)
Potato Chips Business: ನೀವು ಹೆಚ್ಚು ಓದಿಲ್ಲವೇ? ಅಥವಾ ನೀವು ಬಯಸಿದ ಕೆಲಸ ಸಿಕ್ಕಿಲ್ಲವೇ? ಆದರೆ ಚಿಂತಿಸಬೇಡಿ... ನಾವು ನಿಮಗಾಗಿ ಭರ್ಜರಿ ಲಾಭ ತಂದುಕೊಡುವ ಬ್ಯುಸಿನೆಸ್ ಐಡಿಯಾವನ್ನು ತಂದಿದ್ದೇವೆ. ಈ ವ್ಯವಹಾರದಲ್ಲಿ ಯಾವುದೇ ಅಪಾಯವಿಲ್ಲ. ಕಡಿಮೆ ಬಂಡವಾಳದಲ್ಲಿ ನೀವು ಕೈತುಂಬಾ ಹಣ ಗಳಿಸಬಹುದು. ಈ ಬ್ಯುಸಿನೆಸ್ ಯಾವುದು ಅಂತೀರಾ? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
ಪೋಷಕರು ತಮ್ಮ ಮಕ್ಕಳಿಗೆ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಶಿಕ್ಷಣ ಕೊಡಿಸುತ್ತಾರೆ. ಕೆಲವರಿಗೆ ಹೆಚ್ಚು ಓದಲು ಆಗುವುದಿಲ್ಲ. ಯಾರೇ ಆಗಿರಲಿ ಇಂಟರ್ಮೀಡಿಯೇಟ್ ಅಥವಾ ಹತ್ತನೇ ತರಗತಿಯವರೆಗೆ ಮಾತ್ರ ಓದಿ ಉದ್ಯೋಗ ಪಡೆಯಲು ಪ್ರಯತ್ನಿಸುತ್ತಿದ್ದರೆ, ಇಲ್ಲಿದೆ ಗುಡ್ ನ್ಯೂಸ್. ನೀವು ಕಡಿಮೆ ಓದಿದರೂ ಸಹ ಚಿಂತಿಸಬೇಕಾಗಿಲ್ಲ, ನಿಮಗೆ ಸರಿಯಾದ ಕೆಲಸ ಸಿಗದೆ ಮನೆಯಲ್ಲಿ ಕುಳಿತಿದ್ದರೂ ಸಹ ಟೆನ್ಶನ್ ಮಾಡ್ಕೋಬೇಡಿ. ಇಂದು ನಾವು ನಿಮಗೆ ಒಂದು ಬ್ಯುಸಿನೆಸ್ ಐಡಿಯಾವನ್ನ ತಿಳಿಸಿಕೊಡಲಿದ್ದೇವೆ. ಈ ವ್ಯವಹಾರದಿಂದ ನೀವು ಯಾವುದೇ ಅಪಾಯವಿಲ್ಲದೆ ಲಕ್ಷ ಲಕ್ಷ ಲಾಭ ಗಳಿಸಬಹುದು.
ಆ ವ್ಯವಹಾರ ಏನು ಅಂತ ಯೋಚಿಸುತ್ತಿದ್ದೀರಾ? ಆಲೂಗಡ್ಡೆ ಚಿಪ್ಸ್ ತಯಾರಿಕೆ.! ಈ ವ್ಯವಹಾರಕ್ಕೆ ಹೆಚ್ಚಿನ ಹೂಡಿಕೆ ಅಗತ್ಯವಿಲ್ಲ. ಅಲ್ಲದೆ ಇದರಲ್ಲಿ ಲಾಭವೂ ಚೆನ್ನಾಗಿದೆ. ಚಿಪ್ಸ್ ತಯಾರಿಸಲು ದೊಡ್ಡ ಯಂತ್ರಗಳ ಅಗತ್ಯವಿಲ್ಲ. ಕೇವಲ ಸಣ್ಣ ಉಪಕರಣಗಳು ಸಾಕು. ಬೇರೆ ರೀತಿಯಲ್ಲಿ ಹೇಳುವುದಾದರೆ ಇದು ಅಪಾಯವಿಲ್ಲದ ಮತ್ತು ಕಡಿಮೆ ಬಳವಾಳ ಬೇಡುವ ಅತ್ಯುತ್ತಮ ವ್ಯವಹಾರವಾಗಿದೆ.
ಆಲೂಗಡ್ಡೆ ಚಿಪ್ಸ್ ತಯಾರಿಸಲು ನಿಮಗೆ ಬೇಕಾಗಿರುವುದು ಆಲೂಗಡ್ಡೆ, ಎಣ್ಣೆ, ಉಪ್ಪು, ಮಸಾಲೆಗಳು, ತುಂಡುಗಳನ್ನು ಕತ್ತರಿಸಲು ಕಟ್ಟರ್ ಮತ್ತು ಒಂದು ದೊಡ್ಡ ಬಟ್ಟಲು. ನಂತರ ಚಿಪ್ಸ್ ಮಾರಾಟ ಮಾಡಲು ಸಣ್ಣ ಗಾತ್ರದ ಮುಚ್ಚಿದ ಪ್ಯಾಕೆಟ್ಗಳು ಬೇಕಾಗುತ್ತವೆ. ಸಾಮಾನ್ಯವಾಗಿ ನಿಮ್ಮ ಮನೆಯಲ್ಲಿ ಶೆಡ್ನಂತಹ ಸ್ಥಳವಿದ್ದರೆ ಸಾಕು, ನೀವು ಅಲ್ಲಿಯೇ ಪುಟ್ಟ ಅಂಗಡಿ ಮಾಡಿಕೊಂಡು ಸ್ಥಳೀಯವಾಗಿ ಮಾರಾಟ ಮಾಡಬಹುದು. ಇದಲ್ಲದೇ ನೀವು ಸಗಟು ಅಂಗಡಿಗಳಿಗೆ ಮಾರಾಟ ಮಾಡಿದರೆ, ಕಚ್ಚಾ ವಸ್ತುಗಳ ಬೆಲೆಗಿಂತ ಹೆಚ್ಚಿನ ಲಾಭವನ್ನು ನೀವು ಪಡೆಯುತ್ತೀರಿ.
ನೀವು ಸುಮಾರು 10 ಕೆಜಿ ಆಲೂಗಡ್ಡೆ ಚಿಪ್ಸ್ ಮಾರಾಟ ಮಾಡಿದರೆ, ಸುಮಾರು 1,000 ರಿಂದ 2,000 ರೂ. ಗಳಿಸಬಹುದು. ಅಲ್ಲದೆ ಸ್ಥಳೀಯವಾಗಿ ಹೊಂದಿರುವ ಅಂಗಡಿಗಳ ಸಂಖ್ಯೆಯನ್ನು ಅವಲಂಬಿಸಿ, ನೀವು ದಿನಕ್ಕೆ ಸುಮಾರು ಮೂರರಿಂದ ನಾಲ್ಕು ಸಾವಿರ ರೂ.ವರೆಗೂ ಗಳಿಸಬಹುದು.
ಈ ವ್ಯವಹಾರದಲ್ಲಿ ಗುಣಮಟ್ಟ ಮತ್ತು ಪ್ರಮಾಣ ಬಹಳ ಮುಖ್ಯ. ನೀವು ಆ ಎರಡನ್ನೂ ನಿರ್ವಹಿಸಲು ಸಾಧ್ಯವಾದರೆ, ಮಾರಾಟದ ಜೊತೆಗೆ ಲಾಭವೂ ಚೆನ್ನಾಗಿರುತ್ತದೆ. ವರ್ಷದ ೩೬೫ ದಿನವೂ ಮಾಡಬಹುದಾದ ಈ ವ್ಯವಹಾರದಲ್ಲಿ ಲಾಭವು ನಿಮ್ಮ ನಿರೀಕ್ಷೆಗಿಂತಲೂ ಹೆಚ್ಚಾಗಿರುತ್ತದೆ. ಅಲ್ಲದೆ ನೀವು ಸಾಮಾಜಿಕ ಮಾಧ್ಯಮ ಖಾತೆಗಳ ಸಹಾಯದಿಂದ ಮಾರ್ಕೆಟಿಂಗ್ ಮಾಡಿದರೆ, ಖಂಡಿತ ತಿಂಗಳಿಗೆ 50 ಸಾವಿರದಿಂದ 60 ಸಾವಿರ ರೂ.ಗಳವರೆಗೆ ಗಳಿಸುತ್ತೀರಿ. ಅತ್ಯಂತ ಕಡಿಮೆ ಬಂಡವಾಳದಿಂದ ಶುರು ಮಾಡಿ ನೀವು ಕೈತುಂಬಾ ಹಣ ಗಳಿಸಬಹುದು.