March Bank Holidays : ಮಾರ್ಚ್ 2025 ರಲ್ಲಿ ಯಾವುದೇ ಬ್ಯಾಂಕಿಂಗ್ ಸಂಬಂಧಿತ ಕೆಲಸವನ್ನು ಯೋಜಿಸುವ ಮೊದಲು, ಈ ತಿಂಗಳು ಬ್ಯಾಂಕ್ ರಜಾದಿನಗಳು ಯಾವಾಗ ಎಂದು ತಿಳಿದುಕೊಳ್ಳುವುದು ಮುಖ್ಯ.
ಹಲವಾರು ರಾಜ್ಯ ಹಬ್ಬಗಳು ಮತ್ತು ವಿಶೇಷ ಸಂದರ್ಭಗಳ ಕಾರಣ ಮಾರ್ಚ್‌ನಲ್ಲಿ ವಿವಿಧ ನಗರಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಆದರೆ ಎಟಿಎಂ, ಮೊಬೈಲ್ ಬ್ಯಾಂಕಿಂಗ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್‌ನಂತಹ ಸೌಲಭ್ಯಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಇದನ್ನೂ ಓದಿ : ಸರ್ಕಾರಿ ನೌಕರರ ವೇತನದಲ್ಲಿ ಬಿಕ್ಕಟ್ಟು:ಖಾತೆ ಸೇರುವುದಿಲ್ಲ ಮಾರ್ಚ್ ತಿಂಗಳ ವೇತನ!ಸರ್ಕಾರದ ಕಟ್ಟುನಿಟ್ಟಿನ ಆದೇಶ
ಈದ್‌ಗೆ ಬ್ಯಾಂಕ್ ರಜೆ ಇರುವುದಿಲ್ಲ :
ಮಾರ್ಚ್ 31, 2025 ರಂದು ಈದ್-ಉಲ್-ಫಿತರ್ ರಜೆಯನ್ನು ಆರ್‌ಬಿಐ ರದ್ದುಗೊಳಿಸಿದೆ. ಆ ದಿನ ಎಲ್ಲಾ ಬ್ಯಾಂಕುಗಳು ಕೆಲಸ ಮಾಡುವುದನ್ನು ಮುಂದುವರಿಸಲು ನಿರ್ದೇಶಿಸಿದೆ. ಮಾರ್ಚ್ 31 2024-25ರ ಹಣಕಾಸು ವರ್ಷದ ಕೊನೆಯ ದಿನವಾಗಿದೆ. ಆದ್ದರಿಂದ, ಎಲ್ಲಾ ಸರ್ಕಾರಿ ವಹಿವಾಟುಗಳನ್ನು ಸರಾಗವಾಗಿ ಪೂರ್ಣಗೊಳಿಸಬೇಕು ಎಂದು ಆರ್‌ಬಿಐ ಹೇಳಿದೆ. ಈ ಕಾರಣಕ್ಕಾಗಿ ಕೇಂದ್ರ ಬ್ಯಾಂಕ್ ಆ ದಿನದಂದು ಎಲ್ಲಾ ಬ್ಯಾಂಕುಗಳು ತೆರೆದಿರಬೇಕು ಎಂದು ಆದೇಶ ಹೊರಡಿಸಿದೆ.
ಮಾರ್ಚ್ 2025 ರ ಬ್ಯಾಂಕ್ ರಜಾದಿನಗಳ ಪಟ್ಟಿ:
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರತಿ ವರ್ಷ ರಾಜ್ಯ-ನಿರ್ದಿಷ್ಟ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಅದರ ಪ್ರಕಾರ ಮಾರ್ಚ್ ತಿಂಗಳು ಬ್ಯಾಂಕುಗಳು ಇಷ್ಟು ದಿನ ಬ್ಯಾಂಕ್ ಮುಚ್ಚಿರುತ್ತವೆ.
ಮಾರ್ಚ್ 7 (ಶುಕ್ರವಾರ) – ಚಾಪ್ಚಾರ್ ಕುಟ್ – ಈ ದಿನ ಮಿಜೋರಾಂನಲ್ಲಿ ಎಲ್ಲಾ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಮಾರ್ಚ್ 13 (ಗುರುವಾರ) – ಹೋಳಿಕಾ ದಹನ್, ಅಟ್ಟುಕಲ್ ಪೊಂಗಲ್ – ಉತ್ತರ ಪ್ರದೇಶ, ಉತ್ತರಾಖಂಡ, ಜಾರ್ಖಂಡ್ ಮತ್ತು ಕೇರಳದಲ್ಲಿ ಈ ದಿನ ಬ್ಯಾಂಕುಗಳು ಮುಚ್ಚಿರುತ್ತವೆ.
ಮಾರ್ಚ್ ೧೪ (ಶುಕ್ರವಾರ) – ಹೋಳಿ (ಎರಡನೇ ದಿನ), ಧುಲೇತಿ, ಧುಲಂಡಿ, ಡೋಲ್ ಜಾತ್ರಾ (ಗುಜರಾತ್, ಮಿಜೋರಾಂ, ಮಹಾರಾಷ್ಟ್ರ, ಮಧ್ಯಪ್ರದೇಶ, ಚಂಡೀಗಢ, ಉತ್ತರಾಖಂಡ, ಸಿಕ್ಕಿಂ, ಆಂಧ್ರಪ್ರದೇಶ, ತೆಲಂಗಾಣ, ಅರುಣಾಚಲ ಪ್ರದೇಶ, ರಾಜಸ್ಥಾನ, ಜಮ್ಮು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ನವದೆಹಲಿ, ಗೋವಾ, ಛತ್ತೀಸ್‌ಗಢ, ಜಾರ್ಖಂಡ್, ಮೇಘಾಲಯ, ಹಿಮಾಚಲ ಪ್ರದೇಶ, ಶ್ರೀನಗರ)
ಮಾರ್ಚ್ 15 (ಶನಿವಾರ) – ಹೋಳಿ, ಯಾವೋಸಾಂಗ್ (ಎರಡನೇ ದಿನ) (ತ್ರಿಪುರ, ಒಡಿಶಾ, ಮಣಿಪುರ, ಬಿಹಾರ)
ಮಾರ್ಚ್ 22 (ಶನಿವಾರ) – ಬಿಹಾರ ದಿನ (ಬಿಹಾರ)
ಮಾರ್ಚ್ 27 (ಗುರುವಾರ) – ಶಬ್-ಎ-ಖಾದರ್ (ಜಮ್ಮು ಮತ್ತು ಶ್ರೀನಗರ)
ಮಾರ್ಚ್ 28 (ಶುಕ್ರವಾರ) – ಜುಮಾ-ತುಲ್-ವಿದಾ (ಜಮ್ಮು ಮತ್ತು ಶ್ರೀನಗರ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ









