Bank Holidays April 2022: ಏಪ್ರಿಲ್ ನಲ್ಲಿ 15 ದಿನ ತೆರೆದಿರುವುದಿಲ್ಲ ಬ್ಯಾಂಕ್ ..! ರಜೆಯ ಪೂರ್ಣ ಪಟ್ಟಿ ಇಲ್ಲಿದೆ

Bank Holiday April 2022: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಏಪ್ರಿಲ್ 2022 ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯ ಪ್ರಕಾರ, ಏಪ್ರಿಲ್ 2022 ರಲ್ಲಿ ಒಟ್ಟು 15 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. 

Written by - Ranjitha R K | Last Updated : Mar 22, 2022, 01:37 PM IST
  • ಏಪ್ರಿಲ್ 2022 ರಲ್ಲಿ 15 ದಿನಗಳ ಬ್ಯಾಂಕ್ ರಜೆ
  • ಆರ್‌ಬಿಐ ರಜೆಯ ಪಟ್ಟಿಯನ್ನು ಬಿಡುಗಡೆ ಮಾಡಿದೆ
  • ಶಾಖೆಗೆ ಹೋಗುವ ಮೊದಲು ಸಂಪೂರ್ಣ ಪಟ್ಟಿಯನ್ನು ಪರಿಶೀಲಿಸಿ
Bank Holidays April 2022: ಏಪ್ರಿಲ್ ನಲ್ಲಿ 15 ದಿನ ತೆರೆದಿರುವುದಿಲ್ಲ ಬ್ಯಾಂಕ್ ..! ರಜೆಯ ಪೂರ್ಣ ಪಟ್ಟಿ ಇಲ್ಲಿದೆ  title=
ಏಪ್ರಿಲ್ 2022 ರಲ್ಲಿ 15 ದಿನಗಳ ಬ್ಯಾಂಕ್ ರಜೆ (file photo)

Bank Holiday April 2022: ಮಾರ್ಚ್ ತಿಂಗಳು ಅಂತ್ಯಕ್ಕೆ ಇನ್ನು ಕೇವಲ 9 ದಿನಗಳು ಉಳಿದಿವೆ. ನಂತರ ಏಪ್ರಿಲ್ ಅಂದರೆ ಹೊಸ ಆರ್ಥಿಕ ವರ್ಷವು ಪ್ರಾರಂಭವಾಗುತ್ತದೆ. ಇದರೊಂದಿಗೆ, ಏಪ್ರಿಲ್‌ನಲ್ಲಿ ಅನೇಕ ದಿನ ಬ್ಯಾಂಕ್ ರಜೆ ಇರಲಿದೆ (April bank holiday).  ಯುಗಾದಿ, ಅಂಬೇಡ್ಕರ್ ಜಯಂತಿ, ಹೀಗೆ ಏಪ್ರಿಲ್‌ನಲ್ಲಿ ಒಟ್ಟು 15 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಏಪ್ರಿಲ್ 2022 ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆರ್‌ಬಿಐನ ಈ ಪಟ್ಟಿಯ ಪ್ರಕಾರ (RBI Holiday list),  ಏಪ್ರಿಲ್ ತಿಂಗಳಲ್ಲಿ ವಾರದ ರಜೆ ಸೇರಿದಂತೆ ಒಟ್ಟು 15 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ಇದನ್ನೂ ಓದಿ : LPG Cylinder Price Hike: ಪೆಟ್ರೋಲ್-ಡೀಸೆಲ್ ನಂತರ ದೇಶೀಯ ಎಲ್‌ಪಿಜಿ ಬೆಲೆಯಲ್ಲಿ ಭಾರೀ ಏರಿಕೆ, ಹೊಸ ಬೆಲೆ ಇಂದಿನಿಂದ ಅನ್ವಯ!

ಆರ್‌ಬಿಐ ಪಟ್ಟಿ ಬಿಡುಗಡೆ ಮಾಡಿದೆ :
ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ರಜಾದಿನಗಳ ಪಟ್ಟಿಯ ಪ್ರಕಾರ, ಬ್ಯಾಂಕಿಂಗ್ ರಜಾದಿನಗಳು ದೇಶಾದ್ಯಂತ ಒಂದೇ ರೀತಿ ಇರುವುದಿಲ್ಲ. ಅನೇಕ ರಜಾದಿನಗಳು ವಿವಿಧ ರಾಜ್ಯಗಳಲ್ಲಿ ಅಥವಾ ಆ ರಾಜ್ಯಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಆಚರಿಸಲಾಗುವ ಹಬ್ಬಗಳನ್ನು ಅವಲಂಬಿಸಿರುತ್ತದೆ. ಈ ಎಲ್ಲಾ ರಜಾದಿನಗಳೂ ಎಲ್ಲಾ ರಾಜ್ಯಗಳಲ್ಲಿಯೂ ಅನ್ವಯಿಸುವುದಿಲ್ಲ (Bank holidays). 

ರಜಾದಿನಗಳ ಪಟ್ಟಿಯನ್ನು ಪರಿಶೀಲಿಸಿ :

ಏಪ್ರಿಲ್ 1 - ಬ್ಯಾಂಕ್ ಖಾತೆಗಳ ಅನ್ಯುವಲ್ ಕ್ಲೋಸಿಂಗ್  
ಏಪ್ರಿಲ್ 2 - ಗುಡಿ ಪಾಡ್ವಾ / ಯುಗಾದಿ ಹಬ್ಬ / ತೆಲುಗು ಹೊಸ ವರ್ಷ / ( ಬೇಲಾಪುರ್, ಬೆಂಗಳೂರು, ಚೆನ್ನೈ, ಹೈದರಾಬಾದ್, ಇಂಫಾಲ್, ಜಮ್ಮು , ಮುಂಬೈ, ನಾಗ್ಪುರ, ಪಣಜಿ ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ ರಜೆ)
ಏಪ್ರಿಲ್ 3 - ಭಾನುವಾರ ( ವಾರದ ರಜೆ)
ಏಪ್ರಿಲ್ 4 - ಸರಿಹುಲ್‌ ( ರಾಂಚಿಯಲ್ಲಿ ಬ್ಯಾಂಕ್ ರಜೆ )
ಏಪ್ರಿಲ್ 5 - ಬಾಬು ಜಗಜೀವನ್ ರಾಮ್ ಜನ್ಮದಿನ  ( ಹೈದರಾಬಾದ್‌ನಲ್ಲಿ ಬ್ಯಾಂಕ್ ರಜೆ ) 
ಏಪ್ರಿಲ್ 9 - ಶನಿವಾರ (2  ನೇ ಶನಿವಾರ )
ಏಪ್ರಿಲ್ 10 - ಭಾನುವಾರ (ವಾರದ ರಜೆ)
ಏಪ್ರಿಲ್ 14 - ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ/ ಮಹಾವೀರ ಜಯಂತಿ/ ಬೈಸಾಖಿ/ ತಮಿಳು ಹೊಸ ವರ್ಷ/ ಚೈರೋಬಾ, ಬಿಜು ಹಬ್ಬ/ ಬೋಹರ್ ಬಿಹು -( ಶಿಲ್ಲಾಂಗ್ ಮತ್ತು ಶಿಮ್ಲಾ ಹೊರತುಪಡಿಸಿ ಇತರ ಸ್ಥಳಗಳಲ್ಲಿ ಬ್ಯಾಂಕ್ ರಜೆ ) 
15 ಏಪ್ರಿಲ್ - ಶುಭ ಶುಕ್ರವಾರ / ಬಂಗಾಳಿ ಹೊಸ ವರ್ಷ / ಹಿಮಾಚಲ ದಿನ / ವಿಷು / ಬೋಹಾಗ್ ಬಿಹು ( ಜೈಪುರ, ಜಮ್ಮು ಮತ್ತು ಶ್ರೀನಗರ ಹೊರತುಪಡಿಸಿ ಇತರ ಸ್ಥಳಗಳಲ್ಲಿ ಬ್ಯಾಂಕ್ ರಜೆ ) 
16 ಏಪ್ರಿಲ್ - ಬೊಹಾಗ್ ಬಿಹು ( ಗುವಾಹಟಿಯಲ್ಲಿ ಬ್ಯಾಂಕ್ ರಜೆ)
17 ಏಪ್ರಿಲ್ - ಭಾನುವಾರ (ವಾರದ ರಜೆ) 
21 ಏಪ್ರಿಲ್ - ಗಡಿಯಾ ಪೂಜೆ ( ಅಗರ್ತಲಾದಲ್ಲಿ ಬ್ಯಾಂಕ್ ರಜೆ)
23 ಏಪ್ರಿಲ್ - ಶನಿವಾರ (ತಿಂಗಳ ನಾಲ್ಕನೇ ಶನಿವಾರ)
24 ಏಪ್ರಿಲ್ - ಭಾನುವಾರ (ವಾರದ ರಜೆ)
29 ಏಪ್ರಿಲ್ - ಶಾಬ್-ಎ-ಖಾದ್ರ್/ಜುಮಾತ್-ಉಲ್-ವಿದಾ ( ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್ ರಜೆ)

ಇದನ್ನೂ ಓದಿ :  Tax Saving FD: ಬಡ್ಡಿದರ ಹೆಚ್ಚಿಸಿ ಗ್ರಾಹಕರಿಗೆ ಉಡುಗೊರೆ ನೀಡಿದ SBI, ಹೀಗೆ ಖಾತೆ ತೆರೆಯಿರಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News