)
BSNL BiTV Premium plan: ಬಿಎಸ್ಎನ್ಎಲ್ BITV ಸೇವೆಯಲ್ಲಿ ಪ್ರೀಮಿಯಂ ಯೋಜನೆಯನ್ನು ಘೋಷಿಸಿದೆ. ಇದರಲ್ಲಿ ಬಳಕೆದಾರರಿಗೆ ಕೇವಲ 5 ರೂ.ಗಳ ದೈನಂದಿನ ವೆಚ್ಚದಲ್ಲಿ 450ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್ಗಳು ಮತ್ತು 25 ಪ್ರೀಮಿಯಂ OTT ಅಪ್ಲಿಕೇಶನ್ಗಳಿಗೆ ಪ್ರವೇಶವನ್ನು ನೀಡಲಾಗುವುದು.
BSNL ಮತ್ತೊಮ್ಮೆ ಸಖತ್ ಸೌಂಡ್ ಮಾಡಿದೆ. ಸರ್ಕಾರಿ ಟೆಲಿಕಾಂ ಆಪರೇಟರ್ ತನ್ನ BiTV ಸೇವೆಯ ಪ್ರೀಮಿಯಂ ಯೋಜನೆಯನ್ನು ಪ್ರಾರಂಭಿಸಿದೆ. ಕಂಪನಿಯು ತನ್ನ ಎಲ್ಲಾ ಮೊಬೈಲ್ ಬಳಕೆದಾರರಿಗೆ BiTVಯ ಉಚಿತ ಸೇವೆಯನ್ನು ನೀಡುತ್ತದೆ. ಪ್ರೀಮಿಯಂ ಯೋಜನೆಯಲ್ಲಿ ಬಳಕೆದಾರರು ಹೆಚ್ಚಿನ ಲೈವ್ ಟಿವಿ ಚಾನೆಲ್ಗಳನ್ನು ಪಡೆಯುತ್ತಾರೆ. SonyLIV, Zee5, OTT Playನಂತಹ 25 ಪ್ರೀಮಿಯಂ OTT ಅಪ್ಲಿಕೇಶನ್ಗಳ ಉಚಿತ ಚಂದಾದಾರಿಕೆಯನ್ನ ಪಡೆಯುತ್ತಾರೆ. ಇಂಟರ್ನೆಟ್ ಟಿವಿಯ ಈ ಕೊಡುಗೆಯಿಂದ ನೀವು ನಿಮ್ಮ ಮನೆಗಳಿಂದ DTH ಸೆಟ್-ಟಾಪ್ ಬಾಕ್ಸ್ ಅನ್ನ ತೆಗೆದುಹಾಕುತ್ತೀರಿ.
BSNL BiTV ಪ್ರೀಮಿಯಂ ಯೋಜನೆ
BSNL ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಯೋಜನೆಯ ಬಗ್ಗೆ ಮಾಹತಿ ಹಂಚಿಕೊಂಡಿದೆ. BiTVಯ ಪ್ರೀಮಿಯಂ ಯೋಜನೆಗಾಗಿ ಬಳಕೆದಾರರು ಪ್ರತಿ ತಿಂಗಳು 151 ರೂ.ಗಳನ್ನು ಖರ್ಚು ಮಾಡಬೇಕಾಗುತ್ತದೆ. ಬಳಕೆದಾರರು ದಿನಕ್ಕೆ 5 ರೂ.ಗಳ ವೆಚ್ಚದಲ್ಲಿ 450ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್ಗಳು ಮತ್ತು 25 ಪ್ರೀಮಿಯಂ OTT ಪ್ಲಾಟ್ಫಾರ್ಮ್ಗಳಿಗೆ ಪ್ರವೇಶವನ್ನ ಪಡೆಯುತ್ತಾರೆ. ಆದರೆ ಈ ಯೋಜನೆಯಲ್ಲಿ ಲಭ್ಯವಿರುವ ಇತರ ಪ್ರಯೋಜನಗಳ ವಿವರಗಳನ್ನು ಕಂಪನಿಯು ಬಹಿರಂಗಪಡಿಸಿಲ್ಲ.
Stream 450+ Live TV Channels & 25+ OTTs with BSNL BiTV Premium Pack - All-In-One Entertainment at ₹151!
Get it now: https://t.co/0lA2HY4IOJ#BSNL #BSNLIndia #DigitalIndia #BiTV #Entertainment pic.twitter.com/VQ6e946dWx
— BSNL India (@BSNLCorporate) August 28, 2025
ಪೋಸ್ಟ್ ಪ್ರಕಾರ, ಬಳಕೆದಾರರು SonyLIV, SheemaroMe, SunNXT, Fancode, ETV Win ಸೇರಿದಂತೆ 25 OTT ಅಪ್ಲಿಕೇಶನ್ಗಳಿಗೆ ಪ್ರವೇಶವನ್ನು ಪಡೆಯುತ್ತಾರೆ. ಇದರ ಹೊರತಾಗಿ 450ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್ಗಳನ್ನು ನೀಡಲಾಗುವುದು. ಈ ಚಾನೆಲ್ಗಳು ವಿವಿಧ ಪ್ರಕಾರಗಳ ಡಿಜಿಟಲ್ ಟಿವಿಗೆ ಪ್ರವೇಶವನ್ನು ಒದಗಿಸುತ್ತವೆ. ಕಂಪನಿಯು ಇದನ್ನು ಆಲ್-ಇನ್-ಒನ್ ಎಂಟರ್ಟೈನ್ಮೆಂಟ್ ಎಂದು ಹೆಸರಿಸಿದೆ.
ಇನ್ನೂ ಎರಡು ಯೋಜನೆಗಳು
ಇದಲ್ಲದೆ BSNL ತನ್ನ ಬಳಕೆದಾರರಿಗೆ ಇನ್ನೂ ಎರಡು ಕೈಗೆಟುಕುವ ಯೋಜನೆಗಳನ್ನು ನೀಡುತ್ತಿದೆ. ಟೆಲಿಕಾಂ ಟಾಕ್ ವರದಿಯ ಪ್ರಕಾರ, ಕಂಪನಿಯು 28 ರೂ.ಗೆ 30 ದಿನಗಳ ವ್ಯಾಲಿಡಿಟಿಯೊಂದಿಗೆ ಮನರಂಜನಾ ಪ್ಯಾಕ್ ಅನ್ನ ನೀಡುತ್ತಿದೆ, ಇದರಲ್ಲಿ ಬಳಕೆದಾರರು 7 OTT ಅಪ್ಲಿಕೇಶನ್ಗಳಿಗೆ ಪ್ರವೇಶವನ್ನು ಪಡೆಯುತ್ತಾರೆ. ಇದರೊಂದಿಗೆ ಬಳಕೆದಾರರು 9 ಉಚಿತ OTT ಅಪ್ಲಿಕೇಶನ್ಗಳನ್ನ ಸಹ ಪಡೆಯುತ್ತಾರೆ.
ಇದಲ್ಲದೆ ಕಂಪನಿಯು 29 ರೂ.ಗಳ ಯೋಜನೆಯನ್ನ ಹೊಂದಿದ್ದು, ಇದರಲ್ಲಿ ಬಳಕೆದಾರರು 28 ರೂ.ಗಳ ಯೋಜನೆಯಂತಹ ಪ್ರಯೋಜನಗಳನ್ನ ಪಡೆಯುತ್ತಾರೆ. ಆದರೆ ಈ ಎರಡೂ ಯೋಜನೆಗಳಲ್ಲಿ ಲಭ್ಯವಿರುವ OTT ಅಪ್ಲಿಕೇಶನ್ಗಳು ಸಂಪೂರ್ಣವಾಗಿ ಭಿನ್ನವಾಗಿವೆ. ಈ ಎರಡೂ ಯೋಜನೆಗಳನ್ನು ಪ್ರದೇಶವನ್ನು ಗಮನದಲ್ಲಿಟ್ಟುಕೊಂಡು ಪ್ರಾರಂಭಿಸಲಾಗಿದೆ.