ಆರ್ ಬಿಐ ನಿರ್ಧಾರದ ಬೆನ್ನಲ್ಲೇ ಎಲ್ಲಾ ರೀತಿಯ ಸಾಲದ ಮೇಲಿನ ಬಡ್ಡಿದರ ಕಡಿಮೆ ಮಾಡಿದ ಬ್ಯಾಂಕ್ ಗಳು! ಲೋನ್ ಪಡೆದವರಿಗೆ ಭರ್ಜರಿ ಲಾಭ

Repo Rate Cut: ಆರ್‌ಬಿಐ ಘೋಷಣೆಯ ನಂತರ, ನಾಲ್ಕು ಸಾರ್ವಜನಿಕ ವಲಯದ ಬ್ಯಾಂಕುಗಳು ರೆಪೊ ಲಿಂಕ್ಡ್ ಬೆಂಚ್‌ಮಾರ್ಕ್ ಸಾಲ ದರವನ್ನು ಕಡಿಮೆ ಮಾಡಿದ್ದು, ತಮ್ಮ ಕೋಟ್ಯಂತರ ಗ್ರಾಹಕರಿಗೆ ಪರಿಹಾರ ನೀಡಿದೆ.

Written by - Ranjitha R K | Last Updated : Apr 10, 2025, 12:06 PM IST
  • ಸತತ ಎರಡನೇ ಬಾರಿಗೆ ರೆಪೊ ದರ ಕಡಿತಗೊಳಿಸಿದ ಆರ್ ಬಿಐ
  • ಈ ಕಡಿತದ ನಂತರ, ರೆಪೊ ದರ ಶೇಕಡಾ 6 ಕ್ಕೆ ಇಳಿದಿದೆ.
  • ಹೊಸ ಮತ್ತು ಹಳೆಯ ಗ್ರಾಹಕರಿಗೆ ಲಾಭ
ಆರ್ ಬಿಐ ನಿರ್ಧಾರದ ಬೆನ್ನಲ್ಲೇ ಎಲ್ಲಾ ರೀತಿಯ ಸಾಲದ ಮೇಲಿನ ಬಡ್ಡಿದರ ಕಡಿಮೆ ಮಾಡಿದ ಬ್ಯಾಂಕ್ ಗಳು! ಲೋನ್ ಪಡೆದವರಿಗೆ ಭರ್ಜರಿ ಲಾಭ

Repo Rate Cut : ಫೆಬ್ರವರಿ ನಂತರ, ಏಪ್ರಿಲ್‌ನಲ್ಲಿಯೂ ಸಹ, ಆರ್‌ಬಿಐ ಸತತ ಎರಡನೇ ಬಾರಿಗೆ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿದೆ. ಬುಧವಾರ ಬೆಳಿಗ್ಗೆ ರಿಸರ್ವ್ ಬ್ಯಾಂಕ್ ರೆಪೊ ದರದಲ್ಲಿ ಕಡಿತವನ್ನು ಘೋಷಿಸಿತು. ಈ ಕಡಿತದ ನಂತರ, ರೆಪೊ ದರ ಶೇಕಡಾ 6 ಕ್ಕೆ ಇಳಿದಿದೆ. ಆರ್‌ಬಿಐ ಘೋಷಣೆಯ ನಂತರ, ನಾಲ್ಕು ಸಾರ್ವಜನಿಕ ವಲಯದ ಬ್ಯಾಂಕುಗಳು ರೆಪೊ ಲಿಂಕ್ಡ್ ಬೆಂಚ್‌ಮಾರ್ಕ್ ಸಾಲ ದರವನ್ನು ಕಡಿಮೆ ಮಾಡಿದ್ದು, ತಮ್ಮ ಕೋಟ್ಯಂತರ ಗ್ರಾಹಕರಿಗೆ ಪರಿಹಾರ ನೀಡಿದೆ.

Add Zee News as a Preferred Source

ಹೊಸ ಮತ್ತು ಹಳೆಯ ಗ್ರಾಹಕರಿಗೆ ಪರಿಹಾರ :
ಬುಧವಾರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಪ್ರಮುಖ ಬಡ್ಡಿದರವನ್ನು ಕಡಿತಗೊಳಿಸಿದ ಕೆಲವೇ ಗಂಟೆಗಳಲ್ಲಿ, ನಾಲ್ಕು ಸಾರ್ವಜನಿಕ ವಲಯದ ಬ್ಯಾಂಕುಗಳು - ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ), ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್ ಮತ್ತು ಯುಕೊ ಬ್ಯಾಂಕ್ - ತಮ್ಮ ಸಾಲದ ಬಡ್ಡಿದರಗಳನ್ನು 35 ಬೇಸಿಸ್ ಪಾಯಿಂಟ್‌ಗಳವರೆಗೆ ಕಡಿತಗೊಳಿಸುವುದಾಗಿ ಘೋಷಿಸಿವೆ. ಬ್ಯಾಂಕುಗಳ ಈ ಕ್ರಮವು ಹಳೆಯ ಮತ್ತು ಹೊಸ ಸಾಲ ಪಡೆಯುವ ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ. ಶೀಘ್ರದಲ್ಲೇ ಇತರ ಬ್ಯಾಂಕುಗಳು ಸಹ ಇದೇ ರೀತಿಯ ಘೋಷಣೆಗಳನ್ನು ಮಾಡಿ ಗ್ರಾಹಕರಿಗೆ ಪರಿಹಾರ ನೀಡುವ ನಿರೀಕ್ಷೆಯಿದೆ.

ಇದನ್ನೂ ಓದಿ : ರೆಪೊ ದರ ಮಾತ್ರವಲ್ಲ, ಯುಪಿಐ ಪಾವತಿ ಮಿತಿಯಲ್ಲಿಯೂ ಬದಲಾವಣೆ !ಸಾರ್ವಜನಿಕರ ಅನುಕೂಲಕ್ಕಾಗಿ ಬಹು ದೊಡ್ಡ ನಿರ್ಧಾರ ಪ್ರಕಟಿಸಿದ ಆರ್‌ಬಿಐ!

ಇಂದಿನಿಂದ ಹೊಸ ಬಡ್ಡಿದರ ಜಾರಿ :
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರವನ್ನು ಕಡಿತಗೊಳಿಸಿದ ನಂತರ ಬಡ್ಡಿದರಗಳಲ್ಲಿ ಈ ಬದಲಾವಣೆ ಮಾಡಲಾಗಿದೆ ಎಂದು ಸಾರ್ವಜನಿಕ ವಲಯದ ಬ್ಯಾಂಕುಗಳು ಪ್ರತ್ಯೇಕ ನಿಯಂತ್ರಕ ಫೈಲಿಂಗ್‌ಗಳಲ್ಲಿ ತಿಳಿಸಿವೆ. ಚೆನ್ನೈ ಮೂಲದ ಇಂಡಿಯನ್ ಬ್ಯಾಂಕ್ ತನ್ನ ರೆಪೊ-ಲಿಂಕ್ಡ್ ಬೆಂಚ್‌ಮಾರ್ಕ್ ಸಾಲ ದರವನ್ನು (RBLR) ಏಪ್ರಿಲ್ 11 ರಿಂದ 35 ಬೇಸಿಸ್ ಪಾಯಿಂಟ್‌ಗಳಿಂದ 8.70 ಪ್ರತಿಶತಕ್ಕೆ ಇಳಿಸಲಾಗುವುದು ಎಂದು ಹೇಳಿದೆ. ಏತನ್ಮಧ್ಯೆ, PNB ತನ್ನ RBLR ದರವನ್ನು ಏಪ್ರಿಲ್ 10 ರಿಂದ 9.10 ಪ್ರತಿಶತದಿಂದ 8.85 ಪ್ರತಿಶತಕ್ಕೆ ಇಳಿಸಿದೆ.

ಬ್ಯಾಂಕ್ ಆಫ್ ಇಂಡಿಯಾದ ಹೊಸ ರೆಪೊ-ಲಿಂಕ್ಡ್ ಬೆಂಚ್‌ಮಾರ್ಕ್ ಸಾಲ ದರವು ಶೇಕಡಾ 8.85 ಆಗಿದೆ.ಇದು ಮೊದಲು ಶೇಕಡಾ 9.10 ರಷ್ಟಿತ್ತು. ಹೊಸ ದರಗಳು ಬುಧವಾರದಿಂದಲೇ ಜಾರಿಗೆ ಬಂದಿವೆ ಎಂದು ಬ್ಯಾಂಕ್ ಆಫ್ ಇಂಡಿಯಾ (ಬಿಒಐ) ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ. ಗುರುವಾರದಿಂದ ರೆಪೊ-ಲಿಂಕ್ಡ್ ಬಡ್ಡಿ (RBLR) ದರವನ್ನು ಶೇ 8.8 ಕ್ಕೆ ಇಳಿಸಿರುವುದಾಗಿ ಯುಕೋ ಬ್ಯಾಂಕ್ ತಿಳಿಸಿದೆ. 

ಇದನ್ನೂ ಓದಿ : ಎಲ್ಲರಂಥಲ್ಲ ಆನಂದ್ ಮಹೀಂದ್ರ !313030000000 ಕೋಟಿ ಸಂಪತ್ತಿನ ಒಡೆಯನಾಗಿದ್ದರೂ ಅವರು ನೆಲೆಸಿರುವುದು ಹಳೆಯದಾದ ಈ ಮನೆಯಲ್ಲಿಯೇ !

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News