ಬೆಂಗಳೂರು: ಮುಂದಿನ ಕೆಲವು ದಿನಗಳಲ್ಲಿ ನಿಮಗೆ ಬ್ಯಾಂಕಿನ ಮುಖ್ಯ ಕೆಲಸವಿದ್ದರೆ ಈಗಲೇ ಮುಗಿಸಿಕೊಳ್ಳಿ. ಏಕೆಂದರೆ ಜುಲೈ ತಿಂಗಳಲ್ಲಿ ಬಾಕಿ ಇರುವ ಮುಂದಿನ 14 ದಿನಗಳ ಪೈಕಿ 7 ದಿನ ಬ್ಯಾಂಕುಗಳಿಗೆ ರಜೆ ಇರುತ್ತದೆ. ಹೀಗಾಗಿ ನಿಮ್ಮ ಬ್ಯಾಂಕಿನ ಮುಖ್ಯ ಕೆಲಸವಿದ್ದರೆ ಕೂಡಲೇ ಮುಗಿಸಿಕೊಳ್ಳುವುದು ಉತ್ತಮ.


COMMERCIAL BREAK
SCROLL TO CONTINUE READING

ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ರಜಾದಿನಗಳ ಕ್ಯಾಲೆಂಡರ್ ಪ್ರಕಾರ ಜುಲೈ ತಿಂಗಳಿನಲ್ಲಿ ಬ್ಯಾಂಕುಗಳಿಗೆ 15 ದಿನಗಳವರೆಗೆ ರಜೆ ಇತ್ತು. ಈ ರಜಾದಿನಗಳಲ್ಲಿ ತಿಂಗಳ 2ನೇ ಮತ್ತು 4ನೇ ಶನಿವಾರ ಹಾಗೂ ಭಾನುವಾರದ ರಜೆಗಳು ಸೇರಿವೆ. ಈ ಪೈಕಿ ಈಗಾಗಲೇ ಜುಲೈನ ಅರ್ಧಭಾಗ (16 ದಿನಗಳು)ದಲ್ಲಿ 8 ರಜೆಗಳು ಮುಗಿದಿವೆ.


ಇದನ್ನೂ ಓದಿ: ರೈತರ ಖಾತೆಗೆ ಈ ದಿನ ವರ್ಗವಾಗುವುದು 2 ಸಾವಿರ ರೂಪಾಯಿ ! ಪ್ರಧಾನಿ ಮೋದಿ ನೀಡಿದ ಮಾಹಿತಿ


ಇನ್ನುಳಿದಿರುವ 14 ದಿನಗಳಲ್ಲಿ 7 ರಜೆಗಳಿವೆ. ಯಾವ್ಯಾವ ದಿನಗಳಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ ಅನ್ನೋದನ್ನು ತಿಳಿದುಕೊಂಡರೆ ಮುಖ್ಯವಾದ ಕೆಲಸವನ್ನು ಬೇಗನೆ ಮುಗಿಸಲು ಸಹಕಾರಿಯಾಗುತ್ತದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.


ಬ್ಯಾಂಕ್ ರಜಾ ದಿನಗಳ ಪಟ್ಟಿ


ಜುಲೈ 17ರಂದು ಯು ತಿರೋತ್ ಸಿಂಗ್ ದಿನ(U Tirot Sing Day 2023)ದ ಅಂಗವಾಗಿ ಮೇಘಾಲಯದಲ್ಲಿ ಬ್ಯಾಂಕ್‍ ಕಾರ್ಯನಿರ್ವಹಿಸಲ್ಲ.


ಜುಲೈ 21ರಂದು ದ್ರುಕ್ಪಾ ತ್ಶೇಷಿ ಉತ್ಸವ (Drukpa Tsheshi) ಸಂದರ್ಭದಲ್ಲಿ ಸಿಕ್ಕಿಂನಲ್ಲಿ ಬ್ಯಾಂಕ್ ಬಂದ್ ಇರಲಿವೆ.  


ಜುಲೈ 22ರಂದು 4ನೇ ಶನಿವಾರದ ಪ್ರಯುಕ್ತ ಬ್ಯಾಂಕ್ ರಜೆ ಇರಲಿದೆ.


ಜುಲೈ 23ರಂದು ಭಾನುವಾರ ವಾರದ ರಜೆ ಇರುತ್ತದೆ.


ಜುಲೈ 28ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಯಾಂಕುಗಳು ಕಾರ್ಯನಿರ್ವಹಿಸಲ್ಲ.


ಜುಲೈ 29ರಂದು ಮೊಹರಂ ಹಬ್ಬದ ಹಿನ್ನೆಲೆ ಬ್ಯಾಂಕುಗಳಿಗೆ ರಜೆ ಇರಲಿದೆ.


ಜುಲೈ 30ರಂದು ಭಾನುವಾರ ವಾರದ ರಜೆ ಇರಲಿದೆ.


ಇದನ್ನೂ ಓದಿ: Arecanut Price: ₹57 ಸಾವಿರ ಗಡಿ ದಾಟಿದ ಅಡಿಕೆ ದರ, ರೈತರ ಮೊಗದಲ್ಲಿ ಮಂದಹಾಸ


ಬ್ಯಾಂಕುಗಳಿಗೆ ರಜೆ ಇದ್ದರೂ ಸಹ ಎಟಿಎಂ, ಆನ್‌ಲೈನ್‌ ಬ್ಯಾಂಕಿಂಗ್‌, ಮೊಬೈಲ್‌ ಬ್ಯಾಂಕಿಂಗ್‌ ಸೇವೆಗಳು ಸಾಮಾನ್ಯ ದಿನಗಳಂತೆ ರಜೆಯ ದಿನಗಳಲ್ಲೂ ಲಭ್ಯವಿರುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.