ಆಯುರ್ವೇದಿಕ್ ಕಾಸ್ಮೆಟಿಕ್ಗಳ ಮಾರಾಟದಲ್ಲಿ ಪ್ರಸಿದ್ದಿ ಹೊಂದಿದ ಪತಂಜಲಿ ಬ್ರ್ಯಾಡ್ ಹಲವು ವರ್ಷಗಳಿಂದ ತನ್ನ ಹೆಸರನ್ನು ಭಾರತದ ತುಂಬೆಲ್ಲಾ ಜನಪ್ರಿಯಗೊಳಿಸಿಕೊಂಡಿದೆ. ಇನ್ನು ಈ ಹರ್ಬಲ್ ಕಂಪನಿಗೆ ಸ್ಪರ್ಧೆ ನೀಡಲು ರಿಲಯನ್ಸ್ನ ಟಿರಾ (tira) ನೇತೃತ್ವದಲ್ಲಿ 'ಪುರವೇದ' ಎಂಬ ಹೆಸರಿನ ಆಯುರ್ವೇದಿಕ್ ಪ್ರಾಡಕ್ಟ್ಸ್ ಗಳನ್ನು ಬಿಡುಗಡೆ ಮಾಡಲು ಅಂಬಾನಿ ಕಂಪನಿ ಮುಂದಾಗಿದೆ.

Reliance PuraVeda vs Patanjali: ಭಾರತದಲ್ಲಿ ಬ್ಯೂಟಿ ಪ್ರಾಡಕ್ಟ್ಗಳ ಬ್ರ್ಯಾಂಡ್ಗಳ ಮಾರಾಟವು ಕಳೆದ ಕೆಲವು ವರ್ಷಗಳಿಂದ ಸೆನ್ಸೆಷನ್ ಸೃಷ್ಟಿಸುತ್ತಿದೆ. ಅದರಲ್ಲಿಯೂ ಆಯುರ್ವೇದ ಮಾರುಕಟ್ಟೆಯ ಅಭಿವೃದ್ದಿ ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಈ ಕ್ಷೇತ್ರದಲ್ಲಿ ಇಲ್ಲಿಯವರೆಗೂ ಪತಂಜಲಿ ಸಂಸ್ಥೆಯ ಹೆಸರು ಹೆಚ್ಚು ಫೇಮಸ್ ಆಗಿದೆ. ಬಾಬಾ ರಾಮದೇವ ಮತ್ತು ಅಚಾರ್ಯ ಬಾಲಕೃಷ್ಣ ಅವರು ಆರಂಭಿಸಿದ ಈ ಸಂಸ್ಥೆ, ನೈಸರ್ಗಿಕ ಆಯುರ್ವೇದದ ಹೆಸರಿನಲ್ಲಿ ಜನರಿಗೆ ಕೈಗೆಟುಕುವ ದರದಲ್ಲಿ ಬ್ಯೂಟಿ ಮತ್ತು ಇನ್ನಿತರ ದಿನಬಳಕೆಯ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಆದರೆ ಈ ಕ್ಷೇತ್ರಕ್ಕೆ ಇದೀಗ ಮತ್ತೊಬ್ಬ ದಿಗ್ಗಜ ಉದ್ಯಮಿಯ ಆಗಮನವಾಗಿದೆ – ಆ ಉದ್ಯಮಿ ಬೇರೆ ಯಾರು ಅಲ್ಲ ರಿಲಯನ್ಸ್ ಇಂಡಸ್ಟ್ರೀಸ್ನ ಮುಖ್ಯಸ್ಥ ಮುಖೇಶ್ ಅಂಬಾನಿ.
ಅಂಬಾನಿ ನೇತೃತ್ವದ ರಿಲಯನ್ಸ್ ಸಂಸ್ಥೆ ತನ್ನ ಬ್ಯೂಟಿ ಮತ್ತು ವೆಲ್ನೆಸ್ ಪ್ಲಾಟ್ಫಾರ್ಮ್ ಆಗಿರುವ Tira ಮೂಲಕ ಹೊಸ ಆಯುರ್ವೇದ ಬ್ರ್ಯಾಂಡ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಬ್ರ್ಯಾಂಡ್ ಹೆಸರು "ಪುರವೇದ". ಪುರವೇದ ಎಂಬುದು ನಾಮಮಾತ್ರ ಅಲ್ಲ – ಇದು ರಿಲಯನ್ಸ್ ಸಂಸ್ಥೆಯ ಆಯುರ್ವೇದ ಕ್ಷೇತ್ರದಲ್ಲಿ ಪುರಾತನತೆಯ ಜೊತೆಗೆ ನವೀನತೆಯ ಸಂಯೋಜನೆ ಮಾಡುವ ದೊಡ್ಡ ಹೆಜ್ಜೆಯಾಗಿದೆ. ಪುರವೇದದ ಹೆಸರಿನಲ್ಲಿ 50ಕ್ಕೂ ಹೆಚ್ಚು ಆಯುರ್ವೇದ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಕಾರ್ಯವನ್ನು ಈ ಹೊಸ ಯೋಜನೆ ಕೈಗೊಂಡಿದೆ. ಇವುಗಳಲ್ಲಿ ಮುಖ್ಯವಾಗಿ ಸ್ಕಿನ್ ಕೇರ್, ಹೇರ್ ಕೇರ್ ಮತ್ತು ವೆಲ್ಲ್ನೆಸ್ ವಿಭಾಗದ ನೈಸರ್ಗಿಕ ಆಯುರ್ವೇದ ಸಾಮಗ್ರಿಗಳು ಒಳಗೊಂಡಿವೆ. ಉದಾಹರಣೆಗೆ – ಮುಖದ ಕ್ರೀಮ್ಗಳು, ಬಾಡಿ ಲೋಶನ್ಗಳು, ಶಾಂಪೂಗಳು, ತೈಲಗಳು ಮತ್ತು ಆಯುರ್ವೇದದ ಆಧಾರಿತ ಉಪಚಾರದ ಉತ್ಪನ್ನಗಳು. ಇವೆಲ್ಲವೂ ಪ್ರಾಕೃತಿಕ ಪದಾರ್ಥಗಳಿಂದ ತಯಾರಾಗಲಿವೆ ಎಂದು ಕಂಪನಿ ಭರವಸೆ ನೀಡಿದೆ.
ಇದುವರೆಗೂ ಪತಂಜಲಿ ಆಯುರ್ವೇ ಕಂಪನಿಯು ಮಾರುಕಟ್ಟೆಯಲ್ಲಿ ಒಳ್ಳೆಯ ಹೆಸರು ಗಳಿಸಿ ಜನ ಸಾಮಾನ್ಯರ ನಂಬಿಕೆಗೆ ಪಾತ್ರವಾಗಿದೆ. ಆದರೆ ಪುರವೇದ ಪತಂಜಲಿಗಿಂತಲೂ ಹೆಚ್ಚು ಪ್ರೀಮಿಯಂ ಗ್ರಾಹಕರನ್ನು, ಮುಖ್ಯವಾಗಿ ನಗರ ಪ್ರದೇಶದ ಯುವತಿಯರನ್ನು ಗುರಿಯಾಗಿಸಿಕೊಂಡಿದೆ. ಪ್ಯಾಕೇಜಿಂಗ್, ಉತ್ಪನ್ನದ ಗುಣಮಟ್ಟ, ಮತ್ತು ಡಿಜಿಟಲ್ ಮಾರಾಟ ತಂತ್ರಜ್ಞಾನ ಇವೆಲ್ಲವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮೀಣ ಭಾಗದ ಮಹಿಳೆಯರನ್ನೂ ಸಹ ಆಕರ್ಷಿಸುವ ಉದ್ದೇಶವನ್ನು ಇದು ಹೊಂದಿದೆ. ಇದರಿಂದಾಗಿ ಆಯುರ್ವೇದದ ಸೌಂದರ್ಯವರ್ಧಕ ವಸ್ತುಗಳ ಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ಹೊಸ ರೀತಿಯ ಸ್ಪರ್ಧೆ ಆರಂಭವಾಗಿದೆ. ಪತಂಜಲಿ ಹೇಗೆ ನಾಡು-ನುಡಿ, ಸಂಸ್ಕೃತಿಯ ಹೆಸರಿನಲ್ಲಿ ಜನರನ್ನು ಸೆಳೆದಿತ್ತೋ ಅದೇ ರೀತಿ ರಿಲಯನ್ಸ್ ಪುರವೇದದ ಮೂಲಕ ಹೊಸ ತಲೆಮಾರಿನ ಗ್ರಾಹಕರ ಮನಸ್ಸನ್ನು ಗೆಲ್ಲಲು ಮುಂದಾಗಿದೆ. ಇದಕ್ಕೆ Tira ಆಪ್, Reliance Retail ಅಂಗಡಿಗಳು ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ಗಳು ಒಳ್ಳೆಯ ವೇದಿಕೆಯಾಗಿವೆ.
ಪುರವೇದ, ಪತಂಜಲಿಯಂತೆ ಸಾಂಸ್ಕೃತಿಕವಾಗಿಯಷ್ಟೆ ನಿರ್ಮಿತವಾಗಿಲ್ಲ, ಬದಲಾಗಿ ಇದು ಫ್ಯಾಷನ್, ವೈಜ್ಞಾನಿಕತೆಯ ಮತ್ತು ಆಯುರ್ವೇದದ ಸಂಯೋಜನೆ. ಈ ಮೂಲಕ ಅಂಬಾನಿಯವರು ಆಯುರ್ವೇದವನ್ನು ಒಂದು ಹೊಸ ರೀತಿಯಲ್ಲಿ ಪರಿಚಯಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಕೇವಲ ಆಯುರ್ವೇದದ ಬಗ್ಗೆ ಅಲ್ಲ; ಭಾರತದಲ್ಲಿ ನೈಸರ್ಗಿಕ ಮತ್ತು ಪ್ರಾಕೃತಿಕ ಚಿಕಿತ್ಸೆಯ ಆರ್ಥಿಕತೆಲ್ಲಿ ಬಗ್ಗೆ ಕೂಡ ಆಗುತ್ತಿರುವ ನವೀನ ಬದಲಾವಣೆ. ಪತಂಜಲಿ ಆರಂಭಿಸಿದ್ದ ಹಾದಿಯಲ್ಲಿ ಈಗ ರಿಲಯನ್ಸ್ ನಂತಹ ಕಾರ್ಪೊರೇಟ್ ಸಂಸ್ಥೆಗಳು ಕಾಲಿಡುತ್ತಿವೆ ಎಂದರೆ ಆಯುರ್ವೇದ ಕ್ಷೇತ್ರದ ಮುಂದಿನ ದಶಕವು ಯಾವ ಮಟ್ಟಕ್ಕೆ ಹೋಗಬಹುದು ಎಂಬುದನ್ನು ಊಹಿಸಬಹುದು.