ಸಿಲಿಕಾನ್ ಸಿಟಿ ಮಂದಿಗೆ ಮತ್ತೊಂದು ಆಘಾತ: ಯುಗಾದಿ ಹಬ್ಬಕ್ಕೆ ಆಟೋ ಪ್ರಯಾಣ ದರವೂ ಏರಿಕೆ...!

Auto Fare Hike: ಒಂದು ಕಡೆ ಹಾಲಿನ ದರ ಹೆಚ್ಚಳ...! ಇನ್ನೊಂದೆಡೆ ಯುಗಾದಿ ಹಬ್ಬಕ್ಕೆ ಊರಿಗೆ ಹೋಗಿದ್ದು ಬರುವವರಿಗೆ ಖಾಸಗಿ ಬಸ್ ಗಳು ಎರಡರಿಂದ ಮೂರು ಪಟ್ಟು ದರ ಏರಿಕೆ ಮಾಡಿವೆ. ಇಷ್ಟು ಸಾಲದು ಎಂಬಂತೆ ಈಗ ಯುಗಾದಿ ಹಬ್ಬದ ಸಂದರ್ಭದಲ್ಲಿ ಆಟೋ ಪ್ರಯಾಣ ದರವೂ ಏರಿಕೆ ಆಗಲಿದೆ ಎಂದು ತಿಳಿದುಬಂದಿದೆ. ಯುಗಾದಿ ಸಂದರ್ಭದಲ್ಲಿ ಆಟೋ ಚಾಲಕರಿಗೆ ಸಿಹಿ, ಪ್ರಯಾಣಿಕರಿಗೆ ಕಹಿ ದೊರೆಯಲಿದೆ.  ಏಪ್ರಿಲ್ 1ರಿಂದ ಅನ್ವಯವಾಗುವಂತೆ ಆಟೋ ಪ್ರಯಾಣ ದರ ಏರಿಕೆ ಆಗುವ ಅಧಿಕೃತ ತೀರ್ಮಾನ ಶೀಘ್ರವೇ ಹೊರಬೀಳಲಿದೆ. 

Written by - Yashaswini V | Last Updated : Mar 25, 2025, 02:33 PM IST
  • ಕೆಲ ದಿನಗಳ ಹಿಂದೆ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಸಭೆ
  • ಸಭೆಯಲ್ಲಿ ಆಟೋ ಪ್ರಯಾಣ ದರ ಏರಿಕೆಗೆ ಆರ್ಟಿಎ ಅನುಮತಿ
  • ಆಟೋ ಪ್ರಯಾಣ ದರ ಏರಿಕೆಗೆ ಡಿಸಿ ಅಂಕಿತವಷ್ಟೇ ಬಾಕಿ
ಸಿಲಿಕಾನ್ ಸಿಟಿ ಮಂದಿಗೆ ಮತ್ತೊಂದು ಆಘಾತ: ಯುಗಾದಿ ಹಬ್ಬಕ್ಕೆ ಆಟೋ ಪ್ರಯಾಣ ದರವೂ ಏರಿಕೆ...!

Auto Fare Hike In Bangalore: ಯುಗಾದಿ ಹಬ್ಬದ ಹೊತ್ತಲ್ಲಿ ಒಂದೆಡೆ ಹಾಲಿನ ದರ ಏರಿಕೆ, ಮತ್ತೊಂದೆಡೆ ಖಾಸಗಿ ಬಸ್ ದರದಲ್ಲಿ ಎರಡು-ಮೂರು ಪಟ್ಟು ಏರಿಕೆಯ ಬೆನ್ನಲ್ಲೇ ಇದೀಗ ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರು ಜನರಿಗೆ ದರ ಏರಿಕೆಯ ಮತ್ತೊಂದು ಶಾಕ್ ಫಿಕ್ಸ್ ಆಗಿದೆ.  

Add Zee News as a Preferred Source

ಆಟೋ ಚಾಲಕರು ಕನಿಷ್ಠ ಪ್ರಯಾಣ ದರವನ್ನು  ಏರಿಕೆ ಮಾಡುವಂತೆ ಪಟ್ಟು ಹಿಡಿದಿದ್ದಾರೆ.  ಕೆಲ ದಿನಗಳ ಹಿಂದೆ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಸಭೆಯಲ್ಲಿ ಆಟೋ ಪ್ರಯಾಣ ದರ ಏರಿಕೆಗೆ ಆರ್ ಟಿ ಓ ಅನುಮತಿ ಸಿಕ್ಕಿತ್ತು. ಈಗ ಆಟೋ ಚಾಲಕರು ಪ್ರಯಾಣ ದರ ಏರಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ. ಹಾಗಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಅಂಗಳದಲ್ಲಿ ಆಟೋ ಪ್ರಯಾಣ ದರ ಭವಿಷ್ಯ ಅಡಗಿದೆ. 

ಇದನ್ನೂ ಓದಿ- ರಾಜಧಾನಿ ಬೆಂಗಳೂರು ಜನರಿಗೆ ಶಾಕ್ ಮೇಲೆ ಶಾಕ್! ಯುಗಾದಿ ಹಬ್ಬಕ್ಕೆ ಬಸ್ ದರ ಏರಿಕೆ!

ಕೆಲ ದಿನಗಳ ಹಿಂದೆ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಸಭೆಯಲ್ಲಿ ಆಟೋ ಪ್ರಯಾಣ ದರ ಏರಿಕೆಗೆ ಆರ್ ಟಿ ಓ ಅನುಮತಿ ಸಿಕ್ಕಿತ್ತು. ಸದ್ಯ ಆಟೋ ಪ್ರಯಾಣ ದರ ಏರಿಕೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಅಂಕಿತ ಹಾಕುವುದು ಮಾತ್ರ ಬಾಕಿ ಉಳಿದಿದೆ. ಈಗಾಗಲೇ  ಆರ್ ಟಿ ಓ ಅನುಮತಿ ಸಿಕ್ಕಿರುವುದರಿಂದ ಹಾಗು ಆಟೋ ಚಾಲಕರು ಪ್ರಯಾಣ ದರ ಏರಿಸುವಂತೆ ಒತ್ತಡ ಹೇರುತ್ತಿರುವುದರಿಂದ ಶೀಘ್ರವೇ ಆಟೋ ಪ್ರಯಾಣ ದರವೂ ಏರಿಕೆ ಆಗುವ ಸಾಧ್ಯತೆಗಳಿವೆ.

ಇದನ್ನೂ ಓದಿ- ರಾಜಧಾನಿ ಬೆಂಗಳೂರು ಜನರಿಗೆ ಶಾಕ್ ಮೇಲೆ ಶಾಕ್! ಯುಗಾದಿ ಹಬ್ಬಕ್ಕೆ ಬಸ್ ದರ ಏರಿಕೆ!

ಆಟೋ ಚಾಲಕರ ಬೇಡಿಕೆಗಳೇನು? 
>> ಆಟೋ ಚಾಲಕರು ಕನಿಷ್ಠ ಪ್ರಯಾಣ ದರವನ್ನು 30 ರೂಪಾಯಿಗಳಿಂದ 40 ರೂಪಾಯಿವರೆಗೆ ಏರಿಕೆ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಅಲ್ಲದೆ ಪ್ರತಿ ಕಿಲೋ ಮೀಟರ್ ಪ್ರಯಾಣಕ್ಕೆ 15 ರಿಂದ 20 ರೂಪಾಯಿ ಹೆಚ್ಚಳ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ.  

ಈಗಾಗಲೇ ಮೆಟ್ರೋ ಮತ್ತು ಬಸ್ ಪ್ರಯಾಣ ದರ ಏರಿಕೆ ಆಗಿರುವುದರಿಂದ ಈಗ ಆಟೋ ಪ್ರಯಾಣ ದರ ಏರಿಕೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ.ಇದರಿಂದಾಗಿ ಬೇವು ಬೆಲ್ಲದ ಹಬ್ಬ ಯುಗಾದಿ ಸಂದರ್ಭದಲ್ಲಿ ಆಟೋ ಚಾಲಕರಿಗೆ ಸಿಹಿ, ಪ್ರಯಾಣಿಕರಿಗೆ ಕಹಿ ದೊರೆಯುವ ಸಾಧ್ಯತೆಗಳಿವೆ. ಏಪ್ರಿಲ್ 1ರಿಂದ ಅನ್ವಯವಾಗುವಂತೆ ಆಟೋ ಪ್ರಯಾಣ ದರ ಏರಿಕೆ ಮಾಡುವ ಅಧಿಕೃತ ತೀರ್ಮಾನ ಶೀಘ್ರವೇ ಬೆಂಗಳೂರು ನಗರ ಡಿಸಿಯಿಂದ ಹೊರಬೀಳಲಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News