`PF ಖಾತೆ`ದಾರರಿಗೆ ಭರ್ಜರಿ ಕೊಡುಗೆ ನೀಡಿದ ʼಕೇಂದ್ರ ಸರ್ಕಾರ`
ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದಿಂದ `ಪಿಎಫ್ ಖಾತೆ`ದಾರರಿಗೆ ಭರ್ಜರಿ ಗಿಫ್ಟ್
ನವದೆಹಲಿ: ಕೇಂದ್ರ ಸರ್ಕಾರ ದೀಪಾವಳಿ ಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದ್ದು, ಉದ್ಯೋಗಿಗಳಿಗೆ ಪಿಎಫ್ ಕೊಡುಗೆ ನೀಡಿದೆ. ಹಾಗಂತ, ಸರ್ಕಾರ ಎಲ್ಲ ನೌಕರಿಗೂ ಕೊಡುಗೆ ನೀಡಿಲ್ಲ. ಬದಲಾಗಿ ಈ ಸರ್ಕಾರ ನಿಗಧಿಪಡಿಸಿದ ನಿಯಮಗಳನ್ನ ಅನುಸರಿಸುವ ಕಂಪನಿ ಮತ್ತು ಅಲ್ಲಿನ ನೌಕರರಿಗೆ ಈ ಪ್ರಯೋಜನೆ ದೊರೆಯಲಿದೆ. ಹಾಗಾದ್ರೆ, ಯಾರಿಗೆ ಈ ಪ್ರಯೋಜನೆ ಲಭಿಸಲಿದೆ.
ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್(Nirmala Sitharaman) ಅವರು ಆರ್ಥಿಕತೆಗೆ ಮತ್ತೊಂದು ಉತ್ತೇಜಕ ಪ್ಯಾಕೇಜ್‌ಗಳನ್ನು ಪ್ರಕಟಿಸಿದ್ದಾರೆ. 'ಆತ್ಮ ನಿರ್ಭರ್ ಭಾರತ್ ರೋಜರ್ ಯೋಜನೆ' ಹೆಚ್ಚು ವ್ಯಕ್ತಿಗಳನ್ನು ಸಂಘಟಿತ ಕ್ಷೇತ್ರಗಳಿಗೆ ಕರೆತರುವ ಹೊಸ ಪ್ರಸ್ತಾಪವಾಗಿದೆ. ಇಪಿಎಫ್‌ಒನಲ್ಲಿ ನೋಂದಾಯಿಸಲಾದ ಎಲ್ಲಾ ಸಂಸ್ಥೆಗಳಿಗೆ ಪ್ರಯೋಜನಗಳಿವೆ. ಅಂತಹ ಕಂಪನಿಗಳಿಂದ ನೇಮಕಗೊಳ್ಳುವ ಹೊಸ ಉದ್ಯೋಗಿಗಳು ಅಂದ್ರೆ ಮಾರ್ಚ್ 1 ಮತ್ತು ಸೆಪ್ಟೆಂಬರ್ 30 ರ ನಡುವೆ ಉದ್ಯೋಗ ಕಳೆದುಕೊಂಡವರು ಅಥವಾ ಈ ಹಿಂದೆ ನೌಕರರ ಭವಿಷ್ಯ ನಿಧಿ (ಇಪಿಎಫ್) ಸಂಖ್ಯೆಯನ್ನು ಹೊಂದಿರದವರಿಗೆ ಈ ಪ್ರಯೋಜನೆ ಸಿಗಲಿದೆ.
ವಿಧಾನಸಭೆಯಲ್ಲೂ ಬಿಜೆಪಿ ಜೊತೆಗಿನ ಎಐಎಡಿಎಂಕೆ ಮೈತ್ರಿ ಮುಂದುವರೆಯಲಿದೆ- ತಮಿಳುನಾಡು ಸಿಎಂ ಪಳನಿಸ್ವಾಮಿ
1000 ಅಥವಾ ಅದಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ನೌಕರರಿಗೆ ಕೇಂದ್ರ ಸರ್ಕಾರವು 2 ವರ್ಷಗಳವರೆಗೆ ಸಹಾಯಧನವನ್ನ ನೀಡುತ್ತೆ. ಕೇಂದ್ರ ಸರ್ಕಾರ ನೀಡಿದ ಒಟ್ಟು ಸಬ್ಸಿಡಿ ರೂಪದಲ್ಲಿರುತ್ತೆ. ಇದರರ್ಥ, ನೌಕರರ ಕೊಡುಗೆಯಲ್ಲಿ 12 ಪ್ರತಿಶತ ಮತ್ತು ಉದ್ಯೋಗದಾತರ ಕೊಡುಗೆಯಲ್ಲಿ ಶೇ.12 ರಷ್ಟು ಕೇಂದ್ರ ಸರ್ಕಾರವು ಭರಿಸಲಿದೆ.
ಮಮತಾ ಬ್ಯಾನರ್ಜಿಯನ್ನ ರಾಜಕೀಯವಾಗಿ ಮುಗಿಸುತ್ತೇವೆ: ಪ್ರಹ್ಲಾದ್ ಜೋಶಿ
ಸಂಸ್ಥೆಯ ನೌಕರರ ಸಂಖ್ಯೆ 1000 ಕ್ಕಿಂತ ಹೆಚ್ಚು ಉದ್ಯೋಗಿಗಳಾಗಿದ್ದರೆ, ಕೇಂದ್ರ ಸರ್ಕಾರವು ನೌಕರರ ಕೊಡುಗೆ ಲಭಿಸುವುದು. ಇನ್ನು ಈ ಪ್ರಯೋಜನವನ್ನ ತಿಂಗಳಿಗೆ 15000 ಕ್ಕಿಂತ ಕಡಿಮೆ ಸಂಬಳದಲ್ಲಿರುವ ಉದ್ಯೋಗಿಗಳಿಗೆ ಮಾತ್ರ ನೀಡಲಾಗುವುದು. ಪಿಎಫ್ ಕೊಡುಗೆ ರೂಪದಲ್ಲಿ ಸಹಾಯಧನವನ್ನ ನೇರವಾಗಿ ನೌಕರರ ಆಧಾರ್-ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತೆ. ಇನ್ನು ಅಕ್ಟೋಬರ್ 1, 2020ರಿಂದ ಈ ಯೋಜನೆ ಎರಡು ವರ್ಷಗಳ ಅವಧಿಗೆ ಜಾರಿಯಾಗಲಿದೆ.
ಮುಂದಿನ 5 ವರ್ಷಗಳಲ್ಲಿ ಭಾರತದ ತೈಲ ಸಂಸ್ಕರಣ ಸಾಮರ್ಥ್ಯ ದ್ವಿಗುಣಗೊಳ್ಳಲಿದೆ-ಪ್ರಧಾನಿ ಮೋದಿ