ಚಿನ್ನದ ದರಗಳ ಕುರಿತು ಬಾಬಾ ವಂಗಾ ಭವಿಷ್ಯವಾಣಿ : ಆಭರಣ ಪ್ರಿಯರು ಒಮ್ಮೆ ಗಮನಿಸಿ ನೋಡಿ

ಹೂಡಿಕೆದಾರರ ಪ್ರಾಥಮಿಕ ಪ್ರಶ್ನೆಯೆಂದರೆ 2026 ರಲ್ಲಿ ಚಿನ್ನದ ಬೆಲೆ ಹೇಗಿರುತ್ತದೆ? ಚಿನ್ನದ ಬೆಲೆಗಳು ಮತ್ತಷ್ಟು ಏರುತ್ತವೆಯೇ ಅಥವಾ ಕುಸಿಯುತ್ತವೆಯೇ ಎನ್ನುವುದು. 

Written by - Ranjitha R K | Last Updated : Dec 10, 2025, 02:03 PM IST
  • ಚಿನ್ನದ ಬೆಲೆ ಗಗನಮುಖಿಯಾಗಿದ್ದು, ಎಲ್ಲರ ಕಳವಳಕ್ಕೆ ಕಾರಣವಾಗಿದೆ.
  • ಚಿನ್ನದ ಬೆಲೆ ಮತ್ತಷ್ಟು ಏರುವ ಸಾಧ್ಯತೆ
  • ಜಾಗತಿಕ ಆರ್ಥಿಕ ಪರಿಸ್ಥಿತಿಯಿಂದಾಗಿ ಚಿನ್ನದ ಬೆಲೆಗಳು ಏರಿಕೆ
ಚಿನ್ನದ ದರಗಳ ಕುರಿತು ಬಾಬಾ ವಂಗಾ  ಭವಿಷ್ಯವಾಣಿ : ಆಭರಣ ಪ್ರಿಯರು ಒಮ್ಮೆ ಗಮನಿಸಿ ನೋಡಿ

2025ರಲ್ಲಿ ಚಿನ್ನದ ಬೆಲೆ ಗಗನಮುಖಿಯಾಗಿದ್ದು, ಎಲ್ಲರ ಕಳವಳಕ್ಕೆ ಕಾರಣವಾಗಿದೆ. ಡಿಸೆಂಬರ್ ಆರಂಭದಲ್ಲಿ, ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ 1,30,000 ಅನ್ನು ಮೀರಿದೆ. ಆದರೆ,  ಜಾಗತಿಕ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನವು ಔನ್ಸ್‌ಗೆ 4,200 ಡಾಲರ್  ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಏರುತ್ತಿರುವ ಚಿನ್ನದ ಬೆಲೆಗಳು ಹೂಡಿಕೆದಾರರು ಮತ್ತು ಆರ್ಥಿಕ ತಜ್ಞರ ಕಳವಳ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ಹೂಡಿಕೆದಾರರ ಪ್ರಾಥಮಿಕ ಪ್ರಶ್ನೆಯೆಂದರೆ 2026 ರಲ್ಲಿ ಚಿನ್ನದ ಬೆಲೆ ಹೇಗಿರುತ್ತದೆ? ಚಿನ್ನದ ಬೆಲೆಗಳು ಮತ್ತಷ್ಟು ಏರುತ್ತವೆಯೇ ಅಥವಾ ಕುಸಿಯುತ್ತವೆಯೇ ಎನ್ನುವುದು. 

Add Zee News as a Preferred Source

ಚಿನ್ನದ ಬೆಲೆ ಗಗನಕ್ಕೇರುವ ಸಾಧ್ಯತೆ  : 
ಈ ಮಧ್ಯೆ, ಏರುತ್ತಿರುವ ಚಿನ್ನದ ಬೆಲೆಗಳ ಮತ್ತೊಂದು ಅಂಶವು ಹೊರಹೊಮ್ಮಿದ್ದು, ಭವಿಷ್ಯದ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಈ ಅಂಶವು ಬಲ್ಗೇರಿಯನ್ ಮಹಿಳೆ ಬಾಬಾ ವಂಗಾ ಅವರ ಹಳೆಯ ಭವಿಷ್ಯವಾಣಿಯಾಗಿದ್ದು, ಇದು ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವರದಿಗಳ ಪ್ರಕಾರ, ಬಾಬಾ ವಂಗಾ 2026 ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಭವಿಷ್ಯ ನುಡಿದಿದ್ದರು, ಇದನ್ನು ಅವರು "ಕ್ಯಾಶ್ ಕ್ರಾಶ್ ಎಂದು ಕರೆದಿದ್ದಾರೆ. ಈ ವರ್ಷದ ಜಾಗತಿಕ ಆರ್ಥಿಕ ಬಿಕ್ಕಟ್ಟು ಬ್ಯಾಂಕಿಂಗ್ ವ್ಯವಸ್ಥೆಯ ಕುಸಿತಕ್ಕೆ ಮತ್ತು ಚಿನ್ನದ ಬೆಲೆಗಳಲ್ಲಿ ತೀವ್ರ ಏರಿಕೆಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ : ಫೆಡ್ ದರ ಕಡಿತ ನಿರ್ಧಾರಕ್ಕೂ ಮುನ್ನ ಚಿನ್ನ ಬೆಲೆಯಲ್ಲಿ ಮಹತ್ತರ ಬದಲಾವಣೆ! ಬೆಳ್ಳಿ ದರ ಕೇಳಿದ್ರಂತೂ ಶಾಕ್‌ ಆಗ್ತೀರಾ

ಬಾಬಾ ವಂಗಾ ಅವರ ಭವಿಷ್ಯವಾಣಿಗಳನ್ನು ಸಾಮಾನ್ಯವಾಗಿ ಜನರು ನಂಬುತ್ತಾರೆ. ಏಕೆಂದರೆ ಅವರು 9/11 ಭಯೋತ್ಪಾದಕ ದಾಳಿ ಮತ್ತು 2004 ರ ಸುನಾಮಿಯಂತಹ ಅನೇಕ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದರು. ಆದರೆ, ಅವರ ಭವಿಷ್ಯವಾಣಿಗಳು ಯಾವಾಗಲೂ ವಿವಾದಾತ್ಮಕವಾಗಿದ್ದು, ತಜ್ಞರು ಅವು ಕೇವಲ ಊಹಾಪೋಹವಷ್ಟೇ ಎಂದು ಹೇಳುವುದೂ ಇದೆ. 

ಪ್ರಸ್ತುತ, ಜಾಗತಿಕ ಆರ್ಥಿಕ ಪರಿಸ್ಥಿತಿಯಿಂದಾಗಿ ಚಿನ್ನದ ಬೆಲೆಗಳು ಏರಿಕೆ ಕಾಣುತ್ತಿವೆ. ಕೇಂದ್ರೀಯ ಬ್ಯಾಂಕುಗಳು ಬೃಹತ್ ಪ್ರಮಾಣದಲ್ಲಿ ಹಣ ಮುದ್ರಿಸುವುದರಿಂದ ಚಿನ್ನದ ಬೇಡಿಕೆ ಹೆಚ್ಚಾಗಿದೆ. ಆದರೆ, ಬಾಬಾ ವಂಗಾ ಅವರ 2026ರ ಭವಿಷ್ಯವಾಣಿ ನಿಜವಾಗಿಯೂ ನಿಜವಾಗುತ್ತದೆಯೇ? ಇದಕ್ಕೆ ಭವಿಷ್ಯವೇ ಉತ್ತರ ಕೊಡಲಿದೆ. 

ಇದನ್ನೂ ಓದಿ : ತೆರಿಗೆ ಪಾವತಿದಾರರೇ ಗಮನಿಸಿ : ಆದಾಯ ತೆರಿಗೆ, GST ನಂತರ ಇದೀಗ ಮಹತ್ತರ ಬದಲಾವಣೆ ತರಲು ಕೇಂದ್ರ ಸರ್ಕಾರ ತಯಾರಿ

ಯಾರೀ ಬಾಬಾ ವಂಗಾ : 
ಬಾಬಾ ವಂಗಾ 1911ರಲ್ಲಿ ಇಂದಿನ ಉತ್ತರ ಮ್ಯಾಸಿಡೋನಿಯಾದ ಸ್ಟ್ರುಮಿಕಾದಲ್ಲಿ ಜನಿಸಿದರು. 12ನೇ ವಯಸ್ಸಿನಲ್ಲಿ, ಅವರು ತಮ್ಮ ದೃಷ್ಟಿಯನ್ನು ಕಳೆದುಕೊಂಡರು. ಇದನ್ನು ಅವರ ಅನುಯಾಯಿಗಳು ದೈವಿಕ ಅನುಭವದ ಆರಂಭ ಮತ್ತು ಭವಿಷ್ಯವನ್ನು ನೋಡುವ ಶಕ್ತಿ ಎಂದು ಪರಿಗಣಿಸುತ್ತಾರೆ. 1970 ಮತ್ತು 1980 ರ ದಶಕಗಳಲ್ಲಿ, ಅವರ ಖ್ಯಾತಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಡಲು ಪ್ರಾರಂಭಿಸಿತು. ದೇಶೀಯ ಸಮಸ್ಯೆಗಳಿಂದ ಹಿಡಿದು ಜಾಗತಿಕ ಸಮಸ್ಯೆಗಳವರೆಗೆ ಜನರು ಅವರ ಸಲಹೆಯನ್ನು ಪಡೆಯುತ್ತಿದ್ದರು. 1996 ರಲ್ಲಿ ತಮ್ಮ 85 ನೇ ವಯಸ್ಸಿನಲ್ಲಿ ನಿಧನರಾದರು.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News