)
Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಶುಕ್ರವಾರ (ಮೇ 15) ಭರ್ಜರಿ ಏರಿಕೆ ಕಂಡಿದೆ. ಕಳೆದ ಕೆಲವು ದಿನಗಳಿಂದ ಕುಸಿತ ಕಂಡಿದ್ದ ಅಡಿಕೆ ಧಾರಣೆ ಚೇತರಿಕೆ ಕಂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಡಿಕೆ ದರದಲ್ಲಿ ಏರಿಕೆಯಿಂದ ಬೆಳೆಗಾರದ ಮೊಗದಲ್ಲಿ ಮಂದಹಾಸ ಮೂಡಿದೆ.
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ಅಡಿಕೆ ಕ್ವಿಂಟಾಲ್ಗೆ ₹56,000ಕ್ಕೂ ಹೆಚ್ಚಿನ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿಇತ್ತೀಚಿನ (15-05-2026) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ರಾಜ್ಯದ ವಿವಿಧ ಎಪಿಎಂಸಿ ಮಾರುಕಟ್ಟೆಗಳಲ್ಲಿ ಮೇ 15ರಂದು ಅಡಿಕೆ ದರದಲ್ಲಿ ಗಮನಾರ್ಹ ಏರಿಳಿತ ಕಂಡುಬಂದಿದೆ. ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಎಪಿಎಂಸಿಯಲ್ಲಿ ‘ಆಪಿ’ ಅಡಿಕೆಗೆ ಗರಿಷ್ಠ ₹57,169 ಬೆಲೆ ದಾಖಲಾಗಿದ್ದು, ಇದು ರಾಜ್ಯದಲ್ಲೇ ಅತಿ ಹೆಚ್ಚು ದರವಾಗಿ ಗಮನಸೆಳೆದಿದೆ.
ಸಿರಸಿ ಎಪಿಎಂಸಿಯಲ್ಲಿ ರಾಶಿ ಅಡಿಕೆಗೆ ಗರಿಷ್ಠ ₹53,399 ಹಾಗೂ ಮಾದರಿ ದರ ₹52,476 ದಾಖಲಾಗಿದೆ. ಸಿದ್ದಾಪುರ ಎಪಿಎಂಸಿಯಲ್ಲೂ ರಾಶಿ ಅಡಿಕೆ ಉತ್ತಮ ಬೇಡಿಕೆ ಪಡೆದಿದ್ದು, ಗರಿಷ್ಠ ₹53,099 ದರ ಕಂಡಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಎಪಿಎಂಸಿಯಲ್ಲಿ ರಾಶಿ ಅಡಿಕೆಗೆ ₹49,178 ಸ್ಥಿರ ದರ ದಾಖಲಾಗಿದೆ.
ದಕ್ಷಿಣ ಕನ್ನಡ ಭಾಗದ ಪುಟ್ಟೂರು, ಬಂಟ್ವಾಳ ಹಾಗೂ ಬೆಳ್ತಂಗಡಿ ಎಪಿಎಂಸಿಗಳಲ್ಲೂ ಹೊಸ ತಳಿಯ ಅಡಿಕೆಗೆ ಉತ್ತಮ ಬೆಲೆ ಲಭಿಸಿದೆ. ಪುಟ್ಟೂರು ಎಪಿಎಂಸಿಯಲ್ಲಿ ಹೊಸ ತಳಿಯ ಅಡಿಕೆಗೆ ಗರಿಷ್ಠ ₹47,500 ಹಾಗೂ ಮಾದರಿ ದರ ₹38,500 ದಾಖಲಾಗಿದೆ. ಬಂಟ್ವಾಳದಲ್ಲಿ ಇದೇ ತಳಿಗೆ ₹47,500 ಗರಿಷ್ಠ ದರ ಸಿಕ್ಕಿದೆ.
ಕುಂದಾಪುರ ಮತ್ತು ಹೊನ್ನಾವರ ಮಾರುಕಟ್ಟೆಗಳಲ್ಲಿ ರೈಪ್ ಅಡಿಕೆಗೆ ಉತ್ತಮ ಬೇಡಿಕೆ ಕಂಡುಬಂದಿದ್ದು, ಕ್ರಮವಾಗಿ ₹47,000 ಮತ್ತು ₹39,000 ಗರಿಷ್ಠ ದರ ದಾಖಲಾಗಿದೆ. ಒಟ್ಟಾರೆ ರಾಜ್ಯದ ಪ್ರಮುಖ ಎಪಿಎಂಸಿಗಳಲ್ಲಿ ರಾಶಿ, ಚಾಳಿ, ಕೆಂಪುಗೊಟು ಹಾಗೂ ತಟ್ಟಿಬೆಟ್ಟೆ ಅಡಿಕೆಗಳಿಗೆ ಉತ್ತಮ ಮಾರುಕಟ್ಟೆ ಬೆಲೆ ಮುಂದುವರಿದಿದೆ.
| Market | Date | Type | Minimum price | Maximum price | Modal price |
|---|---|---|---|---|---|
| Bantwala APMC | 14/05/2026 | New Variety | ₹27,000 | ₹47,500 | ₹29,300 |
| Bantwala APMC | 14/05/2026 | Cqca | ₹17,000 | ₹27,000 | ₹25,000 |
| Belthangdi APMC | 14/05/2026 | Cqca | ₹22,000 | ₹36,500 | ₹26,500 |
| Belthangdi APMC | 14/05/2026 | New Variety | ₹28,500 | ₹47,000 | ₹29,500 |
| Channagiri APMC | 14/05/2026 | Rashi | ₹45,500 | ₹54,299 | ₹49,826 |
| Davangere APMC | 14/05/2026 | Rashi | ₹24,462 | ₹24,462 | ₹24,462 |
| Davangere APMC | 14/05/2026 | Sippegotu | ₹13,000 | ₹13,000 | ₹13,000 |
| Honnali APMC | 14/05/2026 | Rashi | ₹22,000 | ₹24,500 | ₹22,851 |
| Honnavar APMC | 14/05/2026 | Ripe | ₹37,000 | ₹39,000 | ₹38,000 |
| Hosadurga APMC | 14/05/2026 | Podi | ₹25,000 | ₹25,500 | ₹25,500 |
| Kundapura APMC | 14/05/2026 | Ripe | ₹40,000 | ₹47,000 | ₹45,000 |
| Piriya Pattana APMC | 14/05/2026 | Sippegotu | ₹13,000 | ₹13,000 | ₹13,000 |
| Piriya Pattana APMC | 14/05/2026 | Red | ₹25,000 | ₹25,000 | ₹25,000 |
| Puttur APMC | 14/05/2026 | New Variety | ₹30,000 | ₹47,500 | ₹38,500 |
| Puttur APMC | 14/05/2026 | Cqca | ₹20,000 | ₹34,500 | ₹29,750 |
| Shimoga(Theertahalli) APMC | 14/05/2026 | Rashi | ₹49,178 | ₹49,178 | ₹49,178 |
| Shimoga(Theertahalli) APMC | 14/05/2026 | Other | ₹26,835 | ₹27,500 | ₹27,500 |
| Siddapur APMC | 14/05/2026 | Kempogutu | ₹28,989 | ₹35,700 | ₹33,769 |
| Siddapur APMC | 14/05/2026 | Bilegotu | ₹26,269 | ₹35,899 | ₹29,699 |
| Siddapur APMC | 14/05/2026 | Rashi | ₹49,089 | ₹53,099 | ₹52,299 |
| Siddapur APMC | 14/05/2026 | Cqca | ₹23,199 | ₹31,869 | ₹28,199 |
| Siddapur APMC | 14/05/2026 | Tattibettee | ₹40,099 | ₹49,099 | ₹43,699 |
| Siddapur APMC | 14/05/2026 | Chali | ₹39,089 | ₹47,100 | ₹46,399 |
| Sirsi APMC | 14/05/2026 | Bette | ₹36,089 | ₹47,699 | ₹43,150 |
| Sirsi APMC | 14/05/2026 | Kempogutu | ₹32,311 | ₹35,899 | ₹34,902 |
| Sirsi APMC | 14/05/2026 | Bilegotu | ₹27,899 | ₹37,223 | ₹33,260 |
| Sirsi APMC | 14/05/2026 | Rashi | ₹51,699 | ₹53,399 | ₹52,476 |
| Sirsi APMC | 14/05/2026 | Chali | ₹44,799 | ₹48,391 | ₹46,499 |
| Sulya APMC | 14/05/2026 | Cqca | ₹20,000 | ₹33,000 | ₹27,000 |
| Yellapur APMC | 14/05/2026 | Ripe | ₹37,619 | ₹48,099 | ₹46,899 |
| Yellapur APMC | 14/05/2026 | Bilegotu | ₹23,612 | ₹36,799 | ₹33,212 |
| Yellapur APMC | 14/05/2026 | Rashi | ₹46,510 | ₹55,699 | ₹53,919 |
| Yellapur APMC | 14/05/2026 | Kempogutu | ₹24,612 | ₹37,399 | ₹36,101 |
| Yellapur APMC | 14/05/2026 | api | ₹56,159 | ₹57,169 | ₹56,399 |
| Yellapur APMC | 14/05/2026 | Tattibettee | ₹38,099 | ₹49,799 | ₹47,169 |
| Yellapur APMC | 14/05/2026 | Cqca | ₹21,069 | ₹32,900 | ₹28,899 |
ನಿಮ್ಮ Zee Kannada News ವೆಬ್ಸೈಟ್ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಿಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್ಲೋಡ್ ಮಾಡಿಕೊಳ್ಳಿ…