)
Amazon Smart TV Offers: ಅಮೆಜಾನ್ ಫೆಸ್ಟಿವಲ್ ಸೇಲ್ ಒಂದು ತಿಂಗಳಿನಿಂದ ನಡೆಯುತ್ತಿದೆ. ಈ ಸೇಲ್ನಲ್ಲಿ ಸ್ಮಾರ್ಟ್ ಟಿವಿಗಳನ್ನ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಬ್ರಾಂಡೆಡ್ ಸ್ಮಾರ್ಟ್ ಟಿವಿಗಳು ಕೇವಲ 6000ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿದೆ. ಸ್ಯಾಮ್ಸಂಗ್, ಟಿಸಿಎಲ್ ಮತ್ತು ಶಿಯೋಮಿಯಂತಹ ಜನಪ್ರಿಯ ಬ್ರ್ಯಾಂಡ್ಗಳ ಸ್ಮಾರ್ಟ್ ಟಿವಿಗಳ ಮೇಲೆ ಅಮೆಜಾನ್ ಭಾರೀ ರಿಯಾಯಿತಿಗಳನ್ನ ನೀಡುತ್ತಿದೆ.
ವಿಜಿಯೊ ವರ್ಲ್ಡ್: ಅಮೆಜಾನ್ನಲ್ಲಿ ಹಲವು ಸ್ಮಾರ್ಟ್ ಟಿವಿ ಡೀಲ್ಗಳಿವೆ. ಈ ಪೈಕಿ ವಿಜಿಯೊ ವರ್ಲ್ಡ್ ಟಿವಿ ಕೂಡ ಒಂದು. 32 ಇಂಚಿನ ಎಲ್ಇಡಿ ಸ್ಮಾರ್ಟ್ ಟಿವಿ ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ನೊಂದಿಗೆ ಬರುತ್ತದೆ. ಅಮೆಜಾನ್ ಪ್ರೈಮ್ ವಿಡಿಯೋ, ಜಿಯೋ ಹಾಟ್ಸ್ಟಾರ್ ಮತ್ತು ಯೂಟ್ಯೂಬ್ನಂತಹ ಅಪ್ಲಿಕೇಶ್ಗಳನ್ನ ಇದರಲ್ಲಿ ಮೊದಲೇ ಸ್ಥಾಪಿಸಲಾಗಿರುತ್ತದೆ. ಈ ಟಿವಿಯ ಬೆಲೆ ಕೇವಲ 5,999 ರೂ. ಇದೆ.
ಫಿಲಿಪ್ಸ್ ಟಿವಿ: ಫಿಲಿಪ್ಸ್ನ 32 ಇಂಚಿನ ಸ್ಮಾರ್ಟ್ ಟಿವಿಯ ಮೂಲ ಬೆಲೆ 22,999 ರೂ.ಗಳಾಗಿದ್ದು, ಇದನ್ನ ಕೇವಲ 11,149 ರೂ.ಗೆ ಅಂದರೆ ಶೇ.50ರಷ್ಟು ರಿಯಾಯಿತಿಯಲ್ಲಿ ನೀಡಲಾಗುತ್ತಿದೆ.
ಶಿಯೋಮಿ ಟಿವಿ: ಈ ಸ್ಮಾರ್ಟ್ ಟಿವಿಯನ್ನ ಶೇ.52ರಷ್ಟು ರಿಯಾಯಿತಿಯಲ್ಲಿ ನೀಡಲಾಗುತ್ತಿದೆ. 24,999 ರೂ. ಬೆಲೆಯ ಈ ದುಬಾರಿ ಟಿವಿಯನ್ನ ಕೇವಲ 11,999 ರೂ.ಗಳಿಗೆ ನೀಡಲಾಗುತ್ತಿದೆ. ಇದು HD ಸ್ಕ್ರೀನ್ ಹೊಂದಿದೆ.
TCL ಸ್ಮಾರ್ಟ್ ಟಿವಿ: TCL ಕಂಪನಿಯ ಸ್ಮಾರ್ಟ್ ಟಿವಿಯ ಬೆಲೆ 22,999 ರೂ. ಇದೆ. ಇದರ ಮೇಲೆ ಶೇ.39ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಅಂದರೆ ಈ ಟಿವಿ 13,990 ರೂ.ಗಳಿಗೆ ಲಭ್ಯವಿದೆ.
ಸ್ಯಾಮ್ಸಂಗ್ ಟಿವಿ: ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಟಿವಿಯ ಆರಂಭಿಕ ಬೆಲೆ 17,900 ರೂ. ಇದೆ. ಆದರೆ ಅಮೆಜಾನ್ ಈಗ ಇದನ್ನ ಕೇವಲ 13,900 ರೂ.ಗೆ ನೀಡುತ್ತಿದೆ. ಅಂದರೆ ಶೇ.22ರಷ್ಟು ಬೆಲೆ ಕಡಿತದ ಲಾಭ ನಿಮಗೆ ಸಿಗಲಿದೆ. ಈ ಕೊಡುಗೆಗಳು ಶೀಘ್ರದಲ್ಲೇ ಕೊನೆಗೊಳ್ಳುತ್ತವೆ. ಆದ್ದರಿಂದ ಈ ನೀವು ಸ್ಮಾರ್ಟ್ ಟಿವಿ ಖರೀದಿಸಲು ಇದುವೇ ಉತ್ತಮ ಸಮಯ ಎಂದು ಹೇಳಬಹುದು.