)
ಭಾರತೀಯ ರಿಸರ್ವ್ ಬ್ಯಾಂಕ್ (RBI) ಸೆಪ್ಟೆಂಬರ್ 2025 ರ ರಜಾದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ವಾರ, ಅಂದರೆ ಸೆಪ್ಟೆಂಬರ್ 8 ರಿಂದ 14 ರವರೆಗೆ, ಹಬ್ಬ ಸೇರಿದಂತೆ ಬೇರೆ ಬೇರೆ ಕಾರಣಗಳಿಂದಾಗಿ ಬ್ಯಾಂಕಿಗೆ ರಜೆ ನೀಡಲಾಗಿದೆ. ಗ್ರಾಹಕರು ಬ್ಯಾಂಕ್ ಸಂಬಂಧಿತ ಯಾವುದೇ ಕೆಲಸವನ್ನು ಮಾಡುವ ಮೊದಲು ತಮ್ಮ ಹತ್ತಿರದ ಶಾಖೆಯೊಂದಿಗೆ ರಜಾದಿನವನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.
ವಿವಿಧ ರಾಜ್ಯಗಳ ಹಬ್ಬಗಳಿಗೆ ಅನುಸಾರವಾಗಿ ಬ್ಯಾಂಕ್ ರಜೆ ಕೂಡಾ ಭಿನ್ನವಾಗಿರುತ್ತದೆ. ಈ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.
ಈ ವಾರ ಬ್ಯಾಂಕ್ ರಜಾದಿನಗಳು :
ಸೆಪ್ಟೆಂಬರ್ 8, ಸೋಮವಾರ: ಮುಂಬೈನ ಎಲ್ಲಾ ಬ್ಯಾಂಕುಗಳಿಗೆ ರಜೆ ನೀಡಲಾಗಿತ್ತು. ಮಹಾರಾಷ್ಟ್ರ ಸರ್ಕಾರವು ಈದ್-ಎ-ಮಿಲಾದ್ ರಜಾದಿನವನ್ನು ಸೆಪ್ಟೆಂಬರ್ 5 ರ ಬದಲು ಸೆಪ್ಟೆಂಬರ್ 8 ಕ್ಕೆ ಬದಲಾಯಿಸಿದೆ.
ಸೆಪ್ಟೆಂಬರ್ 12, ಶುಕ್ರವಾರ: ಸೆಪ್ಟೆಂಬರ್ 12 ರಂದು ಈದ್-ಎ-ಮಿಲಾದ್ ಕಾರಣದಿಂದಾಗಿ ಜಮ್ಮು ಮತ್ತು ಶ್ರೀನಗರದಲ್ಲಿನ ಎಲ್ಲಾ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಶನಿವಾರ, ಸೆಪ್ಟೆಂಬರ್ 13: ದೇಶಾದ್ಯಂತ ಬ್ಯಾಂಕುಗಳು ಮುಚ್ಚಿರುತ್ತವೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ರಜಾದಿನಗಳಾಗಿರುವ ಕಾರಣ ಈ ರಜೆ ಅನ್ವಯವಾಗುವುದು.
ಸೆಪ್ಟೆಂಬರ್ 14, ಭಾನುವಾರ: ವಾರದ ರಜೆ, ಎಲ್ಲೆಡೆ ಬ್ಯಾಂಕುಗಳು ಮುಚ್ಚಿರುತ್ತವೆ.
ಮುಂಬೈನಲ್ಲಿ ಈದ್-ಎ-ಮಿಲಾದ್ ರಜೆಯನ್ನು ಏಕೆ ಬದಲಾಯಿಸಲಾಯಿತು?:
ಮುಂಬೈ ಮತ್ತು ಅದರ ಉಪನಗರಗಳಲ್ಲಿ ಸೆಪ್ಟೆಂಬರ್ 5 ರಂದು ನಿಗದಿಯಾಗಿದ್ದ ಈದ್-ಎ-ಮಿಲಾದ್ ರಜೆಯನ್ನು ಸೆಪ್ಟೆಂಬರ್ 8 ಕ್ಕೆ ಬದಲಾಯಿಸಲಾಯಿತು. ಈ ಬಗ್ಗೆ ಮಹಾರಾಷ್ಟ್ರ ಸರ್ಕಾರ ಸೆಪ್ಟೆಂಬರ್ 3 ರಂದು ಘೋಷಣೆ ಮಾಡಿತ್ತು. ಗಣೇಶ ವಿಸರ್ಜನೆ ದಿನದಂದು ಯಾವುದೇ ಘರ್ಷಣೆಗಳನ್ನು ತಪ್ಪಿಸಲು ಮುಸ್ಲಿಂ ಸಮುದಾಯವು ಸೆಪ್ಟೆಂಬರ್ 8 ರಂದು ಮೆರವಣಿಗೆ ನಡೆಸಲು ನಿರ್ಧರಿಸಿತ್ತು.
ಬ್ಯಾಂಕುಗಳು ಮುಚ್ಚಲ್ಪಟ್ಟಿದ್ದರೂ, ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಎಟಿಎಂಗಳಂತಹ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಬ್ಯಾಂಕುಗಳ ಎಲ್ಲಾ ವಾರ್ಷಿಕ ರಜಾದಿನಗಳನ್ನು ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸುತ್ತದೆ.