)
Atal Pension Yojana: ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗಾಗಿ ವೃದ್ಧಾಪ್ಯದಲ್ಲಿ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು ನೆರವಾಗುವ ನಿಟ್ಟಿನಲ್ಲಿ ಸುರಕ್ಷಿತ ಆರ್ಥಿಕ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 'ಅಟಲ್ ಪಿಂಚಣಿ ಯೋಜನೆಯನ್ನು ಆರಂಭಿಸಿದ್ದು, ಇದರಲ್ಲಿ ಹೂಡಿಕೆ ಮಾಡುವುದರಿಂದ 60ವರ್ಷದ ಬಳಿಕ ಮಾಸಿಕ ₹1,000 ರಿಂದ ₹5,000ರವರೆಗೆ ಸ್ಥಿರ ಪಿಂಚಣಿ ಲಭ್ಯವಾಗಲಿದೆ.
ಹೌದು, ದಿನಗೂಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗಾಗಿ ಜಾರಿಗೊಳಿಸಲಾಗಿರುವ 'ಅಟಲ್ ಪಿಂಚಣಿ ಯೋಜನೆ'ಯಲ್ಲಿ ದುಡಿಯುವ ಸಮಯದಲ್ಲಿ 18 ರಿಂದ 40 ವರ್ಷದೊಳಗಿನ ಭಾರತೀಯ ನಾಗರೀಕರು ಮಾಸಿಕ ಪ್ರೀಮಿಯಂ ಭರಿಸಬೇಕಾಗುತ್ತದೆ.
ಉದಾಹರಣೆಗೆ:- 60ವರ್ಷದಲ್ಲಿ ₹5,000ಪಿಂಚಣಿ ಪಡೆಯಲು 18ವರ್ಷದವರು ಮಾಸಿಕ ₹210 ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಗಮನಾರ್ಹವಾಗಿ, ಪ್ರೀಮಿಯಂ ಪ್ರಮಾಣವು ಅರ್ಜಿದಾರರ ವಯಸ್ಸನ್ನು ಆಧರಿಸಿರುತ್ತದೆ.
ಪಾವತಿ:
ಅಟಲ್ ಪಿಂಚಣಿ ಯೋಜನೆಯಲ್ಲಿ ತಿಂಗಳಿಗೊಮ್ಮೆ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ.
ಅಟಲ್ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಅಟಲ್ ಪಿಂಚಣಿ ಯೋಜನೆಗೆ ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ನಲ್ಲಿ ಕೆಲವೇ ಕೆಲವು ಹಂತಗಳನ್ನು ಅನುಸರಿಸಿ ಇದಕ್ಕೆ ಅರ್ಜಿ ಸಲ್ಲಿಸಬಹುದು.
* ಇದಕ್ಕಾಗಿ ಮೊದಲಿಗೆ ರಾಷ್ಟ್ರೀಯ ಪೆನ್ಷನ್ ಸಿಸ್ಟಮ್ ವೆಬ್ಸೈಟ್ (https://enps.nsdl.com) ಗೆ ಭೇಟಿ ನೀಡಿ.
ನಂತರ ಎಪಿವೈ (APY) ಆಯ್ಕೆಗೆ ಹೋಗಿ ಇದರಲ್ಲಿ ಹೊಸ ನೋಂದಣಿಯನ್ನು ಆರಿಸಿ.
* ಬರ್ತ್ ಸರ್ಟಿಫಿಕೇಟ್, ಆಧಾರ್ ಕಾರ್ಡ್, 10ನೇ ತರಗತಿ ಮಾರ್ಕ್ಕಾರ್ಡ್, ಡಿಎಲ್ ನೀಡಿ ನಾಮಿನಿ ವಿವರಗಳನ್ನು ಭರ್ತಿ ಮಾಡಿ ಆಧಾರ್ ಒಟಿಪಿ ದೃಢೀಕರಣದ ಮೂಲಕ ಎಪಿವೈ ಗೆ ಅರ್ಜಿ ಸಲ್ಲಿಸಿ.