DA Hike: ಹೋಳಿಗೂ ಮೊದಲೇ ಕೋಟ್ಯಾಂತರ ಉದ್ಯೋಗಿಗಳು, ಪಿಂಚಣಿದಾರರಿಗೆ ಜಾಕ್‌ಪಾಟ್‌! ಶೀಘ್ರದಲ್ಲೇ ಹೊರಬೀಳಲಿದೆ ಪ್ರಮುಖ ಘೋಷಣೆ..

DA Hike: ಸರ್ಕಾರಿ ನಿಯಮಗಳಾನುಸಾರ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ವರ್ಷಕ್ಕೆ ಎರಡು ಬಾರಿ ಡಿಎ ಮತ್ತು ಡಿಯರ್‌ನೆಸ್ ರಿಲೀಫ್ (ಡಿಆರ್) ಅನ್ನು ಪರಿಷ್ಕರಿಸಲಾಗುತ್ತದೆ. 

Written by - Yashaswini V | Last Updated : Mar 3, 2025, 10:23 AM IST
  • ಹೋಳಿ ಹಬ್ಬಕ್ಕೂ ಮೊದಲೇ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್
  • ಶೀಘ್ರದಲ್ಲೇ ತುಟ್ಟಿಭತ್ಯೆ ಹೆಚ್ಚಳ ಕುರಿತಂತೆ ಪ್ರಮುಖ ಘೋಷಣೆ
  • ತುಟ್ಟಿಭತ್ಯೆಯಲ್ಲಿ 3% ರಿಂದ 4%ರಷ್ಟು ಏರಿಕೆ....
DA Hike: ಹೋಳಿಗೂ ಮೊದಲೇ ಕೋಟ್ಯಾಂತರ ಉದ್ಯೋಗಿಗಳು, ಪಿಂಚಣಿದಾರರಿಗೆ ಜಾಕ್‌ಪಾಟ್‌! ಶೀಘ್ರದಲ್ಲೇ ಹೊರಬೀಳಲಿದೆ ಪ್ರಮುಖ ಘೋಷಣೆ..

DA Hike: ಇದೇ ಮಾರ್ಚ್ 05, 2025ರಂದು ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ದಿನ ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಮೋದಿ ಸರ್ಕಾರ ಗುಡ್ ನ್ಯೂಸ್ ನೀಡುವ ಸಾಧ್ಯತೆ ಇದೆ. ಹೋಳಿ ಹಬ್ಬಕ್ಕೂ ಮೊದಲೇ ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಪ್ರಮುಖ ಘೋಷಣೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಸರ್ಕಾರ ಯಾವುದೇ ಸಮಯದಲ್ಲಿ ಈ ಕುರಿತಂತೆ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ. 

Add Zee News as a Preferred Source

7ನೇ ವೇತನ ಆಯೋಗದ ಅಡಿಯಲ್ಲಿ, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ವರ್ಷಕ್ಕೆ ಎರಡು ಬಾರಿ ಡಿಎ ಮತ್ತು ಡಿಯರ್‌ನೆಸ್ ರಿಲೀಫ್ (ಡಿಆರ್) ಅನ್ನು ಪರಿಷ್ಕರಿಸಲಾಗುತ್ತದೆ. ಇದರಲ್ಲಿ ಮೊದಲ ಹೆಚ್ಚಳವು ಜನವರಿ 01ರಿಂದಲೂ ಎರಡನೇ ಡಿಎ ಹೆಚ್ಚಳವು ಜುಲೈ 01ರಿಂದ ಜಾರಿಗೆ ಬರಲಿದೆ. 

ಇದನ್ನೂ ಓದಿ- ಮಾರ್ಚ್‌ ಮೊದಲ ವಾರದಲ್ಲಿ ಭರ್ಜರಿ ಇಳಿಕೆ ಕಾಣುತ್ತಿರುವ ಚಿನ್ನ! ಇಂದೆಷ್ಟಿದೆ 10 ಗ್ರಾಂ ಬಂಗಾರದ ಬೆಲೆ?
 
ಕೇಂದ್ರ ಸರ್ಕಾರಿ ನೌಕರರ 'DA' ಎಷ್ಟು ಹೆಚ್ಚಾಗಲಿದೆ? 

ಲಭ್ಯವಿರುವ ಮಾಹಿತಿಗಳ ಪ್ರಕಾರ, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿ ಭತ್ಯೆಯಲ್ಲಿ 3% ರಿಂದ 4%ರಷ್ಟು ಹೆಚ್ಚಳವನ್ನು ಘೋಷಿಸಬಹುದು. ಇದರಿಂದ ತಿಂಗಳಿಗೆ ಸುಮಾರು 18,000 ರೂ. ಮೂಲವೇತನ ಹೊಂದಿರುವವಫ ವೇತನವು ಜಂವಾರಿ 01, 2025ರಿಂದ ಜಾರಿಗೆ ಬರುವಂತೆ 540 ರೂ.ಗಳಿಂದ 720ರೂ.ವರೆಗೆ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. 

ಪಿಂಚಣಿದಾರರಿಗೂ ಜಾಕ್‌ಪಾಟ್‌: 
ಕೇಂದ್ರ ಸರ್ಕಾರದ ತುಟ್ಟಿಭತ್ಯೆ ಹೆಚ್ಚಳವು ಕೇವಲ ಕೇಂದ್ರ ಸರ್ಕಾರಿ ನೌಕರರಿಗೆ ಮಾತ್ರವಲ್ಲ ಪಿಂಚಣಿದಾರರಿಗೂ ಲಾಭದಾಯಕವಾಗಿದೆ. ಪಿಂಚಣಿದಾರರಿಗೆ ಇದನ್ನು ತುಟ್ಟಿ ಪರಿಹಾರ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- New PF System: ಇಪಿ‌ಎಫ್‌ಒ ಚಂದಾದಾರರು UPI ಮೂಲವೇ ಪಿ‌ಎಫ್ ಹಣ ವಿತ್ ಡ್ರಾ ಮಾಡಬಹುದು, ಇಲ್ಲಿದೆ ಸಿಂಪಲ್ ಟ್ರಿಕ್
 
ತುಟ್ಟಿಭತ್ಯೆ ಹೆಚ್ಚಳದ ಲೆಕ್ಕಾಚಾರ: 

ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI)ವನ್ನು ಆಧರಿಸಿ ತುಟ್ಟಿಭತ್ಯೆಯನ್ನು ನಿರ್ಧರಿಸಲಾಗುತ್ತದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News