ಪಿಎಫ್ ಬಡ್ಡಿದರ ಏರಿಕೆ ಬೆನ್ನಲ್ಲೇ ಮತ್ತೊಂದು ಗುಡ್ ನ್ಯೂಸ್ !ಇನ್ನು ಮುಂದೆ ಈ ಕಾರಣಕ್ಕೆ ಕ್ಲೈಂ ತಿರಸ್ಕರಿಸುವ ಹಾಗಿಲ್ಲ

EPFO ತನ್ನ ಸದಸ್ಯರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ಈ ನಿಯಮಗಳೊಂದಿಗೆ ಇದೀಗ ಸೇವಿಂಗ್ಸ್ ಮೊತ್ತವನ್ನು ಪಡೆಯುವುದು ಸುಲಭವಾಗಲಿದೆ. 

Written by - Ranjitha R K | Last Updated : May 26, 2025, 11:56 AM IST
  • ಉದ್ಯೋಗಿಗಳಿಗೆ ದೊಡ್ಡ ಮಟ್ಟದ ಪರಿಹಾರ ಸಿಗುವ ನಿರ್ಧಾರ ತೆಗೆದುಕೊಂಡ
    EPFO
  • ಸರ್ವಿಸ್ ಓವರ್ ಲ್ಯಾಪ್ ಎಂದರೇನು?
  • ಸರ್ವಿಸ್ ಓವರ್ ಲ್ಯಾಪ್ ಕ್ಲೈಮ್‌ಗೆ ಆಧಾರವಲ್ಲ
ಪಿಎಫ್ ಬಡ್ಡಿದರ ಏರಿಕೆ ಬೆನ್ನಲ್ಲೇ ಮತ್ತೊಂದು ಗುಡ್ ನ್ಯೂಸ್ !ಇನ್ನು ಮುಂದೆ ಈ ಕಾರಣಕ್ಕೆ ಕ್ಲೈಂ ತಿರಸ್ಕರಿಸುವ ಹಾಗಿಲ್ಲ

ಬೆಂಗಳೂರು : ನೀವು ಉದ್ಯೋಗದಲ್ಲಿದ್ದು ಪ್ರತಿ ತಿಂಗಳು ವೇತನದಿಂದ PF ಕಡಿತಗೊಳಿಸುತ್ತಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಉದ್ಯೋಗಿಗಳಿಗೆ ದೊಡ್ಡ ಮಟ್ಟದ ಪರಿಹಾರ ಸಿಗುವ ನಿರ್ಧಾರವನ್ನು ತೆಗೆದುಕೊಂಡಿದೆ. ಇನ್ನು ಮುಂದೆ ಸೇವಾ ಅವಧಿಯಲ್ಲಿ ಓವರ್ ಲ್ಯಾಪ್ ಆಗಿದ್ದರೆ ನೌಕರರ ಪಿಎಫ್ ಕ್ಲೈಂ ಅನ್ನು ತಿರಸ್ಕರಿಸಲಾಗುವುದಿಲ್ಲ. ಇದರೊಂದಿಗೆ, ಕ್ಲೈಂ ಮತ್ತು ಹಣ ಹಿಂಪಡೆಯಲು ಮಾನವ ಸಂಪನ್ಮೂಲ ಇಲಾಖೆಯಿಂದ ಪರಿಶೀಲನೆ ಮಾಡಿಸುವ ಅಗತ್ಯವಿರುವುದಿಲ್ಲ. ಹೊಸ ನಿಯಮಗಳೊಂದಿಗೆ, ಉದ್ಯೋಗಿಗಳು ತಮ್ಮ ಸೇವಿಂಗ್ಸ್ ಅನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ.

Add Zee News as a Preferred Source

ಸರ್ವಿಸ್ ಓವರ್ ಲ್ಯಾಪ್ ಎಂದರೇನು? : 
ಒಬ್ಬ ಉದ್ಯೋಗಿ ಒಂದೇ ದಿನಾಂಕದಂದು ಎರಡು ವಿಭಿನ್ನ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾನೆಂದು ದಾಖಲೆಗಳಲ್ಲಿ ತೋರಿಸಿದಾಗ ಅದನ್ನು ಸರ್ವಿಸ್ ಓವರ್ ಲ್ಯಾಪ್ ಎಂದು ಕರೆಯಲಾಗುತ್ತದೆ. ಒಂದು ಕಂಪನಿಯ ಕೆಲಸ ಬಿಟ್ಟ ದಿನಾಂಕ ಮತ್ತು ಇನ್ನೊಂದು ಕಂಪನಿಗೆ ಸೇರಿದ ದಿನಾಂಕದಲ್ಲಿ ಸಮಸ್ಯೆಗಳಿದ್ದಾಗ ಹೀಗಾಗುತ್ತದೆ. ಈ ಹಿಂದೆ, ಈ ರೀತಿಯ ಸರ್ವಿಸ್ ಓವರ್ ಲ್ಯಾಪ್ ಆದಾಗ ಇಪಿಎಫ್‌ಒ ಪ್ರಾದೇಶಿಕ ಕಚೇರಿಗಳು ಕ್ಲೇಮ್‌ಗಳನ್ನು ತಿರಸ್ಕರಿಸುತ್ತಿದ್ದವು. ಆದರೆ, ಮೇ 20, 2025 ರಂದು ಹೊರಡಿಸಲಾದ ಸುತ್ತೋಲೆಯಲ್ಲಿ, ಸರ್ವಿಸ್ ಓವರ್ ಲ್ಯಾಪ್  ಇದ್ದರೂ ಕ್ಲೇಮ್ ಅನ್ನು ಸ್ವೀಕರಿಸಬೇಕಾಗುತ್ತದೆ ಎಂದು EPFO ​​ಹೇಳಿದೆ.

ಇದನ್ನೂ ಓದಿ : ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಸರ್ಕಾರ ಅಸ್ತು!ಪಿಯೂನ್ ನಿಂದ ಅಧಿಕಾರಿಯವರೆಗೆ ಯಾರಿಗೆ ಎಷ್ಟು ವೇತನ ಹೆಚ್ಚಳ ? ಇಲ್ಲಿದೆ ಸ್ಪಷ್ಟ ಚಿತ್ರಣ

ಸರ್ವಿಸ್ ಓವರ್ ಲ್ಯಾಪ್ ಕ್ಲೈಮ್‌ಗೆ ಆಧಾರವಲ್ಲ : 
ಸರ್ವಿಸ್ ಓವರ್ ಲ್ಯಾಪ್ ನಿಂದಾಗಿ  ಟ್ರಾನ್ಸ್ಫರ್ ಕ್ಲೈಂ ಅನ್ನು ತಿರಸ್ಕರಿಸಬಾರದು ಎಂದು ಇಪಿಎಫ್‌ಒ ತನ್ನ ಎಲ್ಲಾ ಕಚೇರಿಗಳಿಗೆ ಸುತ್ತೋಲೆ ಹೊರಡಿಸಿದೆ. ಸರ್ವಿಸ್ ಓವರ್ ಲ್ಯಾಪ್  ಹಲವು ಕಾರಣಗಳಿಂದ ಸಂಭವಿಸಬಹುದು'ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಹಾಗಾಗಿ ಇದರ ಆಧಾರದ ಮೇಲೆ ಕ್ಲೈಮ್ ಅನ್ನು ತಿರಸ್ಕರಿಸಬಾರದು. ಸರ್ವಿಸ್ ಓವರ್ ಲ್ಯಾಪ್  ಅನ್ನು ಸ್ಪಷ್ಟಪಡಿಸುವ  ಅಗತ್ಯವಿದ್ದಲ್ಲಿ ಮಾತ್ರ ಕ್ಲೈಮ್ ಅನ್ನು ನಿಲ್ಲಿಸಲಾಗುತ್ತದೆ.

ಉದ್ಯೋಗಿಗಳಿಗೆ ದೊಡ್ಡ ಪರಿಹಾರ:
ಇಪಿಎಫ್‌ಒ ತೆಗೆದುಕೊಂಡ ನಿರ್ಧಾರವು 7 ಕೋಟಿ ವೇತನ ವರ್ಗದ ಲಕ್ಷಾಂತರ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಉದ್ಯೋಗಿಗಳಿಗೆ, ಭವಿಷ್ಯ ನಿಧಿಯು ನಿವೃತ್ತಿ ಆದಾಯ ಮತ್ತು ಆರ್ಥಿಕ ಭದ್ರತೆಯ ದೊಡ್ಡ ಮೂಲವಾಗಿದೆ. ಇದು ಅವರ ಜೀವಮಾನದ ಉಳಿತಾಯದ ಪ್ರಮುಖ ಭಾಗವಾಗಿದೆ. ಒಬ್ಬ ಉದ್ಯೋಗಿ 20 ವರ್ಷಗಳ ಕಾಲ ಕೆಲಸ ಮಾಡಿದರೆ ಮತ್ತು ಎರಡು ಕಂಪನಿಗಳ ನಡುವೆ ಒಂದು ದಿನದ  ಸರ್ವಿಸ್ ಓವರ್ ಲ್ಯಾಪ್ ಇದ್ದರೂ ಹಣವು ಸಿಲುಕಿಕೊಳ್ಳುತ್ತದೆ. ವಿಶೇಷವಾಗಿ ಉದ್ಯೋಗಿಯ ಮರಣದ ನಂತರ, ಅವರ ಕುಟುಂಬವು ಈ ಮೊತ್ತವನ್ನು ಹಿಂಪಡೆಯುವಲ್ಲಿ ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತಿತ್ತು. 

ಇದನ್ನೂ ಓದಿ : ನೀವು ಚಿನ್ನ ಖರೀದಿಸಲು ಬಯಸಿದ್ರೆ ಚಿನ್ನದ ನಾಣ್ಯವನ್ನ ಖರೀದಿಸಿ; ಇದರ ಅದ್ಭುತ ಪ್ರಯೋಜನಗಳು ಇಲ್ಲಿವೆ

8.25% ಬಡ್ಡಿ ದರ ಅನುಮೋದನೆ : 
ಈ ಹಿಂದೆ, 2024-25ರ ಹಣಕಾಸು ವರ್ಷಕ್ಕೆ ಪಿಎಫ್ ಖಾತೆಯಲ್ಲಿ ಠೇವಣಿ ಇಟ್ಟ ಹಣದ ಮೇಲಿನ ಬಡ್ಡಿದರವನ್ನು 8.25% ನಲ್ಲಿ ಉಳಿಸಿಕೊಳ್ಳುವ ಇಪಿಎಫ್‌ಒ ನಿರ್ಧಾರವನ್ನು ಹಣಕಾಸು ಸಚಿವಾಲಯ ಅನುಮೋದಿಸಿತ್ತು. ಫೆಬ್ರವರಿ ತಿಂಗಳಲ್ಲಿ, ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು ಫೆಬ್ರವರಿ 28 ರಂದು ನಡೆದ ಸಭೆಯಲ್ಲಿ ಬಡ್ಡಿದರವನ್ನು 8.25% ನಲ್ಲಿ ಕಾಯ್ದುಕೊಳ್ಳಲು ನಿರ್ಧರಿಸಿತ್ತು. 2023-24ನೇ ಹಣಕಾಸು ವರ್ಷಕ್ಕೆ, ಸರ್ಕಾರವು ಬಡ್ಡಿದರವನ್ನು 8.15% ರಿಂದ 8.25% ಕ್ಕೆ 0.10% ರಷ್ಟು ಹೆಚ್ಚಿಸಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News