)
Amazon Great Indian Festival Sale
: ಅಮೆಜಾನ್ನಲ್ಲಿ ಹಬ್ಬದ ಋತುವಿನ ಮಾರಾಟ ಇನ್ನೂ ಮುಗಿದಿಲ್ಲ. ಕಳೆದ ತಿಂಗಳು ಪ್ರಾರಂಭವಾದ ಈ ಮಾರಾಟವು ದೀಪಾವಳಿಯವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ಪ್ರಮುಖ ಇ-ಕಾಮರ್ಸ್ ವೆಬ್ಸೈಟ್ ಇನ್ನೂ ಮಾರಾಟದ ಅಂತಿಮ ದಿನಾಂಕವನ್ನ ಘೋಷಿಸಿಲ್ಲ. ಈ ಮಾರಾಟದ ಸಮಯದಲ್ಲಿ ಸ್ಮಾರ್ಟ್ ಟಿವಿಗಳ ಬೆಲೆಗಳು ಗಮನಾರ್ಹ ಕುಸಿತ ಕಂಡಿವೆ. Samsung, LG, Xiaomi ಮತ್ತು VUನಂತಹ ಬ್ರ್ಯಾಂಡ್ಗಳ ಸ್ಮಾರ್ಟ್ ಟಿವಿಗಳು ಗಮನಾರ್ಹವಾಗಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಅಮೆಜಾನ್ ಮಾರಾಟದ ಸಮಯದಲ್ಲಿ ನೀವು ಈ ಬ್ರ್ಯಾಂಡ್ಗಳ ಟಿವಿಗಳನ್ನ ಅರ್ಧದಷ್ಟು ಬೆಲೆಗೆ ಖರೀದಿಸಬಹುದು.
ರೆಡ್ಮಿ 4K F ಸರಣಿ: ಶಿಯೋಮಿಯ ಈ 43 ಇಂಚಿನ ಸ್ಮಾರ್ಟ್ ಟಿವಿ ಸರಣಿಯು 53% ರಿಯಾಯಿತಿಯಲ್ಲಿ ಲಭ್ಯವಿದೆ. ಇದಲ್ಲದೆ ಟಿವಿ ಖರೀದಿಯ ಮೇಲೆ 4,000 ರೂ.ಗಳವರೆಗೆ ರಿಯಾಯಿತಿ ನೀಡಲಾಗುತ್ತಿದೆ. ರೆಡ್ಮಿಯ ಈ ಸ್ಮಾರ್ಟ್ ಟಿವಿ ಸರಣಿಯು 17,999 ರೂ.ನ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ರಿಯಾಯಿತಿಯ ನಂತರ ಇದು 13,999 ರೂ.ಗೆ ಲಭ್ಯವಿರುತ್ತದೆ. ಈ ಟಿವಿಯ ಮೂಲ ಬೆಲೆ 37,999 ರೂ. ಇದೆ. ಈ ಸ್ಮಾರ್ಟ್ ಟಿವಿ 4K ರೆಸಲ್ಯೂಶನ್ ಪರದೆಯೊಂದಿಗೆ ಬರುತ್ತದೆ. ಇದು ಬೆಜೆಲ್-ಲೆಸ್ ವಿನ್ಯಾಸವನ್ನ ಹೊಂದಿದ್ದು, 2GB RAM ಮತ್ತು 8GB ಸ್ಟೋರೇಜ್ನೊಂದಿಗೆ ಬರುತ್ತದೆ.
VW ಕ್ಯೂಎಲ್ಇಡಿ ಟಿವಿ: ಈ ವಿಜಿಯೊ ವರ್ಲ್ಡ್ ಸ್ಮಾರ್ಟ್ ಟಿವಿಯನ್ನ ಕೇವಲ ₹16,499ಗೆ ಪಟ್ಟಿ ಮಾಡಲಾಗಿದೆ. ಈ ಸ್ಮಾರ್ಟ್ ಟಿವಿಯ ಮೇಲೆ ₹4,000 ರಿಯಾಯಿತಿಯೂ ಲಭ್ಯವಿದೆ. ₹12,499ರಿಂದ ಪ್ರಾರಂಭಿಸಿ ನೀವು ಅದನ್ನ ಮನೆಗೆ ತರಬಹುದು. ಈ 4K ಅಲ್ಟ್ರಾ HD ಸ್ಮಾರ್ಟ್ ಟಿವಿ 67% ರಿಯಾಯಿತಿಯನ್ನ ನೀಡುತ್ತಿದೆ. ಈ 4K ಅಲ್ಟ್ರಾ HD ಸ್ಮಾರ್ಟ್ ಟಿವಿ 2GB RAM ಮತ್ತು 16GB ಸ್ಟೋರೇಜ್ ಹೊಂದಿದೆ.
VU ಗ್ಲೋಕ್ಯೂಎಲ್ಇಡಿ: VUನ 43-ಇಂಚಿನ ಸ್ಮಾರ್ಟ್ ಟಿವಿ 40% ರಿಯಾಯಿತಿಯಲ್ಲಿ ಲಭ್ಯವಿದೆ. ಈ ಸ್ಮಾರ್ಟ್ ಟಿವಿಯ ಮೇಲೆ ನೀವು ₹4,000 ರಿಯಾಯಿತಿಯನ್ನ ಸಹ ಪಡೆಯುತ್ತೀರಿ. ಮೂಲತಃ ₹35,000 ಬೆಲೆಯ ಇದು ಈಗ ₹20,990ಗೆ ಲಭ್ಯವಿದೆ. ರಿಯಾಯಿತಿಯ ನಂತರ ಇದು ಕೇವಲ ₹16,990ಗೆ ಲಭ್ಯವಿರುತ್ತದೆ.
ಸ್ಯಾಮ್ಸಂಗ್ ಕ್ರಿಸ್ಟಲ್ 4K ವಿಸ್ಟಾ: ಈ ಸ್ಯಾಮ್ಸಂಗ್ ಸ್ಮಾರ್ಟ್ ಟಿವಿಯನ್ನ ₹39,500ಗೆ ಪಟ್ಟಿ ಮಾಡಲಾಗಿದೆ. ಈ ಸ್ಮಾರ್ಟ್ ಟಿವಿಯನ್ನ ಅಮೆಜಾನ್ನಲ್ಲಿ ₹25,490ಗೆ ಪಟ್ಟಿ ಮಾಡಲಾಗಿದ್ದು, ಇದರ ಮೇಲೆ 37% ರಿಯಾಯಿತಿ ನೀಡಲಾಗುತ್ತಿದೆ. ಇದರ ಖರೀದಿಯ ಮೇಲೆ ₹4,000 ರಿಯಾಯಿತಿ ಲಭ್ಯವಿದೆ. ಇದನ್ನ ನೀವು ₹21,490ಗೆ ಖರೀದಿಸಬಹುದು. ಈ ಸ್ಮಾರ್ಟ್ ಟಿವಿ 2GB RAM ಮತ್ತು 8GB ಸ್ಟೋರೇಜ್ ಹೊಂದಿದೆ.
LG UA82 ಸರಣಿ: ಈ 43 ಇಂಚಿನ LG ಸ್ಮಾರ್ಟ್ ಟಿವಿಯನ್ನ ₹46,090ಗೆ ಪಟ್ಟಿ ಮಾಡಲಾಗಿದೆ. ಅಮೆಜಾನ್ ಸೇಲ್ ಸಮಯದಲ್ಲಿ ಇದನ್ನ 37% ರಿಯಾಯಿತಿಯಲ್ಲಿ ₹28,990ಗೆ ಖರೀದಿಸಬಹುದು. ₹4,000 ಬ್ಯಾಂಕ್ ರಿಯಾಯಿತಿ ಕೂಡ ಲಭ್ಯವಿದೆ. ಈ ಆಫರ್ ಪ್ರಯೋಜನ ಪಡೆದರೆ ಕೇವಲ ₹24,990ಗೆ ಲಭ್ಯವಿರುತ್ತದೆ. ಈ ಸ್ಮಾರ್ಟ್ ಟಿವಿ ಮೂರು HDMI ಪೋರ್ಟ್ಗಳು, 2GB RAM ಮತ್ತು 8GB ಸ್ಟೋರೇಜ್ ಒಳಗೊಂಡಿದೆ.