ಇಪಿಎಫ್‌ಒ ಪಿಂಚಣಿದಾರರಿಗೆ ಗುಡ್ ನ್ಯೂಸ್- ನಿಮ್ಮ ಪಿಂಚಣಿ ಹಣ ಆಗಲಿದೆ ದ್ವಿಗುಣ: ಸರ್ಕಾರದ ಪ್ಲಾನ್ ಏನು ಅಂತಾ ತಿಳಿಯಿರಿ!

EPFO Pension: 2014ರಲ್ಲಿ ತಿಂಗಳಿಗೆ ಕನಿಷ್ಠ 1000 ರೂಪಾಯಿ ಪಿಂಚಣಿ ನೀಡಲು ನಿರ್ಧಾರ ಮಾಡಲಾಯಿತು. ನಂತರ ಕಾರ್ಮಿಕ ಸಚಿವಾಲಯವು ಪಿಂಚಣಿ ಮೊತ್ತವನ್ನು ತಿಂಗಳಿಗೆ 2,000 ರೂಪಾಯಿಗೆ ದ್ವಿಗುಣಗೊಳಿಸಬೇಕು ಎನ್ನುವ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಟ್ಟಿದೆ.

Written by - Yashaswini V | Last Updated : Dec 13, 2024, 02:17 PM IST
  • ನೌಕರರ ಪಿಂಚಣಿ ಯೋಜನೆ ಅಡಿ ನೌಕರರು ಮತ್ತು ನಿವೃತ್ತಿ ವೇತನದಾರರಿಗೆ ಕನಿಷ್ಠ ಪಿಂಚಣಿಯನ್ನು ಹೆಚ್ಚಿಸಲು ನೌಕರರ ಒಕ್ಕೂಟವು ಬಹಳ ವರ್ಷಗಳಿಂದ ಒತ್ತಾಯ ಮಾಡುತ್ತಿದೆ.
  • ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯು ಇಪಿಎಸ್ ಯೋಜನೆ ಅಡಿಯಲ್ಲಿ ಕನಿಷ್ಠ ಪಿಂಚಣಿ ಮೊತ್ತವನ್ನು 2,000 ರೂಪಾಯಿಗೆ ಏರಿಸಬೇಕು ಎನ್ನುವ ಪ್ರಸ್ತಾವನೆಯನ್ನು ಸಲ್ಲಿಸಿದೆ.
  • ಕಾರ್ಮಿಕ, ಜವಳಿ ಮತ್ತು ಕೌಶಲ್ಯ ಅಭಿವೃದ್ಧಿಯ ಸ್ಥಾಯಿ ಸಮಿತಿ ತನ್ನ 30ನೇ ವರದಿಯಲ್ಲಿ ಪಿಂಚಣಿ ಪರಿಷ್ಕರಣೆಗೆ ಶಿಪಾರಸು ಮಾಡಿದೆ ಎಂದು ಕೇಂದ್ರ ಸಚಿವರು ಸಂಸತ್ತಿಗೆ ತಿಳಿಸಿದ್ದಾರೆ.
ಇಪಿಎಫ್‌ಒ ಪಿಂಚಣಿದಾರರಿಗೆ ಗುಡ್ ನ್ಯೂಸ್- ನಿಮ್ಮ ಪಿಂಚಣಿ ಹಣ ಆಗಲಿದೆ ದ್ವಿಗುಣ: ಸರ್ಕಾರದ ಪ್ಲಾನ್ ಏನು ಅಂತಾ ತಿಳಿಯಿರಿ! title=

EPFO Pension News: ಇಪಿಎಫ್‌ಒ ಪಿಂಚಣಿಯನ್ನು ಹೆಚ್ಚಳ ಮಾಡಬೇಕು ಎನ್ನುವುದು ದಶಕಗಳ ಬೇಡಿಕೆ. ನೌಕರರ ಪಿಂಚಣಿ ಯೋಜನೆ Employees Pension Scheme (EPS) 1995ರ ಅಡಿ 10 ವರ್ಷದ ಹಿಂದೆ ಅಂದರೆ 2014ರಲ್ಲಿ ಮೊದಲ ಬಾರಿಗೆ ಕೇಂದ್ರ ಸರ್ಕಾರ ಇಪಿಎಫ್‌ಒ ಪಿಂಚಣಿ ಮೊತ್ತವನ್ನು ರಿವೈಸ್ ಮಾಡಿ ತಿಂಗಳಿಗೆ 1,000 ರೂಪಾಯಿ ನೀಡಲು ನಿರ್ಧರಿಸಿತು. ಇದನ್ನು 2,000 ರುಪಾಯಿಗೆ ಏರಿಸಬೇಕು ಎಂದು ಕೇಂದ್ರ ಕಾರ್ಮಿಕ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತಾದರೂ ಅದು ನೆನೆಗುದಿಗೆ ಬಿದ್ದಿತ್ತು. ಈಗ ಗುಡ್ ನ್ಯೂಸ್ ಸಿಕ್ಕಿದೆ.

ನೌಕರರ ಪಿಂಚಣಿ ಯೋಜನೆ (ಇಪಿಎಸ್) 1995ರ ಅಡಿಯಲ್ಲಿ ನೌಕರರು ಮತ್ತು ನಿವೃತ್ತಿ ವೇತನದಾರರಿಗೆ ಕನಿಷ್ಠ ಪಿಂಚಣಿಯನ್ನು ಹೆಚ್ಚಿಸಲು ನೌಕರರ ಒಕ್ಕೂಟವು ಬಹಳ ವರ್ಷಗಳಿಂದ ಒತ್ತಾಯ ಮಾಡುತ್ತಿದೆ. ಇದರ ಬಗ್ಗೆ ಸಂಸದ ಅಸಾದುದ್ದೀನ್ ಓವೈಸಿ ಅವರು ಲೋಕಸಭೆಯಲ್ಲಿ ಪ್ರಶ್ನೆ ಮಾಡಿದ್ದಾರೆ. ಸರ್ಕಾರದ ಮುಂದೆ ಪಿಂಚಣಿ ಯೋಜನೆಯನ್ನು ಪರಿಷ್ಕರಿಸುವ ಪ್ರಸ್ತಾಪ ಇದೆಯೇ? ಪಿಂಚಣಿ ಮೊತ್ತವನ್ನು ಹೆಚ್ಚು ಮಾಡುತ್ತೀರಾ ಎಂದು ಕೇಳಿದ್ದಾರೆ.

ಇದನ್ನೂ ಓದಿ- ಇಷ್ಟು ಮೊತ್ತದ ಹಣ ವರ್ಗಾವಣೆ ಆಗಿದ್ರೆ 'ಐಟಿ ನೋಟೀಸ್' ಬರೋದು ಗ್ಯಾರಂಟಿ..!

ಓವೈಸಿ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಹಣಕಾಸು ಖಾತೆಯ ರಾಜ್ಯ ದರ್ಜೆಯ ಸಚಿವ ಪಂಕಜ್ ಚೌಧರಿ, ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯು ಇಪಿಎಸ್ ಅಡಿಯಲ್ಲಿ ಕನಿಷ್ಠ ಪಿಂಚಣಿ ಮೊತ್ತವನ್ನು 2,000 ರೂಪಾಯಿಗೆ ಏರಿಸುವ ಪ್ರಸ್ತಾಪ ಸಲ್ಲಿಸಿದೆ. ಕಾರ್ಮಿಕ ಸಂಘಟನೆಗಳು ಕೂಡ ಈ ಬಗ್ಗೆ ಬಹಳ ವರ್ಷಗಳಿಂದ ಮನವಿ ಮಾಡುತ್ತಿವೆ. ಕಾರ್ಮಿಕ, ಜವಳಿ ಮತ್ತು ಕೌಶಲ್ಯ ಅಭಿವೃದ್ಧಿಯ ಸ್ಥಾಯಿ ಸಮಿತಿಯು ತನ್ನ 30ನೇ ವರದಿಯಲ್ಲಿ ಪಿಂಚಣಿ ಪರಿಷ್ಕರಣೆಗೆ ಶಿಪಾರಸು ಮಾಡಿದೆ ಎಂದಿದ್ದಾರೆ.

ಇಪಿಎಫ್‌ಒ ಪಿಂಚಣಿ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಇದು ಉದ್ಯೋಗಿಗಳ ಪಿಂಚಣಿ ನಿಧಿಯ ಕಾರ್ಪಸ್ ಫಂಡ್ ಆಗಿರುತ್ತದೆ. ಯೋಜನೆಯ ಅಡಿಯಲ್ಲಿ ಎಲ್ಲಾ ಪ್ರಯೋಜನಗಳನ್ನು ಈ ನಿಧಿಯಿಂದ ಪಾವತಿಸಲಾಗುತ್ತದೆ. ನಿಧಿಯನ್ನು ಪ್ರತಿ ವರ್ಷ ಮೌಲ್ಯಮಾಪನ ಮಾಡಲಾಗುತ್ತದೆ. ಇದು ನೌಕರರ ಹಣವಾಗಿರುವುದರಿಂದ ಅವರಿಗೆ ಮರುಪಾವತಿಸಲು ಅಂದರೆ ಪಿಂಚಣಿ ಮೊತ್ತವನ್ನು ಹೆಚ್ಚು ಮಾಡಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ- ಪ್ರಪಂಚದ ಶ್ರೀಮಂತರ ಪೈಕಿ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಆಸ್ತಿಯ ಮೌಲ್ಯ ಒಟ್ಟು ಎಷ್ಟು ಗೊತ್ತಾ ?

ಕೇಂದ್ರ ಸರ್ಕಾರ 2014ರಲ್ಲಿ ಪಿಂಚಣಿದಾರರಿಗೆ ತಿಂಗಳಿಗೆ ಕನಿಷ್ಠ 1000 ರೂಪಾಯಿಗಳನ್ನು ನೀಡುತ್ತಿತ್ತು. ನಂತರ ಕಾರ್ಮಿಕ ಸಚಿವಾಲಯವು ಪಿಂಚಣಿ ಮೊತ್ತವನ್ನು ತಿಂಗಳಿಗೆ 2,000 ರೂಪಾಯಿಗೆ ದ್ವಿಗುಣಗೊಳಿಸಬೇಕು ಎನ್ನುವ ಪ್ರಸ್ತಾಪ ನೀಡಿದೆ. ಇದಕ್ಕೆ ಹಿಂದೆ ಅನುಮೋದನೆ ಸಿಕ್ಕಿರಲಿಲ್ಲ. ಈಗ ಅನುಮೋದನೆ ಪಡೆದು ನೀಡಲಾಗುವುದು ಎಂದು ಉತ್ತರಿಸಿದ್ದಾರೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News