7th Pay Commission:DA Arrear ಬಗ್ಗೆ ಬಂದಿದೆ ಹೊಸ ಅಪ್ಡೇಟ್ , ಸರ್ಕಾರಿ ನೌಕರರ ಖಾತೆಗೆ ಬರಲಿದೆ 2 ಲಕ್ಷ ರೂಪಾಯಿ
ಕೇಂದ್ರ ನೌಕರರಿಗೆ ಹೋಳಿ ಸಂದರ್ಭದಲ್ಲಿ ಉತ್ತಮ ಸುದ್ದಿ ಸಿಗಲಿದೆ. ಕಳೆದ 18 ತಿಂಗಳಿನಿಂದ ಬಾಕಿ ಡಿಎ ಹಣದ ನಿರೀಕ್ಷೆಯಲ್ಲಿರುವವರಿಗೆ ಈ ಬಾರಿ ಸಿಹಿ ಸುದ್ದಿ ಸಿಗಲಿದೆ ಎನ್ನಲಾಗಿದೆ. ಈ ಬಗ್ಗೆ ಸರ್ಕಾರವು ಸಂಪುಟ ಸಭೆಯಲ್ಲಿ ನಿರ್ಧರಿಸಬಹುದು ಎಂದು ನಿರೀಕ್ಷಿಸಲಾಗಿದೆ.
ನವದೆಹಲಿ : 7th Pay Commission : ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿಯೊಂದು ಬಂದಿದೆ (Central Government employees). 18 ತಿಂಗಳಿನಿಂದ ಬಾಕಿ ಡಿಎ (DA) ಹಣಕ್ಕಾಗಿ ಕಾಯುತ್ತಿರುವ ಉದ್ಯೋಗಿಗಳ ಪಾಲಿಗೆ ಇದು ಸಂತಸದ ಸುದ್ದಿ. ಕೇಂದ್ರ ನೌಕರರು ಹೋಳಿಗೂ ಮುನ್ನ ಬಾಕಿ ಇರುವ ಡಿಎ ಬಾಕಿಯನ್ನು ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಇದರ ಅಡಿಯಲ್ಲಿ, ಉದ್ಯೋಗಿಗಳು 2.18 ಲಕ್ಷದವರೆಗೆ ಲಾಭವನ್ನು ಪಡೆಯಲಿದ್ದಾರೆ.
18 ತಿಂಗಳಿನಿಂದ ತಡೆಹಿಡಿಯಲಾಗಿದ್ದ ಡಿಎ ಬಾಕಿಗಳ ಬಗ್ಗೆ ನಿರ್ಧಾರ :
18 ತಿಂಗಳ ಡಿಎ ಬಾಕಿಯನ್ನು ಸದ್ಯಕ್ಕೆ ಅಜೆಂಡಾದಲ್ಲಿ ಸೇರಿಸಲಾಗಿಲ್ಲ (18 Months DA Arrear update). ಆದರೆ ಸಚಿವ ಸಂಪುಟ ಸಭೆಯಲ್ಲಿ (Cabinet meet) ನಿರ್ಧಾರ ಕೈಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಸರ್ಕಾರವು ಜನವರಿ 2020 ರಿಂದ ಜೂನ್ 2021 ರವರೆಗಿನ ಬಾಕಿ ಪಾವತಿಯ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ ಹೋಳಿ ಸಂದರ್ಭದಲ್ಲಿ ಸರ್ಕಾರ ಡಿಎ (Dearness Allowance) ಹೆಚ್ಚಿಸುವ ಮೂಲಕ ನೌಕರರಿಗೆ ಭರ್ಜರಿ ಸುದ್ದಿ ನೀಡಬಹುದು.
ಇದನ್ನೂ ಓದಿ : ಕೇವಲ 1 ರೂಪಾಯಿಯಲ್ಲಿ ಸ್ಕೂಟಿ ಮನೆಗೆ ತನ್ನಿ, ಈ ಕಂಪನಿಯಿಂದ 3 ದಿನಗಳ ವಿಶೇಷ ಕೊಡುಗೆ
ಹಣಕಾಸು ಸಚಿವರು ಹೇಳಿದ್ದೇನು ?
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Seetharam) ಅವರು ಕೆಲವು ದಿನಗಳ ಹಿಂದೆ ಹೇಳಿಕೆಯೊಂದನ್ನು ನೀಡಿದ್ದರು. 'ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ, ನೌಕರರ ತುಟ್ಟಿಭತ್ಯೆಯನ್ನು (DA) ನಿಲ್ಲಿಸಲಾಗಿದೆ. ಬಡವರು ಮತ್ತು ನಿರ್ಗತಿಕರಿಗೆ ಆ ಹಣದಿಂದ ಸಹಾಯ ಮಾಡಬಹುದು ಎಂಬ ಉದ್ದೇಶದಿಂದ ಹೀಗೆ ಮಾಡಲಾಗಿದೆ. ಸಾಂಕ್ರಾಮಿಕದ ಸಮಯದಲ್ಲಿ ಸರ್ಕಾರದ ಮಂತ್ರಿಗಳು ಮತ್ತು ಸಂಸದರ ಸಂಬಳವನ್ನು ಕೂಡಾ ಕಡಿತಗೊಳಿಸಿತ್ತು. ಆದರೆ, ಕೇಂದ್ರ ನೌಕರರ ವೇತನದಲ್ಲಿ ಯಾವುದೇ ಕಡಿತ ಮಾಡಿರಲಿಲ್ಲ ಅಥವಾ ಡಿಎಯಲ್ಲಿ ಕೂಡಾ ಕಡಿತ ಮಾಡಿರಲಿಲ್ಲ.
ಸಿಗಲಿದೆ 2 ಲಕ್ಷಕ್ಕೂ ಹೆಚ್ಚು ಬಾಕಿ ಹಣ :
ಜೆಸಿಎಂನ ರಾಷ್ಟ್ರೀಯ ಕೌನ್ಸಿಲ್‌ನ ಶಿವ ಗೋಪಾಲ್ ಮಿಶ್ರಾ ಪ್ರಕಾರ, ಲೆವೆಲ್-1 ನೌಕರರ ಡಿಎ ಬಾಕಿ 11,880 ರೂ.ನಿಂದ 37,554 ರೂ. ಲೆವೆಲ್-13 ( 7ನೇ ಸಿಪಿಸಿ ಮೂಲ ವೇತನ ಶ್ರೇಣಿ ರೂ. 1,23,100 ರಿಂದ ರೂ. 2,15,900) ಲೆವೆಲ್-14 (ವೇತನ ಶ್ರೇಣಿ) ಗಾಗಿ ಬಾಕಿ ಇರುವ ಹಣ ರೂ. 1,44,200. 2,18,200 ಆಗಿರಲಿದೆ.
ಇದನ್ನೂ ಓದಿ : ಇಂಟರ್ನೆಟ್, ಸ್ಮಾರ್ಟ್‌ಫೋನ್ ಇಲ್ಲದೆ UPI ಪಾವತಿ ಮಾಡುವುದು ಹೇಗೆ?
ವಾಸ್ತವವಾಗಿ, ಹಂತ 1 ಉದ್ಯೋಗಿಗಳ ತುಟ್ಟಿ ಭತ್ಯೆಯು ರೂ 11,880 ರಿಂದ ರೂ 37,554 ರ ನಡುವೆ ಇರುತ್ತದೆ. ಮತ್ತೊಂದೆಡೆ, 14 ನೇ ಹಂತದ ಉದ್ಯೋಗಿಗಳ ತುಟ್ಟಿ ಭತ್ಯೆಯ ಬಾಕಿಯು 1,44,200 ರಿಂದ 2,18,200 ರೂ.ಆಗಿದ್ದು, ಅದನ್ನು ಅವರ ಖಾತೆಗೆ ಜಮಾ ಮಾಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.