)
ಕೇಂದ್ರ ಸರ್ಕಾರವು ಲಕ್ಷಾಂತರ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ದೊಡ್ಡ ಶುಭ ಸುದ್ದಿಯನ್ನು ನೀಡಿದೆ. ದೀರ್ಘ ಕಾಯುವಿಕೆಯ ನಂತರ, ತುಟ್ಟಿ ಭತ್ಯೆ (ಡಿಎ) ಹೆಚ್ಚಳದ ಬಗ್ಗೆ ಸಿಹಿ ಸುದ್ದಿ ಸಿಕ್ಕಿದೆ. ಈ ಹೆಚ್ಚಳದಿಂದ ಕೋಟ್ಯಂತರ ಕುಟುಂಬಗಳು ನೇರವಾಗಿ ಪ್ರಯೋಜನ ಪಡೆಯುತ್ತವೆ. ವೇತನ ಮತ್ತು ಪಿಂಚಣಿ ಎರಡರಲ್ಲೂ ದೊಡ್ಡ ಮಟ್ಟದ ಹೆಚ್ಚಳವಾಗಲಿದೆ.
ತುಟ್ಟಿ ಭತ್ಯೆ ಹೆಚ್ಚಳಘೋಷಣೆ :
ಮಾಧ್ಯಮ ವರದಿಗಳ ಪ್ರಕಾರ, ಸೆಪ್ಟೆಂಬರ್ 2025 ರ ಮೂರನೇ ವಾರದ ವೇಳೆಗೆ ಅಂದರೆ ಇದೇ ವಾರದಲ್ಲಿ ಸರ್ಕಾರ ತುಟ್ಟಿಭತ್ಯೆ, ಸರ್ಕಾರವು 6% ತುಟ್ಟಿ ಭತ್ಯೆ (DA ಹೆಚ್ಚಳ) ಹೆಚ್ಚಳವನ್ನು ಘೋಷಿಸಬಹುದು. ಇದು 7ನೇ ವೇತನ ಆಯೋಗದ ಕೊನೆಯ ತುಟ್ಟಿಭತ್ಯೆ ಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿ ಈ ಬಾರಿ ಎಲ್ಲಾ ಲೆಕ್ಕಾಚಾರಗಳನ್ನು ಮೀರಿ ಸರ್ಕಾರಿ ನೌಕರರು 6% ತುಟ್ಟಿ ಭತ್ಯೆ ಹೆಚ್ಚಳವನ್ನು ಪಡೆಯಲಿದ್ದಾರೆ ಎನ್ನಲಾಗಿದೆ. ಈ ಹೆಚ್ಚಳವು ವೇತನ ಮತ್ತು ಮತ್ತು ಪಿಂಚಣಿ ಎರಡನ್ನೂ ಹೆಚ್ಚಿಸುತ್ತದೆ.
ಕೇಂದ್ರ ಸರ್ಕಾರದ ದೊಡ್ಡ ಘೋಷಣೆ :
ಕೇಂದ್ರ ಸರ್ಕಾರವು ಪ್ರತಿ ಆರು ತಿಂಗಳಿಗೊಮ್ಮೆ ಡಿಎ ಮತ್ತು ಡಿಆರ್ ಅನ್ನು ಹೆಚ್ಚಿಸುತ್ತದೆ. ಈ ಬಾರಿ, ತುಟ್ಟಿ ಭತ್ಯೆಯಲ್ಲಿ ಶೇ. 6 ರಷ್ಟು ಹೆಚ್ಚಳವನ್ನು ಘೋಷಣೆ ಮಾಡಲಿದೆ. ಇದು ಇತ್ತೀಚಿನ ವರ್ಷಗಳಲ್ಲಿನ ಅತಿದೊಡ್ಡ ಹೆಚ್ಚಳಗಳಲ್ಲಿ ಒಂದಾಗಿದೆ ಎನ್ನಬಹುದು. ಕೇಂದ್ರ ನೌಕರರು ಮತ್ತು ಪಿಂಚಣಿದಾರರು ನೇರವಾಗಿ ಇದರ ಪ್ರಯೋಜನವನ್ನು ಪಡೆಯಲಿದ್ದಾರೆ.
ಪಿಂಚಣಿದಾರರಿಗೂ ಸಿಗಲಿದೆ ಲಾಭ :
ಈ ತುಟ್ಟಿ ಭತ್ಯೆ ಹೆಚ್ಚಳವು ನೌಕರರಿಗೆ ಮಾತ್ರವಲ್ಲದೆ ಪಿಂಚಣಿದಾರರಿಗೂ ಪ್ರಯೋಜನವನ್ನು ನೀಡುತ್ತದೆ. ಕೇಂದ್ರ ಸರ್ಕಾರವು ವೃದ್ಧಾಪ್ಯ ಪಿಂಚಣಿ ಮತ್ತು ಇತರ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಮೊತ್ತವನ್ನು ಹೆಚ್ಚಿಸಲು ನಿರ್ಧರಿಸಿದೆ.
ಹಿಂದಿನ ಪಿಂಚಣಿದಾರರು ತಿಂಗಳಿಗೆ 400 ರೂ. ಪಡೆಯುತ್ತಿದ್ದರು, ಈಗ ಅದನ್ನು1100 ಕರೂ,ಗೆ ಹೆಚ್ಚಿಸಲಾಗಿದೆ. ಈ ಬದಲಾವಣೆಯು ಜುಲೈ 11, 2025 ರಿಂದ ಜಾರಿಗೆ ಬಂದಿದ್ದು, ಶೀಘ್ರದಲ್ಲೇ ಹೆಚ್ಚಿದ ಮೊತ್ತವನ್ನು ಪಿಂಚಣಿದಾರರ ಬ್ಯಾಂಕ್ ಖಾತೆಗಳಿಗೆ ಕಳುಹಿಸಲಾಗುವುದು.
ಹಣದುಬ್ಬರ ನಿಯಂತ್ರಣಕ್ಕೆ ಪರಿಹಾರ :
ಕಳೆದ ಕೆಲವು ತಿಂಗಳುಗಳಿಂದ ಹಣದುಬ್ಬರ ನಿರಂತರವಾಗಿ ಏರುತ್ತಿದೆ, ಶ್ರೀಸಾಮಾನ್ಯರ ಬಜೆಟ್ ಹಾಳಾಗಿದೆ. ಆಹಾರ ಪದಾರ್ಥಗಳಿಂದ ಹಿಡಿದು ಗೃಹೋಪಯೋಗಿ ವಸ್ತುಗಳವರೆಗೆ ಬೆಲೆಗಳು ನಿರಂತರವಾಗಿ ಏರುತ್ತಿವೆ. ಅಂತಹ ಸಮಯದಲ್ಲಿ, ತುಟ್ಟಿ ಭತ್ಯೆಯ ಈ ಹೆಚ್ಚಳವು ನೌಕರರು ಮತ್ತು ಪಿಂಚಣಿದಾರರಿಗೆ ನೆಮ್ಮದಿ ತಂದಿದೆ.
ಯಾರಿಗೆ ಎಷ್ಟು ವೇತನ ಹೆಚ್ಚಳ :
ಒಬ್ಬ ಉದ್ಯೋಗಿಯ ಮೂಲ ವೇತನ 30,000 ರೂ . ಆಗಿದ್ದರೆ 6% ಡಿಎ ಹೆಚ್ಚಳದೊಂದಿಗೆ ಅವರ ವೇತನ ಸುಮಾರು 1,800 ರೂ.ಯಷ್ಟು ಹೆಚ್ಚಾಗುತ್ತದೆ. ಅಂದರೆ, ವಾರ್ಷಿಕವಾಗಿ ಸುಮಾರು 21,600 ರೂ. ಲಾಭವಾಗುವುದು. ಪಿಂಚಣಿದಾರರ ಪಿಂಚಣಿಯಲ್ಲೂ ಅದೇ ಹೆಚ್ಚಳ ಕಂಡುಬರುತ್ತದೆ.
ಈ ಹೆಚ್ಚಳದಿಂದ ಸುಮಾರು 48 ಲಕ್ಷ ಕೇಂದ್ರ ನೌಕರರು ಮತ್ತು 67 ಲಕ್ಷ ಪಿಂಚಣಿದಾರರು ನೇರವಾಗಿ ಪ್ರಯೋಜನ ಪಡೆಯುತ್ತಾರೆ. ಇದಲ್ಲದೆ, ಕೇಂದ್ರ ಸರ್ಕಾರದ ನಿರ್ಧಾರದ ನಂತರ ರಾಜ್ಯ ಸರ್ಕಾರಗಳು ಸಾಮಾನ್ಯವಾಗಿ ತಮ್ಮ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಡಿಎ ಮತ್ತು ಡಿಆರ್ ಹೆಚ್ಚಳವನ್ನು ನೀಡುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಕೋಟ್ಯಂತರ ಜನರು ಈ ನಿರ್ಧಾರದಿಂದ ನೇರವಾಗಿ ಪ್ರಯೋಜನ ಪಡೆಯುತ್ತಾರೆ.