ಜನಸಾಮಾನ್ಯರಿಗೆ ಮತ್ತೊಂದು ಶಾಕ್;‌ ಹೊಸ ಶುಲ್ಕ ನೀತಿಯಿಂದ ಜೇಬಿಗೆ ಕತ್ತರಿ!?

ಇಷ್ಟುದಿನ ಉಚಿತವಾಗಿ ಮನೆ ತ್ಯಾಜ್ಯವನ್ನು ವೀಲೆವಾರಿ ನಿರ್ವಹಣೆ ಮಾಡಲಾಗುತಿತ್ತು. ಆದರೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (BSWML) ಈಗ ಬೆಂಗಳೂರಿನ ನಿವಾಸಿಗಳಿಗೆ ಹೊಸ ಶುಲ್ಕ ವಿಧಿಸಲು ಯೋಚಿಸುತ್ತಿದೆ.

Written by - Puttaraj K Alur | Last Updated : Mar 14, 2025, 03:44 PM IST
  • ಸಿಲಿಕಾನ್‌ ಸಿಟಿ ಬೆಂಗಳೂರಿನ ಜನರ ಜೇಬಿಗೆ ಮತ್ತಷ್ಟು ಹೊರೆಯ ಭೀತಿ
  • ಇನ್ಮುಂದೆ ಮನೆಯ ಕಸದ ವೀಲೆವಾರಿಗೂ ಶುಲ್ಕ ಕಟ್ಟಬೇಕಾಗುತ್ತದೆ
  • ನಗರಾಭಿವೃದ್ಧಿ ಇಲಾಖೆ ಹೊಸ ಶುಲ್ಕ ನೀತಿ ಜಾರಿಗೊಳಿಸುವ ಸಾಧ್ಯತೆ ಇದೆ
ಜನಸಾಮಾನ್ಯರಿಗೆ ಮತ್ತೊಂದು ಶಾಕ್;‌ ಹೊಸ ಶುಲ್ಕ ನೀತಿಯಿಂದ ಜೇಬಿಗೆ ಕತ್ತರಿ!?
ಇನ್ಮುಂದೆ ಕಸಕ್ಕೂ ಶುಲ್ಕ!!

Charges for waste management: ಸಿಲಿಕಾನ್‌ ಸಿಟಿ ಬೆಂಗಳೂರಿನ ಜನರ ಜೇಬಿಗೆ ಮತ್ತಷ್ಟು ಹೊರೆಯ ಭೀತಿ ಎದುರಾಗಿದೆ... ನಗರಾಭಿವೃದ್ಧಿ ಇಲಾಖೆ ಹೊಸ ಶುಲ್ಕ ನೀತಿ ಜಾರಿಗೊಳಿಸುವ ಸಾಧ್ಯತೆ ಇದೆ. ಈಗಾಗಲೇ ಬೆಲೆ ಏರಿಕೆಗಳಿಂದ ತತ್ತರಿಸುತ್ತಿರುವ ಜನಸಾಮಾನ್ಯರಿಗೆ ಶಾಕ್‌ ಮೇಲೆ ಶಾಕ್ ಎದುರಾಗುತ್ತಿವೆ. 

Add Zee News as a Preferred Source

ಹೌದು, ಇನ್ಮುಂದೆ ಮನೆಯ ಕಸದ ವೀಲೆವಾರಿಗೂ ಶುಲ್ಕ ಕಟ್ಟಬೇಕಾಗುತ್ತದೆ. ಹಾಗಾದರೆ ಎಷ್ಟು ಕಟ್ಟಬೇಕು...? ಯಾವ ಮಾನದಂಡಗಳ ಆಧಾರದ ಮೇಲೆ ಶುಲ್ಕ ವಿಧಿಸಲಾಗುವುದು...? ವಾರ್ಷಿಕವಾಗಿ ಪಾವತಿಸಬೇಕಾ..? ಏನು ಈ ಹೊಸ ಶುಲ್ಕ ನೀತಿ... ಇಂತಹ ಹಲವಾರು ಪ್ರಶ್ನೆಗಳು ಮೂಡುತ್ತಿವೆ. 

ಇದನ್ನೂ ಓದಿ: ಗದಗನಲ್ಲಿ ಹೋಳಿ ಹಬ್ಬದ ನಿಮಿತ್ಯ ಅಟ್ಟಹಾಸ ಮೆರೆದ ದುಷ್ಕರ್ಮಿಗಳು..!

ಇಷ್ಟುದಿನ ಉಚಿತವಾಗಿ ಮನೆ ತ್ಯಾಜ್ಯವನ್ನು ವೀಲೆವಾರಿ ನಿರ್ವಹಣೆ ಮಾಡಲಾಗುತಿತ್ತು. ಆದರೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (BSWML) ಈಗ ಬೆಂಗಳೂರಿನ ನಿವಾಸಿಗಳಿಗೆ ಹೊಸ ಶುಲ್ಕ ವಿಧಿಸಲು ಯೋಚಿಸುತ್ತಿದೆ. ಮನೆ ಮನೆಯಿಂದ ಸಂಗ್ರಹಿಸುವ ಘನತ್ಯಾಜ್ಯದ ವೀಲೆವಾರಿಗಾಗಿ ನೂತನ ಶುಲ್ಕ ವಿಧಿಸುವ ಗುರಿ ಹೊಂದಿದೆ.

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ನಗರಾಭಿವೃದ್ಧಿ ಇಲಾಖೆಗೆ ಈಗಾಗಲೇ ಬಳಕೆದಾರ ಶುಲ್ಕ ವಿಧಿಸುವ ಕುರಿತು ಪ್ರಸ್ತಾಪವನ್ನು ಮುಂದಿಟ್ಟಿದ್ದು, ಅಧಿಕೃತ ಆದೇಶ ಬರಬೇಕಿದೆ. ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯು ಕನಿಷ್ಠ 10 ರೂ.ಗಳಿಂದ ಹಿಡಿದು ಗರಿಷ್ಠ 400 ರೂಗಳವರೆಗೆ ಮಾಸಿಕ ಶುಲ್ಕ ವಿಧಿಸುವ ಮೂಲಕ ವಾರ್ಷಿಕವಾಗಿ 600 ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿ ಹೊಂದಿದೆ.

ಇದನ್ನೂ ಓದಿವಿಶ್ವವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ತೀರ್ಮಾನ ಆಗಿಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ 

ಇನ್ನು ಬಳೆಕೆದಾರ ಶುಲ್ಕ ಅಂದರೆ ಸರ್ಕಾರ ಸಾರ್ವಜನಿಕರಿಗಾಗಿ ನೀಡುವ ಸರಕು ಅಥವಾ ಸೇವೆಯಿಂದ ಪ್ರಯೋಜನ ಪಡೆಯುವ ಜನರಿಂದ ನೇರವಾಗಿ ಸಂಗ್ರಹಿಸುವ ಹಣವಾಗಿರುತ್ತದೆ. ಈ ಶುಲ್ಕವನ್ನು ಕಟ್ಟಡಗಳು ವೀಸ್ತಿರ್ಣಗಳ ಆಧಾರದ ಮೇಲೆ ವಿಧಿಸಲಾಗುವುದು. ಹೊಸ ಶುಲ್ಕ ಹೇರುವುದರಿಂದ ಆಸ್ತಿ ತೆರಿಗೆ ಆದಾಯ ಅಧಿಕವಾಗುವ ನೀರಿಕ್ಷೆ ಇದೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ನಗರಾಭಿವೃದ್ಧಿ ಇಲಾಖೆ ಈ ಹೊಸ ಬಳಕೆದಾರ ಶುಲ್ಕ ಅನುಮತಿ ನೀಡಿದ್ದು, ಅಧಿಕೃತ ಆದೇಶಕ್ಕೆ ಕಾಯಬೇಕಿದೆ. ಇದು ಎಪ್ರಿಲ್‌ ತಿಗಳಿನಿಂದ ಜಾರಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News