Thomson LED Smart TV offers: ಫ್ಲಿಪ್‌ಕಾರ್ಟ್‌ನಲ್ಲಿ ಪ್ರಾರಂಭವಾಗಿರುವ ದೀಪಾವಳಿ ಹಬ್ಬದ ಮಾರಾಟದಲ್ಲಿ ನೀವು ಕೇವಲ 5,499 ರೂ.ನ ಆರಂಭಿಕ ಬೆಲೆಯಲ್ಲಿ LED ಸ್ಮಾರ್ಟ್ ಟಿವಿಯನ್ನ ಮನೆಗೆ ತರಬಹುದು. ಸ್ಮಾರ್ಟ್ ಟಿವಿಗಳು ಮತ್ತು ಗೃಹೋಪಯೋಗಿ ಉಪಕರಣಗಳ ತಯಾರಕ ಕಂಪನಿ ಥಾಮ್ಸನ್, ತನ್ನ ವಿವಿಧ ಸ್ಮಾರ್ಟ್ ಟಿವಿಗಳ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದೆ. ಕಂಪನಿಯ ಸ್ಮಾರ್ಟ್ ಟಿವಿಗಳು ಕೇವಲ 5,999 ರೂ. ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಬಳಕೆದಾರರು 24 ಇಂಚಿನಿಂದ 75 ಇಂಚಿನವರೆಗಿನ LED ಸ್ಮಾರ್ಟ್ ಟಿವಿಗಳನ್ನ ಅತ್ಯಂತ ಅಗ್ಗದ ಬೆಲೆಗೆ ಖರೀದಿಸಬಹುದು.
5,499 ರೂ.ಗೆ ಸ್ಮಾರ್ಟ್ ಟಿವಿ ಖರೀದಿಸಿ
ಥಾಮ್ಸನ್‌ನ 24-ಇಂಚಿನ ಸ್ಕ್ರೀನ್ ಗಾತ್ರದ ಸ್ಮಾರ್ಟ್ ಟಿವಿ ಮಾದರಿ ಸಂಖ್ಯೆ 24AlphaQ001 ಅನ್ನ ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ಕೇವಲ 5,999 ರೂ.ಗಳಿಗೆ ಖರೀದಿಸಬಹುದು. ಮಾದರಿ ಸಂಖ್ಯೆ 24TM2490-25 ಅನ್ನ ಕೇವಲ 5,499 ರೂ.ಗಳಿಗೆ ಖರೀದಿಸಬಹುದು. ಕಂಪನಿಯು ಈ ಎರಡು ಸ್ಮಾರ್ಟ್ ಟಿವಿಗಳನ್ನ 24-ಇಂಚಿನ ಸ್ಕ್ರೀನ್ ಗಾತ್ರವನ್ನ ಹೊಂದಿದೆ. ಆದರೆ 32-ಇಂಚಿನ ಸ್ಮಾರ್ಟ್ ಟಿವಿ ಮಾದರಿ ಸಂಖ್ಯೆ 32TM3290-25 ಅನ್ನ 6,999 ರೂ.ಗಳಿಗೆ ಖರೀದಿಸಬಹುದು.
ಇದನ್ನೂ ಓದಿ: FDಗಳ ಮೇಲೆ ಅತಿಹೆಚ್ಚು ಬಡ್ಡಿ ನೀಡುವ ಟಾಪ್ 10 ಬ್ಯಾಂಕುಗಳಿವು... ಯಾವುದು ನಂಬರ್ ಒನ್?
ಥಾಮ್ಸನ್‌ನ 40 ಇಂಚಿನ LED ಸ್ಮಾರ್ಟ್ ಟಿವಿಯನ್ನ 12,499 ರೂ.ಗೆ ಖರೀದಿಸಬಹುದು. 43 ಇಂಚಿನ 4K LED ಸ್ಮಾರ್ಟ್ ಟಿವಿ ಕೇವಲ 13,499 ರೂ.ನಿಂದ ಪ್ರಾರಂಭವಾಗುತ್ತದೆ. ಕಂಪನಿಯ ಆಲ್ಫಾ, AQI ಮತ್ತು RT ಸರಣಿಯ ಸ್ಮಾರ್ಟ್ ಟಿವಿಗಳು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಬ್ಯಾಂಕ್ ರಿಯಾಯಿತಿಗಳು ಸಹ ಲಭ್ಯವಿದೆ.
ಕಂಪನಿಯು ದೊಡ್ಡ ಸ್ಕ್ರೀನ್ ಗಾತ್ರದ ಸ್ಮಾರ್ಟ್ ಟಿವಿಗಳ ಬೆಲೆಗಳನ್ನ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಫ್ಲಿಪ್‌ಕಾರ್ಟ್ ದೀಪಾವಳಿ ಮಾರಾಟದ ಸಮಯದಲ್ಲಿ 50 ಇಂಚಿನ 4K LED ಸ್ಮಾರ್ಟ್ ಟಿವಿ ಕೇವಲ 22,199 ರೂ.ನಿಂದ ಪ್ರಾರಂಭವಾಗಲಿದೆ. 55 ಇಂಚಿನ ಟಿವಿ 26,299 ರೂ.ನಿಂದ ಪ್ರಾರಂಭವಾಗುತ್ತದೆ. 65 ಇಂಚಿನ ಸ್ಮಾರ್ಟ್ ಟಿವಿಯನ್ನ 38,999 ರೂ.ಗೆ ಮನೆಗೆ ತರಬಹುದು.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಸರ್ಕಾರದಿಂದ ಬಂಪರ್ ಗಿಫ್ಟ್.. ಡಿಎ ಹೆಚ್ಚಳದೊಂದಿಗೆ ಖಾತೆ ಸೇರಲಿದೆ 18 ತಿಂಗಳ ಬಾಕಿ ಹಣ!
ಕ್ವಾಂಟಮ್ LED ಟಿವಿ
ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿದ ಕ್ವಾಂಟಮ್ LED ಟಿವಿ ಸರಣಿಯ ಬೆಲೆಯಲ್ಲಿಯೂ ತೀವ್ರ ಕಡಿಮೆ ಮಾಡಿದೆ. ಕಂಪನಿಯ 65 ಇಂಚಿನ ಮಾದರಿಯು ಫ್ಲಿಪ್‌ಕಾರ್ಟ್ ಮಾರಾಟದಲ್ಲಿ 57,999 ರೂ.ಗೆ ಲಭ್ಯವಿರುತ್ತದೆ. 75 ಇಂಚಿನ ಮಾದರಿಯ ಬೆಲೆ 84,999 ರೂ. ಇದೆ. GST ದರ ಕಡಿತದ ನಂತರ ಕಂಪನಿಯು ತನ್ನ ಇತ್ತೀಚಿನ ಸ್ಮಾರ್ಟ್ ಟಿವಿಗಳ ಬೆಲೆಯಲ್ಲಿ ಸಾವಿರಾರು ರೂಪಾಯಿಗಳಷ್ಟು ಕಡಿಮೆ ಮಾಡಿದೆ.









