ಈ 3 ಸರ್ಕಾರಿ ಬ್ಯಾಂಕುಗಳಿಂದ ಕೇವಲ 8.10% ಬಡ್ಡಿಗೆ ಗೃಹ ಸಾಲ; 20 ವರ್ಷಕ್ಕೆ ₹40 ಲಕ್ಷ ಸಾಲದ EMI ಎಷ್ಟು?

Cheapest home loans: ನಿಮ್ಮ CIBIL ಸ್ಕೋರ್ ಅತ್ಯುತ್ತಮವಾಗಿದ್ದರೆ ಮಾತ್ರ ನಿಮಗೆ ಅಗ್ಗದ ದರದಲ್ಲಿ ಗೃಹ ಸಾಲವನ್ನು ನೀಡಲಾಗುತ್ತದೆ. ಅಂದರೆ ನಿಮ್ಮ ಲೋನ್ ಪಾವತಿ ಹಿಸ್ಟರಿ ಉತ್ತಮವಾಗಿರಬೇಕು. ಅಂದಾಗ ಮಾತ್ರ ಬ್ಯಾಂಕುಗಳು ನಿಮಗೆ ಗೃಹ ಸಾಲವನ್ನು ಮಂಜೂರು ಮಾಡುತ್ತವೆ.  

Written by - Puttaraj K Alur | Last Updated : Mar 25, 2025, 03:08 PM IST
  • ಸೆಂಟ್ರಲ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ & ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
  • ಈ ಮೂರು ಬ್ಯಾಂಕುಗಳು ಕೇವಲ 8.10% ಆರಂಭಿಕ ಬಡ್ಡಿದರದಲ್ಲಿ ಗೃಹ ಸಾಲ ನೀಡುತ್ತಿದೆ
  • ಕೆಲವು ಬ್ಯಾಂಕುಗಳು ಗೃಹ ಸಾಲದ ಮೇಲಿನ ಸಂಸ್ಕರಣಾ ಶುಲ್ಕವನ್ನು ಮನ್ನಾ ಮಾಡಿವೆ
ಈ 3 ಸರ್ಕಾರಿ ಬ್ಯಾಂಕುಗಳಿಂದ ಕೇವಲ 8.10% ಬಡ್ಡಿಗೆ ಗೃಹ ಸಾಲ; 20 ವರ್ಷಕ್ಕೆ ₹40 ಲಕ್ಷ ಸಾಲದ EMI ಎಷ್ಟು?

Home loans: ನಿರಂತರ ದುಬಾರಿ ಗೃಹ ಸಾಲಗಳ ಅವಧಿಯ ನಂತರ ಗ್ರಾಹಕರಿಗೆ ಕೊಂಚ ನೆಮ್ಮದಿಯ ಸುದ್ದಿ ಸಿಕ್ಕಿದೆ. ಕೆಲವು ಸರ್ಕಾರಿ ಬ್ಯಾಂಕುಗಳು ಕೇವಲ 8.10 ಪ್ರತಿಶತದ ಆರಂಭಿಕ ಬಡ್ಡಿದರದಲ್ಲಿ ಗೃಹ ಸಾಲವನ್ನು ನೀಡುತ್ತಿವೆ. ನೀವು ಗೃಹ ಸಾಲ ಪಡೆಯಲು ಯೋಚಿಸುತ್ತಿದ್ದರೆ, ಈ ಬ್ಯಾಂಕುಗಳನ್ನು ಸಂಪರ್ಕಿಸಿ ಅಗ್ಗದ ದರದಲ್ಲಿ ಸಾಲ ಪಡೆಯಬಹುದು. ಈ ಬ್ಯಾಂಕುಗಳಲ್ಲಿ ಕೆಲವು ಸಂಸ್ಕರಣಾ ಶುಲ್ಕವನ್ನು ಸಹ ವಿಧಿಸುತ್ತಿಲ್ಲ. ಕೆಲ ಬ್ಯಾಂಕುಗಳು ಮಾರ್ಚ್ 31ರವರೆಗೆ ಸಂಸ್ಕರಣಾ ಶುಲ್ಕವನ್ನ ಮನ್ನಾ ಮಾಡಿವೆ. ಪ್ರಸ್ತುತ ಕೇವಲ 8.10 ಪ್ರತಿಶತದ ಆರಂಭಿಕ ಬಡ್ಡಿದರದ ಲಭ್ಯವಿರುವ ಬ್ಯಾಂಕುಗಳ ಗೃಹ ಸಾಲದ ಮಾಹಿತಿ ಇಲ್ಲಿದೆ ನೋಡಿ...

Add Zee News as a Preferred Source

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ

ಸಾರ್ವಜನಿಕ ವಲಯದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಪ್ರಸ್ತುತ ಕೇವಲ 8.10 ಪ್ರತಿಶತದ ಆರಂಭಿಕ ಬಡ್ಡಿದರದಲ್ಲಿ ಗೃಹ ಸಾಲಗಳನ್ನು ನೀಡುತ್ತಿದೆ. ವಿಶೇಷವೆಂದರೆ ಬ್ಯಾಂಕ್ 20,000 ರೂ.ಗಳವರೆಗಿನ ಸಂಸ್ಕರಣಾ ಶುಲ್ಕವಾಗಿ 0.50% ಜೊತೆಗೆ GST ವಿಧಿಸುತ್ತಿತ್ತು. ಆದರೆ ಇದನ್ನು ಇದೇ ಮಾರ್ಚ್ 31ರವರೆಗೆ ಮನ್ನಾ ಮಾಡಲಾಗಿದೆ. ಅಂದರೆ ನೀವು ಯಾವುದೇ ಸಂಸ್ಕರಣಾ ಶುಲ್ಕ ಪಾವತಿಸಬೇಕಾಗಿಲ್ಲ. ಆದರೆ ದಾಖಲೆ ಶುಲ್ಕವಾಗಿ 1,350 ರೂ. ಜೊತೆಗೆ GST ಪಾವತಿಸಬೇಕು.

ಇದನ್ನೂ ಓದಿ: ಅರ್ಧ ಸುಟ್ಟ ನೋಟುಗಳನ್ನು ಬ್ಯಾಂಕ್‌ನಲ್ಲಿ ಬದಲಾಯಿಸಲು ಸಾಧ್ಯವೇ? ಆರ್‌ಬಿಐ ನಿಯಮ ಹೇಳುವುದೇನು?   

ಬ್ಯಾಂಕ್ ಆಫ್ ಮಹಾರಾಷ್ಟ್ರ

ನೀವು ಸಾರ್ವಜನಿಕ ವಲಯದ ಬ್ಯಾಂಕ್ ಆಫ್ ಮಹಾರಾಷ್ಟ್ರದಿಂದ ಕೇವಲ 8.10 ಪ್ರತಿಶತದಷ್ಟು ಆರಂಭಿಕ ಬಡ್ಡಿದರದಲ್ಲಿ ಗೃಹ ಸಾಲವನ್ನು ಪಡೆಯಬಹುದು. ಬ್ಯಾಂಕ್ ಆಫ್ ಮಹಾರಾಷ್ಟ್ರ ಸಹ ಪ್ರಸ್ತುತ ಗೃಹ ಸಾಲಗಳ ಮೇಲೆ ಯಾವುದೇ ಸಂಸ್ಕರಣಾ ಶುಲ್ಕವನ್ನು ವಿಧಿಸುತ್ತಿಲ್ಲ. ನೀವು ಮಹಿಳೆ ಅಥವಾ ರಕ್ಷಣಾ ಸಿಬ್ಬಂದಿಯಾಗಿದ್ದರೆ ನಿಮಗೆ ಶೇ.0.05ರಷ್ಟು ಹೆಚ್ಚುವರಿ ರಿಯಾಯಿತಿ ಸಿಗುತ್ತದೆ. ಯಾವುದೇ pre-payment, pre-closure ಅಥವಾ part payment ಶುಲ್ಕ ಪಾವತಿಸುವ ಅಗತ್ಯವಿಲ್ಲ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

ಸಾರ್ವಜನಿಕ ವಲಯದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಸ್ತುತ ಕೇವಲ 8.10 ಪ್ರತಿಶತದ ಆರಂಭಿಕ ಬಡ್ಡಿದರದಲ್ಲಿ ಗೃಹ ಸಾಲವನ್ನು ನೀಡುತ್ತಿದೆ. ಈ ಬ್ಯಾಂಕ್ ಸಾಲದ ಮೊತ್ತದ 0.50% ಅನ್ನು ಸಂಸ್ಕರಣಾ ಶುಲ್ಕವಾಗಿ ವಿಧಿಸುತ್ತಿದೆ.

ಇದನ್ನೂ ಓದಿ: ಪ್ರಿಲ್ 1ರಿಂದ ಈ ಮೊಬೈಲ್ ಸಂಖ್ಯೆಗಳಲ್ಲಿ UPI ಕೆಲಸ ಮಾಡಲ್ಲ; ತಕ್ಷಣವೇ ಈ ಕೆಲಸ ಮಾಡಿ!!

CIBIL ಸ್ಕೋರ್ ಚೆನ್ನಾಗಿರಬೇಕು

ನಿಮ್ಮ CIBIL ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಅತ್ಯುತ್ತಮವಾಗಿದ್ದರೆ ಮಾತ್ರ ಈ ಮೂರು ಬ್ಯಾಂಕುಗಳು ನಿಮಗೆ ಕೇವಲ 8.10 ಪ್ರತಿಶತಕ್ಕೆ ಗೃಹ ಸಾಲವನ್ನು ನೀಡುತ್ತವೆ. CIBIL ಸ್ಕೋರ್ 300 ರಿಂದ 900ರ ನಡುವೆ ಇರಬೇಕೆಂದು ಅಂದಾಜಿಸಲಾಗಿದೆ. ವಾಸ್ತವವಾಗಿ CIBIL ಸ್ಕೋರ್ ನಿಮ್ಮ ಪಾವತಿ ಹಿಸ್ಟರಿ ಮತ್ತು ಸಮಯಕ್ಕೆ ಸರಿಯಾಗಿ ಪಾವತಿ ಮಾಡುವ ಬಗ್ಗೆ ನೀವು ಎಷ್ಟು ಗಂಭೀರವಾಗಿರುತ್ತೀರಿ ಎಂಬುದನ್ನು ಪ್ರತಿಬಿಂಬಿಸುತ್ತದೆ. ಗೃಹ ಸಾಲದ ಅನುಮೋದನೆಯು ಕೆಲವೊಮ್ಮೆ ಬ್ಯಾಂಕುಗಳ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ಬಗ್ಗೆ ಸಂಪೂರ್ಣವಾಗಿ ಸ್ಟಡಿ ಮಾಡಿದ ನಂತರವೇ ಕೆಲವು ಬ್ಯಾಂಕುಗಳು ಗೃಹ ಸಾಲವನ್ನು ಅನುಮೋದಿಸುತ್ತವೆ.

40 ಲಕ್ಷ ರೂ.ಗಳ ಗೃಹ ಸಾಲದ ಮೇಲಿನ ಇಎಂಐ ಎಷ್ಟು?

ನೀವು ಈ ಬ್ಯಾಂಕುಗಳಿಂದ 8.10 ಪ್ರತಿಶತ ಬಡ್ಡಿಯಲ್ಲಿ 20 ವರ್ಷಗಳ ಅವಧಿಗೆ ಗೃಹ ಸಾಲವನ್ನು ಪಡೆದರೆ, ಗೃಹ ಸಾಲದ ಕ್ಯಾಲ್ಕುಲೇಟರ್ ಪ್ರಕಾರ, ನಿಮ್ಮ ಮಾಸಿಕ ಕಂತು ಅಂದರೆ ಇಎಂಐ ₹33,707 ಆಗಿರುತ್ತದೆ. ಈ ಸಾಲದ ಮೇಲೆ ನೀವು 20 ವರ್ಷಗಳಲ್ಲಿ ₹40,89,674 ಬಡ್ಡಿ ಪಾವತಿಸುವಿರಿ. ಅಂದರೆ ಕೊನೆಯಲ್ಲಿ ಒಟ್ಟು ₹80,89,674 ಬ್ಯಾಂಕಿಗೆ ಹಿಂತಿರುಗಿಸಬೇಕಾಗುತ್ತದೆ. ನೀವು ಅದೇ ಸಾಲವನ್ನು 15 ವರ್ಷಗಳವರೆಗೆ ತೆಗೆದುಕೊಂಡರೆ ಮಾಸಿಕ ಕಂತು ₹38,457 ಆಗಿರುತ್ತದೆ ಮತ್ತು ನೀವು ಅದನ್ನು 30 ವರ್ಷಗಳವರೆಗೆ ತೆಗೆದುಕೊಂಡರೆ ನಿಮ್ಮ ಮಾಸಿಕ ಕಂತು ₹29,630 ಆಗಿರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News