)
Multiple Bank Accounts: ಪ್ರಸ್ತುತ ಕಾಲಮಾನದಲ್ಲಿ ಪ್ರತಿಯೊಬ್ಬರೂ ಬ್ಯಾಂಕ್ ಅಕೌಂಟ್ ಹೊಂದಿರುತ್ತಾರೆ. ಅದರಲ್ಲೂ, ಬಹುತೇಕ ಜನ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿರುತ್ತಾರೆ. ವಿದ್ಯಾರ್ಥಿ ಜೀವನದಲ್ಲಿ ಸ್ಟೂಡೆಂಟ್ ಅಕೌಂಟ್ ಹೊಂದಿದ್ದರೆ, ಉದ್ಯೋಗಕ್ಕೆ ಸೇರಿದಾಗ ಸ್ಯಾಲರಿ ಅಕೌಂಟ್, ಇದಲ್ಲದೆ ಸೇವಿಂಗ್ಸ್ ಅಕೌಂಟ್ ಹೀಗೆ ಹಲವು ರೀತಿಯ ಖಾತೆಗಳನ್ನು ಹೊಂದಿರುತ್ತಾರೆ.
ಸರಳ ಆನ್ಲೈನ್ ಸೇವೆಗಳಿಂದಾಗಿ ಉತ್ತಮ ಆಕರ್ಷಕ ಕೊಡುಗೆಗಳನ್ನು ನೀಡುವ ಬೇರೆ ಬೇರೆ ಬ್ಯಾಂಕ್ಗಳಲ್ಲಿಯೂ ಕೆಲವರು ಖಾತೆ ತೆರೆಯುತ್ತಾರೆ. ಆದರೆ, ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ನಿಯಮಗಳು ಬದಲಾಗಿವೆ.
ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿರುವವರಿಗೆ ತಿಳಿದಿರಲೇಬೇಕು ಈ ನಿಯಮಗಳು:
ಒಂದಕ್ಕಿಂತ ಹೆಚ್ಚು ಖಾತೆ ಹೊಂದಿದ್ದು ಆ ಖಾತೆಗಳು ಚಾಲ್ತಿಯಲ್ಲಿಲ್ಲದಿದ್ದರೆ ಇದಕ್ಕಾಗಿ ದಂಡ ವಿಧಿಸಬಹುದು, ಇಲ್ಲವೇ ಖಾತೆ ಮುಚ್ಚುವ ಸಂದರ್ಭವೂ ಎದುರಾಗಬಹುದು. ಹೌದು, ಯಾವುದೇ ಖಾತೆಯನ್ನು ಸತತ ಎರಡು ವರ್ಷಗಳ ಕಾಲ ಬಳಸದೇ ಇದ್ದಲ್ಲಿ ಬ್ಯಾಂಕ್ ಅಂತಹ ಅಕೌಂಟ್ ಅನ್ನು ಬಂದ್ ಮಾಡಬಹುದು. ಮತ್ತೆ ಈ ಖಾತೆಯನ್ನು ಆಕ್ಟಿವೇಟ್ ಮಾಡಬೇಕಾದರೆ ಗ್ರಾಹಕರು ತಮ್ಮ ಕೆವೈಸಿ ಅಪ್ಡೇಟ್ ಮಾಡಲು ಅರ್ಜಿ ಸಲ್ಲಿಸಬೇಕಾಗುತ್ತದೆ.
ವಾಸ್ತವವಾಗಿ, ಒಂದಕ್ಕಿಂತ ಹೆಚ್ಚು ಖಾತೆ ಹೊಂದಿರುವುದು ಕಾನೂನು ಬಾಹಿರವಲ್ಲ. ಆದರೆ, ಅಧಿಕ ಖಾತೆ ಹೊಂದಿರುವುದು ನಿಜಕ್ಕೂ ಅಗತ್ಯವಿದೆಯೇ ಎಂಬುದನ್ನೂ ಪರಿಗಣಿಸುವುದು ಮುಖ್ಯ. ಅಲ್ಲದೆ, ಎಷ್ಟು ಖಾತೆ ಹೊಂದಿದ್ದೀರೋ ಅಷ್ಟೂ ಖಾತೆಗೆ ಪ್ರತ್ಯೇಕವಾಗಿ ಕೆವೈಸಿ ಅಪ್ಡೇಟ್ ಮಾಡುವುಬೇಕಾಗುತ್ತದೆ. ಇದಕ್ಕಾಗಿ ಗ್ರಾಹಕರು ತಮ್ಮ ಆಧಾರ್, ಪ್ಯಾನ್ ಮತ್ತು ಪ್ರಾಮಾಣಿಕೃತ ವಿಳಾಸ ದಾಖಲೆಯನ್ನು ಹೊಂದಿರುವುದು ಕೂಡ ಮುಖ್ಯವಾಗಿದೆ.
ಇದಲ್ಲದೆ, ಹೆಚ್ಚು ಬ್ಯಾಂಕ್ ಅಕೌಂಟ್ ಹೊಂದಿದ್ದಲ್ಲಿ ಎಲ್ಲಾ ಖಾತೆಗಳಲ್ಲೂ ಮಿನಿಮಂ ಬ್ಯಾಲೆನ್ಸ್ ಹೊಂದಿರುವುದರ ಜೊತೆಗೆ ನಿರ್ವಹಣಾ ಶುಲ್ಕವನ್ನು ಸಹ ಭರಿಸಬೇಕಾಗುತ್ತದೆ. ಜೊತೆಗೆ ಎಲ್ಲಾ ಖಾತೆಗಳ ಮಾಹಿತಿಯನ್ನು ನಿಯಮಿತವಾಗಿ ಟ್ರ್ಯಾಕ್ ಮಾಡುವುದರಲ್ಲೂ ಅಡಚಣೆಗಳು ಎದುರಾಗಬಹುದು.
ಹೆಚ್ಚು ಖಾತೆ ಹೊಂದಿರುವುದು ಲಾಭವೋ? ನಷ್ಟವೋ?
ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿರುವುದರಿಂದ ಲಾಭವೂ ಇದೆ ನಷ್ಟವೂ ಇದೆ. ಇದರಿಂದಾಗುವ ಲಾಭಗಳೆಂದರೆ...
* ಒಂದು ಖಾತೆಯಲ್ಲಿ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಮತ್ತೊಂದು ಖಾತೆಯ ಮೂಲಕ ವಹಿವಾಟುಗಳನ್ನು ಪೂರ್ಣಗೊಳಿಸಬಹುದು.
* ಹಲವು ಸಂದರ್ಭಗಳಲ್ಲಿ ಬೇರೆ ಬೇರೆ ಬ್ಯಾಂಕ್ಗಳಿಂದ ವಿಶೇಷ ಆಫರ್ಗಳೂ ಲಭ್ಯವಾಗುವುದರಿಂದ ಅದರ ಪ್ರಯೋಜನ ಪಡೆಯುವಲ್ಲಿ ಇದು ಸಹಕಾರಿ ಆಗಲಿದೆ.
ಹೆಚ್ಚು ಖಾತೆ ಹೊಂದಿರುವುದರಿಂದಾಗುವ ನಷ್ಟ...
ಹೆಚ್ಚು ಬ್ಯಾಂಕ್ ಖಾತೆ ಹೊಂದಿರುವುದರ ಜೊತೆಗೆ ಭಾರೀ ಪ್ರಮಾಣದ ಮೊತ್ತ ಹೊಂದಿದ್ದರೆ ಹಣದ ಮೂಲ, ಅದರಿಂದ ಸ್ವೀಕರಿಸುವುದರ ಬಗ್ಗೆ ತಪ್ಪದೆ ಐಟಿಆರ್ ಘೋಷಿಸಲೇಬೇಕು. ಸರ್ಕಾರದ ಸಬ್ಸಿಡಿಗಳನ್ನು ಪಡೆಯುವಾಗ ಒಂದಕ್ಕಿಂತ ಹೆಚ್ಚು ಖಾತೆಯಲ್ಲಿ ಇದರ ಪ್ರಯೋಜನವನ್ನು ಪಡೆಯುವುದು ನಿಯಮಗಳ ಉಲ್ಲಂಘನೆ ಆಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ನೀವು ಎಷ್ಟು ಖಾತೆಯನ್ನು ಹೊಂದಿರುತ್ತಿರೋ ಅದನ್ನು ನಿರ್ವಹಿಸುವಾಗ ಸರ್ಕಾರದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ನಿಯಮಗಳ ಅನುಸಾರ ದಂಡ ವಿಧಿಸಬಹುದು. ಇಲ್ಲವೇ, ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬಹುದು.