)
kalonji farming: ರೈತರು ವ್ಯವಸಾಯದಲ್ಲಿ ಹೆಚ್ಚಿನ ಮಾಹಿತಿ ಇರದ ಕಾರಣ ಕೆಲವೇ ಬೆಳೆಗಳನ್ನು ಪದೇ ಪದೇ ಬೆಳೆದು ವಿರಳ ಲಾಭವನ್ನು ಪಡೆಯುತ್ತಿರುತ್ತಾರೆ. ಆದರೆ ನಾವು ಹೇಳಲು ಹೊರಟಿರುವ ಈ ಔಷಧೀಯ ಕೃಷಿಯನ್ನು ನೀವು ಮಾಡಿದರೆ ಕಡಿಮೆ ಸಮಯದಲ್ಲಿ ಲಕ್ಷಗಟ್ಟಲೇ ಲಾಭ ಗಳಿಸಬಹುದು.
ಬಹಳ ಜನಕ್ಕೆ ಈ ವಿಶೇಷ ಕೃಷಿಯ ಬಗ್ಗೆ ಗೊತ್ತಿಲ್ಲ. ಆದರೆ ಇದು ರೈತರಿಗೆ ಬಹಳ ಲಾಭ ತಂದುಕೊಡುತ್ತದೆ. ಇದರ ಹೆಸರು ಕಲೋಂಜಿ ಸಸ್ಯ.. ಇದೊಂದು ಔಷಧೀಯ ಸಸ್ಯವಾಗಿರುವುದರಿಂದ ಇದರ ಬೇಡಿಕೆ ಎಂದಿಗೂ ಕಡಿಮೆಯಾಗುವುದಿಲ್ಲ. ಆದ್ದರಿಂದ ಇದು ಹೆಚ್ಚು ಜನಪ್ರಿಯವಾಗಿದೆ. ಈ ಕಲೋಂಜಿ ಬೀಜಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಇವು ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ಸಹಾಯ ಮಾಡುತ್ತವೆ. ಆದ್ದರಿಂದಲೇ ಇದನ್ನು ಔಷಧೀಯ ಸಸ್ಯವಾಗಿ ಬೆಳೆಸಲಾಗುತ್ತದೆ. ಇದರ ಬೀಜಗಳು ಗಾತ್ರದಲ್ಲಿ ಚಿಕ್ಕದಾಗಿದ್ದು, ಕಪ್ಪು ಬಣ್ಣದಲ್ಲಿರುತ್ತವೆ. ಇದರಲ್ಲಿ ಹೆಚ್ಚು ಪ್ರಯೋಜನಾಕಾರಿ ಅಂಶಗಳಿದೆ. ಇದನ್ನು ನಾನ್, ಬ್ರೆಡ್, ಕೇಕ್ ಮತ್ತು ಉಪ್ಪಿನಕಾಯಿಗಳಲ್ಲಿ ಬಳಸಲಾಗುತ್ತದೆ. ಕಲೋಂಜಿಯನ್ನು ಔಷಧಗಳ ತಯಾರಿಕೆಯಲ್ಲೂ ಬಳಸಲಾಗುತ್ತದೆ.
ಕಲೋಂಜಿ ಕೃಷಿಗೆ ಸೂಕ್ತ ಹವಾಮಾನ
ಕಲೋಂಜಿ ಕೃಷಿಗೆ ಮರಳು ಮಿಶ್ರಿತ ಮಣ್ಣು ಸೂಕ್ತವಾಗಿದೆ. ಇದನ್ನು ಸಾವಯವ ಪದಾರ್ಥಗಳಿಂದ ಬೆಳೆಸಬೇಕು. ಮಣ್ಣಿನ pH ಮೌಲ್ಯ 6-7 ರ ನಡುವೆ ಇರಬೇಕು. ಇನ್ನು ಈ ಕಲೋಂಜಿ ಸಸ್ಯಗಳು ಚೆನ್ನಾಗಿ ಬೆಳೆಯಲು ಉಷ್ಣವಲಯದ ಹವಾಮಾನದ ಅಗತ್ಯವಿದೆ. ಇದರ ಸಸ್ಯಗಳು ಚಳಿಗಾಲ ಮತ್ತು ಬೇಸಿಗೆ ಎರಡರಲ್ಲೂ ಚೆನ್ನಾಗಿ ಬೆಳೆಯುತ್ತವೆ. ಅಷ್ಟೇ ಅಲ್ಲ ಈ ಸಸ್ಯಗಳು ಬೆಳೆಯಲು ಹೆಚ್ಚಿನ ಮಳೆಯ ಅಗತ್ಯವಿಲ್ಲ.
ಕಲೋಂಜಿ ಕೃಷಿಯ ಸಮರ್ಪಕ ಉತ್ಪಾದನೆ ಮಾಡುವುದು ಹೇಗೆ?
ಕಲೋಂಜಿಯ ಬೆಳೆಯ ಉತ್ತಮ ಇಳುವರಿಯನ್ನು ಪಡೆಯಲು, ಬೀಜಗಳನ್ನು ನೆಡುವ ಮೊದಲು ಹೊಲವನ್ನು ಚೆನ್ನಾಗಿ ಉಳುಮೆ ಮಾಡಬೇಕು. ಇದರ ನಂತರ ಅದನ್ನು ಸ್ವಲ್ಪ ಮಣ್ಣು ಸೂರ್ಯನ ಬಿಸಿಲಿನಲಲ್ಲಿ ಚೆನ್ನಾಗಿ ಹದವಾಗುವವರೆಗೂ ಕಾಯಬೇಕು. ಇದರ ನಂತರ ಹೊಲವನ್ನು ಹಸುವಿನ ಸಗಣಿಯಿಂದ ಫಲವತ್ತಾಗಿಸಬೇಕು. ಈ ಫಲವತ್ತಾದ ಮಣ್ಣಿನಲ್ಲಿ ಕಲೋಂಜಿ ಬೀಜಗಳನ್ನು ನೆಡಬಹುದು. ಸಾಮಾನ್ಯವಾಗಿ ಕಲೋಂಜಿ ಸಸ್ಯಗಳನ್ನು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳು ನಾಟಿ ಮಾಡಲು ಉತ್ತಮ ಸಮಯ.
ಕಲೋಂಜಿ ಬೆಳೆಗಳ ಸರಿಯಾದ ಆರೈಕೆ
ಬಹಳ ಸುಲಭ ಕೃಷಿಯಾಗಿರುವ ಈ ಕಲೋಂಜಿ ಗಿಡಗಳಿಗೆ ಹೆಚ್ಚು ನೀರುಹಾಕುವುದು ಅಗತ್ಯವಿಲ್ಲ. ಆದರೆ ಬಿತ್ತನೆ ಮಾಡಿದ ತಕ್ಷಣ ಮೊದಲ ನೀರು ಹಾಕುವುದು ಮುಖ್ಯ. ಕಲೋಂಜಿ ಗಿಡಗಳಿಗೆ ಹೆಚ್ಚು ಕಳೆ ನಿಯಂತ್ರಣ ಅಗತ್ಯವಿಲ್ಲ. ಆದರೆ ಬಿತ್ತನೆ ಮಾಡಿದ 20-25 ದಿನಗಳ ನಂತರ ಯಾವುದೇ ಕಳೆನಾಶಕಗಳನ್ನು ಬಳಸದೇ ನೈಸರ್ಗಿಕವಾಗಿ ಕಳೆ ತೆಗೆಯಬೇಕು.
ರೋಗ, ಕೀಟ ಬಾಧೆ
ಬೀಜ ಮೊಳಕೆಯೊಡೆಯುವ ಸಮಯದಲ್ಲಿ ಕಲೋಂಜಿ ಸಸ್ಯಗಳಲ್ಲಿ ರೋಗಗಳು ಕಾಣಿಸಿಕೊಳ್ಳುತ್ತವೆ. ಕಟ್ ವರ್ಮ್ ಸೋಂಕಿನಿಂದಾಗಿ ಸಸ್ಯವು ಸಂಪೂರ್ಣವಾಗಿ ನಾಶವಾಗುವ ಸಾದ್ಯತೆ ಇರುತ್ತದೆ. ಈ ರೋಗವು ಮಣ್ಣಿನ ಮೇಲ್ಮೈ ಬಳಿಯ ಸಸ್ಯಗಳ ಮೇಲೆ ದಾಳಿ ಮಾಡುತ್ತದೆ. ಸೂಕ್ತ ಪ್ರಮಾಣದಲ್ಲಿ ಕ್ಲೋರ್ಪಿರಿಫೋಸ್ ಸಿಂಪಡಿಸುವ ಮೂಲಕ ಈ ರೋಗವನ್ನು ತಡೆಯಬಹುದು. ಮಳೆಗಾಲದಲ್ಲಿ ನೀರಿನ ಒತ್ತಡದ ಪರಿಸ್ಥಿತಿಗಳಲ್ಲಿ ಬೇರು ಕೊಳೆ ರೋಗ ಕಾಣಿಸಿಕೊಳ್ಳುತ್ತದೆ. ಇಂತಹ ರೋಗದಿಂದಾಗಿ ಸಸ್ಯದ ಬೇರುಗಳು ಕೊಳೆಯುತ್ತವೆ ನತ್ತು ಸಸ್ಯದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಈ ರೀತಿಯ ರೋಗವನ್ನು ತಪ್ಪಿಸಲು ನೀರಿನ ಧಾರಣ ಸಮಸ್ಯೆಗಳು ಉಂಟಾಗಲು ಬಿಡಬೇಡಿ.
ಕೊಯ್ಲು
ಕಲೋಂಜಿ ಗಿಡಗಳು 130 ರಿಂದ 140 ದಿನಗಳ ನಂತರ ಉತ್ಪಾದನೆಗೆ ಸಿದ್ಧವಾಗುತ್ತವೆ. ಹಣ್ಣಾದ ನಂತರ ಅದರ ಗಿಡಗಳನ್ನು ಬೇರುಗಳ ಜೊತೆಗೆ ಕಿತ್ತುಹಾಕಬೇಕು. ಇದಾದ ನಂತರ ಅವುಗಳನ್ನು ಸಂಗ್ರಹಿಸಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ಕಲೋಂಜಿ ಸಸ್ಯಗಳನ್ನು ಸಂಪೂರ್ಣವಾಗಿ ಒಣಗಿದ ನಂತರ, ಅವುಗಳ ಬೀಜಗಳನ್ನು ಕೋಲಿನಿಂದ ಹೊಡೆಯುವ ಮೂಲಕ ತೆಗೆಯಬೇಕು. ಕಲೋಂಜಿ ಗಿಡಗಳು ಒಂದು ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 10 ಕ್ವಿಂಟಾಲ್ ಇಳುವರಿಯನ್ನು ನೀಡುತ್ತವೆ. ಕಲೋಂಜಿಯ ಮಾರುಕಟ್ಟೆ ಬೆಲೆ ಕೆಜಿಗೆ 500-600 ರೂ. ಇದೆ. ಆದ್ದರಿಂದ ಈ ಬೆಳೆಯ ಸರಿಯಾಗಿ ಕೃಷಿಯಿಂದ ರೈತರು ಹೆಚ್ಚಿನ ಲಾಭ ಗಳಿಸಬಹುದು.