)
Agricultural drone business
: ನಮ್ಮ ದೇಶದಲ್ಲಿ ಅನೇಕ ಜನರು ಕೃಷಿಯನ್ನೇ ಜೀವನೋಪಾಯದ ಸಾಧನವೆಂದು ಭಾವಿಸುತ್ತಾರೆ. ಆದರೆ ಕೃಷಿ ಎಂದರೆ ಕೇವಲ ಒಂದು ಪದವಲ್ಲ. ಋತುಮಾನ ಏನೇ ಇರಲಿ ರೈತರು ಬೆವರು ಸುರಿಸಿ ದುಡಿಯುತ್ತಾರೆ. ಆದರೆ ಕೃಷಿ ಮಾಡದೆಯೇ ನೀವು ತಿಂಗಳಿಗೆ 1 ಲಕ್ಷ ರೂ. ಗಳಿಸಬಹುದು ಎಂದರೆ ನಂಬುತ್ತೀರಾ? ಇದು ನೂರಕ್ಕೆ ನೂರು ಸತ್ಯ. ಇಂತಹ ಒಂದು ಅದ್ಭುತ ಬ್ಯುಸಿನೆಸ್ ಐಡಿಯಾ ಇದೆ. ಅದು ಯಾವ ವ್ಯವಹಾರ ಎಂದು ತಿಳಿಯಿರಿ...
ಕೃಷಿ ವಲಯವು ಪ್ರಸ್ತುತ ಕೃಷಿ ಕಾರ್ಮಿಕರ ಕೊರತೆಯನ್ನ ಎದುರಿಸುತ್ತಿದೆ. ಹಲವಾರು ವರ್ಷಗಳಿಂದ ತೆಲಂಗಾಣದಲ್ಲಿ ಕೃಷಿ ಕೆಲಸ ಮಾಡಲು ಮಹಾರಾಷ್ಟ್ರ ಮತ್ತು ಒರಿಸ್ಸಾದಿಂದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಆದರೆ ಇಲ್ಲಿನ ರೈತರು ಸಮಯಕ್ಕೆ ಸರಿಯಾಗಿ ಕಾರ್ಮಿಕರನ್ನ ಹುಡುಕುವಲ್ಲಿ ತೊಂದರೆ ಎದುರಿಸುತ್ತಿದ್ದಾರೆ. ಈಗ ನೀವು ಈ ಕೊರತೆಯನ್ನೇ ಬ್ಯುಸಿನೆಸ್ ಆಗಿ ಪರಿವರ್ತಿಸಬಹುದು. ಡ್ರೋನ್ಗಳ ಸಹಾಯದಿಂದ ಹೊಲಗಳಲ್ಲಿ ಕೀಟನಾಶಕಗಳನ್ನ ಸಿಂಪಡಿಸುವ ಮೂಲಕ ನೀವು ಉತ್ತಮ ಆದಾಯವನ್ನ ಗಳಿಸಬಹುದು.
ಇದಕ್ಕಾಗಿ ನೀವು ಕೃಷಿ ಡ್ರೋನ್ ಖರೀದಿಸಬೇಕು. ಆ ಡ್ರೋನ್ ಅನ್ನ ನಿರ್ವಹಿಸುವುದು ದೊಡ್ಡ ಸಮಸ್ಯೆಯಲ್ಲ. ಡ್ರೋನ್ ಮಾರಾಟಗಾರರು ಅದನ್ನ ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ತರಬೇತಿಯನ್ನ ಸಹ ನೀಡುತ್ತಾರೆ. ಈ ಡ್ರೋನ್ಗಳ ಬೆಲೆಗಳು 4 ಲಕ್ಷ ರೂ.ದಿಂದ ಪ್ರಾರಂಭವಾಗುತ್ತವೆ. ನೀವು ಒಂದು ಎಕರೆ ಭೂಮಿಯಲ್ಲಿ ಕೀಟನಾಶಕಗಳನ್ನ ಸಿಂಪಡಿಸಿದರೆ, ಎಲ್ಲಾ ಖರ್ಚುಗಳ ನಂತರವೂ ನೀವು ಒಂದು ಎಕರೆಗೆ 300 ರೂ. ಉಳಿಸುತ್ತೀರಿ. ನೀವು ದಿನಕ್ಕೆ ಹತ್ತು ಎಕರೆಗಳಲ್ಲಿ ಕೀಟನಾಶಕ ಸಿಂಪಡಿಸಿದರೂ, ದಿನಕ್ಕೆ 3000 ರೂ. ಮತ್ತು ತಿಂಗಳಿಗೆ 90 ಸಾವಿರ ರೂ. ಗಳಿಸಬಹುದು. ಹಳ್ಳಿಯಲ್ಲಿ ವಾಸಿಸುವುದು ಮತ್ತು ತಿಂಗಳಿಗೆ 90 ಸಾವಿರ ರೂ. ಗಳಿಸುವುದು ಒಂದು ರೀತಿ ಸುವರ್ಣಾವಕಾಶವೆಂದೇ ಹೇಳಬಹುದು. ಆದ್ದರಿಂದ ನಿಮಗೆ ಆಸಕ್ತಿ ಇದ್ದರೆ ಈ ವ್ಯವಹಾರದ ಬಗ್ಗೆ ಮತ್ತಷ್ಟು ತಿಳಿದುಕೊಂಡು ಈ ಬ್ಯುಸಿನೆಸ್ಗೆ ಧುಮುಕಿರಿ.