ಸರ್ಕಾರಿ ನೌಕರರಿಗೆ ಬಹುದೊಡ್ಡ ಆಘಾತ? 8ನೇ ವೇತನ ಆಯೋಗ ಮತ್ತಷ್ಟು ವಿಳಂಬ..?

ಹೆಚ್ಚಿನ ನಿರೀಕ್ಷೆಗಳೊಂದಿಗೆ ಕಾಯುತ್ತಿರುವ ಉದ್ಯೋಗಿಗಳಿಗೆ ದೊಡ್ಡ ಆಘಾತ ಎದುರಾಗಲಿದೆ ಎಂದು ತೋರುತ್ತದೆ. ಈಗಾಗಲೇ ಘೋಷಿಸಲಾದ 8ನೇ ವೇತನ ಆಯೋಗದ ಅನುಷ್ಠಾನದ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಸ್ಪಷ್ಟನೆ ನೀಡದ ಕಾರಣ ಸರ್ಕಾರಿ ನೌಕರರು ಚಿಂತಿತರಾಗಿದ್ದಾರೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...

Written by - Puttaraj K Alur | Last Updated : Nov 9, 2025, 07:24 PM IST
  • 8ನೇ ವೇತನ ಆಯೋಗ ರಚನೆ ಘೋಷಿಸಿದ ಕೇಂದ್ರದಿಂದ ಸರಿಯಾದ ಪ್ರಕ್ರಿಯೆ ಅನುಸರಿಸಿಲ್ಲವೆಂದು ಟೀಕೆ
  • ಅನುಷ್ಠಾನದ ಸ್ಪಷ್ಟ ದಿನಾಂಕ ಘೋಷಿಸದ ಕಾರಣ ನೌಕರರು ಮತ್ತು ಪಿಂಚಣಿದಾರರಲ್ಲಿ ಬಹುದೊಡ್ಡ ಆತಂಕ
  • 8ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳು ಜನವರಿ 1, 2026ರಿಂದ ಜಾರಿಗೆ ಬರಬೇಕಿತ್ತು
ಸರ್ಕಾರಿ ನೌಕರರಿಗೆ ಬಹುದೊಡ್ಡ ಆಘಾತ? 8ನೇ ವೇತನ ಆಯೋಗ ಮತ್ತಷ್ಟು ವಿಳಂಬ..?

8th Pay Commission Big Updates: ಕೇಂದ್ರ ಸರ್ಕಾರವು ವೇತನ ಮತ್ತು ಪಿಂಚಣಿಗಳನ್ನ ಪರಿಷ್ಕರಿಸಲು ಪ್ರತಿ ಹತ್ತು ವರ್ಷಗಳಿಗೊಮ್ಮೆ ವೇತನ ಆಯೋಗವನ್ನ ರಚಿಸುತ್ತಿದೆ. ಪ್ರಸ್ತುತ 7ನೇ ವೇತನ ಆಯೋಗವು ಈ ವರ್ಷ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆ 8ನೇ ವೇತನ ಆಯೋಗ ರಚನೆಯನ್ನ ಘೋಷಿಸಿದ ಕೇಂದ್ರ ಸರ್ಕಾರವು ಸರಿಯಾದ ಪ್ರಕ್ರಿಯೆಯನ್ನ ಅನುಸರಿಸಿಲ್ಲವೆಂಬ ಟೀಕೆಗಳನ್ನ ಎದುರಿಸುತ್ತಿದೆ. ವಿಶೇಷವಾಗಿ ಇದರ ಅನುಷ್ಠಾನಕ್ಕೆ ಸ್ಪಷ್ಟ ದಿನಾಂಕವನ್ನ ಘೋಷಿಸದ ಕಾರಣ ನೌಕರರು ಮತ್ತು ಪಿಂಚಣಿದಾರರಲ್ಲಿ ಬಹುದೊಡ್ಡ ಆತಂಕ ಉಂಟಾಗಿದೆ.

Add Zee News as a Preferred Source

8ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳು ಜನವರಿ 1, 2026ರಿಂದ ಜಾರಿಗೆ ಬರಬೇಕಿತ್ತು. ಆದರೆ ಕೇಂದ್ರ ಸರ್ಕಾರವು ಹೊಸ ವೇತನ ಆಯೋಗದ ಘೋಷಣೆಯನ್ನ ವಿಳಂಬ ಮಾಡಿದೆ. ಕೆಲವು ವಾರಗಳ ಹಿಂದೆ ಕಾರ್ಯಕಾರಿ ಸಮಿತಿಯನ್ನ ನೇಮಿಸಲಾಗಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಘೋಷಿಸಲಾದ ಉಲ್ಲೇಖ ನಿಯಮಗಳಲ್ಲಿ (TOR) 8ನೇ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನ ದಿನಾಂಕವನ್ನ ಉಲ್ಲೇಖಿಸಿಲ್ಲ. ಇದು ನೌಕರರು ಮತ್ತು ಪಿಂಚಣಿದಾರರನ್ನ ಮತ್ತಷ್ಟು ಚಿಂತೆಗೀಡುಮಾಡುತ್ತಿದೆ.

ಇದನ್ನೂ ಓದಿ: ಮಹಿಳೆಯರೇ.. ಬಟ್ಟೆ ಶಾಪಿಂಗ್‌ ಮಾಡುವಾಗ ಹಣ ಉಳಿತಾಯವಾಗ್ಬೇಕಾ? ಈ ಟ್ರಿಕ್ಸ್‌ ಫಲೋ ಮಾಡಿದ್ರೆ ಸಿಗುತ್ತೆ ಬಾರೀ ಲಾಭ!

ಹೊಸ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನ ದಿನಾಂಕವನ್ನ TORನಲ್ಲಿ ಸೇರಿಸಲು ಸರ್ಕಾರ ವಿಫಲವಾಗಿರುವುದಕ್ಕೆ ಅಖಿಲ ಭಾರತ ರಕ್ಷಣಾ ನೌಕರರ ಒಕ್ಕೂಟ (AIDEF) ಕಳವಳ ವ್ಯಕ್ತಪಡಿಸಿದೆ. ಈ ವಿಷಯದ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದೆ. ಹೊಸ ವೇತನ ಆಯೋಗದ ಅನುಷ್ಠಾನ ದಿನಾಂಕವನ್ನ TOR ಉಲ್ಲೇಖಿಸಿಲ್ಲವೆಂದು AIDEF ಗಮನಸೆಳೆದಿದೆ.

ಪ್ರಸ್ತುತ ಜಾರಿಯಲ್ಲಿರುವ 7ನೇ ವೇತನ ಆಯೋಗಕ್ಕೆ (ಜನವರಿ 1, 2016), 6ನೇ (ಜನವರಿ 1, 2006), 5ನೇ (ಜನವರಿ 1, 1996) ಮತ್ತು 4ನೇ (ಜನವರಿ 1, 1986) ನೀಡಲಾದ TORನಲ್ಲಿ ಶಿಫಾರಸುಗಳ ಅನುಷ್ಠಾನ ದಿನಾಂಕವನ್ನ ಘೋಷಿಸಲಾಗಿದೆ ಎಂದು AIDEF ಕೇಂದ್ರ ಸಚಿವರಿಗೆ ನೆನಪಿಸಿತು. 8ನೇ ವೇತನ ಆಯೋಗಕ್ಕೆ ನೀಡಲಾದ TORನಲ್ಲಿ ಅನುಷ್ಠಾನ ದಿನಾಂಕವನ್ನ ಉಲ್ಲೇಖಿಸಲಾಗಿಲ್ಲ ಎಂದು ಉದ್ಯೋಗ ಸಂಘವು ಪತ್ರದಲ್ಲಿ ಸ್ಪಷ್ಟವಾಗಿ ಹೇಳಿದೆ.

ಇದನ್ನೂ ಓದಿ: ವಾರದೊಳಗೆ ರೈತರ ಖಾತೆಗೆ ಬೀಳಲಿದೆ 6000 ರೂ.ನ ಒಂದು ಕಂತು.! ನಿಮಗೂ ಈ ಹಣ ಬೇಕು ಅಂದ್ರೆ ತಕ್ಷಣ ಹೀಗೆ ಮಾಡಿ

8ನೇ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನ ದಿನಾಂಕವನ್ನ ನಿರ್ಧರಿಸುವಾಗ ವಿವಿಧ ವೇತನ ಸಮಿತಿಗಳ ಶಿಫಾರಸುಗಳ ಅನುಷ್ಠಾನ ದಿನಾಂಕಗಳನ್ನ ಗಣನೆಗೆ ತೆಗೆದುಕೊಳ್ಳಬೇಕು ಎಂದು ಒಕ್ಕೂಟಗಳು ವಾದಿಸುತ್ತಿವೆ. 8ನೇ ವೇತನ ಆಯೋಗದ ಶಿಫಾರಸುಗಳನ್ನ 2026ರ ಜನವರಿ 1ರಿಂದ ಜಾರಿಗೆ ತರಬೇಕು ಎಂದು ಒಕ್ಕೂಟಗಳು ಹೇಳುತ್ತಿವೆ. ಕೇಂದ್ರ ಸಚಿವ ಸಂಪುಟವು 8ನೇ ಕೇಂದ್ರ ವೇತನ ಆಯೋಗದ ಉಲ್ಲೇಖ ನಿಯಮಗಳನ್ನ (TOR) ಅನುಮೋದಿಸಿದ ನಂತರ, ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರನ್ನ ಹೊಸ ವೇತನ ಆಯೋಗದ ಅಧ್ಯಕ್ಷರನ್ನಾಗಿ, ಪ್ರೊಫೆಸರ್ ಪುಲಕ್ ಘೋಷ್ ಅವರನ್ನ ಸದಸ್ಯರನ್ನಾಗಿ ಮತ್ತು ಪಂಕಜ್ ಜೈನ್ ಅವರನ್ನ ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಲಾಯಿತು ಎಂದು ತಿಳಿದುಬಂದಿದೆ.

About the Author

Puttaraj K Alur

ಪುಟ್ಟರಾಜ ಕೆ ಆಲೂರ ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser) ನ್ಯೂಸ್‌, ಒಪೊಯಿ‌ (Opoyi) ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. ...Read More

Trending News