ನೀವು ಕೂಡ ಆಗಾಗ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ದೇಶದಲ್ಲೇ ಮೊದಲ ಬಾರಿಗೆ ರೈಲ್ವೆ ಇಲಾಖೆ ರೈಲಿನೊಳಗೆ ಎಟಿಎಂ ಅಳವಡಿಸಿದೆ. ಈ ಎಟಿಎಂ ಅನ್ನು ಮಂಗಳವಾರ ಯಶಸ್ವಿಯಾಗಿ ಪ್ರಾಯೋಗಿಕವಾಗಿ ಬಳಸಲಾಯಿತು.ಈ ಎಟಿಎಂ ಅನ್ನು ಪಂಚವಟಿ ಎಕ್ಸ್‌ಪ್ರೆಸ್‌ನ ಎಸಿ ಕೋಚ್‌ನಲ್ಲಿ ಅಳವಡಿಸಲಾಗಿತ್ತು.
ಚಲಿಸುವ ರೈಲಿನಲ್ಲಿಯೂ ಹಣ ವಿಡ್ರಾ ಮಾಡಬಹುದು :
ರೈಲಿನಲ್ಲಿ ಎಟಿಎಂ ಅಳವಡಿಸುವ ಪ್ರಯೋಗ ಚೆನ್ನಾಗಿ ನಡೆಯಿತು ಎಂದು ಭಾರತೀಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ದಾರಿಯಲ್ಲಿ ಕೆಲವು ಸ್ಥಳಗಳನ್ನು ಹೊರತುಪಡಿಸಿ, ಉಳಿದೆಲ್ಲ ಸ್ಥಳಗಳಲ್ಲಿ ಎಟಿಎಂ ಸರಿಯಾಗಿ ಕಾರ್ಯ ನಿರ್ವಹಿಸಿದೆ. ಯಾವುದೇ ನೆಟ್‌ವರ್ಕ್ ಇಲ್ಲದ ಮತ್ತು ಕೆಲವು ಸುರಂಗಗಳಿದ್ದ ಪ್ರದೇಶಗಳಲ್ಲಿ ಮಾತ್ರ ಮೆಷಿನ್ ಸಿಗ್ನಲ್ ಕಳೆದುಕೊಂಡಿತು. ಆದರೆ ಉಳಿದ ಎಲ್ಲಾ ಕಡೆಗಳಲ್ಲಿ ಎಟಿಎಂ ಸರಿಯಾಗಿಯೇ ಕಾರ್ಯ ನಿರ್ವಹಿಸಿದೆ. ಜನರು ಕೂಡಾ ಇದನ್ನು ಇಷ್ಟಪಟ್ಟಿದ್ದಾರೆ ಎಂದು ಭೂಸಾವಲ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಇತಿ ಪಾಂಡೆ ಹೇಳಿದ್ದಾರೆ.
ಇದನ್ನೂ ಓದಿ : Arecanut today price: ಶಿವಮೊಗ್ಗದಲ್ಲಿ ಅಡಿಕೆ 56 ಸಾವಿರ ರೂ. ಗಡಿ ದಾಟಿದ ಅಡಿಕೆ ಧಾರಣೆ
ಎಟಿಎಂ ಸ್ಥಾಪಿಸುವ ಕಾರ್ಯ ತಕ್ಷಣವೇ ಜಾರಿ :
ಸುದ್ದಿಯ ಪ್ರಕಾರ, ಈ ATM ರೈಲ್ವೆಯ ಭೂಸಾವಲ್ ವಿಭಾಗ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ (BOM) ನಡುವಿನ ಪಾಲುದಾರಿಕೆಯಾಗಿದೆ. ಇದನ್ನು ಇನ್ನೋವೆಟೆಡ್ ಮತ್ತು ನಾನ್ ಫೇರ್ ರೆವೆನ್ಯೂ ಐಡಿಯಾಸ್ ಸ್ಕೀಮ್ (INFRIS) ಅಡಿಯಲ್ಲಿ ಜಾರಿಗೆ ತರಲಾಗಿದೆ. ಭೂಸಾವಲ್ ವಿಭಾಗ ಆಯೋಜಿಸಿದ್ದ INFRIS ಸಭೆಯಲ್ಲಿ ರೈಲುಗಳಲ್ಲಿ ಎಟಿಎಂಗಳನ್ನು ಸ್ಥಾಪಿಸುವ ಕಲ್ಪನೆ ಮೊದಲು ಬಂದಿತ್ತು. ಈ ಆಲೋಚನೆ ಬಗ್ಗೆ ಚರ್ಚೆಯಾಗುತ್ತಿದ್ದ ಬೆನ್ನಲೇ ಇದನ್ನು ಜಾರಿಗೂ ತರಲಾಗಿದೆ.
ಎಸಿ ಕೋಚ್‌ನಲ್ಲಿ ಎಟಿಎಂ :
ಎಟಿಎಂ ಯಂತ್ರವನ್ನು ಎಸಿ ಕೋಚ್‌ನಲ್ಲಿ ಅಳವಡಿಸಲಾಗಿದೆ.ಆದರೆ ರೈಲಿನ ಎಲ್ಲಾ 22 ಬೋಗಿಗಳು ಒಳಗಿನಿಂದ ಪರಸ್ಪರ ಸಂಪರ್ಕ ಹೊಂದಿರುವುದರಿಂದ ಇದನ್ನು ಎಲ್ಲರೂ ಸುಲಭವಾಗಿ ಬಳಸಬಹುದು. ಈ ಮೂಲಕ ಪ್ರಯಾಣದಲ್ಲಿರುವಾಗಲೇ ಪ್ರಯಾಣಿಕರು ಸುಲಭವಾಗಿ ಹಣವನ್ನು ಹಿಂಪಡೆಯಬಹುದು, ಚೆಕ್ ಪುಸ್ತಕಗಳನ್ನು ಆರ್ಡರ್ ಮಾಡಬಹುದು ಮತ್ತು ಸ್ಟೇಟ್ ಮೆಂಟ್ ಗಳನ್ನೂ ಪಡೆಯಬಹುದು.
24 ಗಂಟೆಗಳ ಕಾಲ ಸಿಸಿಟಿವಿ ಮೇಲ್ವಿಚಾರಣೆ :
ರೈಲುಗಳಲ್ಲಿ ಅಳವಡಿಸಲಾದ ಎಟಿಎಂ ಸೇವೆ ಇಷ್ಟವಾದರೆ ಅದನ್ನು ಇತರ ಪ್ರಮುಖ ರೈಲುಗಳಿಗೂ ವಿಸ್ತರಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತೆಗಾಗಿ, ಎಟಿಎಂ ಕಿಯೋಸ್ಕ್ ಅನ್ನು ಮುಚ್ಚಬಹುದು ಮತ್ತು ಸಿಸಿಟಿವಿ ಮೂಲಕ ದಿನದ 24 ಗಂಟೆಗಳ ಕಾಲ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









