋಕ್ ಬಿಎಸ್-VI ಎಂಜಿನ್ ಹೊಂದಿರುವ ಈ ಬೈಕ್ 63 ಕಿ.ಮೀ ಮೈಲೇಜ್ ನೀಡಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









