ಟ್ರೈನ್ ಹೊರಡುವ 10 ನಿಮಿಷ ಮುನ್ನ ಮಾಡಿದರೂ ಸಿಗುವುದು ಕನ್ಫರ್ಮ್ ಟಿಕೆಟ್ ! 90 ಶೇ. ಜನರಿಗೆ ಗೊತ್ತಿಲ್ಲ ರೈಲ್ವೆಯ ಈ ಹೊಸ ಸೌಲಭ್ಯ

How To Get Confirm Train Ticket :ಭಾರತೀಯ ರೈಲ್ವೆ ಅದೆಷ್ಟೇ ಉತ್ತಮ ಸೌಲಭ್ಯಗಳನ್ನು ಪರಿಚಯಿಸುತ್ತಿದ್ದರೂ ಟಿಕೆಟ್ ಬುಕಿಂಗ್ ಇನ್ನೂ ದೊಡ್ಡ ಸವಾಲಾಗಿ ಉಳಿದಿದೆ.ತತ್ಕಾಲ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯು ಸಾಮಾನ್ಯ ಪ್ರಯಾಣಿಕರಿಗೆ ಅಷ್ಟು ಸುಲಭವಲ್ಲ. ಇಲ್ಲಿ ಏಜೆಂಟ್ ಗಳ ಕಾಟವೇ ಹೆಚ್ಚು.

Written by - Ranjitha R K | Last Updated : Mar 11, 2025, 11:19 AM IST
  • ನಮ್ಮ ದೇಶದಲ್ಲಿ ಪ್ರತಿದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ.
  • ದೂರದ ಊರುಗಳಿಗೆ ಪ್ರಯಾಣ ಬೆಳೆಸಲು ಬಹುತೇಕರು ರೈಲನ್ನೇ ನೆಚ್ಚಿಕೊಳ್ಳುತ್ತಾರೆ.
  • ಕನ್ಫರ್ಮ್ ರೈಲು ಟಿಕೆಟ್ ಪಡೆಯುವುದು ಅಷ್ಟು ಸುಲಭವಲ್ಲ.
ಟ್ರೈನ್ ಹೊರಡುವ 10 ನಿಮಿಷ ಮುನ್ನ ಮಾಡಿದರೂ ಸಿಗುವುದು ಕನ್ಫರ್ಮ್ ಟಿಕೆಟ್ ! 90 ಶೇ. ಜನರಿಗೆ ಗೊತ್ತಿಲ್ಲ ರೈಲ್ವೆಯ ಈ ಹೊಸ ಸೌಲಭ್ಯ

How To Get Confirm Train Ticket : ನಮ್ಮ ದೇಶದಲ್ಲಿ ಪ್ರತಿದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ದೂರದ ಊರುಗಳಿಗೆ ಪ್ರಯಾಣ ಬೆಳೆಸಲು ಬಹುತೇಕರು ರೈಲನ್ನೇ ನೆಚ್ಚಿಕೊಳ್ಳುತ್ತಾರೆ. ಆದರೆ ರೈಲುಗಳಲ್ಲಿ ಹೆಚ್ಚುತ್ತಿರುವ ಜನಸಂದಣಿಯಿಂದಾಗಿ, ಕನ್ಫರ್ಮ್ ರೈಲು ಟಿಕೆಟ್ ಪಡೆಯುವುದು ಅಷ್ಟು ಸುಲಭವಲ್ಲ. ಇದಕ್ಕಾಗಿ ತಿಂಗಳುಗಟ್ಟಲೆ ಮೊದಲೇ ಟಿಕೆಟ್ ಬುಕ್ ಮಾಡಬೇಕು. ಇದ್ದಕ್ಕಿದ್ದಂತೆ ಎಮರ್ಜೆನ್ಸಿ ಬಂದು ಎಲ್ಲೋ ಹೋಗಬೇಕಾದರೆ, ತತ್ಕಾಲ್ ಟಿಕೆಟ್‌ಗಳ ಮೇಲಿನ ಅವಲಂಬನೆ ಹೆಚ್ಚಾಗುತ್ತದೆ. ಆದರೆ ಅದಕ್ಕೂ ಮುಂಚಿತವಾಗಿಯೇ ಬುಕ್ಕಿಂಗ್ ಮಾಡಬೇಕು. ಭಾರತೀಯ ರೈಲ್ವೆ ಅದೆಷ್ಟೇ ಉತ್ತಮ ಸೌಲಭ್ಯಗಳನ್ನು ಪರಿಚಯಿಸುತ್ತಿದ್ದರೂ ಟಿಕೆಟ್ ಬುಕಿಂಗ್ ಇನ್ನೂ ದೊಡ್ಡ ಸವಾಲಾಗಿ ಉಳಿದಿದೆ.

Add Zee News as a Preferred Source

ಸಾಮಾನ್ಯ ಪ್ರಯಾಣಿಕರಿಗೆ ತೊಂದರೆದಾಯಕ ಪ್ರಕ್ರಿಯೆ : 
ತತ್ಕಾಲ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯು ಸಾಮಾನ್ಯ ಪ್ರಯಾಣಿಕರಿಗೆ ಅಷ್ಟು ಸುಲಭವಲ್ಲ. ಇಲ್ಲಿ ಏಜೆಂಟ್ ಗಳ ಕಾಟವೇ ಹೆಚ್ಚು. ತತ್ಕಾಲ್ ಟಿಕೆಟ್ ಬುಕ್ಕಿಂಗ್ ಆರಂಭವಾದ ತಕ್ಷಣ ಟಿಕೆಟ್ ಏಜೆಂಟ್ ಗಳು ವಿಶೇಷ ಸಾಫ್ಟ್ ವೇರ್ ಬಳಸಿ ಹೆಚ್ಚಿನ ಸೀಟುಗಳನ್ನು ಬುಕ್ ಮಾಡುತ್ತಾರೆ. ಇದರಿಂದ ಜನ ಸಾಮಾನ್ಯರಿಗೆ ಟಿಕೆಟ್ ಬುಕ್ ಮಾಡುವ ಅವಕಾಶ ಸಿಗುವುದಿಲ್ಲ. ಅವರ ಪ್ರಕ್ರಿಯೆಯು ಪೂರ್ಣಗೊಳ್ಳುವ ಹೊತ್ತಿಗೆ, ಸೀಟ್ ಖಾಲಿ ಇಲ್ಲ ಎನ್ನುವುದನ್ನು ತೋರಿಸುತ್ತದೆ. ಇದಲ್ಲದೇ ಸಾಮಾನ್ಯ ಟಿಕೆಟ್ ದರಕ್ಕೆ ಹೋಲಿಸಿದರೆ ತತ್ಕಾಲ್ ಟಿಕೆಟ್ ದರ ಕೂಡಾ ಹೆಚ್ಚಾಗಿರುತ್ತದೆ. ಇದರಿಂದ ಪ್ರಯಾಣಿಕರ ಮೇಲೆ ಹೆಚ್ಚುವರಿ ಹೊರೆ ಬೀಳುತ್ತದೆ.

ಇದನ್ನೂ ಓದಿ : ದುಬೈ ಅಲ್ಲ... ನಮ್ಮ ರಾಜ್ಯದ ಪಕ್ಕದಲ್ಲೇ ಅತಿ ಕಡಿಮೆ ಬೆಲೆಗೆ ಚಿನ್ನ ಖರೀದಿಸಬಹುದು..!

ರೈಲ್ವೆಯ ಪ್ರಸ್ತುತ ಟಿಕೆಟ್ ಸೇವೆ :
ತುರ್ತಾಗಿ  ರೈಲು ಟಿಕೆಟ್ ಪಡೆಯುವುದು ಸುಲಭದ ಮಾತಲ್ಲ. ಆದರೆ ರೈಲ್ವೆಯಲ್ಲಿ ಒಂದು ನಿಯಮವಿದೆ. ಅದರ ಪ್ರಕಾರ ರೈಲು ಹೊರಡುವ ಸ್ವಲ್ಪ ಸಮಯದ ಮೊದಲು  ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಅದು ಕೂಡಾ ಕನ್ಫರ್ಮ್ ಟಿಕೆಟ್. ಈ ಸೌಲಭ್ಯವನ್ನು ರೈಲ್ವೆಯ ಕರೆಂಟ್ ಟಿಕೆಟ್ ಬುಕಿಂಗ್ ಎಂದು ಕರೆಯಲಾಗುತ್ತದೆ. ಈ ಸೌಲಭ್ಯದ ಬಗ್ಗೆ ಅನೇಕರಿಗೆ ಇನ್ನೂ ಮಾಹಿತಿ ಇಲ್ಲ. 

ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ಕರೆಂಟ್ ಟಿಕೆಟ್ ಬುಕ್ಕಿಂಗ್ :
ಈ ಸೌಲಭ್ಯದ ಮೂಲಕ, ರೈಲಿನಲ್ಲಿ ಖಾಲಿ ಇರುವ ಸೀಟುಗಳನ್ನು ಪ್ರಯಾಣಿಸಲು ಬಯಸುವ ಪ್ರಯಾಣಿಕರಿಗೆ ನೀಡಲಾಗುತ್ತದೆ. ಈ ಟಿಕೆಟ್‌ಗಳನ್ನು ರೈಲು ಹೊರಡುವ ಸ್ವಲ್ಪ ಮೊದಲು ನೀಡಲಾಗುತ್ತದೆ. ಇದರಿಂದಾಗಿ ರೈಲಿನ ಎಲ್ಲಾ ಸೀಟುಗಳು ಭರ್ತಿಯಾಗುವುದಲ್ಲದೆ, ಪ್ರಯಾಣಿಕರು ಕೂಡಾ ಕೊನೆಯ ಕ್ಷಣದಲ್ಲಿ ಸುಲಭವಾಗಿ ಪ್ರಯಾಣಿಸುವ ಅವಕಾಶವನ್ನು ಪಡೆಯುತ್ತಾರೆ.

ಇದನ್ನೂ ಓದಿ : ಪಿಂಚಣಿದಾರರಿಗೆ ಆಘಾತ ! ಇನ್ನು ಮುಂದೆ ಸಿಗುವುದಿಲ್ಲ ಈ ಸೌಲಭ್ಯ !ಸರ್ಕಾರದಿಂದ ಹೊಸ ಮಾರ್ಗಸೂಚಿ

IRCTC ಯಿಂದ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು : 
ಕರೆಂಟ್ ಟಿಕೆಟ್‌ಗಳನ್ನು ಬುಕ್ ಮಾಡಲು ಎರಡು ಮಾರ್ಗಗಳಿವೆ. ಮೊದಲ ವಿಧಾನದಲ್ಲಿ, IRCTC ವೆಬ್‌ಸೈಟ್‌ನಿಂದ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಎರಡನೆಯದಾಗಿ, ರೈಲು ನಿಲ್ದಾಣದ ಟಿಕೆಟ್ ಕೌಂಟರ್‌ಗೆ ಹೋಗಿ ಟಿಕೆಟ್‌ಗಳನ್ನು ಖರೀದಿಸಬಹುದು.ರೈಲು ಹೊರಡುವ ಮೂರರಿಂದ ನಾಲ್ಕು ಗಂಟೆಗಳ ಮೊದಲು, ಕರೆಂಟ್ ಟಿಕೆಟ್‌ಗಳು ಲಭ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ಎರಡೂ ವಿಧಾನಗಳ ಮೂಲಕ ಕಂಡುಹಿಡಿಯಬಹುದು. ರೈಲು ಹೊರಡುವ ನಾಲ್ಕು ಗಂಟೆಗಳ ಮೊದಲು ಕರೆಂಟ್ ಟಿಕೆಟ್ ಅನ್ನು ಬುಕ್ ಮಾಡಬಹುದು. ಇದರ ಅಡಿಯಲ್ಲಿ, ರೈಲು ಹೊರಡುವ 5 ರಿಂದ 10 ನಿಮಿಷಗಳ ಮುಂಚಿತವಾಗಿ ಟಿಕೆಟ್ ಗಳನ್ನು ಬುಕ್ ಮಾಡಬಹುದು. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News